ಪಿಪಿಎಫ್ ನಿಯಮದಲ್ಲಿ ಬದಲಾವಣೆ ತಂದ ಸರ್ಕಾರ, ಹಣ ಹೂಡುವ ಮುನ್ನ ತಿಳಿದುಕೊಳ್ಳಿ, ಇಲ್ದಿದ್ರೆ ಹಾನಿ ತಪ್ಪಿದ್ದಲ್ಲ!

PPF Latest Update: ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನೀವೂ ಕೂಡ PPF ಖಾತೆಯನ್ನು ತೆರೆದಿದ್ದರೆ, ಈ ಸುದ್ದಿ ನಿಮಗಾಗಿ. ಸರ್ಕಾರದಿಂದ ವಿವಿಧ ಸಮಯಗಳಲ್ಲಿ ಇಂತಹ ಸಣ್ಣ ಉಳಿತಾಯ ಯೋಜನೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ. 

PPF Latest Update: ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನೀವೂ ಕೂಡ PPF ಖಾತೆಯನ್ನು ತೆರೆದಿದ್ದರೆ, ಈ ಸುದ್ದಿ ನಿಮಗಾಗಿ. ಸರ್ಕಾರದಿಂದ ವಿವಿಧ ಸಮಯಗಳಲ್ಲಿ ಇಂತಹ ಸಣ್ಣ ಉಳಿತಾಯ ಯೋಜನೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತದೆ. ಇದಲ್ಲದೆ, ಪಿಪಿಎಫ್ ಖಾತೆಯಲ್ಲಿ ಪಡೆದ ಬಡ್ಡಿಯನ್ನು ಪ್ರತಿ ತ್ರೈಮಾಸಿಕದ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ. ಆದಾಗ್ಯೂ, ದೀರ್ಘಕಾಲದಿಂದ ಬಡ್ಡಿದರವನ್ನು  ಶೇ.7.1 ಕ್ಕೆ ಸ್ಥಿರವಾಗಿರಿಸಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಪಿಪಿಎಫ್‌ನಲ್ಲಿ ಮಾಡಲಾಗಿರುವ 5 ಪ್ರಮುಖ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-PF ಚಂದಾದಾರರಿಗೊಂದು ಸಂತಸದ ಸುದ್ದಿ, ಸಿಗಲಿದೆ ಈ ಲಾಭ, ಇಲ್ಲಿದೆ ಡೀಟೇಲ್ಸ್!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. PPF ಖಾತೆಗೆ ನಿಮ್ಮ ಕೊಡುಗೆ ರೂ.50 ರ ಗುಣಕಗಳಲ್ಲಿರಬೇಕು. ಪ್ರತಿ ವರ್ಷ ಈ ಖಾತೆಯಲ್ಲಿ ಕನಿಷ್ಠ 500 ರಿಂದ ಗರಿಷ್ಠ 1.5 ಲಕ್ಷ ರೂ.ವರೆಗೆ ನೀವು ಹಣವನ್ನು ಹೂಡಿಕೆ ಮಾಡಬಹುದು. ಇದಲ್ಲದೆ, ನೀವು ತಿಂಗಳಿಗೊಮ್ಮೆ ಮಾತ್ರ ಪಿಪಿಎಫ್ ಖಾತೆಯಲ್ಲಿ ಹಣವನ್ನು ಜಮಾ ಮಾಡಬಹುದು.  

2 /5

2. PPF ಖಾತೆಯನ್ನು ತೆರೆಯಲು, ಫಾರ್ಮ್ A ಬದಲಿಗೆ, ಫಾರ್ಮ್-1 ಅನ್ನು ಸಲ್ಲಿಸಬೇಕು. 15 ವರ್ಷಗಳ ನಂತರ PPF ವಿಸ್ತರಣೆಗಾಗಿ, ಮೆಚ್ಯೂರಿಟಿಗೆ ಒಂದು ವರ್ಷದ ಮೊದಲು ಫಾರ್ಮ್ H ಬದಲಿಗೆ ಫಾರ್ಮ್-4 ಅಡಿಯಲ್ಲಿ ಅರ್ಜಿ ಸಲ್ಲಿಸಬೇಕು.  

3 /5

3. ಹಣವನ್ನು ಠೇವಣಿ ಮಾಡದೆಯೇ ನೀವು 15 ವರ್ಷಗಳ ನಂತರ PPF ಖಾತೆಯನ್ನು ಮುಂದುವರಿಸಬಹುದು. ನಿಮ್ಮ ಮೇಲೆ ಹಣವನ್ನು ಠೇವಣಿ ಮಾಡಲು ಯಾವುದೇ ಒತ್ತಡ ಇರುವುದಿಲ್ಲ. ನೀವು ಮೆಚ್ಯೂರಿಟಿಯ ನಂತರ PPF ಖಾತೆಯ ವಿಸ್ತರಣೆಯನ್ನು ಆರಿಸಿಕೊಂಡರೆ, ನೀವು ಆರ್ಥಿಕ ವರ್ಷದಲ್ಲಿ ಒಮ್ಮೆ ಮಾತ್ರ ಹಣವನ್ನು ಹಿಂಪಡೆಯಬಹುದು.  

4 /5

4. ನೀವು ಪಿಪಿಎಫ್‌ನಲ್ಲಿ ಠೇವಣಿ ಮಾಡಿದ ಮೊತ್ತದ ಮೇಲೆ ಸಾಲವನ್ನು ತೆಗೆದುಕೊಂಡರೆ, ನಂತರ ಬಡ್ಡಿದರವನ್ನು ಶೇಕಡಾ 2 ರಿಂದ ಶೇಕಡಾ ಒಂದಕ್ಕೆ ಇಳಿಸಲಾಗಿದೆ. ಸಾಲದ ಅಸಲು ಮೊತ್ತವನ್ನು ಪಾವತಿಸಿದ ನಂತರ, ನೀವು ಎರಡು ಕಂತುಗಳಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಪ್ರತಿ ತಿಂಗಳ 1ನೇ ತಾರೀಖಿನಿಂದ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ.  

5 /5

5. ನೀವು ಪಿಪಿಎಫ್ ಖಾತೆಯಲ್ಲಿ ಸಾಲವನ್ನು ಪಡೆಯಲು ಬಯಸಿದರೆ, ಅರ್ಜಿ ಸಲ್ಲಿಸುವ ದಿನಾಂಕಕ್ಕಿಂತ ಎರಡು ವರ್ಷಗಳ ಮೊದಲು ಖಾತೆಯಲ್ಲಿ ಲಭ್ಯವಿರುವ ಪಿಪಿಎಫ್ ಬ್ಯಾಲೆನ್ಸ್‌ನ ಶೇ. 25 ರಷ್ಟು ಮಾತ್ರ ನೀವು ಸಾಲವನ್ನು ತೆಗೆದುಕೊಳ್ಳಬಹುದು. ಉದಾಹರಣೆಗೆ ನೀವು 31 ಡಿಸೆಂಬರ್ 2022 ರಂದು ಅರ್ಜಿ ಸಲ್ಲಿಸಿದ್ದೀರಿ ಎಂದಿಟ್ಟುಕೊಳ್ಳೋಣ. ಈ ದಿನಾಂಕದ ಎರಡು ವರ್ಷಗಳ ಮೊದಲು ಅಂದರೆ ಡಿಸೆಂಬರ್ 31, 2019 ರಂದು, ನಿಮ್ಮ PPF ಖಾತೆಯಲ್ಲಿ 1 ಲಕ್ಷ ರೂಪಾಯಿ ಇದ್ದರೆ, ನೀವು ಅದರ ಶೇಕಡಾ 25 ರಷ್ಟು ಮಾತ್ರ ಅಂದರೆ 25000 ಮಾತ್ರ ಪಡೆಯಲು ಸಾಧ್ಯವಾಗುತ್ತದೆ.