ಇನ್ಮುಂದೆ ದೇಶದ ಜನರು ಈರುಳ್ಳಿ ಬೆಲೆಯ ಬಗ್ಗೆ ಚಿಂತಿಸಬೇಕಾಗಿಲ್ಲ. ಈ ಹಣಕಾಸು ವರ್ಷದಲ್ಲಿ ಅಂದರೆ 2022-23ರಲ್ಲಿ ಈರುಳ್ಳಿಯ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು 2.5 ಲಕ್ಷ ಟನ್‌ಗಳಷ್ಟು ಈರುಳ್ಳಿ ಸಂಗ್ರಹವನ್ನು ಮಾಡಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಈರುಳ್ಳಿ ದಾಸ್ತಾನು ಮಾಡಿರುವುದು ಇದುವರೆಗಿನ ದಾಖಲೆಯಾಗಿದೆ. ಹಬ್ಬ ಹರಿದಿನಗಳಲ್ಲಿ ಅಥವಾ ಹಿಂಗಾರು ಹಂಗಾಮಿನಲ್ಲಿ ಈ ಈರುಳ್ಳಿಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತಿದ್ದು, ಇದರಿಂದ ಜನರು ಈರುಳ್ಳಿ ಖರೀದಿಯ ಸಂದರ್ಭದಲ್ಲಿ ಯಾವುದೇ ತೊಂದರೆ ಅನುಭವಿಸುವುದಿಲ್ಲ. 


COMMERCIAL BREAK
SCROLL TO CONTINUE READING

ಮಾಧ್ಯಮ ವರದಿಗಳ ಪ್ರಕಾರ, ಈ ವರ್ಷ ಆಗಸ್ಟ್‌ನಿಂದ ಡಿಸೆಂಬರ್‌ವರೆಗೆ ಈರುಳ್ಳಿ ಉತ್ಪಾದನೆ ಕೊಂಚ ಕಷ್ಟವಾಗಬಹುದು. ಈ ಸಂದರ್ಭದಲ್ಲಿ ದೇಶದಲ್ಲಿ ಈರುಳ್ಳಿ ಪೂರೈಕೆಯನ್ನು ಕಾಪಾಡಿಕೊಳ್ಳಲು ಈ ಮೀಸಲು ಸ್ಟಾಕ್ ತುಂಬಾ ಉಪಯುಕ್ತವಾಗುತ್ತದೆ. ಹಣದುಬ್ಬರ ದರವು ಶೇಕಡಾ 7 ಕ್ಕಿಂತ ಹೆಚ್ಚಿರುವಾಗ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ. ಹೆಚ್ಚುತ್ತಿರುವ ತರಕಾರಿ ಬೆಲೆಯನ್ನು ಸ್ಥಿರಗೊಳಿಸಲು ಮತ್ತು ಬೆಲೆಗಳನ್ನು ನಿಯಂತ್ರಣದಲ್ಲಿಡಲು ಈ ಕ್ರಮವು ತುಂಬಾ ಉಪಯುಕ್ತವಾಗಿದೆ. ಕೇಂದ್ರ ಸರ್ಕಾರದ ಗ್ರಾಹಕ ಸಚಿವಾಲಯವು ಈರುಳ್ಳಿಯ ಈ ಬಫರ್ ಸ್ಟಾಕ್ ಅನ್ನು ವ್ಯವಸ್ಥೆಗೊಳಿಸುತ್ತಿದೆ.


ಇದನ್ನೂ ಓದಿ: ಬಾಬಾ ವಂಗಾ ಭವಿಷ್ಯವಾಣಿ ನಿಜ ಸಾಬೀತಾಗುತ್ತಿದೆ, ವಿಶ್ವದ ಅಂತ್ಯ ಸಮೀಪಿಸಿದೆಯಾ?


ವರದಿಯ ಪ್ರಕಾರ, ಪ್ರತಿ ಮನೆಯಲ್ಲೂ ಪ್ರತಿದಿನ ತಿನ್ನುವ ಕೆಲವು ತರಕಾರಿಗಳಿವೆ. ಇವುಗಳಲ್ಲಿ ಈರುಳ್ಳಿ ಕೂಡ ಒಂದು. ಈರುಳ್ಳಿಯಂತಹ ಅಗತ್ಯ ವಸ್ತುಗಳ ಬೆಲೆ ಹೆಚ್ಚಾದರೆ ಜನರಿಗೆ ಕಷ್ಟ ಎದುರಾಗುತ್ತದೆ. ಗ್ರಾಹಕ ಬೆಲೆ ಸೂಚ್ಯಂಕದ ಬಗ್ಗೆ ತಿಳಿದರೆ, ಪ್ರತಿಯೊಬ್ಬರೂ ತಮ್ಮ ಒಟ್ಟು ವೆಚ್ಚದ ಸುಮಾರು 6 ಪ್ರತಿಶತವನ್ನು ತರಕಾರಿಗಳ ಖರೀದಿಗೆ ಖರ್ಚು ಮಾಡುತ್ತಾರೆ ಎಂದು ತಿಳಿದುಬಂದಿದೆ. 


ಮುಂಗಾರು ಮಳೆಯಲ್ಲಿ ಈರುಳ್ಳಿ ಕೊರತೆ ಇಲ್ಲ: 
ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ದೊಡ್ಡ ಈರುಳ್ಳಿ ಬೆಳೆಯುವ ರಾಜ್ಯಗಳ ರೈತರಿಂದ ಈ ಈರುಳ್ಳಿಯನ್ನು ಖರೀದಿಸಲಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈ ಬೆಳೆಯನ್ನು ಚಳಿಗಾಲದಲ್ಲಿ ಬಿತ್ತಲಾಗುತ್ತದೆ. ಸಚಿವಾಲಯದ ಅಧಿಕಾರಿಯ ಮಾಹಿತಿ ಪ್ರಕಾರ, ದೇಶದ ಈರುಳ್ಳಿ ಉತ್ಪಾದನೆಯ 65 ಪ್ರತಿಶತವನ್ನು ಏಪ್ರಿಲ್ ಮತ್ತು ಜೂನ್ ನಡುವೆ ಬಿತ್ತಲಾಗುತ್ತದೆ ಮತ್ತು ಅಕ್ಟೋಬರ್‌ನಲ್ಲಿ ಕೊಯ್ಲು ಮಾಡಲಾಗುತ್ತದೆ. ನಂತರ ಸರ್ಕಾರ ರೈತರಿಂದ ಖರೀದಿಸಿ ದಾಸ್ತಾನು ಮಾಡುತ್ತದೆ. ಹೀಗಾಗಿ ದೇಶದಲ್ಲಿ ಮಳೆಗಾಲದಲ್ಲೂ ಈರುಳ್ಳಿಗೆ ಕೊರತೆ ಉಂಟಾಗುವುದಿಲ್ಲ ಎಂದಿದೆ. 


ಅಕ್ಟೋಬರ್-ನವೆಂಬರ್‌ನಿಂದ ಬೇಸಿಗೆ ಬೆಳೆ ಕೊಯ್ಲು ಮಾಡುವವರೆಗೆ ಬೇಡಿಕೆಯನ್ನು ಪೂರೈಸಲಾಗುತ್ತದೆ. ಜೊತೆಗೆ ದೇಶದಲ್ಲಿ ಈರುಳ್ಳಿ ಬೆಲೆಯನ್ನು ಸಮತೋಲನದಲ್ಲಿಡಲು, ಅದನ್ನು ದಾಸ್ತಾನು ಮಾಡುವುದು ಅನಿವಾರ್ಯವಾಗುತ್ತದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಬೆಲೆ ಹೆಚ್ಚಿರುವ ನಗರಗಳಿಗೆ ಈ ಸ್ಟಾಕ್‌ನಿಂದ ಈರುಳ್ಳಿ ಕಳುಹಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗಸ್ಟ್‌ನಿಂದ ಈ ಕೆಲಸ ಆರಂಭವಾಗುವ ಸಾಧ್ಯತೆಯಿದೆ. 


ಹಿಂದಿನ ಬೆಳೆಗಳ ದಾಸ್ತಾನುಗಳು ಖಾಲಿಯಾಗುವುದರಿಂದ ಈರುಳ್ಳಿ ಬೆಲೆ ಸಾಮಾನ್ಯವಾಗಿ ಸೆಪ್ಟೆಂಬರ್‌ನಲ್ಲಿ ಗರಿಷ್ಠವಾಗಿರುತ್ತದೆ ಎಂದು ಹಿಂದಿನ ಡೇಟಾ ತೋರಿಸುತ್ತದೆ. ಆದರೆ ತಾಜಾ ಬೆಳೆ ಸಾಮಾನ್ಯವಾಗಿ ಜನವರಿಯಲ್ಲಿ ಮಾತ್ರ ಮಾರುಕಟ್ಟೆಗೆ ಬರುತ್ತದೆ. ಅವುಗಳನ್ನು ಸರಿಯಾಗಿ ಸಂಗ್ರಹಿಸದಿದ್ದರೆ ಕೊಳೆಯುವ ಅಥವಾ ಮೊಳಕೆಯೊಡೆಯುವ ಸಾಧ್ಯತೆಯಿದೆ. ಆದ್ದರಿಂದ, ಸ್ಟಾಕ್ ಮಾಡುವ ಸಮಯದಲ್ಲಿ ಇದು ಸಾಕಷ್ಟು ಕಾಳಜಿ ವಹಿಸುವ ಅಗತ್ಯವಿರುತ್ತದೆ.


ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮು ಅವರಿಗೆ ಜೆಡಿಎಸ್‌ ಬೆಂಬಲ


ದೇಶದಲ್ಲಿ ಅತಿ ಹೆಚ್ಚು ಈರುಳ್ಳಿ ಉತ್ಪಾದಿಸುವ ರಾಜ್ಯ ಮಹಾರಾಷ್ಟ್ರ. ಒಂದು ರೀತಿಯಲ್ಲಿ ನೋಡಿದರೆ ಇಡೀ ದೇಶದಲ್ಲಿ ಈರುಳ್ಳಿ ಬೆಲೆಯನ್ನು ಅಲ್ಲಿನ ಉತ್ಪಾದನೆಯೇ ನಿರ್ಧರಿಸುತ್ತದೆ. ಮಹಾರಾಷ್ಟ್ರದ ಲಾಸಲ್‌ಗಾಂವ್‌ನಲ್ಲಿ ಈರುಳ್ಳಿ ಬೆಲೆ ಪ್ರತಿ ಕ್ವಿಂಟಲ್‌ಗೆ ಸರಾಸರಿ 1,225 ರೂ.ನಲ್ಲಿ ಸಾಗುತ್ತಿದೆ ಮತ್ತು ಇದುವರೆಗೆ ಸ್ಥಿರವಾಗಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.