ನವದೆಹಲಿ: ನೀವು ಮನೆಯಲ್ಲಿಯೇ ಕುಳಿತು ಹಣ ಗಳಿಸುವ(Earn Money From Home)ಸುಲಭ ಮಾರ್ಗವನ್ನು ಹುಡುಕುತ್ತಿದ್ದರೆ ಇಲ್ಲಿದೆ ನೋಡಿ ನಿಮಗೆ ಉತ್ತಮ ಅವಕಾಶ. ಕೆಲವು ಅಪರೂಪದ, ಹಳೆಯ ಹಾಗೂ ವಿಶಿಷ್ಟ ಸಂಖ್ಯೆಗಳನ್ನು ಹೊಂದಿರುವ ನಾಣ್ಯಗಳು ನಿಮ್ಮಲ್ಲಿ ಇದ್ದರೆ ನೀವು ಕುಳಿತಲ್ಲಿಯೇ ಕೈತುಂಬಾ ಹಣ ಗಳಿಸಬಹುದು. ಅಪರೂಪದಲ್ಲಿಯೇ ಅಪರೂಪದ ಹಳೆಯ ನಾಣ್ಯ(Old Coins)ಗಳನ್ನು ಮಾರಾಟ ಮಾಡುವ ಮೂಲಕ 5 ಲಕ್ಷ ರೂ.ವರೆಗೂ ಹಣ ಗಳಿಸಲು ನಿಮಗೆ ಅವಕಾಶವಿದೆ.


COMMERCIAL BREAK
SCROLL TO CONTINUE READING

ಹಳೆಯ ಪುರಾತನ ಕಾಲದ ವಸ್ತುಗಳಿಗೆ ಬೆಲೆ ಜಾಸ್ತಿ ಎಂದು ನಾವು ಕೇಳಿರ್ತಿವಿ. ವಸ್ತು ಎಷ್ಟು ಹಳೆಯದ್ದಾಗಿರುತ್ತದೋ ಅದಕ್ಕೆ ಜಗತ್ತಿನಲ್ಲಿ ಬೆಲೆ ಜಾಸ್ತಿಯಾಗಿರುತ್ತದೆ. ಹರಾಜಿನಲ್ಲಿ ಹಳೆಯ ವಸ್ತುಗಳು ಕೋಟಿ ಕೋಟಿ ರೂ. ಬೆಲೆ ಸಿಗುತ್ತದೆ. ಹೀಗಾಗಿ ಪುರಾತನ ವಸ್ತುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ಅವುಗಳನ್ನು ಹೆಚ್ಚಿನ ಮೊತ್ತಕ್ಕೆ ಹರಾಜು ಮಾಡಲಾಗುತ್ತದೆ. ನೀವು ಏನಾದರೂ ಹಳೆಯ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸ ಹೊಂದಿದ್ದರೆ, ನಿಮ್ಮಲಿಯೂ ಈ ಹಳೆಯ 2 ರೂ. ಮುಖಬೆಲೆಯ ನಾಣ್ಯವಿದ್ದರೆ ಆನ್‌ಲೈನ್‌ನಲ್ಲಿ ಮಾರಾಟ ಮಾಡಿ 5 ಲಕ್ಷ ರೂ.ವರೆಗೂ ಹಣ(Earn 5 Lakh) ಸಂಪಾದಿಸಬಹುದು.


ಇದನ್ನೂ ಓದಿ: Petrol-Diesel price : ವಾಹನ ಸವಾರರೆ ಗಮನಿಸಿ : ಇಲ್ಲಿದೆ ಇಂದಿನ ಪೆಟ್ರೋಲ್-ಡೀಸೆಲ್ ಬೆಲೆ; ನಿಮ್ಮ ನಗರದಲ್ಲಿ ಬೆಲೆ ಎಷ್ಟಿದೆ ನೋಡಿ


ಈ ಹಳೆಯ ನಾಣ್ಯ(Old Coin)ವು 1994, 1995, 1997 ಮತ್ತು 2000ನೇ ಇಸವಿಯ ಸರಣಿ ನಾಣ್ಯಗಳಾಗಿರಬೇಕು ಎಂಬ ನಿಯಮವಿದೆ. ನಿಮ್ಮ ಸಂಗ್ರಹದಲ್ಲಿ ಈ ನಾಣ್ಯ ಇದ್ದರೆ ನೀವು ಸುಲಭವಾಗಿ 5 ಲಕ್ಷ ರೂ. ಗಳಿಸಬಹುದು. ಈ ನಾಣ್ಯಗಳನ್ನು ಅಪರೂಪದಲ್ಲೇ ಅಪರೂಪವೆಂದು ಗುರುತಿಸಲಾಗುತ್ತದೆ ಮತ್ತು ಹೆಚ್ಚಿನ ಬೆಲೆಗೆ ಈ ನಾಣ್ಯಗಳು ಹರಾಜಿನಲ್ಲಿ ಸೇಲ್ ಆಗುತ್ತವೆ.


ನೀವು ಈ ಅಪರೂಪದ ನಾಣ್ಯಗಳ ಮಾಲೀಕರಾಗಿದ್ದರೆ ಮತ್ತು ಹೆಚ್ಚಿನ ಹಣ ಸಂಪಾದಿಸಲು ಅವುಗಳನ್ನು ಮಾರಾಟ ಮಾಡಲು ಬಯಸಿದರೆ ನೀವು Quickr ಹೆಸರಿನ ವೆಬ್‌ಸೈಟ್ ಗೆ ಹೋಗಬೇಕು. ಅಲ್ಲಿ ನೀವು ಹಳೆಯ ನಾಣ್ಯ ಮಾರಾಟ ಮಾಡಲು ಆನ್‌ಲೈನ್ ಮಾರಾಟಗಾರರಾಗಿ ನೋಂದಾಯಿಸಿಕೊಳ್ಳಬೇಕು. ಬಳಿಕ ಸರಿಯಾಗಿರುವ ನಾಣ್ಯದ ಫೋಟೋವನ್ನು ವೆಬ್‌ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು. ಇದರ ನಂತರ ನಿಮ್ಮ ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಒದಗಿಸಬೇಕಾಗುತ್ತದೆ. ಬಳಿಕ ವೆಬ್‌ಸೈಟ್ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಪರಿಶೀಲಿಸುತ್ತದೆ.


ಇದನ್ನೂ ಓದಿ: Today Gold-Silver Price : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ 180 ರೂ. ಇಳಿಕೆ


ನೀವು ಅದೃಷ್ಟವಂತರಾಗಿದ್ದರೆ ಹಳೆಯ ನಾಣ್ಯಗಳನ್ನು ಖರೀದಿಸುವ ಜನರು ನಿಮ್ಮನ್ನು ನೇರವಾಗಿ ಸಂಪರ್ಕಿಸುತ್ತಾರೆ. ಪಾವತಿ ಮತ್ತು ವಿತರಣೆಯ ನಿಯಮಗಳ ಪ್ರಕಾರ ನಿಮ್ಮ ನಾಣ್ಯವನ್ನು ನೀವು ಬೇರೊಬ್ಬರಿಗೆ ಮಾರಾಟ ಮಾಡಬಹುದು. ಗಮನಿಸಬೇಕಾದ ಸಂಗತಿಯೆಂದರೆ 1982ರಲ್ಲಿ ಭಾರತದಲ್ಲಿ 2 ರೂ. ಮುಖಬೆಲೆಯ(Rs 2 Coin)ನಾಣ್ಯವನ್ನು ಪರಿಚಯಿಸಲಾಯಿತು. ಈ 2 ರೂ. ನಾಣ್ಯವನ್ನು ಕುಪ್ರೋ-ನಿಕ್ಕಲ್ ಲೋಹದಿಂದ ಮುದ್ರಿಸಲಾಗಿದೆ. ನೆನಪಿನಲ್ಲಿಡಿ ಆನ್‌ಲೈನ್ ನಲ್ಲಿ ನಾಣ್ಯ ಮಾರಾಟ ಮಾಡುವಾಗ ತುಂಬಾ ಎಚ್ಚರಿಕೆ ವಹಿಸಿ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ