ನವದೆಹಲಿ: ಹಬ್ಬದ ಋತುವಿನಲ್ಲಿ ಒಂದು ವೇಳೆ ನೀವೂ ಕೂಡ ನಿಮ್ಮ ಅಂಗಡಿಯ ಮಾರಾಟವನ್ನು ಹೆಚ್ಚಿಸಲು ನೀವು ಬಯಸುತ್ತಿದ್ದರೆ, ಐಸಿಐಸಿಐ ಬ್ಯಾಂಕ್ (ICICI Bank) ನಿಮಗಾಗಿ ಡಿಜಿಟಲ್ ಸ್ಟೋರ್ ಮ್ಯಾನೇಜ್ಮೆಂಟ್ ಪ್ಲಾಟ್ಫಾರ್ಮ್ (DSMP) ಅನ್ನು ಪರಿಚಯಿಸಿದೆ. ಚಿಲ್ಲರೆ ಅಂಗಡಿಗಳು ಮಾತ್ರ ಈ ಕೊಡುಗೆಯ ಲಾಭವನ್ನು ಪಡೆಯಬಹುದು. ಈ ಹೊಸ ಪ್ಲಾಟ್‌ಫಾರ್ಮ್ ಮೂಲಕ, ಕಿರಾಣಿ ಅಂಗಡಿಗಳು ಬಿಲ್ಲಿಂಗ್‌ನಿಂದ ಹಿಡಿದು ಪಿಒಎಸ್, ಕ್ಯೂಆರ್‌ಕೋಡ್ ಅಥವಾ ಪಾವತಿ ಲಿಂಕ್‌ಗಳ ಮೂಲಕ ಪಡೆಯುವ ಪೇಮೆಂಟ್ ಎಲ್ಲವನ್ನೂ ನಿರ್ವಹಿಸಬಹುದು.


COMMERCIAL BREAK
SCROLL TO CONTINUE READING

ಇದನ್ನು ಓದಿ-  Home Loan ಪಡೆಯಲು ಇದು ಸರಿಯಾದ ಸಮಯ, HDFC ಸೇರಿದಂತೆ ಹಲವು ಬ್ಯಾಂಕ್ ಗಳ ಬಡ್ಡಿದರದಲ್ಲಿ ಮತ್ತೆ ಇಳಿಕೆ


ICICI ಬ್ಯಾಂಕ್ ನ ಈ ಯೋಜನೆ ಯಾವುದು ಮತ್ತು ಏನು?
ಅಷ್ಟೇ ಅಲ್ಲ, ಐಸಿಐಸಿಐ ಬ್ಯಾಂಕಿನ ಈ ಪ್ಲಾಟ್‌ಫಾರ್ಮ್ ಮೂಲಕ, ಅಂಗಡಿಯವರು ತಮ್ಮ ದಿನಸಿ ಅಂಗಡಿಯನ್ನು ಆನ್‌ಲೈನ್ ಸ್ಟೋರ್ ಆಗಿ ಪರಿವರ್ತಿಸಬಹುದು. ಅಂದರೆ, ಆಫ್‌ಲೈನ್ ಜೊತೆಗೆ, ಅವರು ಆನ್‌ಲೈನ್ ಆರ್ಡರ್ ಗಳನ್ನು ಸಹ ಪಡೆಯಬಹುದಾಗಿದೆ. ಐಸಿಐಸಿಐ ಬ್ಯಾಂಕ್ ಪ್ರಕಾರ, ಯಾವುದೇ ಚಿಲ್ಲರೆ ವ್ಯಾಪಾರಿಗಳು eazypay ಆ್ಯಪ್ ಮೂಲಕ PoS ಯಂತ್ರಕ್ಕಾಗಿ ಅರ್ಜಿ ಸಲ್ಲಿಸುವಾಗ ಡಿಜಿಟಲ್ ಸ್ಟೋರ್ ಪ್ಲಾಟ್‌ಫಾರ್ಮ್‌ ಗಾಗಿ ಅರ್ಜಿ ಸಲ್ಲಿಸಬಹುದು.


ಇದನ್ನು ಓದಿ- ತ್ವರಿತವಾಗಿ 1 ಕೋಟಿ ರೂ.ವರೆಗೂ ಸಾಲ ನೀಡುತ್ತೆ ಐಸಿಐಸಿಐ ಬ್ಯಾಂಕ್, ಹೇಗೆಂದು ತಿಳಿಯಿರಿ!


ಆಪ್ ಗೆ ಹೀಗೆ ಅಪ್ಪ್ಲೈ ಮಾಡಿ
ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ಮೂರು ಅಪ್ಲಿಕೇಶನ್‌ಗಳಿವೆ. ಇವುಗಳಲ್ಲಿ, eazystore mobile app ಅಂಗಡಿಯವರಿಗೆ 30 ನಿಮಿಷಗಳಲ್ಲಿ ತನ್ನ ಅಂಗಡಿಯನ್ನು ಆನ್‌ಲೈನ್ ಸ್ಟೋರ್ ಆಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಇದೇ ವೇಳೆ eazybilling app UPI ಅಥವಾ ಡೆಬಿಟ್-ಕ್ರೆಡಿಟ್ ಕಾರ್ಡ್‌ಗಳ ಮೂಲಕ ಮಾಡಿದ ಹಣ ಪಾವತಿಯ ದಾಖಲೆಗಳನ್ನು ಇಡುತ್ತದೆ. ಅಂಗಡಿಯವರು ಈ ಅಪ್ಲಿಕೇಶನ್‌ನ ಮೂಲಕ ದಾಸ್ತಾನು ಮತ್ತು ಆದೇಶಗಳನ್ನು ಸಹ ನಿರ್ವಹಿಸಬಹುದು. eazybilling ಅಪ್ಲಿಕೇಶನ್‌ನಲ್ಲಿ, ಮಾರಾಟ, ಲಾಭ, ಜಿಎಸ್‌ಟಿ ಜೊತೆಗೆ ಹಲವು ರೀತಿಯ ವರದಿಗಳನ್ನು ರಚಿಸುವ ಆಯ್ಕೆಯೂ ಇರುತ್ತದೆ.


ಇದನ್ನು ಓದಿ- ಯಾವುದೇ ರೀತಿಯ ಗ್ಯಾರಂಟಿ ಇಲ್ಲದೆ 5 ಲಕ್ಷ ರೂ. ಸಾಲ ನೀಡಲಿದೆ Paytm, MSMEಗೆ 1000 ಕೋಟಿ ರೂ. ಯೋಜನೆ


ದಾಸ್ತಾನು ಪೂರೈಕೆದಾರರಿಗೆ ಆರ್ಡರ್ ಕೂಡ ನೀಡಬಹುದು
ಮೂರನೇ eazysupply app ಮೂಲಕ, ಅಂಗಡಿಯವನು ತನ್ನ ಸಗಟು ವ್ಯಾಪಾರಿ ಅಥವಾ ವಿತರಕರಿಗೆ ಆನ್‌ಲೈನ್ ಆರ್ಡರ್ ಗಳನ್ನು ಸಹ ಕಳುಹಿಸಬಹುದು. ಇದು ಅಂಗಡಿಯವರ ಸಮಯವನ್ನು ಉಳಿಸುತ್ತದೆ, ಜೊತೆಗೆ ಸಣ್ಣ ಅಂಗಡಿಯವರು ಸಹ ಸರಬರಾಜುದಾರರಿಂದ ಅನೇಕ ರೀತಿಯ ರಿಯಾಯಿತಿಯ ಲಾಭವನ್ನು ಪಡೆಯುತ್ತಾರೆ. ಬ್ಯಾಂಕಿನ ಸ್ವ-ಉದ್ಯೋಗ ವಿಭಾಗದ ಮುಖ್ಯಸ್ಥ ಪಂಕಜ್ ಗಾಡ್ಗಿಲ್ ಅವರ ಪ್ರಕಾರ, ಅಂಗಡಿಯವರು ಹೊಸ ಗ್ರಾಹಕರನ್ನು ತಲುಪಲು ಇದು ತುಂಬಾ ಸಹಕಾರಿಯಾಗಿದೆ ಎಂದಿದ್ದಾರೆ.


ಇದನ್ನು ಓದಿ- ನೀವೂ ಹಣ ಪಾವತಿಗೆ Paytm, Phonepe ಬಳಸುತ್ತೀರಾ? ಹಾಗಿದ್ದರೆ ಈ ಸುದ್ದಿ ತಪ್ಪದೆ ಓದಿ


ಒಂದು ಕೋಟಿ ಆನ್ಲೈನ್ ಅಂಗಡಿ ತೆರೆಯುವ ಗುರಿ
ಕರೋನಾ ವೈರಸ್ ಬಿಕ್ಕಟ್ಟಿನ ಕಾಲದಲ್ಲಿ, ಗ್ರಾಹಕರು ದೈನಂದಿನ ಅಗತ್ಯತೆಗಳನ್ನು ಖರೀದಿಸಲು ಸಂಪರ್ಕವಿಲ್ಲದ, ಸುಲಭ ಮತ್ತು ಡಿಜಿಟಲ್ ಪರಿಹಾರಗಳನ್ನು ಹುಡುಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅಂತಹ ವೇದಿಕೆಯ ಅಗತ್ಯವನ್ನು ತುಂಬಾ ಅನುಭವಿಸಲಾಯಿತು. ನಮ್ಮ ಹೊಸ ಪ್ಲಾಟ್‌ಫಾರ್ಮ್‌ನ ಸಹಾಯದಿಂದ, ಅಂಗಡಿಯವರು ತಮ್ಮ ಕಿರಾಣಿ ಅಂಗಡಿಯನ್ನು ಹೆಚ್ಚಿನ ಶ್ರಮವಿಲ್ಲದೆ ಆಧುನಿಕ ಅಂಗಡಿಯಾಗಿ ಪರಿವರ್ತಿಸಲು ಸಾಧ್ಯವಾಗುತ್ತದೆ. ಈ ಹೊಸ ಪ್ಲಾಟ್‌ಫಾರ್ಮ್ ಮೂಲಕ 1 ಕೋಟಿ ಕಿರಾಣಿ ಅಂಗಡಿಗಳನ್ನು ಆನ್‌ಲೈನ್ ಮಳಿಗೆಗಳಾಗಿ ಪರಿವರ್ತಿಸುವ ಉದ್ದೇಶವನ್ನು ಬ್ಯಾಂಕ್ ಹೊಂದಿದೆ ಎಂದು ಗಾಡ್ಗಿಲ್ ಹೇಳಿದ್ದಾರೆ.