ನವದೆಹಲಿ: EPFO Balance: ಪ್ರತಿಯೊಬ್ಬ ಉದ್ಯೋಗಿಗೂ ಇಪಿಎಫ್ ಹಣವು ತುಂಬಾ ದೊಡ್ಡ ಬೆಂಬಲವಾಗಿದೆ, ಆದ್ದರಿಂದ ಕಾಲಕಾಲಕ್ಕೆ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಎಷ್ಟು ಎಂದು ನೀವು ಪರಿಶೀಲಿಸುತ್ತಲೇ ಇರಬೇಕು. ಇದು ನಿಮಗೆ ತಿಳಿದಿಲ್ಲದಿದ್ದರೆ, ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಇಪಿಎಫ್ ಬ್ಯಾಲೆನ್ಸ್ ಅನ್ನು ನೀವು ಸುಲಭವಾಗಿ ಪರಿಶೀಲಿಸುವ ಸಾಧ್ಯವಾಗುವಂತಹ ಕೆಲವು ಸುಲಭ ವಿಧಾನಗಳನ್ನು ನಾವು ನಿಮಗೆ ಹೇಳಲಿದ್ದೇವೆ.


COMMERCIAL BREAK
SCROLL TO CONTINUE READING

ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ಇರುವ ಸುಲಭ ಮಾರ್ಗಗಳು:
ಇಪಿಎಫ್ ಬ್ಯಾಲೆನ್ಸ್ (EPF Balance) ಅನ್ನು ಪರಿಶೀಲಿಸಲು ನಿಮಗೆ ನಾಲ್ಕು ಮಾರ್ಗಗಳಿವೆ. ಮೊಬೈಲ್‌ನಿಂದ ಎಸ್‌ಎಂಎಸ್ ಕಳುಹಿಸುವ ಮೂಲಕ, ಮಿಸ್ಡ್ ಕಾಲ್ ನೀಡುವ ಮೂಲಕ ಮತ್ತು ವೆಬ್‌ಸೈಟ್ ಮೂಲಕ ಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ನೀವು ತಿಳಿದುಕೊಳ್ಳಬಹುದು. ಆದರೆ ಇದಕ್ಕಾಗಿ ನಿಮ್ಮ ಯುಎಎನ್ ಸಂಖ್ಯೆ ಸಕ್ರಿಯವಾಗಿರಬೇಕು ಎಂಬ ಒಂದು ವಿಷಯವನ್ನು ನೆನಪಿಡಿ. ನಿಮ್ಮ ಯುಎಎನ್‌ಗೆ ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿದಾಗ ಮಾತ್ರ ನೀವು ಈ ಸೌಲಭ್ಯಗಳನ್ನು ಪಡೆಯಬಹುದು ಎಂಬುದನ್ನು ನೆನಪಿಡಿ. 


SMS ಮೂಲಕ ಈ ರೀತಿಯ ಬ್ಯಾಲೆನ್ಸ್ ಪರಿಶೀಲಿಸಿ (Check balance through SMS) :
ನಿಮ್ಮ ಇಪಿಎಫ್ ಖಾತೆ (EPF Account) ಯಲ್ಲಿ ಇತ್ತೀಚಿನ ಕೊಡುಗೆ ಎಷ್ಟು ಎಂದು ತಿಳಿಯಲು ನೀವು ಬಯಸಿದರೆ 7738299899 ಸಂಖ್ಯೆಗೆ ಎಸ್ಎಂಎಸ್ ಕಳುಹಿಸಿ. ಅದರ ಸ್ವರೂಪವು EPFOHO UAN ENG ಆಗಿರುತ್ತದೆ. ಈ ಸಂದೇಶದ ಮೂಲಕ, ಇಂಗ್ಲಿಷ್‌ನಲ್ಲಿ ಇಪಿಎಫ್ ಕೊಡುಗೆಯ ಮಾಹಿತಿಯನ್ನು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ನೀವು ಈ ಸಂದೇಶವನ್ನು ಹಿಂದಿಯಲ್ಲಿ ಬಯಸಿದರೆ, ನೀವು ಅದನ್ನು EPFOHO UAN HIN ಎಂದು ಬರೆದು ಸಂದೇಶ ಕಳುಹಿಸಬೇಕು. ಈ ಎಸ್‌ಎಂಎಸ್ ಸೇವೆ ಪಂಜಾಬಿ, ಮರಾಠಿ, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿಯೂ ಲಭ್ಯವಿದೆ.


ಇದನ್ನೂ ಓದಿ - PF Balance Transfer: ಹಳೆಯ ಕಂಪನಿಯ PF Balance ಹೊಸ ಖಾತೆಗೆ ವರ್ಗಾಯಿಸಲು ಈ ಸಿಂಪಲ್ ಕೆಲಸ ಮಾಡಿ


ಮಿಸ್ಡ್ ಕಾಲ್ ಮೂಲಕ ಪರಿಶೀಲಿಸಿ (Check through missed call):
ಮಿಸ್ಡ್ ಕಾಲ್ ಮೂಲಕ ನಿಮ್ಮ ಬ್ಯಾಲೆನ್ಸ್ ಪರಿಶೀಲಿಸಲು  - 011-22901406 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ.  ಇಪಿಎಫ್‌ಒನಿಂದ ನಿಮಗೆ ಸಂದೇಶವನ್ನು ಕಳುಹಿಸಲಾಗುತ್ತದೆ. ಇದರಲ್ಲಿ ನಿಮ್ಮ ಪಿಎಫ್ ಖಾತೆಯ ಮಾಹಿತಿಯನ್ನು ನೀವು ಪಡೆಯುತ್ತೀರಿ. ಈ ಸೇವೆಯು ಚಂದಾದಾರರಿಗೆ ಸಂಪೂರ್ಣವಾಗಿ ಉಚಿತವಾಗಿದೆ, ಇದಕ್ಕಾಗಿ ನೀವು ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ.


ಉಮಾಂಗ್ ಆ್ಯಪ್ ಮೂಲಕ (Through Umang App):
ಇಪಿಎಫ್‌ಒ ಅಪ್ಲಿಕೇಶನ್ ಉಮಾಂಗ್ ಮೂಲಕವೂ ನೀವು ಖಾತೆಯ ಬಾಕಿ ತಿಳಿಯಬಹುದು. ಇದಕ್ಕಾಗಿ, ಅಪ್ಲಿಕೇಶನ್‌ನಲ್ಲಿರುವ ಇಪಿಎಫ್‌ಒಗೆ ಹೋಗಿ. ನಂತರ ನೌಕರರ ಕೇಂದ್ರಿತ ಸೇವೆಗಳ ಮೇಲೆ ಕ್ಲಿಕ್ ಮಾಡಿ. ನಂತರ ಪಾಸ್‌ಬುಕ್ ವ್ಯೂ ಆಯ್ಕೆಮಾಡಿ ಮತ್ತು ಪಾಸ್‌ಬುಕ್ ವೀಕ್ಷಿಸಲು ಯುಎಎನ್‌ನೊಂದಿಗೆ ಲಾಗ್ ಇನ್ ಮಾಡಿ. ನೀವು ಈ ಅಪ್ಲಿಕೇಶನ್ ಹೊಂದಿಲ್ಲದಿದ್ದರೆ, ಮೊದಲು ಇದನ್ನು ಡೌನ್‌ಲೋಡ್ ಮಾಡಿ ನಂತರ ಅದರಲ್ಲಿ ನೋಂದಾಯಿಸಿ.


ಇದನ್ನೂ ಓದಿ - BIG DECISION: EPFO ಚಂದಾದಾರರಿಗೊಂದು ನೆಮ್ಮದಿಯ ಸುದ್ದಿ


ವೆಬ್‌ಸೈಟ್ ಮೂಲಕ ಬ್ಯಾಲೆನ್ಸ್ ಪರಿಶೀಲಿಸಿ (Check balance through website) :
EPFO- epfindia.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಪಿಎಫ್ ಖಾತೆಯ ಸಂಪೂರ್ಣ ಮಾಹಿತಿಯನ್ನು ಸಹ ನೀವು ಪಡೆಯಬಹುದು. ಮುಖಪುಟದಲ್ಲಿ, ನೀವು ಇಪಿಎಫ್ ಪಾಸ್ಬುಕ್ ಪೋರ್ಟಲ್ ಅನ್ನು ನೋಡುತ್ತೀರಿ. ಯುಎಎನ್ ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ ಇಲ್ಲಿ ಲಾಗ್ ಇನ್ ಮಾಡಿ ನಂತರ ಡೌನ್‌ಲೋಡ್ / ವ್ಯೂ ಪಾಸ್‌ಬುಕ್ ಕ್ಲಿಕ್ ಮಾಡಿ. ಪಾಸ್ಬುಕ್ನಲ್ಲಿ ನೀವು ಬ್ಯಾಲೆನ್ಸ್ ಪರಿಶೀಲಿಸಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.