Two Thousand Note: 2000 ರೂ.ಗಳ ನೋಟನ್ನು ಪ್ರಧಾನಿ ಮೋದಿ ಏಕೆ ಉತ್ತಮ ಕರೆನ್ಸಿ ಎಂದು ಭಾವಿಸುವುದಿಲ್ಲ?

Two Thousand Note Ban: 8 ನವೆಂಬರ್ 2016 ರಂದು ದೇಶದಲ್ಲಿ ನೋಟು ಅಮಾನ್ಯೀಕರಣದ ಘೋಷಣೆಯಾದಾಗ, ನೃಪೇಂದ್ರ ಮಿಶ್ರಾ ಅವರು ಪ್ರಧಾನಿ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರು ನೋಟು ಅಮಾನ್ಯೀಕರಣ ಪ್ರಕ್ರಿಯೆಯ ಭಾಗವಾಗಿದ್ದರು, ಹೀಗಾಗಿ ಅದರ ಹಿಂದಿನ ಕಥೆಯೂ ಅವರಿಗೆ ತಿಳಿದಿದೆ.  

Written by - Nitin Tabib | Last Updated : May 20, 2023, 08:02 PM IST
  • ಈ ಕುರಿತು ಮಾತನಾಡಿರುವ ನೃಪೇಂದ್ರ ಮಿಶ್ರಾ, 'ಪ್ರಧಾನಿ ಮೋದಿ ಯಾವಾಗಲೂ 2000 ರೂಪಾಯಿ ನೋಟು ದೈನಂದಿನ ವ್ಯವಹಾರಗಳಿಗೆ ಪ್ರಾಯೋಗಿಕವಲ್ಲ ಎಂದು ಹೇಳಿದ್ದರಂತೆ.
  • ತೆರಿಗೆ ವಂಚನೆ ಮತ್ತು ಕಪ್ಪು ಹಣವನ್ನು ಇಟ್ಟುಕೊಳ್ಳುವುದು ಕೂಡ ಈ ನೋಟಿನ ಮೂಲಕ ಸುಲಭವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.
  • ಪ್ರಧಾನಿ ಮೋದಿ ಸಣ್ಣ ನೋಟುಗಳನ್ನು ಹೆಚ್ಚು ಪ್ರಾಯೋಗಿಕವೆಂದು ಪರಿಗಣಿಸುತ್ತಾರೆ" ಎಂದು ಅವರು ಹೇಳಿದ್ದಾರೆ.
Two Thousand Note: 2000 ರೂ.ಗಳ ನೋಟನ್ನು ಪ್ರಧಾನಿ ಮೋದಿ ಏಕೆ ಉತ್ತಮ ಕರೆನ್ಸಿ ಎಂದು ಭಾವಿಸುವುದಿಲ್ಲ? title=

Two Thousand Note Ban: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ 2000 ರೂಪಾಯಿ ನೋಟು ಹಿಂಪಡೆಯುವುದಾಗಿ ಘೋಷಿಸಿದೆ. ಆದರೆ ಅದರ ಹಿಂಪಡೆಯುವಿಕೆ ತುಂಬಾ ಹಿಂದೆಯೇ ನಿರ್ಧರಿಸಲಾಗಿತ್ತು. ನೋಟು ಅಮಾನ್ಯೀಕರಣದ ಸಮಯದಲ್ಲಿ, ತಾತ್ಕಾಲಿಕ ಪರಿಹಾರವಾಗಿ ಈ ನೋಟುಗಳನ್ನು ಬಿಡುಗಡೆ ಮಾಡಲಾಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿಯವರ ಮಾಜಿ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಹೇಳಿದ್ದಾರೆ. 8 ನವೆಂಬರ್ 2016 ರಂದು ದೇಶದಲ್ಲಿ ನೋಟು ಅಮಾನ್ಯೀಕರಣ ಘೋಷಣೆಯಾದಾಗ, ನೃಪೇಂದ್ರ ಮಿಶ್ರಾ ಅವರು ಪ್ರಧಾನಿ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಅವರು ನೋಟು ಅಮಾನ್ಯೀಕರಣ ಪ್ರಕ್ರಿಯೆಯ ಭಾಗವಾಗಿದ್ದರು, ಹೀಗಾಗಿ ಅದರ ಹಿಂದಿನ ಕಥೆಯೂ ಅವರಿಗೆ ತಿಳಿದಿದೆ.

2000 ರೂಪಾಯಿ ನೋಟು ಹಿಂಪಡೆದ ಬಗ್ಗೆಯೂ ಮಾತನಾಡಿರುವ ಅವರು, ಅದರ ಹಿಂದಿನ ಕಥೆಯನ್ನೂ ಹೇಳಿದ್ದಾರೆ.

'ಸಣ್ಣ ನೋಟುಗಳನ್ನು ಪ್ರಾಯೋಗಿಕ ಎಂದು ಪರಿಗಣಿಸುತ್ತಾರೆ ಪ್ರಧಾನಿ'
ಈ ಕುರಿತು ಮಾತನಾಡಿರುವ ನೃಪೇಂದ್ರ ಮಿಶ್ರಾ, 'ಪ್ರಧಾನಿ ಮೋದಿ ಯಾವಾಗಲೂ 2000 ರೂಪಾಯಿ ನೋಟು ದೈನಂದಿನ ವ್ಯವಹಾರಗಳಿಗೆ ಪ್ರಾಯೋಗಿಕವಲ್ಲ ಎಂದು ಹೇಳಿದ್ದರಂತೆ. ತೆರಿಗೆ ವಂಚನೆ ಮತ್ತು ಕಪ್ಪು ಹಣವನ್ನು ಇಟ್ಟುಕೊಳ್ಳುವುದು ಕೂಡ ಈ ನೋಟಿನ ಮೂಲಕ ಸುಲಭವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಪ್ರಧಾನಿ ಮೋದಿ ಸಣ್ಣ ನೋಟುಗಳನ್ನು ಹೆಚ್ಚು ಪ್ರಾಯೋಗಿಕವೆಂದು ಪರಿಗಣಿಸುತ್ತಾರೆ" ಎಂದು ಅವರು ಹೇಳಿದ್ದಾರೆ.

ಎರಡು ಸಾವಿರ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿರುವುದು ಪ್ರಧಾನಿ ಮೋದಿಯವರ ಮಾಡ್ಯುಲರ್ ಬಿಲ್ಡಿಂಗ್ ವಿಧಾನವನ್ನು ತೋರಿಸುತ್ತದೆ ಎಂದು ಮಾಜಿ ಪ್ರಧಾನ ಕಾರ್ಯದರ್ಶಿ ಹೇಳಿದ್ದಾರೆ. 2018-19ನೇ ಸಾಲಿನಲ್ಲಿ ಎರಡು ಸಾವಿರ ನೋಟುಗಳ ಮುದ್ರಣ ಸ್ಥಗಿತಗೊಂಡಿತ್ತು. ಇದರ ನಂತರ ಅದು ಕ್ರಮೇಣ ಚಲಾವಣೆಯಿಂದ ಹೊರಬಂದಿತು ಮತ್ತು ಇದೀಗ 30 ಸೆಪ್ಟೆಂಬರ್ 2023 ರಂದು ಅದು ಸಂಪೂರ್ಣವಾಗಿ ಚಲಾವಣೆಯಿಂದ ಹೊರಗುಳಿಯಲಿದೆ.

ಇದನ್ನೂ ಓದಿ-Currency History: ನಮ್ ದೇಶದಲ್ಲಿ 10000 ರೂ.ಗಳ ನೋಟ್ ಕೂಡ ಚಲಾವಣೆಯಲ್ಲಿತ್ತಂತೆ!

2000 ನೋಟು ತರುವ ಉದ್ದೇಶ ಈಡೇರಿದೆ
ಆರ್‌ಬಿಐ ಕಾಯ್ದೆ 1934ರ ಸೆಕ್ಷನ್ 24 (1) ಅಡಿಯಲ್ಲಿ 2000 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲಾಗಿತ್ತು ಎಂದು ಅವರು ಹೇಳಿದ್ದಾರೆ. ನೋಟು ಅಮಾನ್ಯೀಕರಣದಲ್ಲಿ 500 ಮತ್ತು 1000 ರೂಪಾಯಿಗಳ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕಿದ್ದರಿಂದ, ಅದನ್ನು ಕರೆನ್ಸಿ ಅಗತ್ಯವಾಗಿ ಪರಿಚಯಿಸಲಾಯಿತು. ಇದೀಗ ಮಾರುಕಟ್ಟೆಗೆ 100, 500 ಮತ್ತು 200ರ ಕರೆನ್ಸಿ ಅಂದರೆ ಸಣ್ಣ ನೋಟುಗಳು ಬಂದಿದ್ದು, 2000 ನೋಟು ತಂದ ಉದ್ದೇಶವೂ ಪ್ರಸ್ತುತ ಈಡೇರಿದೆ ಎಂದು ಮಿಶ್ರಾ ಹೇಳಿದ್ದಾರೆ.

ಇದನ್ನೂ ಓದಿ-RBI Board Meeting: ಕೇಂದ್ರ ಸರ್ಕಾರಕ್ಕೆ 2022-23 ಸಾಲಿನ 87,416 ಕೋಟಿ ರೂ. ಡಿವಿಡೆಂಡ್ ನೀಡಲು ನಿರ್ಧರಿಸಿದ ಆರ್.ಬಿ.ಐ

ಇದೇ ವೇಳೆ 2000 ನೋಟು ಹಿಂಪಡೆಯುವ ನಿರ್ಧಾರವು ನೋಟು ಅಮಾನ್ಯೀಕರಣಕ್ಕಿಂತ ಭಿನ್ನವಾಗಿದೆ ಎಂದು ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಹೇಳಿದ್ದಾರೆ. ಇದು ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನೋಟುಗಳನ್ನು ಬದಲಾಯಿಸಿಕೊಳ್ಳಲು ಬ್ಯಾಂಕ್‌ಗಳಲ್ಲಿ ಸಂಪೂರ್ಣ ವ್ಯವಸ್ಥೆ ಇರಲಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News