7th Pay Commission: ಸರ್ಕಾರಿ ನೌಕರರಿಗೆ ಶೀಘ್ರದಲ್ಲಿಯೇ ಸಿಗಲಿದೆಯಾ ಈ ಸಂತಸದ ಸುದ್ದಿ? ಮೂಲಭೂತ ವೇತನದಲ್ಲಿ ಹೆಚ್ಚಳದ ನಿರೀಕ್ಷೆ

7th Pay Commission Latest News : ತುಟ್ಟಿಭತ್ಯೆಯನ್ನು ಹೆಚ್ಚಿಸುವ ಘೋಷಣೆಯ ನಂತರ ಕೇಂದ್ರ ಸರ್ಕಾರವು ಇದೀಗ ಸರ್ಕಾರಿ ನೌಕರರ ಮೂಲ ವೇತನವನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಸರ್ಕಾರವು ನೌಕರರ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸುವ ಕುರಿತು ಚಿಂತನೆ ನಡೆಸುತ್ತಿದೆ. ಇದು ಸಾಧ್ಯವಾದಲಿ ಇದು ನೌಕರರ ಮೂಲ ವೇತನದ ಮೇಲೆ ನೇರ ಪರಿಣಾಮ ಬೀರಲಿದೆ.

Written by - Nitin Tabib | Last Updated : Jan 14, 2022, 10:00 PM IST
  • ನೌಕರರ ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ.
  • ಇದರಿಂದ ನೌಕರರ ಮೂಲ ವೇತನ 18 ಸಾವಿರದಿಂದ 26 ಸಾವಿರಕ್ಕೆ ಏರಿಕೆಯಾಗಬಹುದು
  • ಸಚಿವ ಸಂಪುಟದ ಅನುಮೋದನೆ ಪಡೆದು ಅನುಷ್ಠಾನಗೊಳಿಸಬಹುದು
7th Pay Commission: ಸರ್ಕಾರಿ ನೌಕರರಿಗೆ ಶೀಘ್ರದಲ್ಲಿಯೇ ಸಿಗಲಿದೆಯಾ ಈ ಸಂತಸದ ಸುದ್ದಿ? ಮೂಲಭೂತ ವೇತನದಲ್ಲಿ ಹೆಚ್ಚಳದ ನಿರೀಕ್ಷೆ title=
7th pay commission latest news

ನವದೆಹಲಿ: 7th Pay Commission Update  - ಹೊಸ ವರ್ಷದಲ್ಲಿ ಲಕ್ಷಾಂತರ ಲಕ್ಷಾಂತರ ಸರ್ಕಾರಿ ನೌಕರರಿಗೆ ಇದಕ್ಕಿಂತ ಉತ್ತಮವಾದ ಸುದ್ದಿ ಮತ್ತೊಂದಿಲ್ಲ. ತುಟ್ಟಿಭತ್ಯೆ (Dearness Allowance) ಹೆಚ್ಚಳದ ನಂತರ, ಈಗ ಸರ್ಕಾರವು ನೌಕರರ ಮೂಲ ವೇತನವನ್ನು ಹೆಚ್ಚಿಸುವ ಸಾಧ್ಯತೆ ಇದೆ. ಮಾಧ್ಯಮ ವರದಿಗಳ ಪ್ರಕಾರ, ಶೀಘ್ರದಲ್ಲೇ ಕೇಂದ್ರ ಸರ್ಕಾರದಿಂದ ನೌಕರರ ವೇತನ ಹೆಚ್ಚಳದ ಬಗ್ಗೆ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ ಕನಿಷ್ಠ ಮೂಲ ವೇತನ 18 ಸಾವಿರ ರೂ.ನಿಂದ 26 ಸಾವಿರ ರೂ.ಗೆ ಏರಿಕೆಯಾಗಲಿದೆ.

ಸರ್ಕಾರದ ಜೊತೆಗೆ ನೌಕರರ ಸಂಘಟನೆಯ ಚರ್ಚೆ
ಮೂಲಗಳಿಂದ ಬಂದ ಮಾಹಿತಿ ಪ್ರಕಾರ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಫಿಟ್‌ಮೆಂಟ್ ಅಂಶ ಹೆಚ್ಚಾಗುವ ನಿರೀಕ್ಷೆ ಇದೆ. ಕೇಂದ್ರ ಉದ್ಯೋಗಿಗಳ ವೇತನ ಹೆಚ್ಚಾಗಲು ಫಿಟ್‌ಮೆಂಟ್ ಅಂಶವು ಆಧಾರವಾಗಿದೆ. ಈ ಕುರಿತು ನೌಕರರ ಸಂಘವು ಸರ್ಕಾರದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದೆ.

ಮೂಲ ವೇತನದಲ್ಲಿ ದೊಡ್ಡ ಬದಲಾವಣೆ ಆಗಬಹುದು
ಸರಕಾರದಿಂದ ಫಿಟ್ ಮೆಂಟ್ ಅಂಶ ಹೆಚ್ಚಳವಾದರೆ, ಮೂಲ ವೇತನದಲ್ಲಿ ದೊಡ್ಡ ಬದಲಾವಣೆಯಾಗಲಿದ್ದು, 26 ಸಾವಿರ ರೂ.ಗೆ ಏರಿಕೆಯಾಗುವ ನಿರೀಕ್ಷೆ ಇದೆ. ಬಜೆಟ್‌ಗೂ ಮುನ್ನ ಸಚಿವ ಸಂಪುಟ ಒಪ್ಪಿಗೆ ನೀಡಿದರೆ ಅದನ್ನು ಸರ್ಕಾರ ಇದೆ ವರ್ಷದಲ್ಲಿ ಜಾರಿಗೆಗೊಳಿಸಬಹುದು.

ಇದನ್ನೂ ಓದಿ-EPF ನಲ್ಲಿ 25 ವರ್ಷದಿಂದ ಹೂಡಿಕೆ ಆರಂಭಿಸಿ ನಿವೃತ್ತಿಗೆ ಮಿಲಿಯನೇರ್ ಆಗಿ : ಹೇಗೆ ಇಲ್ಲಿದೆ ಲೆಕ್ಕಾಚಾರ

ಫಿಟ್‌ಮೆಂಟ್ ಅಂಶ (Fitment Factor) ಹೆಚ್ಚಿಸಲು ಆಗ್ರಹ
ಫಿಟ್‌ಮೆಂಟ್ ಅಂಶವನ್ನು ಶೇ.2.57ರಿಂದ ಶೇ.3.68ಕ್ಕೆ ಏರಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಬಹುದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಕೇಂದ್ರೀಯ ಉದ್ಯೋಗಿಗಳ ಫಿಟ್‌ಮೆಂಟ್ ಅಂಶಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡುವ ನಿರೀಕ್ಷೆ ಇದೆ. ಸಚಿವ ಸಂಪುಟದಿಂದ ಒಂದೊಮ್ಮೆ ಇದಕ್ಕೆ ಹಸಿರು ನಿಶಾನೆ ದೊರೆತ ಬಳಿಕ ಅದನ್ನು ಇದೆ ಬಜೆಟ್ ನಲ್ಲಿ ವೆಚ್ಚದಲ್ಲಿ ಸರ್ಕಾರ ಸೇರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ-Investment Plan 2022 : 2022 ರಲ್ಲಿ ಹಣ ಗಳಿಸಲು ಇವು ಅತ್ಯುತ್ತಮ ಮಾರ್ಗಗಳು : ನೀವು ಇಲ್ಲಿ ಹೂಡಿಕೆ ಮಾಡಿದರೆ ಸಿಗಲಿದೆ ಭಾರೀ ಲಾಭ!

ಭತ್ಯೆಗಳ ಮೇಲೂ ಸಹ ಪ್ರಭಾವ ಬೀರಲಿದೆ
ಮೂಲವೇತನ 18 ಸಾವಿರದಿಂದ 26 ಸಾವಿರಕ್ಕೆ ಏರಿಕೆಯಾದರೆ ತುಟ್ಟಿಭತ್ಯೆಯೂ ಹೆಚ್ಚಾಗಲಿದೆ. ಪ್ರಸ್ತುತ, ತುಟ್ಟಿ ಭತ್ಯೆಯು ಮೂಲ ವೇತನದ ಶೇಕಡಾ 31 ರಷ್ಟಿದೆ. ಪ್ರಸ್ತುತ, 18 ಸಾವಿರ ಮೂಲ ವೇತನದಲ್ಲಿ, ಓರ್ವ ಉದ್ಯೋಗಿಯ ಫಿಟ್‌ಮೆಂಟ್ ಅಂಶ ಶೇ. 2.57 ರ ಪ್ರಕಾರ 46,260 (18,000 X 2.57 = 46,260) ಇದೆ.

ಇದನ್ನೂ ಓದಿ-Edible Oil: ಸಂಕ್ರಾಂತಿ ಸಿಹಿ ಸುದ್ದಿ! 20 ರೂ. ಅಗ್ಗವಾದ ಖಾದ್ಯ ತೈಲ, ಈಗ ಹೊಸ ದರ ಎಷ್ಟು ಗೊತ್ತಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News