Watch: ಟೀ ಶರ್ಟ್ ಬೆಲೆ 1000 ರೂ. ಅಲ್ಲ, 150 ರೂ.ಎಂದವನಿಗೆ ಕಪಾಳಕ್ಕೆ ಬಾರಿಸಿದ ಮಹಿಳೆ...!

ದೆಹಲಿ ಮೆಟ್ರೋದಲ್ಲಿ ಯುವತಿಯೊಬ್ಬಳು ಯುವಕನಿಗೆ ಹಲವು ಬಾರಿ ಕಪಾಳಮೋಕ್ಷ ಮಾಡಿರುವ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Written by - Zee Kannada News Desk | Last Updated : Jul 15, 2022, 06:48 PM IST
  • ಈ ವಿಡಿಯೋದ ಖಚಿತವಾದ ದಿನಾಂಕ ತಿಳಿದಿಲ್ಲ, ಆದರೆ ಇದು ಕೇವಲ ಫ್ರಾಂಕ್ ಮಾಡಿರುವುದೋ ಅಥವಾ ನಿಜವೋ ಎನ್ನುವುದು ತಿಳಿದಿಲ್ಲ
  • ಆದರೆ ಇದನ್ನು ನೋಡುತ್ತಿದ್ದ ಸಹ ಪ್ರಯಾಣಿಕರು ಮಾತ್ರ ಮೆಟ್ರೋದಲ್ಲಿ ಅವಕ್ಕಾಗಿ ನೋಡುತ್ತಿದ್ದರು
 Watch: ಟೀ ಶರ್ಟ್ ಬೆಲೆ 1000 ರೂ. ಅಲ್ಲ, 150 ರೂ.ಎಂದವನಿಗೆ ಕಪಾಳಕ್ಕೆ ಬಾರಿಸಿದ ಮಹಿಳೆ...! title=
Photo Courtsey: Twitter

ನವದೆಹಲಿ: ದೆಹಲಿ ಮೆಟ್ರೋದಲ್ಲಿ ಯುವತಿಯೊಬ್ಬಳು ಯುವಕನಿಗೆ ಹಲವು ಬಾರಿ ಕಪಾಳಮೋಕ್ಷ ಮಾಡಿರುವ ವಿಡಿಯೋವೊಂದು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಯುವತಿಯೊಬ್ಬಳು ಹುಡುಗನಿಗೆ ಟೀ ಶರ್ಟ್ ವೊಂದನ್ನು 1000 ರೂ.ಗೆ ಖರೀದಿಸಿರುವುದಾಗಿ ಹೇಳಿದ್ದಾಳೆ, ಆದರೆ ಇದಕ್ಕೆ ಪ್ರತಿಯಾಗಿ ಆತನು ಇದರ ಬೆಲೆ 150ಕ್ಕಿಂತ ಹೆಚ್ಚಿಲ್ಲ ಎಂದು ಹೇಳಿದ್ದಾನೆ.ಇದರಿಂದ ಕೆಂಡಾಮಂಡಲವಾಗಿರುವ ಯುವತಿ ಹಲವು ಬಾರಿ ಕಪಾಳಮೋಕ್ಷ ಮಾಡಿದ್ದಾಳೆ.

ಈ ವಿಡಿಯೋದ ಖಚಿತವಾದ ದಿನಾಂಕ ತಿಳಿದಿಲ್ಲ, ಆದರೆ ಇದು ಕೇವಲ ಫ್ರಾಂಕ್ ಮಾಡಿರುವುದೋ ಅಥವಾ ನಿಜವೋ ಎನ್ನುವುದು ತಿಳಿದಿಲ್ಲ. ಆದರೆ ಇದನ್ನು ನೋಡುತ್ತಿದ್ದ ಸಹ ಪ್ರಯಾಣಿಕರು ಮಾತ್ರ ಮೆಟ್ರೋದಲ್ಲಿ ಅವಕ್ಕಾಗಿ ನೋಡುತ್ತಿದ್ದರು.

ಇದನ್ನೂ ಓದಿ: ಆರ್ಡರ್‌ ಕ್ಯಾನ್ಸಲ್‌ ಮಾಡಿದಕ್ಕೆ ಕೋಪ: ಮೆಕ್‌ ಡೊನಾಲ್ಡ್ಸ್‌ಗೆ ನುಗ್ಗಿ ತಾನೇ ಕುಕ್‌ ಮಾಡಿದ ಯುವತಿ

ಇತ್ತೀಚಿಗಷ್ಟೇ ನೋಯ್ಡಾ ಮೆಟ್ರೋ ನಿಲ್ದಾಣದಲ್ಲಿ ಜನದಟ್ಟಣೆಗೆ ಕಾರಣವಾದ ಹುಟ್ಟುಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಯೂಟ್ಯೂಬರ್ ಗೌರವ್ ತನೇಜಾ ಅವರನ್ನು ಒಂದು ದಿನದ ಮಟ್ಟಿಗೆ ಬಂಧಿಸಲಾಗಿದೆ.

ನೋಯ್ಡಾದಲ್ಲಿ ಜಾರಿಯಲ್ಲಿರುವ ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ (CrPC) ಸೆಕ್ಷನ್ 144 ಮತ್ತು ಸೆಕ್ಷನ್ 188 (ಸಾರ್ವಜನಿಕ ಸೇವಕರು ಸರಿಯಾಗಿ ಘೋಷಿಸಿದ ಆದೇಶಕ್ಕೆ ಅಸಹಕಾರ) ಉಲ್ಲಂಘಿಸಿದ್ದಕ್ಕಾಗಿ ಯೂಟ್ಯೂಬರ್ ನನ್ನು ಬಂಧಿಸಲಾಗಿದೆ.

ಗೌರವ್ ತನೇಜಾ ಅವರ ಪತ್ನಿ ರಿತು ರತೀ ತನೇಜಾ ಅವರ ಹುಟ್ಟುಹಬ್ಬದ ಆಚರಣೆಗೆ ಅನುಯಾಯಿಗಳನ್ನು ಆಹ್ವಾನಿಸಿದ್ದರು.ಇದರ ನಂತರ, ಯೂಟ್ಯೂಬರ್ ಅನ್ನು ಭೇಟಿ ಮಾಡಲು ಸಾವಿರಾರು ಜನರು ಸೆಕ್ಟರ್ 51 ಮೆಟ್ರೋ ನಿಲ್ದಾಣದಲ್ಲಿ ಸೇರಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News