ಎಲೆಕ್ಟ್ರಿಕ್ ಬೈಕ್-ಸ್ಕೂಟರ್ ಸಬ್ಸಿಡಿ ಕಡಿತ: ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳು ಸಾಕಷ್ಟು ದುಬಾರಿಯಾಗಿದೆ. ಆದರೆ ಸರ್ಕಾರವು ಎಲೆಕ್ಟ್ರಿಕ್ ವಾಹನಗಳಿಗೆ ಸಬ್ಸಿಡಿ ನೀಡುತ್ತದೆ. ಸಬ್ಸಿಡಿಯ ಹೊರತಾಗಿಯೂ, ಎಲೆಕ್ಟ್ರಿಕ್ ವಾಹನಗಳ ವೆಚ್ಚವು ICE (ಇಂಟರ್ನಲ್ ದಹನಕಾರಿ ಎಂಜಿನ್) ಹೊಂದಿರುವ ವಾಹನಗಳಿಗಿಂತ ಹೆಚ್ಚಾಗಿದೆ. ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸಿರುವುದರಿಂದ ಅವುಗಳ ಬೆಲೆಗಳು ಮತ್ತಷ್ಟು ಹೆಚ್ಚಾಗಲಿವೆ. ಇದು ಜೂನ್ 1, 2023ರಿಂದ ಅನ್ವಯವಾಗುತ್ತದೆ.


COMMERCIAL BREAK
SCROLL TO CONTINUE READING

ಪ್ರತಿ ಕಿಲೋವ್ಯಾಟ್‌ಗೆ 15 ಸಾವಿರ ರೂ.ಗಳ ಬದಲಾಗಿ ಈಗ ಸಬ್ಸಿಡಿ ಮೊತ್ತವು ಪ್ರತಿ ಕಿಲೋವ್ಯಾಟ್‌ಗೆ 10 ಸಾವಿರ ರೂ.ಳಾಗಿರುತ್ತದೆ ಎಂದು ಭಾರೀ ಕೈಗಾರಿಕೆಗಳ ಸಚಿವಾಲಯ ಪ್ರಕಟಿಸಿದೆ. ಸರ್ಕಾರ ಪ್ರತಿ ಕಿಲೋವ್ಯಾಟ್‌ಗೆ 5 ಸಾವಿರ ರೂ. ಸಬ್ಸಿಡಿ ಕಡಿತಗೊಳಿಸಿದೆ. ಇದು ಜೂನ್ 1ರಿಂದ ಜಾರಿಗೆ ಬರಲಿದೆ. ಜೂನ್ 1ರ ನಂತರ ನೋಂದಾಯಿಸಲಾದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಕಡಿಮೆ ಸಬ್ಸಿಡಿ ಅನ್ವಯಿಸುತ್ತದೆ ಎಂದು ಸಚಿವಾಲಯ ಅಧಿಸೂಚನೆಯಲ್ಲಿ ತಿಳಿಸಿದೆ. ಅಂದರೆ ಈ ಮೇ ತಿಂಗಳಲ್ಲಿ ಯಾರಾದರೂ ಎಲೆಕ್ಟ್ರಿಕ್ ಬೈಕ್ ಅಥವಾ ಸ್ಕೂಟರ್ ಖರೀದಿಸಿದರೆ ಅವರು ಸ್ವಲ್ಪ ಹಣ ಉಳಿಸಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: Share Market Update: ಸತತ ಎರಡನೇ ದಿನ 234 ಅಂಕಗಳ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದ ಸೆನ್ಸೆಕ್ಸ್


ಇದರ ಪರಿಣಾಮ ಏನಾಗಲಿದೆ?


ಸರ್ಕಾರದ ಈ ನಿರ್ಧಾರದಿಂದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಸಬಯಸುವ ಜನರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಏಕೆಂದರೆ ಇದೀಗ ಅವರಿಗೆ ಕಡಿಮೆ ಸಬ್ಸಿಡಿ ಸಿಗುತ್ತದೆ. ಕಡಿಮೆ ಸಬ್ಸಿಡಿ ಸಿಗುವುದರಿಂದ ದ್ವಿಚಕ್ರ ವಾಹನ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ದುಬಾರಿಯಾಗಿದೆ ಎಂದು ಜನರು ಈಗಾಗಲೇ ದೂರುತ್ತಿರುವ ಕಾರಣ ಇದು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮಾರಾಟದ ಮೇಲೂ ಪರಿಣಾಮ ಬೀರಬಹುದು.


ಈಗ ಸಬ್ಸಿಡಿ ಕಡಿತದ ನಂತರ ಅವುಗಳ ಬೆಲೆಗಳು ಮತ್ತಷ್ಟು ಹೆಚ್ಚಾಗುತ್ತವೆ. ಇದರಿಂದ ಜನರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿಸುವಾಗ ಮತ್ತೊಮ್ಮೆ ಪರಿಗಣಿಸಲು ಬಯಸುತ್ತಾರೆ ಮತ್ತು ಕೊನೆಯಲ್ಲಿ ಖರೀದಿಸದಿರಲು ನಿರ್ಧರಿಸುತ್ತಾರೆ. ಕಂಪನಿಗಳು ತಮ್ಮ ಇ-ದ್ವಿಚಕ್ರ ವಾಹನಗಳಲ್ಲಿ ಕಡಿಮೆ ಬೆಲೆ ಇರಿಸಿಕೊಳ್ಳಲು ಕಡಿಮೆ ವೈಶಿಷ್ಟ್ಯಗಳನ್ನು ನೀಡಲು ನಿರ್ಧರಿಸಬಹುದು.


ಇದನ್ನೂ ಓದಿ: Share Market Update: ಸತತ ಎರಡನೇ ದಿನ 234 ಅಂಕಗಳ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದ ಸೆನ್ಸೆಕ್ಸ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.