Electric Mobility ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಮಾಡಲಾಗುತ್ತಿದೆ ಮತ್ತು ಇದರೊಂದಿಗೆ, ಸುಧಾರಿತ ತಂತ್ರಜ್ಞಾನವನ್ನು ಹೊಂದಿದ ಮಾದರಿಗಳು ಮಾರುಕಟ್ಟೆಯಲ್ಲಿ ಬರುತ್ತಿವೆ. ಈ ಸ್ಪರ್ಧೆಯ ಅತಿದೊಡ್ಡ ಪರಿಣಾಮವು ದ್ವಿಚಕ್ರ ವಾಹನ ವಿಭಾಗದಲ್ಲಿ ಕಂಡುಬರುತ್ತದೆ. ಇತ್ತೀಚೆಗೆ eBikeGo ತನ್ನ ಹೊಸ ಸ್ಟೈಲಿಶ್ ಎಲೆಕ್ಟ್ರಿಕ್ ಸ್ಕೂಟರ್ Rugged ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಆಕರ್ಷಕ ನೋಟ ಮತ್ತು ಬಲವಾದ ಬ್ಯಾಟರಿ ಪ್ಯಾಕ್‌ ಅಳವಡಿಸಲಾಗಿರುವ ಈ ಬೈಕ್ ಅನ್ನು G1 ಮತ್ತು G1 +ಎಂಬ ಎರಡು ರೂಪಾಂತರಗಳಲ್ಲಿ ಪರಿಚಯಿಸಲಾಗಿದೆ.


COMMERCIAL BREAK
SCROLL TO CONTINUE READING

ಈ ಎಲೆಕ್ಟ್ರಿಕ್ ಸ್ಕೂಟರ್ (e-Scooter) ನ ಚಾಲನಾ ತುಂಬಾ ಕಡಿಮೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದ್ದು, ಇದನ್ನು ಚಲಾಯಿಸಲು ಪ್ರತಿ ಕಿಲೋಮೀಟರಿಗೆ ಕೇವಲ 25 ಪೈಸೆ ವೆಚ್ಚವಾಗುತ್ತದೆ. ಅಂದರೆ, 1 ರೂಪಾಯಿಯಲ್ಲಿ ನೀವು 4 ಕಿಮೀ ಮತ್ತು 100 ರೂಪಾಯಿಗಳಲ್ಲಿ 400 ಕಿಮೀ ವರೆಗೆ ಪ್ರಯಾಣಿಸಬಹುದು. ಈ ಬೈಕಿನ ಅಧಿಕೃತ ಬುಕಿಂಗ್ ಕೂಡ ಆರಂಭವಾಗಿದೆ, ಇದಕ್ಕಾಗಿ, ಆಸಕ್ತ ಗ್ರಾಹಕರು ಬುಕ್ಕಿಂಗ್ ಮೊತ್ತವಾಗಿ ಕೇವಲ 499 ರೂ. ಪಾವತಿಸಬೇಕು.  ಕಂಪನಿಯು ತನ್ನ ವಿತರಣೆಯನ್ನು ನವೆಂಬರ್ 21 ರಿಂದ ಆರಂಭಿಸಲಿದೆ.


Rugged G1 ಮಾದರಿಯ ಬೆಲೆಯನ್ನು ರೂ 79,999 ರೂ. ಮತ್ತು G1+ ರೂಪಾಂತರದ ಬೆಲೆ  ರೂ 89,999 ಕ್ಕೆ ನಿಗದಿಪಡಿಸಲಾಗಿದೆ. ಈ ಬೆಲೆಗಳು FAMEII ಸಬ್ಸಿಡಿಯನ್ನು ಒಳಗೊಂಡಿವೆ. ಇದರಲ್ಲಿ, ಕಂಪನಿಯು 2 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಅನ್ನು ಅಳವಡಿಸಿದೆ. ಅದನ್ನು ಕೂಡ ಬದಲಾಯಿಸಬಹುದು. ಬ್ಯಾಟರಿಯನ್ನು 4 ಗಂಟೆಗಳಲ್ಲಿ ಚಾರ್ಜ್ ಮಾಡಬಹುದು ಮತ್ತು ಸುಮಾರು 160 ಕಿಮೀ ವ್ಯಾಪ್ತಿಯನ್ನು ಇದು ಹೊಂದಿದೆ ಎಂದು eBikeGo ಹೇಳಿಕೊಂಡಿದೆ. ಇದು 3kW ಮೋಟಾರ್‌ನಿಂದ ಶಕ್ತಿಯನ್ನು ಪಡೆಯುತ್ತದೆ. ಇದು  ವಿದ್ಯುತ್ ಸ್ಕೂಟರ್ ಗೆ  70 kmph ಗರಿಷ್ಠ ವೇಗವನ್ನು ಪಡೆಯಲು ಸಹಾಯ ಮಾಡುತ್ತದೆ.


ಇದನ್ನೂ ಓದಿ-OLA e-Scooter: ಬಣ್ಣಗಳು, ಬೆಲೆ, ಮೈಲೇಜ್, ವೈಶಿಷ್ಟ್ಯ, ವಿಶೇಷತೆಗಳೆಲ್ಲವನ್ನೂ ಒಂದೇ ಕ್ಲಿಕ್‌ನಲ್ಲಿ ತಿಳಿಯಿರಿ


ಈ ಸ್ಕೂಟರ್ (Electric Mobility) ನಲ್ಲಿ 50 ಲೀಟರ್ ಸಾಮರ್ಥ್ಯದ ಶೇಖರಣಾ ಸ್ಥಳವನ್ನು ನೀಡಲಾಗಿದೆ. ಇದರ ಹೊರತಾಗಿ, ಇದು ಕಳ್ಳತನ ವಿರೋಧಿ ವೈಶಿಷ್ಟ್ಯವನ್ನು ಹೊಂದಿದೆ, ಇದು ಅದರ ಭದ್ರತೆಗೆ ಬಲವಾದ ವ್ಯವಸ್ಥೆಗಳನ್ನು ಮಾಡುತ್ತದೆ. ಸ್ಕೂಟರ್ ಅನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ರಿಮೋಟ್ ಆಗಿ ಲಾಕ್ ಮಾಡಬಹುದು ಮತ್ತು ಅನ್ಲಾಕ್ ಮಾಡಬಹುದು. ಇದಕ್ಕಾಗಿ, ಕಂಪನಿಯು ಮೀಸಲಾದ ಮೊಬೈಲ್ ಅಪ್ಲಿಕೇಶನ್ ಅನ್ನು ಸಿದ್ಧಪಡಿಸಿದೆ. ಇದು 12 ವಿವಿಧ ರೀತಿಯ ಸಂವೇದಕಗಳನ್ನು ಹೊಂದಿದೆ.


ಇದನ್ನೂ ಓದಿ-Electric Vehicle Battery: ಕೇವಲ 15 ನಿಮಿಷಗಳಲ್ಲಿ ಚಾರ್ಜ್ ಆಗುತ್ತೆ ನಿಮ್ಮ ವಾಹನ


ಈ ಸ್ಕೂಟರ್ ನಲ್ಲಿ ಒಟ್ಟು ಎರಡು ಚಾಲನಾ ವಿಧಾನಗಳನ್ನು ನೀಡಲಾಗಿದೆ. ಈ ವಿಧಾನಗಳಲ್ಲಿ ಇಕೋ ಮತ್ತು ಪವರ್ ಮೋಡ್ ಶಾಮೆಲಾಗಿವೆ. ಇದು ಎಕೋ ಮೋಡ್‌ನಲ್ಲಿ 160 ಕಿಮೀ ಮತ್ತು ಪವರ್ ಮೋಡ್‌ನಲ್ಲಿ 135 ಕಿಮೀ ವರೆಗೆ ಡ್ರೈವಿಂಗ್ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಸ್ಕೂಟರ್ ನ ಬದಲಾಯಿಸಬಹುದಾದ ಬ್ಯಾಟರಿಯನ್ನು ಬದಲಾಯಿಸಲು ಕೇವಲ 1 ನಿಮಿಷ ತೆಗೆದುಕೊಳ್ಳುತ್ತದೆ. ಇದು ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್ (CBS) ನೊಂದಿಗೆ ಡಿಸ್ಕ್ ಬ್ರೇಕ್ ಹೊಂದಿದೆ.


ಇದನ್ನೂ ಓದಿ-Petrol-Diesel ಬೆಲೆ ಚಿಂತೆ ಬಿಟ್ಟು ಎಲೆಕ್ಟ್ರಿಕ್ ವಾಹನ ಖರೀದಿಸಿ, ಎಷ್ಟು ಲಕ್ಷ ಸಬ್ಸಿಡಿ ಸಿಗುತ್ತೆ ಗೊತ್ತಾ?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.