Debit Card ATM Card Expired: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರ ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸುತ್ತದೆ. ಇದರೊಂದಿಗೆ ಗ್ರಾಹಕರಿಗೆ ಕುಳಿತಿರುವಲ್ಲಿಯೇ ಹಲವು ಸೌಲಭ್ಯಗಳನ್ನು ಒದಗಿಸುತ್ತದೆ. ಗ್ರಾಹಕರು ಮನೆಯಲ್ಲಿಯೇ ಕುಳಿತು ಆನ್‌ಲೈನ್ ವಹಿವಾಟಿನ ಮೂಲಕ ತಮ್ಮ ಹಲವು ಬ್ಯಾಂಕಿಂಗ್ ಕೆಲಸಗಳನ್ನು ನಿರ್ವಹಿಸಬಹುದು. ಆದರೆ ವಿಷಯವು ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದ್ದರೆ ಅದಕ್ಕೆ ಏನು ಮಾಡಬೇಕು ಎಂದು ತಿಳಿಯಲು ಮುಂದೆ ಓದಿ.


COMMERCIAL BREAK
SCROLL TO CONTINUE READING

ಎಟಿಎಂ ಕಾರ್ಡ್ ಪಡೆಯುವ ಪ್ರಕ್ರಿಯೆಯನ್ನು ಈ ರೀತಿ ಪೂರ್ಣಗೊಳಿಸಿ:
ಪ್ರತಿಯೊಂದಕ್ಕೂ ಮುಕ್ತಾಯದ ದಿನಾಂಕ ಇರುವಂತೆಯೇ ಎಟಿಎಂ ಕಾರ್ಡ್ (ATM Card) ಅಥವಾ ಡೆಬಿಟ್ ಕಾರ್ಡ್ ಕೂಡ ಮುಕ್ತಾಯದ ದಿನಾಂಕವನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಡೆಬಿಟ್ ಕಾರ್ಡ್ ಮುಕ್ತಾಯ ದಿನಾಂಕದ ಮೊದಲೇ ಬ್ಯಾಂಕ್ ಗ್ರಾಹಕರಿಗೆ ಹೊಸ ಡೆಬಿಟ್ ಕಾರ್ಡ್ ಅನ್ನು ಅವರ ಮನೆ ಬಾಗಿಲಿಗೇ ಕಳುಹಿಸಿಕೊಡುತ್ತದೆ. ಈ ಕಾರ್ಡ್‌ಗಳಿಂದಾಗಿ ನೀವು ಆನ್‌ಲೈನ್ ವಹಿವಾಟುಗಳನ್ನು ಕ್ಷಣಾರ್ಧದಲ್ಲಿ ಮಾಡಬಹುದು. ಆದರೆ ಹೊಸ ಕಾರ್ಡ್ ಮನೆಗೆ ತಲುಪದಿದ್ದರೆ ಅದನ್ನು ಹೇಗೆ ಪಡೆಯುವುದು ಎಂದು ನೀವು ಯೋಚಿಸುತ್ತಿದ್ದರೆ ಎಸ್ ಬಿಐ ಬ್ಯಾಂಕ್ ಇದಕ್ಕೂ ಕೂಡ ಪರಿಹಾರವನ್ನು ಸೂಚಿಸಿದೆ. ಹೊಸ ಎಟಿಎಂ ಕಾರ್ಡ್ ಪಡೆಯಲು ನೀವು ಏನು ಮಾಡಬೇಕು ಎಂಬುದನ್ನು ತಿಳಿಯಿರಿ.


ಟ್ವೀಟ್ ಮಾಡುವ ಮೂಲಕ, ಎಸ್‌ಬಿಐ ತನ್ನ ಗ್ರಾಹಕರಿಗೆ ಡೆಬಿಟ್ ಕಾರ್ಡ್‌ನ ಅವಧಿ ಮುಗಿದರೆ ಹೊಸ ಕಾರ್ಡ್ ಅನ್ನು ಪಡೆಯುವುದು ಹೇಗೆ ಎಂದು ಮಾಹಿತಿ ಹಂಚಿಕೊಂಡಿದೆ. ನಿಮ್ಮ ಡೆಬಿಟ್ ಕಾರ್ಡ್ ಅವಧಿ ಮುಗಿದರೆ, ಡೆಬಿಟ್ ಕಾರ್ಡ್‌ನ ಅವಧಿ ಮುಗಿಯುವ 3 ತಿಂಗಳ ಮೊದಲು, ಬ್ಯಾಂಕ್ ಗ್ರಾಹಕರಿಗೆ ಅವರ ನೋಂದಾಯಿತ ವಿಳಾಸಕ್ಕೆ ಕಾರ್ಡ್ ಅನ್ನು ಕಳುಹಿಸುತ್ತದೆ ಎಂದು ಬ್ಯಾಂಕ್ ತಿಳಿಸಿದೆ. ಆದರೆ ಇದಾದ ನಂತರವೂ ಹೊಸ ಎಟಿಎಂ ಕಾರ್ಡ್ ನಿಮಗೆ ತಲುಪದಿದ್ದರೆ, ಎಸ್‌ಬಿಐ ನೀಡಿರುವ ಹಂತಗಳನ್ನು ಅನುಸರಿಸಿ.


ಇದನ್ನೂ ಓದಿ-  ನಿಮ್ಮ ಬಳಿ 5 ರೂಪಾಯಿ ನೋಟು ಇದ್ದರೆ ಸುಲಭವಾಗಿ ಪಡೆಯಿರಿ 2 ಲಕ್ಷ ರೂಪಾಯಿ, ಇಲ್ಲಿದೆ ಮಾರಾಟದ ಸರಿಯಾದ ವಿಧಾನ


ಗ್ರಾಹಕರಿಗೆ ಪರಿಹಾರ ಸೂಚಿಸಿದ ಎಸ್‌ಬಿಐ:
ಟ್ವಿಟರ್‌ನಲ್ಲಿ ಎಸ್‌ಬಿಐ (SBI) ಗ್ರಾಹಕರೊಬ್ಬರು ಟ್ವೀಟ್ ಮಾಡಿ ಎಸ್‌ಬಿಐಗೆ ಪ್ರಶ್ನೆ ಕೇಳಿದ್ದಾರೆ. ಎಟಿಎಂ ಕಾರ್ಡ್‌ನ ಅವಧಿ ಮುಗಿದ ನಂತರ ಹೊಸ ಕಾರ್ಡ್ ಮನೆಗೆ ತಲುಪದಿದ್ದರೆ ಏನು ಮಾಡಬೇಕು. 'ನನ್ನ ಹಳೆಯ ಎಟಿಎಂ ಕಾರ್ಡ್ 10/21 ರಂದು ಅವಧಿ ಮೀರಿದೆ, ಆದರೆ ಇನ್ನೂ ನನ್ನ ಹೊಸ ಕಾರ್ಡ್ ಅನ್ನು ನಾನು ಸ್ವೀಕರಿಸಿಲ್ಲ' ಎಂದು ಗ್ರಾಹಕರು ಕೇಳಿದರು. ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಎಸ್‌ಬಿಐ, 'ಡೆಬಿಟ್ ಕಾರ್ಡ್‌ನ (Debit Card) ಅವಧಿ ಮುಗಿಯುವ 3 ತಿಂಗಳ ಮೊದಲು, ಬ್ಯಾಂಕ್ ಹೊಸ ಕಾರ್ಡ್ ಅನ್ನು ಗ್ರಾಹಕರಿಗೆ ಅವರ ನೋಂದಾಯಿತ ವಿಳಾಸಕ್ಕೆ ಕಳುಹಿಸುತ್ತದೆ. ಆದರೆ ಆ ಕಾರ್ಡ್‌ಗಾಗಿ ಗ್ರಾಹಕರು ಕಳೆದ 12 ತಿಂಗಳಲ್ಲಿ ಒಮ್ಮೆಯಾದರೂ ಬಳಸಬೇಕಾಗುತ್ತದೆ ಎಂದು ತಿಳಿಸಿದೆ.


PM Kisan: ಹೊಸ ವರ್ಷಕ್ಕಿಂತ ಮೊದಲೇ ರೈತರಿಗೆ ಸಿಹಿ ಸುದ್ದಿ, ಸರ್ಕಾರದ ಕಡೆಯಿಂದ ಪೂರ್ಣಗೊಂಡಿದೆ ತಯಾರಿ


ನೀವು ಕಾರ್ಡ್ ಪಡೆಯದಿದ್ದರೆ ಶಾಖೆಗೆ ಭೇಟಿ ನೀಡಿ
ಒಂದೊಮ್ಮೆ ನೀವು ಡೆಬಿಟ್ ಕಾರ್ಡ್ ಪಡೆಯದಿದ್ದಲ್ಲಿ ಅಥವಾ ನಿಮ್ಮ ಕೆಲಸವು ಆನ್ಲೈನ್ ಮೂಲಕ ಪೂರ್ಣಗೊಳ್ಳದಿದ್ದರೆ, ಇದಕ್ಕಾಗಿ ನೀವು ನಿಮ್ಮ ಹತ್ತಿರದ ಶಾಖೆಗೆ ಹೋಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಇದಕ್ಕಾಗಿ, ನೀವು KYC ದಾಖಲೆಗಳನ್ನು ಹೊಂದಿರಬೇಕು, ಅದರೊಂದಿಗೆ ನೀವು ಬ್ಯಾಂಕ್‌ನಲ್ಲಿ ಹೊಸ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.