7th Pay Commission Update: ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಸಿಕ್ಕಿರಲಿಲ್ಲ ಮತ್ತು ಈ ರೀತಿ 18 ತಿಂಗಳಿನಿಂದ ಸರ್ಕಾರಿ ನೌಕರರ ಮತ್ತು ಪಿಂಚಣಿದಾರರ ಡಿಎ ಪಾವತಿ ಬಾಕಿ ಉಳಿದಿದೆ.  ವರದಿಯೊಂದರ ಪ್ರಕಾರ, ಈ 18 ತಿಂಗಳ ಬಾಕಿ ಇರುವ ಡಿಎ ಕುರಿತು ಸರ್ಕಾರವು ಶೀಘ್ರದಲ್ಲೇ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರಿ ನೌಕರರಿಗೆ ಮತ್ತು ಪಿಂಚಣಿದಾರರಿಗೆ ಸಿಹಿಸುದ್ದಿ ಸಿಗುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಮೋದಿ ಸರ್ಕಾರ ಈ ನಿರ್ಧಾರ ಕೈಗೊಂಡರೆ 48 ಲಕ್ಷ ಉದ್ಯೋಗಿಗಳು ಮತ್ತು 68 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಇದರ ಲಾಭ ಪಡೆಯಲಿದ್ದಾರೆ. 2 ಲಕ್ಷದ ವರೆಗೆ ಡಿಎ ಲಾಭ ಯಾರಿಗೆ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-PF ಚಂದಾದಾರರಿಗೊಂದು ಸಂತಸದ ಸುದ್ದಿ, ಸಿಗಲಿದೆ ಈ ಲಾಭ, ಇಲ್ಲಿದೆ ಡೀಟೇಲ್ಸ್!


ವೇತನ ಆಯೋಗ
ಮಾಧ್ಯಮ ವರದಿಗಳ ಪ್ರಕಾರ, ಈ ವರ್ಷ ಹೋಳಿ ಬಳಿದ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಒಳ್ಳೆಯ ಸುದ್ದಿ ಸಿಗುವ ನಿರೀಕ್ಷೆಯಿದೆ. ಸರ್ಕಾರಿ ನೌಕರರು ಮತ್ತು ಲಕ್ಷಾಂತರ ಪಿಂಚಣಿದಾರರು ತಮ್ಮ ಬಾಕಿ ಹಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ 18 ತಿಂಗಳ ಡಿಎ ಬಾಕಿ ಉಳಿದಿದೆ ಎಂಬುದು ಇಲ್ಲಿ ಗಮನಾರ್ಹ. ಈಗ ಹೋಳಿ ಹಬ್ಬದ ಸಂದರ್ಭದಲ್ಲಿ ನೌಕರರಿಗೆ ಸರ್ಕಾರ ಈ ಉಡುಗೊರೆ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. 2020 ರ ಜನವರಿಯಿಂದ 2021ರ ಜೂನ್‌ವರೆಗೆ ತುಟ್ಟಿಭತ್ಯೆ ಬಿಡುಗಡೆ ಮಾಡಬೇಕು ಎಂದು ಕೇಂದ್ರ ನೌಕರರು ನಿರಂತರವಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.


ಇದನ್ನೂ ಓದಿ-ಪಿಪಿಎಫ್ ನಿಯಮದಲ್ಲಿ ಬದಲಾವಣೆ ತಂದ ಸರ್ಕಾರ, ಹಣ ಹೂಡುವ ಮುನ್ನ ತಿಳಿದುಕೊಳ್ಳಿ, ಇಲ್ದಿದ್ರೆ ಹಾನಿ ತಪ್ಪಿದ್ದಲ್ಲ!


ಏಳನೇ ವೇತನ ಆಯೋಗ
ಈ ಬಗ್ಗೆ ಚರ್ಚಿಸಲು ಕಾಲಾವಕಾಶ ಕೋರಿ ಸಂಪುಟ ಕಾರ್ಯದರ್ಶಿಗೆ ಜೆಸಿಎಂ ಕಾರ್ಯದರ್ಶಿ ಪತ್ರ ಬರೆದಿದ್ದು, ಡಿಎ ನೌಕರರ ಹಕ್ಕಾಗಿದ್ದು, ಶೀಘ್ರವೇ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. 7 ನೇ ವೇತನ ಆಯೋಗದ ಅಡಿಯಲ್ಲಿ ಬಾಕಿ ಉಳಿದಿರುವ ಡಿಎ ಬೇಡಿಕೆಯನ್ನು ಮೋದಿ ಸರ್ಕಾರ ಒಪ್ಪಿಕೊಂಡರೆ, ಉದ್ಯೋಗಿಗಳ ಬ್ಯಾಂಕ್ ಖಾತೆಗಳಿಗೆ ಭಾರಿ ಹಣ ಹರಿದು ಬರಲಿದೆ.


ಇದನ್ನೂ ಓದಿ-Modi Government: ದೇಶಾದ್ಯಂತದ ಮಹಿಳೆಯರಿಗೆ ಮೋದಿ ಸರ್ಕಾರದ ಬಿಗ್ ಗಿಫ್ಟ್, ಸಿಗಲಿದೆ 15,000 ರೂ.ಗಳು!


2 ಲಕ್ಷದ 18 ಸಾವಿರ ರೂಪಾಯಿ ಸಿಗಲಿದೆ
ಹಂತ-13 ಅಧಿಕಾರಿಗಳು ಈ ತುಟ್ಟಿಭತ್ಯೆಯಿಂದ 1,23,100 ರಿಂದ 2,15,900 ರೂ. ಮತ್ತು ಹಂತ-14 (ಪೇ-ಸ್ಕೇಲ್) ಗಾಗಿ, ಡಿಎ ಬಾಕಿಯು ರೂ 1,44,200 ರಿಂದ ರೂ 2,18,200 ರ ನಡುವೆ ಇರಲಿದೆ. ಇದು ಸಂಭವಿಸಿದಲ್ಲಿ, 48 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ಹೋಳಿ ಪ್ರಯೋಜನವನ್ನು ಪಡೆಯುತ್ತಾರೆ. ಡಿಎ ಬಾಕಿಯ ಹಣವನ್ನು ನೌಕರರಿಗೆ ಅವರ ವೇತನದ ಸ್ಕೇಲ್ ಆಧಾರದ ಮೇಲೆ ನೀಡಲಾಗುತ್ತದೆ ಎಂಬುದು ಇಲ್ಲಿ ಉಲ್ಲೇಖನೀಯ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.