ನವದೆಹಲಿ: Pf Withdrawal Process Online -  ಪಿಎಫ್ ಖಾತೆಯಲ್ಲಿ ಸಂಗ್ರಹವಾದ ಹಣ ನಿಮಗೆ ತುಂಬಾ ಉಪಯೋಗಕಾರಿಯಾಗಿದೆ. ನಿಮ್ಮ ಸಂಬಳದಿಂದ ಕ್ರಮೇಣ ಕಡಿತಗೊಳ್ಳುವ ಪಿಎಫ್ ಹಣವು ತುರುತು ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತದೆ. ಸರ್ಕಾರ ಪಿಎಫ್ ಹಣ ಹಿಂಪಡೆಯಲು ಆನ್‌ಲೈನ್ ಸೌಲಭ್ಯವನ್ನು ನೀಡಿದಾಗಿನಿಂದ ಜನರಿಗೆ ತುಂಬಾ ನೆಮ್ಮದಿ ಸಿಕ್ಕಂತಾಗಿದೆ. ಇದುವರೆಗೆ ಪಿಎಫ್‌ ಖಾತೆಯಿಂದ ಹಣ ಪಡೆಯಲು ಹಲವು ದಿನಗಳೇ ಕಾಯಬೇಕಾಗುತ್ತಿತ್ತು. ಆದರೆ ಇದೀಗ ಕೆಲವೇ ಗಂಟೆಗಳಲ್ಲಿ ನಿಮ್ಮ ಖಾತೆಗೆ ನಿಮ್ಮ ಪಿಎಫ್ ಹಣ ಬಂದು ಸೇರಲಿದೆ.


COMMERCIAL BREAK
SCROLL TO CONTINUE READING

ಈಗ ನೀವು ಪಿಎಫ್‌ ಖಾತೆಯಿಂದ ದುಪ್ಪಟ್ಟು ತುರ್ತು ನಿಧಿ ಹಿಂಪಡೆಯಬಹುದು
ದೇಶದಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಈಗ ನೌಕರರು ತಮ್ಮ ಪಿಎಫ್ (PF Account) ಖಾತೆಯಿಂದ ದುಪ್ಪಟ್ಟು ಹಣವನ್ನು (Double Emergency Fund) ಹಿಂಪಡೆಯಬಹುದು ಎಂದು ಸರ್ಕಾರ ಹೇಳಿದೆ. ಹೆಚ್ಚಾಗುತ್ತಿರುವ ಒಮಿಕ್ರಾನ್ ಪ್ರಕೋಪದ ನಡುವೆಯೇ ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಸಹ ತನ್ನ ಮಟ್ಟದಲ್ಲಿ ತನ್ನ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಕರೋನಾ ಸಂತ್ರಸ್ತರು ಮತ್ತು ಬದಲಾಗುತ್ತಿರುವ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, EPFO ಉದ್ಯೋಗಿಗಳಿಗೆ ಎರಡು ಪಟ್ಟು ತುರ್ತು ಹಣವನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದೆ.


ಕೊರೊನಾ ವೈರಸ್ ನ ಎರಡನೇ ಅಲೆಯ ವೇಳೆ EPFO ತನ್ನ ಗ್ರಾಹಕರಿಗೆ ಅವರ PF ಖಾತೆಯಿಂದ ನಾನ್-ರಿಫಂಡೆಬಲ್ ಅಡ್ವಾನ್ಸ್ ಪಡೆಯಲು ಅನುಮತಿ ನೀಡಿತ್ತು. ಆದರೆ ಇದೀಗ ಹೆಚ್ಚಾಗುತ್ತಿರುವ ಓಮಿಕ್ರಾನ್ ಪ್ರಕರಣಗಳ ಹಿನ್ನೆಲೆ ತನ್ನ ಖಾತೆದಾರರಿಗೆ ಒಟ್ಟು ಎರಡು ಬಾರಿ ತುರ್ತು ಹಣ ಪಡೆಯುವ ಅವಕಾಶವನ್ನು ಇಲಾಖೆ ಕಲ್ಪಿಸಿದೆ. ಅಂದರೆ, ಇದೀಗ ಕರೋನಾದಿಂದ ತೊಂದರೆಗೊಳಗಾದ ಉದ್ಯೋಗಿ ಈ ತುರ್ತು ನಿಧಿಯನ್ನು ಎರಡು ಬಾರಿ ಹಿಂಪಡೆಯಬಹುದು, ಆದರೆ ಮೊದಲು ಈ ಸೌಲಭ್ಯವು ಕೇವಲ ಒಮ್ಮೆ ಮಾತ್ರ ಲಭ್ಯವಿತ್ತು.


ಇದನ್ನೂ ಓದಿ-Employee Pension Scheme: ದುಪ್ಪಟ್ಟಾಗಲಿದೆಯಾ ನೌಕರರ ಪೆನ್ಷನ್! 15000ರೂ.ಗಳ ಗರಿಷ್ಠ ಲಿಮಿಟ್ ಇನ್ಮುಂದೆ ಇರೋದಿಲ್ವೆ?


ಈ ವಿಶೇಷ ಸೌಲಭ್ಯವನ್ನು ಸರ್ಕಾರವು ವೈದ್ಯಕೀಯ ತುರ್ತು ಪರಿಸ್ಥಿತಿಯ ಅಡಿಯಲ್ಲಿ ನೀಡುತ್ತಿದೆ. ಇದರಿಂದ ಯಾವುದೇ ಉದ್ಯೋಗಿ ಆರ್ಥಿಕವಾಗಿ ತೊಂದರೆಗೊಳಗಾಗುವುದಿಲ್ಲ. ಯಾರಿಗಾದರೂ ಕರೋನಾ ಸೋಂಕು ತಗುಲಿದರೆ ಮತ್ತು ಚಿಕಿತ್ಸೆಗೆ ಹಣವಿಲ್ಲದಿದ್ದರೆ, ಅವರು ತಮ್ಮ ಪಿಎಫ್ ಖಾತೆಯಲ್ಲಿ ಠೇವಣಿ ಮಾಡಿದ ಹಣವನ್ನು ಹಿಂಪಡೆಯುವ ಮೂಲಕ ಚಿಕಿತ್ಸೆ ಪಡೆಯಬಹುದು. ಈ ವಿಶೇಷ ಸೌಲಭ್ಯದಲ್ಲಿ ಒಂದು ಗಂಟೆಯೊಳಗೆ ಹಣ ಖಾತೆಗೆ ಬಂದು ಸೇರಲಿದೆ. ಹಾಗಾದರೆ ಬನ್ನಿ ಅದರ ಸಂಪೂರ್ಣ ಪ್ರಕ್ರಿಯೆ ತಿಳಿದುಕೊಳ್ಳೋಣ.


ಇದನ್ನೂ ಓದಿ-7th Pay Commission: ನೌಕರರಿಗೆ ಹೊಸ ವರ್ಷದ ಉಡುಗೊರೆ! ಶೇ.3ರಷ್ಟು ಡಿಎ ಹೆಚ್ಚಳ, ಬಾಕಿ ಹಣದ ಬಗ್ಗೆಯೂ ನಿರ್ಧಾರ


ಇಲ್ಲಿದೆ ಅದರ ಹಂತ-ಹಂತದ ಪ್ರಕ್ರಿಯೆ
ಹಂತ 1: ಇದಕ್ಕಾಗಿ, ಸದಸ್ಯರ ಇ-ಸೇವಾ ಪೋರ್ಟಲ್ https://unifiedportal-mem.epiindia.gov.in/memberinterface/ ಗೆ  ಮೊದಲು ಭೇಟಿ ನೀಡಿ
ಹಂತ 2: ನಿಮ್ಮ UAN, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸುವ ಮೂಲಕ ನಿಮ್ಮ ಖಾತೆಗೆ ಲಾಗಿನ್ ಮಾಡಿ.
ಹಂತ 3: ಈಗ ಆನ್‌ಲೈನ್ ಸೇವೆಗಳಿಗೆ ಹೋಗಿ ಮತ್ತು ಅಲ್ಲಿ ನಿಮ್ಮ ಕ್ಲೈಮ್ ಅನ್ನು ಆಯ್ಕೆ ಮಾಡಿ (ಫಾರ್ಮ್-31, 19, 10C ಮತ್ತು 10D).
ಹಂತ 4: ಈಗ ನಿಮ್ಮ ಪರದೆಯ ಮೇಲೆ ಹೊಸ ವೆಬ್‌ಪುಟವು ಕಾಣಿಸಿಕೊಳ್ಳುತ್ತದೆ, ಅದರಲ್ಲಿ ನೀವು ಹೆಸರು, ಹುಟ್ಟಿದ ದಿನಾಂಕ ಮತ್ತು ನಿಮ್ಮ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳಂತಹ ನಿಮ್ಮ ಎಲ್ಲಾ ವಿವರಗಳೊಂದಿಗೆ ನಮೂದಿಸಬೇಕು.
ಹಂತ 5: ಈಗ ಇಲ್ಲಿ ನೀವು ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯನ್ನು ನಮೂದಿಸಿ ಮತ್ತು 'ಪರಿಶೀಲಿಸು' ಕ್ಲಿಕ್ ಮಾಡಿ.
ಹಂತ 6: ನಿಮ್ಮ ಪರದೆಯ ಮೇಲೆ ಪಾಪ್-ಅಪ್ ಕಾಣಿಸುತ್ತದೆ, 'ಸರ್ಟಿಫಿಕೇಟ್ ಆಫ್ ಅಂಡರ್‌ಟೇಕಿಂಗ್' ಅನ್ನು ಒದಗಿಸಲು ನಿಮ್ಮನ್ನು ಕೇಳಲಾಗುವುದು.
ಹಂತ 7: ಡ್ರಾಪ್ ಡೌನ್ ಮೆನುವಿನಿಂದ, ನೀವು 'PF ಅಡ್ವಾನ್ಸ್ (ಫಾರ್ಮ್ 31)' ಆಯ್ಕೆ ಮಾಡಬೇಕು.
ಹಂತ 8: ಡ್ರಾಪ್ ಡೌನ್ ಮೆನುವಿನಿಂದ ಹಣವನ್ನು ಹಿಂಪಡೆಯಲು ನೀವು 'ಸಾಂಕ್ರಾಮಿಕ ರೋಗ (COVID-19)' ಫಾರ್ಮ್ ಅನ್ನು ಆಯ್ಕೆ ಮಾಡಬೇಕು.
ಹಂತ 9: ಅಗತ್ಯವಿರುವ ಮೊತ್ತವನ್ನು ನಮೂದಿಸಿ ಮತ್ತು ಚೆಕ್‌ನ ಸ್ಕ್ಯಾನ್ ಮಾಡಿದ ಪ್ರತಿಯನ್ನು ಅಪ್‌ಲೋಡ್ ಮಾಡಿ ಮತ್ತು ನಿಮ್ಮ ವಿಳಾಸವನ್ನು ನಮೂದಿಸಿ.
ಹಂತ 10: ಈಗ ನಿಮ್ಮ ಆಧಾರ್‌ನೊಂದಿಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಒಂದು-ಬಾರಿ ಪಾಸ್‌ವರ್ಡ್ (OTP) ಕಳುಹಿಸಲಾಗುತ್ತದೆ, ಅದನ್ನು ನಮೂದಿಸಿ.


ಇದನ್ನೂ ಓದಿ-7th Pay Commission: ಸರ್ಕಾರಿ ನೌಕರರಿಗೆ ಶೀಘ್ರದಲ್ಲಿಯೇ ಸಿಗಲಿದೆಯಾ ಈ ಸಂತಸದ ಸುದ್ದಿ? ಮೂಲಭೂತ ವೇತನದಲ್ಲಿ ಹೆಚ್ಚಳದ ನಿರೀಕ್ಷೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.