Old Pension Scheme Update : ಹಳೆಯ ಪಿಂಚಣಿ ಯೋಜನೆ ಕುರಿತು ದೇಶಾದ್ಯಂತ ಹಲವು ರೀತಿಯ ಚರ್ಚೆಗಳು ನಡೆಯುತ್ತಿವೆ. ಇದೀಗ ಹಳೆಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಮಹತ್ವದ ಸುದ್ದಿ ಹೊರಬಿದ್ದಿದೆ. ದೇಶದ ವಿವಿಧ ರಾಜ್ಯಗಳು ಹಳೆಯ ಪಿಂಚಣಿ ಯೋಜನೆಯನ್ನು ಅನುಷ್ಠಾನಗೊಳಿಸುವುದು ಆರ್ಥಿಕವಾಗಿ ಹಿಂದೆ ಬೀಳುವತ್ತ ಇಡುತ್ತಿರುವ ಹೆಜ್ಜೆಯಾಗಿದೆ ಎಂದು ಕೇಂದ್ರ ಬ್ಯಾಂಕ್ ಹೇಳಿದೆ. ಈ ಕಾರಣದಿಂದಾಗಿ, ರಾಜ್ಯಗಳ ಆರ್ಥಿಕ ಸ್ಥಿತಿಯು 'ಅಸ್ಥಿರ'ವಾಗಬಹುದು ಎನ್ನುವ ಎಚ್ಚರಿಕೆಯನ್ನು ನೀಡಿದೆ.
ಹೆಚ್ಚಾಗಲಿದೆ ಆರ್ಥಿಕ ಹೊರೆ :
ರಚಿತ್ ಸೋಲಂಕಿ, ಸೋಮನಾಥ್ ಶರ್ಮಾ, ಆರ್‌ಕೆ ಸಿನ್ಹಾ, ಎಸ್‌ಆರ್ ಬೆಹೆರಾ ಮತ್ತು ಅತ್ರಿ ಮುಖರ್ಜಿ ಅವರ ಲೇಖನದ ಪ್ರಕಾರ, ಹಳೆಯ ಪಿಂಚಣಿ ಯೋಜನೆಯಿಂದಾಗಿ (ಒಪಿಎಸ್) ಒಟ್ಟು ಆರ್ಥಿಕ ಹೊರೆ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಗಿಂತ 4.5 ಪಟ್ಟು ಹೆಚ್ಚಾಗಬಹುದು.
ಇದನ್ನೂ ಓದಿ : ಚಿನ್ನದ ಬೆಲೆ 2,180 ರೂ. ಭರ್ಜರಿ ಇಳಿಕೆ: ಸಾರ್ವಕಾಲಿಕ ದರ ಕುಸಿತದ ಬಳಿಕ 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ಗೊತ್ತಾ?
ಹೊಸ ಪಿಂಚಣಿ ಯೋಜನೆ ಜಾರಿಗೆ :
ಒಂದು ದಶಕದ ಹಿಂದೆ ಪಿಂಚಣಿ ಸುಧಾರಣೆಗಳ ಭಾಗವಾಗಿ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಸಂಶೋಧನಾ ಪ್ರಬಂಧದಲ್ಲಿ ವ್ಯಕ್ತಪಡಿಸಿರುವ ಅಭಿಪ್ರಾಯಗಳು ಆರ್‌ಬಿಐ ಅಭಿಪ್ರಾಯಗಳಲ್ಲ ಎನ್ನುವುದು ಇಲ್ಲಿ ಗಮನಾರ್ಹ .
ಹಲವು ರಾಜ್ಯಗಳಲ್ಲಿ ಒಪಿಎಸ್ ಜಾರಿ :
ಇತ್ತೀಚೆಗೆ ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳು ಎನ್‌ಪಿಎಸ್‌ನಿಂದ ಒಪಿಎಸ್‌ಗೆ ಬದಲಾಗುವುದಾಗಿ ಘೋಷಿಸಿವೆ.
ಇದನ್ನೂ ಓದಿ : Hyundai ಕಾರುಗಳ ಮೇಲೆ ಬಂಪರ್ ಡಿಸ್ಕೌಂಟ್, ಈಗಲೇ ಮನೆಗೆ ತಂದರೆ 2 ಲಕ್ಷ ಉಳಿತಾಯ!
OPS ಅಲ್ಪಾವಧಿಯ ಆಕರ್ಷಣೆಗಳನ್ನು ಹೊಂದಿದ್ದರೂ, ಇದು ಮಧ್ಯಮ ಮತ್ತು ದೀರ್ಘಾವಧಿಯ ಸವಾಲುಗಳನ್ನು ಹೊಂದಿದೆ. ರಾಜ್ಯಗಳ ಪಿಂಚಣಿ ವೆಚ್ಚಗಳಲ್ಲಿ ಅಲ್ಪಾವಧಿಯ ಕಡಿತಗಳು, OPS ಅನ್ನು ಮತ್ತೆ ಜಾರಿಗೆ ತರುವ ನಿರ್ಧಾರಗಳನ್ನು ಪ್ರೇರೇಪಿಸಬಹುದು. ಆದರೆ ಈ ಕಡಿತವನ್ನು ದೀರ್ಘಾವಧಿಯಲ್ಲಿ ಭವಿಷ್ಯದ ಅನುದಾನರಹಿತ ಪಿಂಚಣಿ ಹೊಣೆಗಾರಿಕೆಗಳಲ್ಲಿ ಭಾರಿ ಹೆಚ್ಚಳದಿಂದ ಸರಿದೂಗಿಸಲಾಗುತ್ತದೆ.
OPS ಅನ್ನು ಮತ್ತೆ ಜಾರಿಗೆ ತರುವುದು ಬಹಳ ದೊಡ್ಡ ನಿರ್ಧಾರ :
ಒಪಿಎಸ್‌ಗೆ ರಾಜ್ಯಗಳು ಹಿಂತಿರುಗುವುದು ಒಂದು ಪ್ರಮುಖ ಹೆಜ್ಜೆಯಾಗಿದೆ. ಮಧ್ಯಮದಿಂದ ದೀರ್ಘಾವಧಿಯಲ್ಲಿ ಹಣಕಾಸಿನ ಒತ್ತಡವನ್ನು ಹೆಚ್ಚಿಸಬಹುದು ಎಂದು ಲೇಖನದಲ್ಲಿ ಎಚ್ಚರಿಸಲಾಗಿದೆ.
ಇದನ್ನೂ ಓದಿ : ಸಣ್ಣ ಉಳಿತಾಯ ಯೋಜನೆಗಳೊಂದಿಗೆ ಆಧಾರ್-ಪ್ಯಾನ್ ಲಿಂಕ್ ಮಾಡಲು 10 ದಿನಗಳಷ್ಟೇ ಬಾಕಿ
ಒಪಿಎಸ್‌ಗೆ ಮರಳುವ ರಾಜ್ಯಗಳು ಈ ಲಾಭವನ್ನು ಪಡೆಯುತ್ತಿವೆ :
ಒಪಿಎಸ್ ಅನ್ನು ಮತ್ತೆ ಜಾರಿಗೆ ತರುವ ರಾಜ್ಯಗಳಿಗೆ ಸಿಗುವ ತಕ್ಷಣದ ಪ್ರಯೋಜನವೆಂದರೆ ಅವರು ಪ್ರಸ್ತುತ ಉದ್ಯೋಗಿಗಳ ಎನ್‌ಪಿಎಸ್ ಕೊಡುಗೆಗಳಿಗೆ ಖರ್ಚು ಮಾಡಬೇಕಾಗಿಲ್ಲ. ಆದರೆ, ಭವಿಷ್ಯದಲ್ಲಿ ಒಪಿಎಸ್‌ಗಳು ರಾಜ್ಯದ ಹಣಕಾಸಿನ ಮೇಲೆ 'ತೀವ್ರ ಒತ್ತಡ'ವನ್ನು ಬೀರುವ ಸಾಧ್ಯತೆಯಿದೆ.
ಒಪಿಎಸ್ ಗೆ ಮರಳುವುದು ಸರಿಯಾದ ನಿರ್ಧಾರ ಅಲ್ಲ :
2040 ರ ವೇಳೆಗೆ OPSಗೆ ಹಿಂದಿರುಗುವ ಮೂಲಕ ಪಿಂಚಣಿ ವೆಚ್ಚದಲ್ಲಿ ವಾರ್ಷಿಕವಾಗಿ ಒಟ್ಟು ದೇಶೀಯ ಉತ್ಪನ್ನದ (GDP) ಕೇವಲ 0.1 ಪ್ರತಿಶತವನ್ನು ರಾಜ್ಯಗಳು ಉಳಿಸುತ್ತವೆ. ಆದರೆ ನಂತರ ವಾರ್ಷಿಕ GDP ಯ 0.5 ಪ್ರತಿಶತಕ್ಕೆ ಸಮಾನವಾದ ಪಿಂಚಣಿಗಳ ಮೇಲೆ ಹೆಚ್ಚು ಖರ್ಚು ಮಾಡಬೇಕಾಗುತ್ತದೆ.
ರಾಜ್ಯದಲ್ಲಿ ಜಾರಿಯಲ್ಲಿರುವುದು NPS :
ಎಲ್ಲಾ ರಾಜ್ಯಗಳು ಹಳೇ ಪಿಂಚಣಿ ಯೋಜನೆಯನ್ನೇ ಜಾರಿಗೆ ತರಬೇಕು ಎಂದು ಆಗ್ರಹಿಸುತ್ತಿವೆ. ಇದಕ್ಕಾಗಿ ಪ್ರತಿಭಟನೆಗಳನ್ನು ಕೂಡಾ ನಡೆಸಲಾಗುತ್ತಿದೆ. ರಾಜ್ಯದಲ್ಲಿಯೂ ಹಳೇ ಪಿಂಚಣಿ ಯೋಜನೆ ಜಾರಿಗೆ ತರುವಂತೆ ಒತ್ತಡ ಕೇಳಿ ಬರುತ್ತಿದೆ. ಅಲ್ಲದೆ, ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಮತ್ತೆ ಹಳೇ ಪಿಂಚಣಿ ಯೋಜನೆ ಜಾರಿಗೆ ತರುವುದಾಗಿ ಹೇಳಿತ್ತು. ಸದ್ಯ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ನಿರತವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.