ನವದೆಹಲಿ: ಪೇಮೆಂಟ್ (Paytm) ಅಪ್ಲಿಕೇಶನ್ ಪೇಟಿಎಂ ತನ್ನ MSMEಗಳಿಗೆ ತನ್ನ ಸಾಲದ ಮಿತಿಯನ್ನು 1000 ಕೋಟಿ ರೂ.ಗೆ ಹೆಚ್ಚಸಲು ಮುಂದಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಎಂಎಸ್‌ಎಂಇಗಳಿಗೆ ಸಾಲ ನೀಡಲು 550 ಕೋಟಿ ರೂ. ನಿರ್ಧರಿಸಿತ್ತು. ಇದೀಗ ಕಂಪನಿಯು ಕೊಲ್ಯಾಟ್ರಲ್ ಫ್ರೀ ಸಾಲದ ಮಿತಿಯನ್ನು ಐದು ಲಕ್ಷ ರೂ.ಗೆ ಹೆಚ್ಚಿಸಿದೆ. ಅಷ್ಟೇ ಅಲ್ಲ ಇದರ ಮೇಲೆ ಕಡಿಮೆ ಬಡ್ಡಿದರವನ್ನು ವಿಧಿಸಲಾಗುತ್ತಿದೆ. ಕಿರಾಣಿ ಅಂಗಡಿಗಳು ಮತ್ತು ಸಣ್ಣ ಉದ್ಯಮಗಳಿಗೆ ತನ್ನ ಕೊಲ್ಯಾಟ್ರಲ್ ಫ್ರೀ ಸಾಲದ ಮೂಲಕ ಪೇಟಿಎಂ ಸಹಾಯ ಮಾಡುತ್ತಿದೆ ಎಂದು ಕಂಪನಿ ಹೇಳಿದೆ. ಸಾಂಪ್ರದಾಯಿಕ ಬ್ಯಾಂಕಿಂಗ್ ವಲಯ ಸಾಲ ನೀಡದ ಜನರಿಗೂ ಕೂಡ ಕಂಪನಿಯು ಸಾಲವನ್ನು ಒದಗಿಸುತ್ತಿದೆ.
ಇದನ್ನು ಓದಿ- ನೀವೂ ಹಣ ಪಾವತಿಗೆ Paytm, Phonepe ಬಳಸುತ್ತೀರಾ? ಹಾಗಿದ್ದರೆ ಈ ಸುದ್ದಿ ತಪ್ಪದೆ ಓದಿ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಎರಡು ಪಟ್ಟು ಹೆಚ್ಚು ಸಾಲ ನೀಡುವ ಯೋಜನೆ
ಪೇಟ್‌ಎಂ 2019-20ನೇ ಹಣಕಾಸು ವರ್ಷದಲ್ಲಿ ಎಂಎಸ್‌ಎಂಇಗಳಿಗೆ ಸಾಲವಾಗಿ 550 ಕೋಟಿ ರೂ. ನೀಡಿದೆ. ಆದರೆ ಈ ವರ್ಷ ಕಂಪನಿಯು ಈಗ ಈ ಮೊತ್ತವನ್ನು ಒಂದು ಸಾವಿರ ಕೋಟಿ ರೂಪಾಯಿಗಳಿಗೆ ಹೆಚ್ಚಿಸಿದೆ. ವ್ಯಾಪಾರಿ ಸಾಲ ನೀಡುವ ಕ್ಷೇತ್ರದಲ್ಲಿ, ಪೇಟಿಎಂನ ಪ್ರತಿಸ್ಪರ್ಧಿ ಗೂಗಲ್ ಪೇ, ಫೋನ್ ಪೇ ಕೂಡ ಇಳಿದಿವೆ. ಅನೇಕ ಪರವಾನಗಿ ಪಡೆದ ಬ್ಯಾಂಕುಗಳು ಮತ್ತು ಎನ್‌ಬಿಎಫ್‌ಸಿಗಳ ಸಹಯೋಗದೊಂದಿಗೆ ಸಣ್ಣ ಉದ್ಯಮಗಳಿಗೆ ಸಾಲವನ್ನು ಅವು ನೀಡುತ್ತಿವೆ. ಈ ಕುರಿತು ಹೇಳಿಕೆ ನೀಡಿರುವ ಕಂಪನಿಯ ಸಿಇಒ ಭಾವೆಶ್ ಗುಪ್ತಾ. ತಮ್ಮ ಕಂಪನಿ ಯಾವುದೇ ರೀತಿಯ ಗ್ಯಾರಂಟಿ ಇಲ್ಲದೆ ಹಾಗೂ ಯಾವುದೇ ವಸ್ತುವನ್ನು ಅಡವು ಪಡೆಯದೆಯೇ ಸಣ್ಣ ವ್ಯಾಪಾರಿಗಳಿಗೆ ಹಾಗೂ MSMEಗಳಿಗೆ 5 ಲಕ್ಷ ರೂ.ವರೆಗೆ ಇನ್ಸ್ಟಂಟ್ ಸಾಲ ಅತ್ಯಂತ ಕಡಿಮೆ ದರದಲ್ಲಿ ಒದಗಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನು ಓದಿ- Paytm SBI ಕ್ರೆಡಿಟ್ ಕಾರ್ಡ್‌ನಲ್ಲಿ ಕ್ಯಾಶ್‌ಬ್ಯಾಕ್‌ನೊಂದಿಗೆ ಪಡೆಯಿರಿ ಅತ್ಯುತ್ತಮ ಆಫರ್ಸ್
ಆಪ್ ನಲ್ಲಿ ಪರಿಚಯಿಸಲಾಗಿರುವ ಅಲ್ಗೋದಮ್ ಸಾಲ ನೀಡುವ ನಿರ್ಣಯ ಕೈಗೊಳ್ಳಲಿದೆ
ಅಪ್ಲಿಕೇಶನ್‌ನಲ್ಲಿ ಪರಿಚಯಿಸಲಾಗಿರುವ ಅಲ್ಗಾರಿದಮ್ ಸಾಲಕ್ಕೆ ಯಾರು ಅರ್ಹರು ಎಂದು ನಿರ್ಧರಿಸುತ್ತದೆ. ಈ ಅಪ್ಲಿಕೇಶನ್‌ನ ಅಲ್ಗಾರಿದಮ್ ಸಾಲಗಾರನು ಸಾಲವನ್ನು ಮರುಪಾವತಿಸಲು ಸಮರ್ಥನಾಗಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ವ್ಯಾಪಾರಿ Paytm ನಲ್ಲಿ ಮಾಡಿದ ಇತ್ಯರ್ಥದ ಆಧಾರದ ಮೇಲೆ ನಿರ್ಧರಿಸುತ್ತದೆ. 2019-20ರ ಆರ್ಥಿಕ ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಣ್ಣ ವ್ಯಾಪಾರಿಗಳು ಮತ್ತು ಎಂಎಸ್‌ಎಂಇಗಳಿಗೆ ಪೇಟಿಎಂ 550 ಕೋಟಿ ರೂ. ಸಾಲವನ್ನು ಕಂಪನಿ ನೀಡಿತ್ತು. ಪೇಟಿಎಂ ಲೆಂಡಿಂಗ್ ಸಿಇಒ ಅವರು, ಈ ಸಾಲಕ್ಕೆ ಅರ್ಜಿ ಸಲ್ಲಿಸುವಿಕೆಯಿಂದ ಸಾಲ ನೀಡುವ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು, ಇದಕ್ಕಾಗಿ ಯಾವುದೇ ಹೆಚ್ಚುವರಿ ದಾಖಲೆಗಳ ಅಗತ್ಯವಿಲ್ಲ ಎಂದು ಹೇಳಿದ್ದಾರೆ.