ಸಣ್ಣ ಉಳಿತಾಯ ಯೋಜನೆಗಳೊಂದಿಗೆ ಆಧಾರ್-ಪ್ಯಾನ್ ಲಿಂಕ್ ಮಾಡಲು 10 ದಿನಗಳಷ್ಟೇ ಬಾಕಿ

Aadhaar-Pan: ಪ್ರತಿ ಭಾರತೀಯರ ಪ್ರಮುಖ ದಾಖಲೆಗಳಾಗಿರುವ ಆಧಾರ್ ಮತ್ತು ಪ್ಯಾನ್ ಲಿಂಕಿಂಗ್ ಕಡ್ಡಾಯವಾಗಿದೆ ಎಂದು ನಿಮಗೆ ತಿಳಿದೇ ಇದೆ. ಆದರೆ, ಕೇವಲ ಆಧಾರ್-ಪ್ಯಾನ್ ಮಾತ್ರವಲ್ಲ, ಇದರೊಂದಿಗೆ ನಿಮ್ಮ ಉಳಿತಾಯ ಯೋಜನೆ ಖಾತೆಗಳನ್ನು ಲಿಂಕ್ ಮಾಡುವುದು ಕೂಡ ತುಂಬಾ ಅವಶ್ಯಕ. 

Written by - Yashaswini V | Last Updated : Sep 19, 2023, 12:51 PM IST
  • ಹಣಕಾಸು ಸಚಿವಾಲಯ ಮಾರ್ಚ್ 31, 2023 ರಂದು ಹೊರಡಿಸಿರುವ ಅಧಿಸೂಚನೆ
  • ಅಧಿಸೂಚನೆ ಪ್ರಕಾರ, ಸೆಪ್ಟೆಂಬರ್ 30, 2023ರರೊಳಗೆ ಸಣ್ಣ ಉಳಿತಾಯ ಖಾತೆಗಳನ್ನು ಆಧಾರ್-ಪ್ಯಾನ್ ಗೆ ಲಿಂಕ್ ಮಾಡುವುದು ಕಡ್ಡಾಯ
  • ಸಣ್ಣ ಉಳಿತಾಯ ಖಾತೆಗಳೊಂದಿಗೆ ಆಧಾರ್-ಪ್ಯಾನ್ ಲಿಂಕ್ ಮಾಡದಿದ್ದಲ್ಲಿ ಏನಾಗುತ್ತದೆ?
ಸಣ್ಣ ಉಳಿತಾಯ ಯೋಜನೆಗಳೊಂದಿಗೆ ಆಧಾರ್-ಪ್ಯಾನ್ ಲಿಂಕ್ ಮಾಡಲು 10 ದಿನಗಳಷ್ಟೇ ಬಾಕಿ  title=

Aadhaar PAN Link With Small Savings Schems: ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, ಸಣ್ಣ ಉಳಿತಾಯ ಯೋಜನೆಗಳೊಂದಿಗೆ ಆಧಾರ್ ಪ್ಯಾನ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಹೂಡಿಕೆದಾರರು ಇನ್ನೂ ಕೂಡ  PPF, ಎಸ್‌ಎಸ್‌ವೈ, NSC ಸೇರಿದಂತೆ ಇತರ ಹಲವಾರು ಸಣ್ಣ ಉಳಿತಾಯ ಯೋಜನೆಗಳಿಗೆ  ಆಧಾರ್ ಪ್ಯಾನ್ ಲಿಂಕ್ ಮಾಡದಿದ್ದಲ್ಲಿ ಇನ್ನೂ ಹತ್ತು ದಿನಗಳಲ್ಲಿ ಈ ಕೆಲಸವನ್ನು ತಪ್ಪದೇ ಪೂರ್ಣಗೊಳಿಸಿ. 

ಹೌದು, ಹಣಕಾಸು ಸಚಿವಾಲಯ ಮಾರ್ಚ್ 31, 2023 ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS), ಸಾರ್ವಜನಿಕ ಭವಿಷ್ಯ ನಿಧಿ (PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಮತ್ತು ಇತರ ಅಂಚೆ ಕಛೇರಿ ಯೋಜನೆಗಳಂತಹ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರದು ತಪ್ಪದೆ ಸೆಪ್ಟೆಂಬರ್ 30, 2023ರ ಒಳಗೆ ತಮ್ಮ ಸಣ್ಣ ಉಳಿತಾಯ ಖಾತೆಗಳೊಂದಿಗೆ ಆಧಾರ್-ಪ್ಯಾನ್ ಅನ್ನು ಲಿಂಕ್ ಮಾಡುವಂತೆ ಸೂಚಿಸಲಾಗಿದೆ. 

ಇದನ್ನೂ ಓದಿ- Non Taxable Income: ಈ ರೀತಿಯ ಆದಾಯಗಳಿಗೆ ನೀವು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ

ಸಣ್ಣ ಉಳಿತಾಯ ಖಾತೆಗಳೊಂದಿಗೆ ಆಧಾರ್-ಪ್ಯಾನ್ ಲಿಂಕ್ ಮಾಡದಿದ್ದಲ್ಲಿ ಏನಾಗುತ್ತದೆ? 
>> ನಿಗದಿತ ಗಡುವು ಮುಗಿಯುವುದರೊಳಗೆ ಹೂಡಿಕೆದಾರರು ತಮ್ಮ ಪಿ‌ಪಿ‌ಎಫ್, ಎಸ್‌ಎಸ್‌ವೈ, ಎನ್‌ಎಸ್‌ಸಿ ಸೇರಿದಂತೆ ಇತರ ಸಣ್ಣ ಉಳಿತಾಯ ಖಾತೆಗಳೊಂದಿಗೆ ಆಧಾರ್-ಪ್ಯಾನ್ ಅನ್ನು ಲಿಂಕ್ ಮಾಡದೆ ಇದಲ್ಲಿ ಅಂತಹ ಖಾತೆಗಳು ಫ್ರೀಜ್ ಆಗಬಹುದು. 
>> ಇಲ್ಲವೇ, ಈ ಹೂಡಿಕೆಗಳ ಮೇಲೆ ಹೂಡಿಕೆದಾರರು ಬಡ್ಡಿಯನ್ನು ಪಡೆಯದೇ ಇರಬಹುದು. 
>> ಬಾಕಿ ಬಡ್ಡಿ ಹೂಡಿಕೆದಾರರ ಬ್ಯಾಂಕ್ ಖಾತೆಗೆ ಜಮಾ ಆಗುವುದಿಲ್ಲ.
>> ಹೂಡಿಕೆದಾರರು ತಮ್ಮ PPF ಅಥವಾ ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಠೇವಣಿ ಮಾಡುವಲ್ಲಿ ಮಿತಿಗಳನ್ನು ಎದುರಿಸಬಹುದು.
>> ಮೆಚುರಿಟಿ ಮೊತ್ತವನ್ನು ಹೂಡಿಕೆದಾರರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದಿಲ್ಲ.

ಇದನ್ನೂ ಓದಿ- PPF vs Bank FD: ಎಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ

ಪಿಪಿಎಫ್, ಎನ್‌ಎಸ್‌ಸಿ ಮತ್ತು ಇತರ ಹಲವಾರು ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್-ಪ್ಯಾನ್ ಅನ್ನು ಏಕೆ ಲಿಂಕ್ ಮಾಡಬೇಕು? 
* ಹಣಕಾಸಿನ ವಹಿವಾಟುಗಳಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಕ್ರಮ ಚಟುವಟಿಕೆಗಳನ್ನು ತಡೆಯಲು ಭಾರತ ಸರ್ಕಾರವು ಕ್ರಮ ಕೈಗೊಂಡಿದೆ. 
* ಭಾರತೀಯ ಆರ್ಥಿಕತೆಯನ್ನು ಡಿಜಿಟಲೀಕರಣಗೊಳಿಸುವ ಸರ್ಕಾರದ ಪ್ರಯತ್ನದಲ್ಲಿ ಇದು ಗಮನಾರ್ಹವಾದ ಪ್ರಮುಖ ಅಂಶವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News