Stock Market Updates: ಹೂಡಿಕೆದಾರರಿಗೆ ಜಾಕ್‌ಪಾಟ್; 6 ಗಂಟೆಗಳಲ್ಲಿ ₹ 4.16 ಲಕ್ಷ ಕೋಟಿ ಗಳಿಕೆ!

Stock Market Updates: ಮಾರ್ಚ್ ತಿಂಗಳು ಹೂಡಿಕೆದಾರರಿಗೆ ಉತ್ತಮ ಆರಂಭವನ್ನು ನೀಡಿದೆ. ಮೊದಲ ದಿನವೇ  ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ದಾಖಲೆಗಳನ್ನು ಮುರಿದಿವೆ. ಷೇರು ಮಾರುಕಟ್ಟೆ ಅತ್ಯಧಿಕ ಮಟ್ಟವನ್ನು ತಲುಪಿದೆ. ಇದರಿಂದ ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ. 

Written by - Puttaraj K Alur | Last Updated : Mar 1, 2024, 08:23 PM IST
  • ಮಾರ್ಚ್‌ ತಿಂಗಳ ಮೊದಲ ದಿನವೇ ಹೂಡಿಕೆದಾರರಿಗೆ ಹೊಡೆಯಿತು ಜಾಕ್‌ಪಾಟ್‌
  • ಶುಕ್ರವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ದಾಖಲೆಗಳನ್ನು ಮುರಿದಿವೆ
  • ಅತ್ಯುತ್ತಮ GDP ಫಲಿತಾಂಶದ ಪರಿಣಾಮ ಮಾರುಕಟ್ಟೆಯಲ್ಲಿ ಗೋಚರಿಸಿತು
Stock Market Updates: ಹೂಡಿಕೆದಾರರಿಗೆ ಜಾಕ್‌ಪಾಟ್; 6 ಗಂಟೆಗಳಲ್ಲಿ ₹ 4.16 ಲಕ್ಷ ಕೋಟಿ ಗಳಿಕೆ! title=
ಹೂಡಿಕೆದಾರರಿಗೆ ಹೊಡೆಯಿತು ಜಾಕ್‌ಪಾಟ್‌!

Stock Market Record High: ಮಾರ್ಚ್ ತಿಂಗಳು ಹೂಡಿಕೆದಾರರಿಗೆ ಉತ್ತಮ ಆರಂಭವನ್ನು ನೀಡಿದೆ. ಮೊದಲ ದಿನವೇ ಸೆನ್ಸೆಕ್ಸ್ ದಾಖಲೆ ನಿರ್ಮಿಸಿದೆ. ಶುಕ್ರವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ದಾಖಲೆಗಳನ್ನು ಮುರಿದಿವೆ. ಪರಿಣಾಮ ಷೇರು ಮಾರುಕಟ್ಟೆ ಅತ್ಯಧಿಕ ಮಟ್ಟವನ್ನು ತಲುಪಿದೆ. ಮಾರ್ಚ್ 1ರಂದು ಸೆನ್ಸೆಕ್ಸ್ 1,318 ಪಾಯಿಂಟ್‌ಗಳ ಏರಿಕೆಯೊಂದಿಗೆ 73,819.21 ಪಾಯಿಂಟ್‌ಗಳ ದಾಖಲೆಯ ಗರಿಷ್ಠ ಮಟ್ಟಕ್ಕೆ ಕೊನೆಗೊಂಡರೆ, ನಿಫ್ಟಿ 22,353.30ರ ಗರಿಷ್ಠ ಮಟ್ಟದಲ್ಲಿ ಕೊನೆಗೊಂಡಿತು.

ಲೋಹದ ವಲಯದಲ್ಲಿ ಮಾರುಕಟ್ಟೆಯಲ್ಲಿ ಗರಿಷ್ಠ ಖರೀದಿ ದಾಖಲಾಗಿದೆ. ಗುರುವಾರದ ಅತ್ಯುತ್ತಮ GDP ಫಲಿತಾಂಶದ ಪರಿಣಾಮ ಮಾರುಕಟ್ಟೆಯಲ್ಲಿ ಗೋಚರಿಸಿತು. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕ GDP ಬೆಳವಣಿಗೆಯು ಶೇ.8.4ರಷ್ಟಿದ್ದರೆ, 2023-24ರ ಹಣಕಾಸು ವರ್ಷದಲ್ಲಿ GDP ಬೆಳವಣಿಗೆಯನ್ನು ಶೇ.7.6ರಷ್ಟು ಎಂದು ಅಂದಾಜಿಸಲಾಗಿದೆ. ಈ ಬೆಳವಣಿಗೆಯು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಿತು ಮತ್ತು ಷೇರು ಮಾರುಕಟ್ಟೆ ದಾಖಲೆ ಮಟ್ಟವನ್ನು ತಲುಪಿತು.  

ಷೇರು ಮಾರುಕಟ್ಟೆ ಏಕೆ ಏರಿತು?

GDP ಅಂಕಿ-ಅಂಶಗಳಿಂದ ಮಾರುಕಟ್ಟೆಯ ಏರಿಳಿತ: ಶೇರು ಮಾರುಕಟ್ಟೆಯ ಏರಿಕೆಗೆ ನಿರೀಕ್ಷಿತ GDP ಅಂಕಿ-ಅಂಶಗಳಿದಿಂತ ಉತ್ತಮವಾಗಿರುವುದು. ಮಾರುಕಟ್ಟೆಗೆ GDP ಅಂಕಿ-ಅಂಶಗಳಿಂದ ಹೊಸ ಚೈತನ್ಯ ದೊರೆಯಿತು. ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ GDP ಬೆಳವಣಿಗೆ ಶೇ.8.4ರಷ್ಟು ತಲುಪಿದೆ. ಗುರುವಾರ ಬಿಡುಗಡೆಯಾದ GDP ಬೆಳವಣಿಗೆ ಅಂಕಿ-ಅಂಶಗಳು ಷೇರುಪೇಟೆಗೆ ಉತ್ತೇಜನ ನೀಡಿವೆ. ದೇಶದಲ್ಲಿ ನಿರ್ಮಾಣ ಮತ್ತು ಉತ್ಪಾದನಾ ವಲಯದಲ್ಲಿ ಬಹುತೇಕ ಎರಡಂಕಿಯ ಬೆಳವಣಿಗೆಯು ಹೂಡಿಕೆದಾರರ ವಿಶ್ವಾಸವನ್ನು ಬಲಪಡಿಸಿದೆ.  

ಇದನ್ನೂ ಓದಿEarbudsಗೆ ಹೊಸ ಸ್ವರೂಪ ನೀಡಲಿದ್ದಾರೆ Tim Cook!ಮುಂಬರುವ ದಿನಗಳಲ್ಲಿ AirPodsಗಳಲ್ಲೂ ಇರುವುದು ಕ್ಯಾಮರಾ !

ಅಮೆರಿಕದಿಂದ ಶುಭ ಸುದ್ದಿ: ಅಮೆರಿಕದಲ್ಲಿ ಹಣದುಬ್ಬರ ದರ ಇಳಿಕೆಯ ಪರಿಣಾಮ:- ಜಾಗತಿಕ ಸಿಗ್ನಲ್‌ಗಳ ಸುಧಾರಣೆಯ ಪರಿಣಾಮ ಷೇರುಪೇಟೆಯ ಮೇಲೂ ಗೋಚರವಾಗಿತ್ತು. ಅಮೆರಿಕದ ಹಣದುಬ್ಬರ ದರಗಳ ಕುಸಿತ ಮತ್ತು ವಾಲ್‌ಸ್ಟ್ರೀಟ್ ಷೇರು ಮಾರುಕಟ್ಟೆ ಗ್ರೀನ್ ಆಗಿ ಮುಕ್ತಾಯಗೊಂಡ ಪರಿಣಾಮ ಭಾರತೀಯ ಷೇರುಪೇಟೆ ಮೇಲೆ ಕಂಡುಬಂದಿದೆ.  

ಬಡ್ಡಿದರ ಕಡಿತದ ನಿರೀಕ್ಷೆ: ಅಮೆರಿಕದಲ್ಲಿ ಹಣದುಬ್ಬರ ಅಂಕಿಅಂಶಗಳು ಬಿಡುಗಡೆಯಾಗಿದ್ದು, ಇದೀಗ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತಿದೆ ಎಂಬುದನ್ನು ಸೂಚಿಸುತ್ತದೆ. ಹಣದುಬ್ಬರ ಅಂಕಿ-ಅಂಶಗಳ ಕುಸಿತವು ಜೂನ್‌ನಲ್ಲಿ ನಡೆಯಲಿರುವ US ಫೆಡರಲ್ ರಿಸರ್ವ್ ಸಭೆಗಳಲ್ಲಿ ನೀತಿ ಬಡ್ಡಿದರಗಳಲ್ಲಿ ಕಡಿತದ ಭರವಸೆಯನ್ನು ಹುಟ್ಟುಹಾಕಿದೆ. ಭಾರತೀಯ ಷೇರು ಮಾರುಕಟ್ಟೆಯೂ ಇದರ ಲಾಭ ಪಡೆಯಿತು.  

ಇದನ್ನೂ ಓದಿ: Aadhaar History: ಪ್ರತಿಯೊಬ್ಬರೂ ಆಧಾರ್ ಇತಿಹಾಸವನ್ನು ನೋಡಿ ತಿಳಿಯಲೇಬೇಕು..! ಏಕೆಂದರೆ

ವಿದೇಶಿ ಹೂಡಿಕೆದಾರರ ವಿಶ್ವಾಸ ಹೆಚ್ಚಳ: ವಿದೇಶಿ ಹೂಡಿಕೆದಾರರ ಖರೀದಿಯಿಂದ ಷೇರು ಮಾರುಕಟ್ಟೆಗೂ ಲಾಭವಾಗಿದೆ. ಕಳೆದ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು 3,568 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದರೆ, ಮಾರಾಟವು 230 ಕೋಟಿ ರೂಪಾಯಿಯಾಗಿದೆ. ಒಟ್ನಲ್ಲಿ ಮಾರ್ಚ್‌ ಮೊದಲ ದಿನವೇ ಹೂಡಿಕೆದಾರರಿಗೆ ಭರ್ಜರಿ ಜಾಕ್‌ಪಾಟ್‌ ಹೊಡೆದಿದ್ದು, ಕೇವಲ 6 ಗಂಟೆಗಳಲ್ಲಿ ₹4.16 ಲಕ್ಷ ಕೋಟಿ ಗಳಿಕೆಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News