OLA e-Scooter: ಬಣ್ಣಗಳು, ಬೆಲೆ, ಮೈಲೇಜ್, ವೈಶಿಷ್ಟ್ಯ, ವಿಶೇಷತೆಗಳೆಲ್ಲವನ್ನೂ ಒಂದೇ ಕ್ಲಿಕ್‌ನಲ್ಲಿ ತಿಳಿಯಿರಿ

OLA e-Scooter: ಓಲಾ ಕಂಪನಿಯು ತನ್ನ ಮೊದಲ ಇ-ಸ್ಕೂಟರ್ ಬಿಡುಗಡೆಗೆ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಕಂಪನಿಯು ತನ್ನ ಪ್ರಚಾರಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಸ್ಕೂಟರ್ 1 ಲಕ್ಷಕ್ಕೂ ಹೆಚ್ಚು ಬುಕಿಂಗ್ ಪಡೆದುಕೊಂಡಿದೆ.

Written by - Yashaswini V | Last Updated : Aug 12, 2021, 08:50 AM IST
  • ಆಗಸ್ಟ್ 15 ರಂದು ಕಂಪನಿಯು ಈ ಓಲಾ ಇ-ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ
  • ಕೇವಲ 499 ರೂ.ಗಳಿಂದ ಬುಕ್ಕಿಂಗ್ ಆರಂಭಿಸಲಾಗಿದೆ
  • ಓಲಾ ಇ-ಸ್ಕೂಟರ್ ಇದು ಒಂದೇ ಚಾರ್ಜ್‌ನಲ್ಲಿ 150 ಕಿಮೀ ವರೆಗೆ ಚಲಿಸಬಲ್ಲದು ಎಂದು ಹೇಳಲಾಗಿದೆ
OLA e-Scooter: ಬಣ್ಣಗಳು, ಬೆಲೆ, ಮೈಲೇಜ್, ವೈಶಿಷ್ಟ್ಯ, ವಿಶೇಷತೆಗಳೆಲ್ಲವನ್ನೂ ಒಂದೇ ಕ್ಲಿಕ್‌ನಲ್ಲಿ ತಿಳಿಯಿರಿ title=
OLA Electric Scooter

Ola e-Scooter: ಓಲಾ ಇ-ಸ್ಕೂಟರ್‌ಗಾಗಿ ಕಾಯುವಿಕೆ ಕೊನೆಗೊಳ್ಳಲಿದೆ. ಆಗಸ್ಟ್ 15 ರಂದು ಕಂಪನಿಯು ಈ ಓಲಾ ಇ-ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ. ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ತುಂಬಾ ಉತ್ಸುಕವಾಗಿದ್ದು ಬಿಡುಗಡೆ ಅನ್ನು ಸ್ಮರಣೀಯವಾಗಿಸಲು ಬಯಸಿದೆ. ಈ ಕಾರಣದಿಂದ ಕಂಪನಿಯು ಪ್ರಚಾರದಲ್ಲಿ ತೊಡಗಿದೆ. ಕ್ರಮೇಣವಾಗಿ, ಸ್ಕೂಟರ್‌ಗೆ ಸಂಬಂಧಿಸಿದ ವೈಶಿಷ್ಟ್ಯಗಳು ಮತ್ತು ವಿಶೇಷಣಗಳು ಸಹ ಮುಂಚೂಣಿಗೆ ಬಂದಿವೆ. ಇತ್ತೀಚೆಗೆ, ಕಂಪನಿಯ ಸಿಇಒ ಭಾವೇಶ್ ಅಗರ್ವಾಲ್ ಸಾಮಾಜಿಕ ಮಾಧ್ಯಮದಲ್ಲಿ 17 ಸೆಕೆಂಡುಗಳ ವಿಡಿಯೋ ಹಂಚಿಕೆಯನ್ನು ಹಂಚಿಕೊಂಡಿದ್ದರೆ. ಇದರಲ್ಲಿ ಸ್ಕೂಟರ್ ಹಿಮ್ಮುಖವಾಗಿ ಚಲಿಸುತ್ತಿದೆ ಎಂದು ತೋರಿಸಲಾಗಿದೆ. ಆದಾಗ್ಯೂ, ಈ ಸ್ಕೂಟರ್‌ನಲ್ಲಿ ಯಾವುದೇ ರಿವರ್ಸ್ ಗೇರ್ ಲಭ್ಯವಿಲ್ಲ. 

ಓಲಾ ಇ-ಸ್ಕೂಟರ್ 10 ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ:
ಓಲಾ ಇ-ಸ್ಕೂಟರ್ ಅನ್ನು 10 ಬಣ್ಣದ ಆಯ್ಕೆಗಳೊಂದಿಗೆ (Ola e-Scooter color options) ಬಿಡುಗಡೆ ಮಾಡಬಹುದು. ಇದು ಕಪ್ಪು, ಬಿಳಿ, ಬೂದು, ಹಳದಿ, ಕೆಂಪು, ನೀಲಿ ಮತ್ತು ಅವುಗಳ ಛಾಯೆಗಳನ್ನು ಒಳಗೊಂಡಿದೆ. ಕಂಪನಿಯು ತನ್ನ ಪೂರ್ವ-ಬುಕಿಂಗ್ ಅನ್ನು ಜುಲೈ 15 ರಿಂದ 499 ರೂ.ಗೆ ಪ್ರಾರಂಭಿಸಿತು, ಅದನ್ನು ರೀಫಂಡ್ ಎಬಲ್ ಕೂಡ ಆಗಿದೆ. ಬುಕ್ಕಿಂಗ್‌ನ ಮೊದಲ 24 ಗಂಟೆಗಳಲ್ಲಿ ಕಂಪನಿಯು 1 ಲಕ್ಷಕ್ಕೂ ಹೆಚ್ಚು ಬುಕಿಂಗ್‌ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ- Simple One Electric Scooter: ಆಗಸ್ಟ್ 15 ರಂದು 13 ರಾಜ್ಯಗಳಲ್ಲಿ ಬಿಡುಗಡೆಯಾಗಲಿದೆ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್, ವಿಶೇಷತೆ ಏನೆಂದು ತಿಳಿಯಿರಿ

ಓಲಾ ಇ-ಸ್ಕೂಟರ್ ಬೆಲೆ ಎಷ್ಟಿರಬಹುದು?
ಕೇವಲ 499 ರೂ.ಗಳಿಂದ ಬುಕ್ಕಿಂಗ್ ಆರಂಭಿಸಲಾಗಿದೆ. ಆದರೆ, ಸದ್ಯಕ್ಕೆ ಬೆಲೆಯ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಆದಾಗ್ಯೂ, ಓಲಾ ಇ-ಸ್ಕೂಟರ್‌ನ (OLA e-Scooter) ಅಂದಾಜು ಬೆಲೆ ರೂ 80,000-85,000 ಆಗಿರಬಹುದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಲಾಗುತ್ತಿದೆ. ಓಲಾ ಸ್ಕೂಟರ್ ಮೇಲೆ ಸಬ್ಸಿಡಿಯನ್ನೂ ನೀಡಲಿದೆ. ಆದರೆ, ಅಂದಾಜು ಬೆಲೆ ಸಬ್ಸಿಡಿಯೊಂದಿಗೆ ಇರುತ್ತದೆಯೇ ಅಥವಾ ಸಬ್ಸಿಡಿಯನ್ನು ಈ ಬೆಲೆಯಲ್ಲಿ ಮಾತ್ರ ನೀಡಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

ಓಲಾ ಇ-ಸ್ಕೂಟರ್‌ನ ವೈಶಿಷ್ಟ್ಯಗಳು ಮತ್ತು ವಿಶೇಷಣಗಳು:
>> ಓಲಾ ಇ-ಸ್ಕೂಟರ್‌ ಒಂದೇ ಚಾರ್ಜ್‌ನಲ್ಲಿ 150 ಕಿಮೀ ಓಡುತ್ತದೆ.
>> ಓಲಾ ಇ-ಸ್ಕೂಟರ್ ಇದು ಒಂದೇ ಚಾರ್ಜ್‌ನಲ್ಲಿ 150 ಕಿಮೀ ವರೆಗೆ ಚಲಿಸಬಲ್ಲದು ಎಂದು ಹೇಳಲಾಗಿದೆ.
>> ಓಲಾ ಇ-ಸ್ಕೂಟರ್‌ನ ದೊಡ್ಡ ವೈಶಿಷ್ಟ್ಯವೆಂದರೆ ಇದನ್ನು ಹೋಮ್ ಚಾರ್ಜರ್‌ನೊಂದಿಗೆ ಬಿಡುಗಡೆ ಮಾಡಲಾಗುತ್ತಿದೆ. ಅಂದರೆ ಮನೆಯಲ್ಲಿ ಅಳವಡಿಸಲಾಗಿರುವ ಸಾಮಾನ್ಯ ಸಾಕೆಟ್ ನಿಂದ ಸ್ಕೂಟರ್ ಅನ್ನು ಚಾರ್ಜ್ ಮಾಡಬಹುದು.
>> ಓಲಾ ಇ-ಸ್ಕೂಟರ್ ಗರಿಷ್ಠ ವೇಗ ಗಂಟೆಗೆ 90 ಕಿಮೀ ಆಗಿರುತ್ತದೆ.
>> ಓಲಾ ಇ-ಸ್ಕೂಟರ್ ಅನ್ನು 18 ನಿಮಿಷಗಳಲ್ಲಿ 50% ವರೆಗೆ ಚಾರ್ಜ್ ಮಾಡಬಹುದು. ಅದಕ್ಕಾಗಿ ಇದು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
>> ಸ್ಮಾರ್ಟ್ ಫೋನ್ ಸಂಪರ್ಕವು ಓಲಾ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿಯೂ ಲಭ್ಯವಿರುತ್ತದೆ.
>> ಬೂಟ್ ಸ್ಥಳದ ದೃಷ್ಟಿಯಿಂದ ಇದು ಆಕರ್ಷಕವಾಗಿದೆ. ವೀಡಿಯೊ ಟೀಸರ್ ಎರಡು ಹೆಲ್ಮೆಟ್‌ಗಳನ್ನು ಬೂಟ್ ಜಾಗದಲ್ಲಿ ಇಟ್ಟಿರುವುದನ್ನು ತೋರಿಸುತ್ತದೆ. ಸಾಮಾನ್ಯವಾಗಿ ಸ್ಕೂಟರ್‌ನ ಬೂಟ್ ಜಾಗದಲ್ಲಿ ಕೇವಲ ಒಂದು ಹೆಲ್ಮೆಟ್ ಅನ್ನು ಮಾತ್ರ ಅಳವಡಿಸಬಹುದು.

ಇದನ್ನೂ ಓದಿ- Bajaj Chetak E-scooter Booking: ಬಜಾಜ್ ಇ-ಸ್ಕೂಟರ್ ಬುಕಿಂಗ್ ಇಂದಿನಿಂದ ಆರಂಭ, ಕರ್ನಾಟಕದ ಯಾವ ನಗರದಲ್ಲಿ ಬುಕಿಂಗ್ ಲಭ್ಯ?

400 ನಗರಗಳಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ನಿರ್ಮಿಸಲಾಗುವುದು:
ಭಾರತದಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ, ಕಂಪನಿಯು 400 ನಗರಗಳಲ್ಲಿ 1,00,000 ಸ್ಥಳಗಳಲ್ಲಿ ಅಥವಾ ಟಚ್‌ಪಾಯಿಂಟ್‌ಗಳಲ್ಲಿ ಹೈಪರ್‌ಚಾರ್ಜರ್ ಅನ್ನು ಸ್ಥಾಪಿಸುತ್ತದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನ ಗ್ರಾಹಕರು ಚಾರ್ಜ್ ಮಾಡಲು ಯಾವುದೇ ಅನಾನುಕೂಲತೆಯನ್ನು ಎದುರಿಸುವುದಿಲ್ಲ. ಯಾವ ನಗರವು ಚಾರ್ಜಿಂಗ್ ಪಾಯಿಂಟ್‌ಗಳನ್ನು ಹೊಂದಿದೆ ಎಂಬ ಮಾಹಿತಿಯು ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News