EPFO Update : ನಿವೃತ್ತಿ ನಿಧಿ ಸಂಸ್ಥೆ EPFO ​​ವೇತನ  ಸಂಬಂಧಿತ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಜನವರಿ 31, 2025 ರವರೆಗೆ ಸಮಯ ಮಿತಿಯನ್ನು ವಿಸ್ತರಿಸಿದೆ. ಹೆಚ್ಚಿನ ವೇತನ ಹೊಂದಿರುವವರ ಪಿಂಚಣಿಗಾಗಿ ಜಂಟಿ ವಿಕಲ್ಪಗಳ ಪರಿಶೀಲನೆ ಮತ್ತು ಅರ್ಜಿಗಳನ್ನು ಸಲ್ಲಿಸಲು EPFO ​​ಆನ್‌ಲೈನ್ ಸೌಲಭ್ಯವನ್ನು ಒದಗಿಸಿದೆ.


COMMERCIAL BREAK
SCROLL TO CONTINUE READING

ಜುಲೈ 11, 2023 ರವರೆಗೆ 17.49 ಲಕ್ಷ ಅರ್ಜಿ ಸ್ವೀಕಾರ : 
ನವೆಂಬರ್ 4, 2022ರ ಸುಪ್ರೀಂ ಕೋರ್ಟ್ ಆದೇಶದ  ಪ್ರಕಾರ, ಅರ್ಹ ಪಿಂಚಣಿದಾರರು ಅಥವಾ ಸದಸ್ಯರಿಗೆ ಫೆಬ್ರವರಿ 26, 2023 ರಂದು  ಈ ಸೌಲಭ್ಯವನ್ನು  ಪರಿಚಯಿಸಲಾಯಿತು. ಇದನ್ನು ಮೇ 3, 2023 ರೊಳಗೆ ಲಭ್ಯವಾಗುವಂತೆ ಮಾಡಬೇಕಿತ್ತು. ಆದರೆ, ನೌಕರರ ಪ್ರಾತಿನಿಧ್ಯವನ್ನು ಪರಿಗಣಿಸಿ, ಅರ್ಜಿ ಸಲ್ಲಿಸಲು ಅರ್ಹ ಪಿಂಚಣಿದಾರರು/ಸದಸ್ಯರಿಗೆ ನಾಲ್ಕು ತಿಂಗಳ ಕಾಲಾವಕಾಶ ನೀಡಲು ಇದನ್ನು 2023ರ ಜೂನ್ 26ರವರೆಗೆ ವಿಸ್ತರಿಸಲಾಗಿತ್ತು.  ಯಾವುದೇ ಸಮಸ್ಯೆ ಇದ್ದಲ್ಲಿ ಅದನ್ನು ಪರಿಹರಿಸಿಕೊಳ್ಳಲು 15 ದಿನಗಳ ಹೆಚ್ಚುವರಿ ಸಮಯವನ್ನು ನೀಡಲಾಯಿತು. ಈ ನಿಟ್ಟಿನಲ್ಲಿ ಇಲ್ಲಿಯವರೆಗೆ 17.49 ಲಕ್ಷ ಅರ್ಜಿಗಳನ್ನು ಪಿಂಚಣಿದಾರರಿಂದ ಸ್ವೀಕರಿಸಲಾಗಿದೆ.


ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಆಘಾತ !8 ನೇ ವೇತನ ಆಯೋಗ ಜಾರಿ ಇಲ್ಲ ! ಇನ್ನು ಮುಂದೆ ಈ ನಿಯಮದಡಿ ವೇತನ ಹೆಚ್ಚಳ


ಉದ್ಯೋಗದಾತರ ಬಳಿ ಇನ್ನೂ 3.1 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಾಕಿ :
ಉದ್ಯೋಗದಾತರು ಮತ್ತು ಉದ್ಯೋಗದಾತ ಸಂಘಗಳು ವೇತನ ವಿವರಗಳನ್ನು ಅಪ್‌ಲೋಡ್ ಮಾಡಲು ಸಮಯವನ್ನು ವಿಸ್ತರಿಸಲು ಮಾಡಿದ ಮನವಿಯ ಹಿನ್ನೆಲೆಯಲ್ಲಿ ಆನ್‌ಲೈನ್‌ನಲ್ಲಿ ವಿವರಗಳನ್ನು ಸಲ್ಲಿಸುವ ಗಡುವನ್ನು ಮೊದಲು ಸೆಪ್ಟೆಂಬರ್ 30 ರವರೆಗೆ ವಿಸ್ತರಿಸಲಾಗಿತ್ತು. ನಂತರ ಮತ್ತೆ ಈ ಸಮಯಾವಕಾಶವನ್ನು ಡಿಸೆಂಬರ್ 31 ರವರೆಗೆ ವಿಸ್ತರಿಸಲಾಯಿತು. ಇಷ್ಟಾದರೂ ಇನ್ನು ಕೂಡಾ ಪರಿಶೀಲನೆಗಾಗಿ 3.1 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಉದ್ಯೋಗದಾತರ ಬಳಿ ಇನ್ನೂ ಬಾಕಿ ಉಳಿದಿವೆ ಎಂದು ಹೇಳಲಾಗಿದೆ. 


ಈಗ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಪಡಿಸಲು ಮತ್ತು ಅವುಗಳನ್ನು ಶೀಘ್ರದಲ್ಲೇ ಅಪ್‌ಲೋಡ್ ಮಾಡಲು ಉದ್ಯೋಗದಾತರಿಗೆ ಜನವರಿ 31, 2025 ರವರೆಗಿನ 'ಕೊನೆಯ ಅವಕಾಶ' ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.  ಜನವರಿ 15, 2025 ರೊಳಗೆ 4.66 ಲಕ್ಷಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮಾಹಿತಿಯನ್ನು ನವೀಕರಿಸುವಂತೆ ಉದ್ಯೋಗದಾತರನ್ನು ವಿನಂತಿಸಲಾಗಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸ್ವೀಕರಿಸಿದ ಮತ್ತು ಪರಿಶೀಲಿಸಿದ ಅರ್ಜಿಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಮಾಹಿತಿಯನ್ನು ಕೇಳಿದೆ.


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.