ನಿಮ್ಮ ಬಳಿ 5 ರೂಪಾಯಿ ನೋಟು ಇದ್ದರೆ ಸುಲಭವಾಗಿ ಪಡೆಯಿರಿ 2 ಲಕ್ಷ ರೂಪಾಯಿ, ಇಲ್ಲಿದೆ ಮಾರಾಟದ ಸರಿಯಾದ ವಿಧಾನ

ನಿಮ್ಮ ಬಳಿ 5 ರೂಪಾಯಿಯ ಈ ವಿಶೇಷ ನೋಟು ಇದ್ದರೆ ಈ ಒಂದು ನೋಟಿನಿಂದ ಸಾವಿರಾರು ರೂಪಾಯಿ ಗಳಿಸಬಹುದು. ಇದರಿಂದ ಸುಮಾರು 35 ಸಾವಿರದಿಂದ 2 ಲಕ್ಷ ರೂ.ವರೆಗೆ ಸಂಪಾದಿಸಬಹುದು.  

Written by - Ranjitha R K | Last Updated : Nov 25, 2021, 01:22 PM IST
  • ಅಪರೂಪದ ನೋಟುಗಳನ್ನು ಮಾರಾಟ ಮಾಡುವ ಮೂಲಕ ನೀವು ಮಿಲಿಯನೇರ್ ಆಗಬಹುದು
  • ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಮಾರಾಟ ಮಾಡಿ
  • ಒಂದು ನೋಟಿಗೆ ಸಿಗಲಿದೆ 30 ಸಾವಿರ ರೂ
ನಿಮ್ಮ ಬಳಿ 5 ರೂಪಾಯಿ ನೋಟು ಇದ್ದರೆ ಸುಲಭವಾಗಿ ಪಡೆಯಿರಿ  2 ಲಕ್ಷ ರೂಪಾಯಿ, ಇಲ್ಲಿದೆ ಮಾರಾಟದ ಸರಿಯಾದ ವಿಧಾನ

ನವದೆಹಲಿ : ಈಗಿನ ಕಾಲದಲ್ಲಿ ಎಷ್ಟು ಹಣ ಸಂಪಾದಿಸಿದರೂ ಕಡಿಮೆಯೇ. ಹಣ ಸಂಪಾದನೆಯ ಬೇರೆ ಬೇರೆ ಮಾರ್ಗಗಳನ್ನು ಹುಡುಕುತ್ತಲೇ ಇರಬೇಕಾಗುತ್ತದೆ. ನೀವೂ ಕೂಡಾ ಹೆಚ್ಚುವರಿ ಹಣ ಸಂಪಾದಿಸಲು (Earn Money) ಬಯಸುತ್ತೀರಾದರೆ ಮನೆಯಲ್ಲಿ ಕುಳಿತೇ ಮಿಲಿಯನೇರ್ ಆಗುವ ಅವಕಾಶವಿದೆ. ಇದರಲ್ಲಿ ಯಾವುದೇ ರೀತಿಯ ಹೂಡಿಕೆಯ (investment) ಅಗತ್ಯವಿಲ್ಲ.  

ನಿಮ್ಮ ಬಳಿ 5 ರೂಪಾಯಿಯ ಈ ವಿಶೇಷ ನೋಟು ( 5 Rupees Note) ಇದ್ದರೆ ಈ ಒಂದು ನೋಟಿನಿಂದ ಸಾವಿರಾರು ರೂಪಾಯಿ ಗಳಿಸಬಹುದು. ಇದರಿಂದ ಸುಮಾರು 35 ಸಾವಿರದಿಂದ 2 ಲಕ್ಷ ರೂ.ವರೆಗೆ ಸಂಪಾದಿಸಬಹುದು. ಇಂಥಹ ನೋಟುಗಳು ನಿಮ್ಮ ಬಳಿ ಇದ್ದರೆ ನೀವು ಕೂಡಾ ಲಕ್ಷಾಧೀಶರಾಗಬಹುದು. 

ಇದನ್ನೂ ಓದಿ :  PM Kisan: ಹೊಸ ವರ್ಷಕ್ಕಿಂತ ಮೊದಲೇ ರೈತರಿಗೆ ಸಿಹಿ ಸುದ್ದಿ, ಸರ್ಕಾರದ ಕಡೆಯಿಂದ ಪೂರ್ಣಗೊಂಡಿದೆ ತಯಾರಿ

ಈ ನೋಟಿನ ವಿಶೇಷತೆ ಏನು? 
ಇಲ್ಲಿ  ನಾವು ನಿಮಗೆ ಐದು ರೂಪಾಯಿಯ ಒಂದು ನೋಟಿನ ಬಗ್ಗೆ ಹೇಳುತ್ತಿದ್ದೇವೆ. ಅದನ್ನು ಮಾರಾಟ ಮಾಡುವ ಮೂಲಕ ನೀವು ಸುಲಭವಾಗಿ ಸಾವಿರಾರು ರೂಪಾಯಿಗಳನ್ನು ಗಳಿಸಬಹುದು. ಈ ನೋಟಿನ ವಿಶೇಷತೆ ಎಂದರೆ ಅದರಲ್ಲಿರುವ  786 ನಂಬರ್.  ಅಲ್ಲದೆ, ಈ ನೋಟಿನ ಮೇಲೆ ಟ್ರಾಕ್ಟರ್ ನ ಚಿತ್ರವಿರಬೇಕು (5 Rupee Note With Tractor Value). ನಿಮ್ಮ ಬಳಿಯೂ ಅಂತಹ ನೋಟು ಇದ್ದರೆ, ಅದಕ್ಕೆ ಪ್ರತಿಯಾಗಿ 2 ಲಕ್ಷ ರೂಪಾಯಿಗಳನ್ನು ಪಡೆಯಬಹುದು. 

ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಮಾರಾಟ ಮಾಡಿ :
ಇದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊರಡಿಸಿದ ನೋಟು (Extremely Rare Notes India). ನಿಮ್ಮ ಬಳಿಯೂ ಈ ನೋಟು ಇದ್ದರೆ,  ಆ ನೋಟಿಗೆ ಬದಲಾಗಿ ಸಾವಿರಾರು ರೂಪಾಯಿಯನ್ನು ಗಳಿಸಬಹುದು. ಹಲವು ವೆಬ್‌ಸೈಟ್‌ಗಳಲ್ಲಿ ಹಳೆಯ ನೋಟುಗಳು (old note) ಮತ್ತು ನಾಣ್ಯಗಳ ಅಪಾರ ಖರೀದಿ ಮತ್ತು ಮಾರಾಟ ಮಾಡಲಾಗುತ್ತಿದೆ. ನಿಮ್ಮ ಹಳೆಯ ನೋಟುಗಳು ಮತ್ತು ನಾಣ್ಯಗಳು ನಿಗದಿತ ಷರತ್ತುಗಳ ಪ್ರಕಾರ ಇದ್ದರೆ, ಅದರ ಬದಲಿಗೆ ಉತ್ತಮ ಹಣವನ್ನು ಪಡೆಯಬಹುದು.

ಇದನ್ನೂ ಓದಿ : ಫ್ಲಿಪ್‌ಕಾರ್ಟ್ ಧಮಾಕ ಆಫರ್! ಫ್ಲೈಟ್ ಬುಕ್ಕಿಂಗ್‌ನಲ್ಲಿ 2500 ರೂ.ವರೆಗೆ ಸಿಗಲಿದೆ ರಿಯಾಯಿತಿ

ಎಲ್ಲಿ ಮಾರಾಟ ಮಾಡಬಹುದು ? :
ಈ ನಿರ್ದಿಷ್ಟ ಕರೆನ್ಸಿ ನೋಟನ್ನು ಕಂಡುಹಿಡಿಯುವುದು ಕಷ್ಟ. 5 ರೂಪಾಯಿ ನೋಟಿನಲ್ಲಿ ಟ್ರ್ಯಾಕ್ಟರ್ ಚಿತ್ರವಿದ್ದರೆ, ಅದರ ಬದಲಾಗಿ 2 ಲಕ್ಷ ರೂಪಾಯಿಗಳನ್ನು ಪಡೆಯಬಹುದು. ಇದಕ್ಕಾಗಿ ShopClues ಮತ್ತು Marudhar Arts ನಂತಹ ಅನೇಕ ಕಂಪನಿಗಳಿಗೆ ಈ ಹಳೆಯ ಕರೆನ್ಸಿಯನ್ನು ಮನೆಯಲ್ಲಿ ಕುಳಿತೇ ಮಾರಾಟ ಮಾಡಬಹುದು. ಇದಲ್ಲದೆ, coinbazzar.com ನಲ್ಲಿ, ಹಳೆಯ ನೋಟುಗಳ ಬದಲಿಗೆ ಭಾರೀ ಮೊತ್ತವನ್ನೇ ನೀಡುತ್ತಾರೆ. ಈ ಪ್ಲಾಟ್‌ಫಾರ್ಮ್‌ಗಳು ಹಳೆಯ ಕರೆನ್ಸಿಗೆ ಉತ್ತಮ ಬೆಲೆಯನ್ನು ನೀಡುತ್ತವೆ.

ನೀವು ಮಾರಾಟಗಾರರಾಗಿ ಸಾವಿರಾರು ಗಳಿಸಬಹುದು :
-ನೀವು ಈ ಕಂಪನಿಗಳ ವೆಬ್‌ಸೈಟ್‌ಗೆ ಹೋಗಿ ನಿಮ್ಮ ಹಳೆಯ ನೋಟಿನ ಪೋಟೋ ತೆಗೆದು ಅಪ್ಲೋಡ್ ಮಾಡಬೇಕು.  ನಂತರ ಇಲ್ಲಿ ನೋಟನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು.
-ಇದಕ್ಕಾಗಿ, ಸಂಬಂಧಿತ ಸೈಟ್‌ಗೆ ಹೋಗಿ, ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು.
-ಇದರ ನಂತರ ನೀವು ಆನ್‌ಲೈನ್ ಅಪ್‌ಲೋಡ್ ಸೆಲ್‌ನಲ್ಲಿ ನಿಮ್ಮ ನೋಟಿನ ಚಿತ್ರವನ್ನು ಹಾಕಬಹುದು.
- ಅಲ್ಲಿಂದ ಆಸಕ್ತರು ನಿಮ್ಮನ್ನು ಸಂಪರ್ಕಿಸುತ್ತಾರೆ ಮತ್ತು ನೀವು ದರವನ್ನು ನಿರ್ಧರಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News