ಈ ಬಾರಿ ಸರ್ಕಾರಿ ಉದ್ಯೋಗಿಗಳಿಗೆ ಡಬಲ್ ಧಮಾಕ ! ವೇತನದಲ್ಲಿ ಇಷ್ಟು ಹೆಚ್ಚಳ ಫಿಕ್ಸ್
ಕೇಂದ್ರ ಸರ್ಕಾರಿ ನೌಕರರು ಶೀಘ್ರದಲ್ಲೇ ಫಿಟ್‌ಮೆಂಟ್ ಅಂಶದ ಹೆಚ್ಚಳದ ಲಾಭವನ್ನು ಕೂಡಾ ಪಡೆಯಬಹುದು.
ಬೆಂಗಳೂರು : ನೀವು ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದರೆ ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಕೇಂದ್ರ ಸರ್ಕಾರಿ ಉದ್ಯೋಗಿ ಅಥವಾ ಪಿಂಚಣಿದಾರರಾಗಿದ್ದರೆ, ನಿಮಗಾಗಿ ಒಂದು ಒಳ್ಳೆಯ ಸುದ್ದಿ ಕಾಯುತ್ತಿದೆ. ಶೀಘ್ರದಲ್ಲೇ ಸರ್ಕಾರದ ಕಡೆಯಿಂದ ನೌಕರರಿಗೆ ಎರಡು ಶುಭ ಸುದ್ದಿ ಸಿಗಲಿದೆ. ಸರ್ಕಾರ ಉದ್ಯೋಗಿಗಳಿಗೆ ಎರಡು ದೊಡ್ಡ ಉಡುಗೊರೆ ನೀಡಲಿದೆ ಎಂದರೂ ತಪ್ಪಾಗುವುದಿಲ್ಲ. ಶೀಘ್ರದಲ್ಲೇ, ಕೇಂದ್ರ ಮೋದಿ ಸರ್ಕಾರವು ಡಿಎ ಹೆಚ್ಚಳ ಮತ್ತು ಫಿಟ್‌ಮೆಂಟ್ ಫ್ಯಾಕ್ಟರ್ ಬಗೆಗಿನ ಅಪ್ಡೇಟ್ ಬಿಡುಗಡೆ ಮಾಡಲಿದೆ. ಈ ಎರಡು ಘೋಷಣೆಗಳು ಒಟ್ಟೊಟ್ಟಿಗೆ ಆದರೆ ಸರ್ಕಾರಿ ನೌಕರರಿಗೆ ಡಬಲ್ ಜಾಕ್ ಪಾಟ್ ಸಿಕ್ಕಿದ ಹಾಗೆಯೇ.
ಹೆಚ್ಚಾಗಲಿದೆ ತುಟ್ಟಿಭತ್ಯೆ :
ಸರ್ಕಾರ ಶೇಕಡಾ 4ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಲಿದೆ. ಇದಾದ ಬಳಿಕ ನೌಕರರ ಮೂಲ ವೇತನದಲ್ಲಿ ಉತ್ತಮ ಏರಿಕೆಯಾಗಲಿದೆ. ಈ ಹೆಚ್ಚಳದ ಬಗ್ಗೆ ಸರಕಾರ ಘೋಷಣೆ ಮಾಡಿದರೆ ಉದ್ಯೋಗಿಗಳ ಪಾಲಿಗೆ ಇದೊಂದು ದೊಡ್ಡ ವರದಾನವಾಗಲಿದೆ. ಆದರೆ, ಈ ಬಗ್ಗೆ ಸರ್ಕಾರ ಇನ್ನೂ ಯಾವುದೇ ಘೋಷಣೆ ಮಾಡಿಲ್ಲ.
ಇದನ್ನೂ ಓದಿ : ಬ್ಯಾಂಕ್ ನಲ್ಲಿ FD ಮಾಡಿಸಿದವರಿಗೆ ಸಿಹಿ ಸುದ್ದಿ! ಫಿಕ್ಸೆಡ್ ಡೆಪಾಸಿಟ್ ಮೇಲೆ ಸಿಗುವುದು ಅಧಿಕ ಬಡ್ಡಿ
ಡಿಎ ಎಷ್ಟು ಹೆಚ್ಚಳವಾಗುವುದು ? :
ಮೋದಿ ಸರಕಾರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಿದರೆ, ನೌಕರರ ಒಟ್ಟು ತುಟ್ಟಿಭತ್ಯೆ ಶೇ.46ಕ್ಕೆ ಏರಿಕೆಯಾಗಲಿದೆ. ಇದರಿಂದಾಗಿ ಮೂಲ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ. ನೌಕರರು ಪ್ರಸ್ತುತ 42 ಪ್ರತಿಶತ ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಹಿಂದಿನ ಡಿಎಯನ್ನು ಮಾರ್ಚ್‌ನಲ್ಲಿ ಹೆಚ್ಚಿಸಲಾಗಿತ್ತು. ಆದರೆ ಈ ಹೆಚ್ಚಳ ಜನವರಿ 1, 2023 ರಿಂದ ಜಾರಿಗೆ ಬಂದಿದೆ.
ಒಂದು ವರ್ಷದಲ್ಲಿ, ಜನವರಿ ಮತ್ತು ಜುಲೈ ಹೀಗೆ ಎರಡು ಬಾರಿ ಡಿಎ ಹೆಚ್ಚಳವನ್ನು ಘೋಷಿಸಲಾಗುತ್ತದೆ. ಇದೀಗ ಜುಲೈ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸುವ ಸಮಯ ಸಮೀಪಿಸುತ್ತಿದೆ. ಜುಲೈ 2023 ರ ಹೆಚ್ಚಳವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಈ ಹೆಚ್ಚಳ ಜುಲೈ 1, 2023 ರಿಂದ ಜಾರಿಗೆ ಬರಲಿದೆ. ಒಂದು ಕೋಟಿಗೂ ಹೆಚ್ಚು ಕುಟುಂಬಗಳು ಇದರಿಂದ ಪ್ರಯೋಜನ ಪಡೆಯಲಿವೆ. ಈ ಬಗ್ಗೆ ಸರ್ಕಾರ ಶೀಘ್ರದಲ್ಲೇ ಅಧಿಕೃತವಾಗಿ ಪ್ರಕಟಿಸಲಿದೆ.
ಇದನ್ನೂ ಓದಿ : ಹಳೆಯ ಪಿಂಚಣಿ ಯೋಜನೆ ಬಗ್ಗೆ ರಿಸರ್ವ್ ಬ್ಯಾಂಕ್ ಬಹು ದೊಡ್ಡ ಆದೇಶ : ಈಗ ರಾಜ್ಯ ಸರ್ಕಾರದ ಮುಂದಿರುವ ಆಯ್ಕೆ ?
ಫಿಟ್‌ಮೆಂಟ್ ಅಂಶದ ಬಗ್ಗೆಯೂ ಒಳ್ಳೆಯ ಸುದ್ದಿ :
ಕೇಂದ್ರ ಸರ್ಕಾರಿ ನೌಕರರು ಶೀಘ್ರದಲ್ಲೇ ಫಿಟ್‌ಮೆಂಟ್ ಅಂಶದ ಹೆಚ್ಚಳದ ಲಾಭವನ್ನು ಕೂಡಾ ಪಡೆಯಬಹುದು. ಇದಾದರೆ, ಮೂಲ ವೇತನದಲ್ಲಿ ಬಂಪರ್ ಲಾಭವನ್ನು ನೀಡುತ್ತದೆ. ಮೋದಿ ಸರ್ಕಾರವು ಫಿಟ್‌ಮೆಂಟ್ ಅಂಶವನ್ನು 2.60 ರಿಂದ 3.0 ಪಟ್ಟು ಹೆಚ್ಚಿಸಬಹುದು. ಕೇಂದ್ರ ಸರ್ಕಾರಿ ನೌಕರರು ಫಿಟ್‌ಮೆಂಟ್ ಅಂಶ ಹೆಚ್ಚಿಸಬೇಕು ಎಂದು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ.
2016ರಲ್ಲಿ ಕೇಂದ್ರ ನೌಕರರ ವೇತನದಲ್ಲಿ ಗಣನೀಯ ಏರಿಕೆಯಾಗಿದೆ. ಅದೇ ವರ್ಷದಲ್ಲಿ, ಕೇಂದ್ರ ನೌಕರರಿಗೆ 7 ನೇ ವೇತನ ಆಯೋಗವು ಜಾರಿಗೆ ಬಂದಿತು. 7 ನೇ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನವನ್ನು ಹೆಚ್ಚಿಸಲು ಫಿಟ್ಮೆಂಟ್ ಫ್ಯಾಕ್ಟರ್ ಅನ್ನು ಜಾರಿಗೆ ತರಲಾಯಿತು. ಫಿಟ್‌ಮೆಂಟ್ ಅಂಶವು ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನವನ್ನು 6000 ರೂ.ನಿಂದ 18000 ರೂ.ಗೆ ಹೆಚ್ಚಿಸಿದೆ.
ಇದನ್ನೂ ಓದಿ : ಚಿನ್ನದ ಬೆಲೆ 2,180 ರೂ. ಭರ್ಜರಿ ಇಳಿಕೆ: ಸಾರ್ವಕಾಲಿಕ ದರ ಕುಸಿತದ ಬಳಿಕ 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ಗೊತ್ತಾ?
ಫಿಟ್‌ಮೆಂಟ್ ಅಂಶವು ಮೂಲ ವೇತನದ 2.57 ಪಟ್ಟು ಆಗಿದೆ. ಆದರೆ, ಇದನ್ನು 3 ಪಟ್ಟು ಹೆಚ್ಚು ಮಾಡುವಂತೆ ನೌಕರರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದಾರೆ. 2017 ರಿಂದಲೂ ಈ ಬೇಡಿಕೆ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಫಿಟ್‌ಮೆಂಟ್ ಅಂಶವನ್ನು ಮೂರು ಪಟ್ಟು ಹೆಚ್ಚಿಸುವುದರಿಂದ ಕೇಂದ್ರ ನೌಕರರ ಕನಿಷ್ಠ ವೇತನ 26,000 ರೂ. ಆಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.