ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಪ್ರತಿ ಬ್ಯಾರೆಲ್‍ಗೆ 90 ಡಾಲರ್ ದಾಟಿದ್ದು, ಪರಿಣಾಮ ಭಾರತ ಸೇರಿದಂತೆ ಏಷ್ಯಾ ದೇಶಗಳಲ್ಲಿ ಹಣದುಬ್ಬರ ಸಮಸ್ಯೆ ತೀವ್ರವಾಗುವ ಸಾಧ್ಯತೆಯಿದೆ. ಪರಿಸ್ಥಿತಿ ಹೀಗೆ ಮುಂದುವರೆದಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗುವ ಸಂಭವ ಇದೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಚುನಾವಣೆ ವರ್ಷವಾಗಿರುವ ಕಾರಣ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ ಕಚ್ಚಾತೈಲ ದರ ಏರಿಕೆ ಹೀಗೆ ಮುಂದುವರೆದರೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಇಳಿಕೆ ಬದಲು ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. 


ಇದನ್ನೂ ಓದಿ: ಹಳೆಯ ಪಿಂಚಣಿ ಯೋಜನೆ ಬಗ್ಗೆ ರಿಸರ್ವ್ ಬ್ಯಾಂಕ್ ಬಹು ದೊಡ್ಡ ಆದೇಶ : ಈಗ ರಾಜ್ಯ ಸರ್ಕಾರದ ಮುಂದಿರುವ ಆಯ್ಕೆ ?


2023ರ ಜನವರಿಯಿಂದ ಕಚ್ಚಾ ತೈಲ ದರ ಶೇ.30ರಷ್ಟು ಹೆಚ್ಚಳವಾಗಿದ್ದು, ಪ್ರತಿ ಬ್ಯಾರೆಲ್‍ಗೆ 90 ಡಾಲರ್ ದಾಟಿದೆ. WTI ಕಚ್ಚಾತೈಲ ದರ ಶೇ.1.06ರಷ್ಟು ಏರಿಕೆಯಾಗಿದ್ದು, ಪ್ರತಿ ಬ್ಯಾರೆಲ್‍ಗೆ 92.54 ಡಾಲರ್‍ನಂತೆ ವಹಿವಾಟು ನಡೆಸುತ್ತಿದೆ. ಬ್ರೆಂಟ್ ಕಚ್ಚಾ ತೈಲ ದರ ಶೇ.0.63ರಷ್ಟು ಹೆಚ್ಚಳವಾಗಿದ್ದು, ಪ್ರತಿ ಬ್ಯಾರೆಲ್‍ಗೆ 93.91 ಡಾಲರ್‍ಗೆ ತಲುಪಿದೆ ಎಂದು ವರದಿಯಾಗಿದೆ.


ಇಡೀ ಪ್ರಪಂಚದಲ್ಲಿಯೇ ಭಾರತ ಕಚ್ಚಾ ತೈಲ ಆಮದಿನಲ್ಲಿ 3ನೇ ಅತಿದೊಡ್ಡ ದೇಶವಾಗಿದೆ. ತೈಲದರದಲ್ಲಿ 10 ಡಾಲರ್ ಏರಿಕೆಯಾದ್ರೆ ಭಾರತದ ಚಾಲ್ತಿ ಖಾತೆಯ ವಿತ್ತೀಯ ಕೊರತೆಯನ್ನು ಶೇ.0.2ರಷ್ಟು ಹೆಚ್ಚಿಸಲಾಗುತ್ತದೆ. ತೈಲದರ 90 ಡಾಲರ್ ದಾಟಿದ್ದು, ಇದೇ ಟ್ರೆಂಡ್ ಮುಂದುವರೆದರೆ ತೈಲ ಕಂಪನಿಗಳಿಗೆ ನಷ್ಟದ ಪ್ರಮಾಣ ಹೆಚ್ಚಾಗುತ್ತದೆ. ಆಗ ಅನಿವಾರ್ಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಏರಿಕೆ ಮಾಡಲಾಗುತ್ತದೆ. ಇದು ನೇರವಾಗಿ ದೇಶದ ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿದೆ.


ಇದನ್ನೂ ಓದಿ: ಬ್ಯಾಂಕ್ ನಲ್ಲಿ FD ಮಾಡಿಸಿದವರಿಗೆ ಸಿಹಿ ಸುದ್ದಿ! ಫಿಕ್ಸೆಡ್ ಡೆಪಾಸಿಟ್ ಮೇಲೆ ಸಿಗುವುದು ಅಧಿಕ ಬಡ್ಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.