ನವದೆಹಲಿ : ಸರ್ಕಾರಿ ತೈಲ ಕಂಪನಿಗಳು ಸತತವಾಗಿ ಒಂದು ತಿಂಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಐಒಸಿಎಲ್ ನ ವೆಬ್ ಸೈಟ್ ಪ್ರಕಾರ, ದೇಶದ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 101.84 ರೂ. ಮತ್ತು ಡೀಸೆಲ್ ಪ್ರತಿ ಲೀಟರ್ ಗೆ 89.87 ರೂ.ಗೆ ಮಾರಾಟವಾಗುತ್ತಿದೆ. ಮೇ ತಿಂಗಳಿನಿಂದ ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್ ಬೆಲೆಗಳು 31 ದಿನಗಳಿಂದ ಏರಿಕೆ ಆಗಿಲ್ಲ. ಕಳೆದ 42 ದಿನಗಳಲ್ಲಿ ಬೆಲೆಗಳ ಏರಿಕೆಯ ಬಗ್ಗೆ ಹೇಳುವುದಾದರೆ, ಪೆಟ್ರೋಲ್ ಪ್ರತಿ ಲೀಟರ್‌ಗೆ ಸುಮಾರು 11.52 ರೂ. ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 9.08 ರೂ. ಇದೆ.
ಇಂಧನ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವ ಪ್ರಶ್ನೆ ಈಗ ಉದ್ಭವಿಸುವುದಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಸೋಮವಾರ ಹೇಳಿದ್ದಾರೆ. ಹಿಂದಿನ ಯುಪಿಎ ಸರ್ಕಾರವು ತೈಲ ಬಾಂಡ್‌ಗಳನ್ನು ತಂದಿದೆ ಮತ್ತು ಸರ್ಕಾರವು ಅದರ ಬಡ್ಡಿಯನ್ನು ಪಾವತಿಸಬೇಕಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : Petrol-Diesel ಮೇಲಿನ TAX ಕಡಿಮೆಯಾಗಲ್ಲ, ವಿತ್ತ ಸಚಿವರು ಹೇಳಿದ್ದೇನು?
ಜುಲೈನಲ್ಲಿ ಕೊನೆಯ ಬಾರಿಗೆ ದರ ಬದಲಾವಣೆ
ಜುಲೈ 18 ರಿಂದ ಇಂಧನ ಬೆಲೆ ಸ್ಥಿರವಾಗಿದೆ. ಜುಲೈ 17 ರಂದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ(Petrol-Diesel price)ಯಲ್ಲಿ ಕೊನೆಯ ಭಾರಿ ಬದಲಾವಣೆ ಕಂಡುಬಂದಿದೆ. ಜುಲೈ 17 ರಂದು ಪೆಟ್ರೋಲ್ ಪ್ರತಿ ಲೀಟರ್‌ಗೆ 30 ಪೈಸೆ ಹೆಚ್ಚಾಗಿದ್ದು, ಡೀಸೆಲ್ ದರ ಸ್ಥಿರವಾಗಿ ಉಳಿದಿತ್ತು.
ಇದನ್ನೂ ಓದಿ : ಸದ್ಯಕ್ಕಿಲ್ಲ ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಕಡಿತ , ಈ ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಹಣಕಾಸು ಸಚಿವೆ
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ
ದೆಹಲಿ ಪೆಟ್ರೋಲ್ 101.84 ರೂ. ಮತ್ತು ಡೀಸೆಲ್ 89.87 ರೂ.
ಮುಂಬೈ ಪೆಟ್ರೋಲ್ ರೂ. 107.83 ಮತ್ತು ಡೀಸೆಲ್ ರೂ. 97.45 ರೂ.
ಚೆನ್ನೈ ಪೆಟ್ರೋಲ್ ರೂ. 102.49 ರೂ. ಮತ್ತು ಡೀಸೆಲ್ ರೂ. 94.39 ರೂ.
ಕೋಲ್ಕತ್ತಾ ಪೆಟ್ರೋಲ್ 102.08 ರೂ. ಮತ್ತು ಡೀಸೆಲ್ 93.02 ರೂ.
ಬೆಂಗಳೂರು ಪೆಟ್ರೋಲ್ 105.25 ರೂ. ಮತ್ತು ಡೀಸೆಲ್ 95.26 ರೂ.
ಲಕ್ನೋ ಪೆಟ್ರೋಲ್ 98.80 ರೂ. ಮತ್ತು ಡೀಸೆಲ್ 90.26 ರೂ.
ಪಾಟ್ನಾ ಪೆಟ್ರೋಲ್ 104.57 ರೂ. ಮತ್ತು ಡೀಸೆಲ್ 95.81 ರೂ.
ಭೋಪಾಲ್ ಪೆಟ್ರೋಲ್ 110.20 ರೂ. ಮತ್ತು ಡೀಸೆಲ್ 98.67 ರೂ.
ಜೈಪುರ ಪೆಟ್ರೋಲ್ ರೂ 108.71 ಮತ್ತು ಡೀಸೆಲ್ 99.02 ರೂ.
ಗುರುಗ್ರಾಮ ಪೆಟ್ರೋಲ್ 99.46 ರೂ. ಮತ್ತು ಡೀಸೆಲ್ 90.47 ರೂ.
ಇದನ್ನೂ ಓದಿ : PAN Card ಕಳೆದುಹೋದರೆ ಚಿಂತೆ ಬೇಡ, ಈ ವೆಬ್ ಸೈಟ್ ಮೂಲಕ ಸುಲಭವಾಗಿ ಡೌನ್ ಲೋಡ್ ಮಾಡಬಹುದು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ