ನವದೆಹಲಿ: ಐಸಿಐಸಿಐ ಬ್ಯಾಂಕ್ ನೂತನವಾಗಿ ಎರಡು ತ್ವರಿತ ಗೃಹ ಸಾಲ ಸೌಲಭ್ಯ ಯೋಜನೆಗಳನ್ನು ಪರಿಚಯಿಸಿದೆ. ಮೊದಲ ಸೌಲಭ್ಯ ಗ್ರಾಹಕರನ್ನು ಹೊಸ ಗೃಹ ಸಾಲಗಳಿಗೆ ತಕ್ಷಣದ ಅನುಮೋದನೆ ಪತ್ರವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಆದರೆ ಎರಡನೇ ಸೇವೆಯು ಈಗಾಗಲೇ ಸಾಲ ಪಡೆದಿರುವ ಗ್ರಾಹಕರಿಗೆ ಅಧಿಕ(ನಿಯಮಾನುಸಾರ)ಸಾಲ ಪಡೆಯಲು ಅನುಮತಿಸುತ್ತದೆ ಮತ್ತು ಸಂಪೂರ್ಣ ಡಿಜಿಟಲ್ ರೀತಿಯಲ್ಲಿ ತಕ್ಷಣವೇ ತಮ್ಮ ಖಾತೆಯಲ್ಲಿ ಹಣ ಸ್ವೀಕರಿಸಲು ಅನುಮತಿಸುತ್ತದೆ. ಬ್ಯಾಂಕ್ ತ್ವರಿತ ಸಾಲ 'ಟಾಪ್ ಅಪ್' ಸಾಲ ಸೌಲಭ್ಯ ಗೃಹ ಸಾಲದ ನೀರಿಕ್ಷೆಯಲ್ಲಿರುವವರಿಗೆ ಅನುಕೂಲವಾಗಲಿದೆ.
ಬ್ಯಾಂಕ್ ಉದ್ಯಮದಲ್ಲಿ ಇದೇ ಮೊದಲ ಬಾರಿಗೆ ಇಂತಹ ಒಂದು ಯೋಜನೆ ಜಾರಿಗೆ ತರಲಾಗಿದೆ ಎಂದು ಬ್ಯಾಂಕ್ ತಿಳಿಸಿದೆ. ತ್ವರಿತ ಗೃಹ ಸಾಲ ಪಡೆಯುವುದು ಬಹಳ ಸುಲಭವಾಗಿದ್ದು ಸಂಬಳ ಪಡೆಯುವ ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯದ ಮೂಲಕ 30 ವರ್ಷ ಅವಧಿಯವರೆಗೆ (ಗ್ರಾಹಕರ ವಯಸ್ಸಿನ ಆಧಾರದ ಮೇಲೆ) 1 ಕೋಟಿ ರೂ.ವರೆಗೂ ಗೃಹ ಸಾಲ ಪಡೆಯಬಹುದಾಗಿದೆ.
ಅಪ್ಲಿಕೇಶನ್, KYC ಮತ್ತು ಆದಾಯ ಪತ್ರದಂತಹ ದಾಖಲೆಗಳನ್ನು ಸಲ್ಲಿಸಲು ಗ್ರಾಹಕರು ಇನ್ನು ಮುಂದೆ ಪದೇ ಪದೇ ಶಾಖೆಗೆ ಭೇಟಿ ನೀಡಲೇಬೇಕಾದ ಅಗತ್ಯವಿಲ್ಲದ ಕಾರಣ ಗಮನಾರ್ಹವಾಗಿ ಈ ಸೌಲಭ್ಯವು ಗ್ರಾಹಕರ ಅನುಕೂಲತೆಯನ್ನು ಸುಧಾರಿಸುತ್ತದೆ ಎಂದು ಹೇಳಲಾಗಿದೆ.
ಬ್ಯಾಂಕ್, ಗ್ರಾಹಕರಿಗೆ ಸಾಲ ನೀಡುವ ಮೊದಲು ಕ್ರೆಡಿಟ್ ಸ್ಕೋರ್, ಸಂಬಳ, ಸರಾಸರಿ ಬ್ಯಾಲೆನ್ಸ್ ಮತ್ತು ಟ್ರ್ಯಾಕ್ ರೆಕಾರ್ಡ್ ಅನ್ನು ನೋಡಲಿದೆ. ಇವುಗಳ ಆಧಾರದ ಮೇಲೆ ಬ್ಯಾಂಕ್ ಕೆಲವೇ ಕೆಲವು ಕ್ಲಿಕ್ ಮೂಲಕ ತ್ವರಿತವಾಗಿ ನಿಮಗೆ ಗೃಹ ಸಾಲ ಮಂಜೂರು ಮಾಡಲಿದೆ. ಗ್ರಾಹಕರ ನೋಂದಾಯಿತ ಇಮೇಲ್ ಐಡಿಗೆ ಬ್ಯಾಂಕಿನಿಂದ ತಕ್ಷಣವೇ ಅನುಮೋದನಾ ಪತ್ರವನ್ನು ವಿತರಿಸಲಾಗುವುದು. ಈ ಅನುಮೋದನಾ ಪತ್ರವು ಆರು ತಿಂಗಳವರೆಗೆ ಮಾನ್ಯವಾಗಿರಲಿದೆ.
ಹೇಗಾದರೂ, ಗೃಹ ಸಾಲವನ್ನು ಪಡೆಯಲು ಗ್ರಾಹಕರು ಹತ್ತಿರದ ಶಾಖೆಗೆ ಭೇಟಿ ನೀಡಬೇಕು ಅಥವಾ ಅವನು / ಅವಳು ಖರೀದಿಸಲು ಬಯಸಿದ ಮನೆಯ ಅನುಮೋದನೆ ಪತ್ರ ಮತ್ತು ದಾಖಲೆಗಳೊಂದಿಗೆ ಬ್ಯಾಂಕಿನ ನಿರ್ವಾಹಕರನ್ನು ಸಂಪರ್ಕಿಸಬೇಕು.
"ಇನ್ಸ್ಟಾ ಟಾಪ್ ಅಪ್ ಲೋನ್" ಎಂಬ ಎರಡನೇ ಯೋಜನೆಯು ಬ್ಯಾಂಕಿನಲ್ಲಿ ಈಗಾಗಲೇ ಸಾಲ ಪಡೆದಿರುವ ಗ್ರಾಹಕರಿಗೆ ಅಧಿಕ(ನಿಯಮಾನುಸಾರ) ಸಾಲ ಪಡೆಯಲು ಅನುಮತಿಸುತ್ತದೆ. ಅವನ/ಅವಳ ಸಾಲವನ್ನು 20 ಲಕ್ಷ ರೂ.ವರೆಗೆ ಹೆಚ್ಚಿಸಲು ಮತ್ತು 10 ವರ್ಷಗಳ ಅವಧಿಯಲ್ಲಿ ಸಾಲ ಮರುಪಾವತಿಸುವ ಸೌಲಭ್ಯವನ್ನು ಒದಗಿಸುತ್ತದೆ. ಅಲ್ಲದೆ ಸಂಪೂರ್ಣವಾಗಿ ಡಿಜಿಟಲ್ ಮತ್ತು ಕಾಗದ ರಹಿತವಾಗಿ ಈ ಸೌಲಭ್ಯ ಪಡೆಯಬಹುದು. ಜೊತೆಗೆ ಗ್ರಾಹಕರ ಖಾತೆಗೆ ತಕ್ಷಣ ಸಾಲದ ಹಣ ವರ್ಗಾವಣೆಯಾಗಲಿದೆ ಎಂದು ಬ್ಯಾಂಕ್ ತಿಳಿಸಿದೆ.
ತ್ವರಿತ ಗೃಹ ಸಾಲದ ಅನುಮೋದನೆಗೆ ಅನುಸರಿಸಬೇಕಾದ ಕ್ರಮಗಳು:
- ರಿಟೇಲ್ ಇಂಟರ್ನೆಟ್ ಬ್ಯಾಂಕಿಂಗ್ ಪ್ರವೇಶಿಸಿ> 'ನನ್ನ ಖಾತೆಗಳು'(My accounts) ಕ್ಲಿಕ್ ಮಾಡಿ> ಸಾಲಗಳು(Loans)> ತತ್ಕ್ಷಣ ಮಂಜೂರಾತಿ - ಗೃಹ ಸಾಲದ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ಅಗತ್ಯವಿರುವ ಮೊತ್ತ ಮತ್ತು ಅಧಿಕಾರಾವಧಿಯನ್ನು ಆಯ್ಕೆಮಾಡಿ> ಶುಲ್ಕ ಪಾವತಿಸುವ ಪ್ರಕ್ರಿಯೆ (pay processing fee as displayed).
- ಇಮೇಲ್ ಐಡಿಗೆ ಬ್ಯಾಂಕ್ ನಿಂದ ಕಳುಹಿಸಲಾದ ಅನುಮೋದನೆ ಪತ್ರವನ್ನು ಡೌನ್ಲೋಡ್ ಮಾಡಿ ಪಡೆಯಿರಿ
ಇನ್ಸ್ಟಾ ಟಾಪ್ ಅಪ್ ಲೋನ್ ಪಡೆಯಲು ಅನುಸರಿಸಬೇಕಾದ ಕ್ರಮ:
- ರಿಟೇಲ್ ಇಂಟರ್ನೆಟ್ ಬ್ಯಾಂಕಿಂಗ್ಗೆ ಪ್ರವೇಶಿಸಿ> ವಿಶೇಷ ಕೊಡುಗೆಗಳು> ಕೊಡುಗೆ ಅರ್ಜಿಯನ್ನು ಆನ್ಲೈನಿನಲ್ಲಿ ಸಲ್ಲಿಸಿ
- ಸಾಲದ ಪ್ರಮಾಣ ಮತ್ತು ಅಧಿಕಾರಾವಧಿಯನ್ನು ಆಯ್ಕೆ ಮಾಡಿ. ಗ್ರಾಹಕರಿಗೆ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ OTP ದೊರೆಯುತ್ತದೆ
- OTP ಯನ್ನು ನಮೂದಿಸಿ ಮತ್ತು 'ಈಗ ವಿತರಿಸು' ಬಟನ್ ಕ್ಲಿಕ್ ಮಾಡಿ
- ಗ್ರಾಹಕರ ಖಾತೆಗೆ ತಕ್ಷಣ ಸಾಲದ ಹಣ ವರ್ಗಾವಣೆಯಾಗುತ್ತದೆ