BIG DECISION: EPFO ಚಂದಾದಾರರಿಗೊಂದು ನೆಮ್ಮದಿಯ ಸುದ್ದಿ

BIG DECISION - ಕೊರೊನಾ ಸಾಂಕ್ರಾಮಿಕದ ನಡುವೆಯೇ ಕೇಂದ್ರ ಕಾರ್ಮಿಕ ಸಚಿವಾಲಯ EPFO ಖಾತೆದಾರರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಸರ್ಕಾರ ಡೆತ್ ಇನ್ಸೂರೆನ್ಸ್ ಮೊತ್ತದಲ್ಲಿ ಹೆಚ್ಚಳ ಮಾಡಿದೆ.

Written by - Nitin Tabib | Last Updated : May 1, 2021, 05:17 PM IST
  • ಐದು ಕೋಟಿ EPFO ಚಂದಾದಾರರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಸರ್ಕಾರ.
  • ಡೆತ್ ಇನ್ಸೂರೆನ್ಸ್ ಮೊತ್ತದಲ್ಲಿ ಹೆಚ್ಚಳ.
  • ಈ ಮೊದಲು ಎಷ್ಟಿತ್ತು, ಈಗ ಎಷ್ಟಾಗಿದೆ ತಿಳಿದುಕೊಳ್ಳಬೇಕೆ? ಸುದ್ದಿ ಓದಿ.
BIG DECISION: EPFO ಚಂದಾದಾರರಿಗೊಂದು ನೆಮ್ಮದಿಯ ಸುದ್ದಿ title=
Latest News On EPFO

ನವದೆಹಲಿ:  BIG DECISION - ಕೊರೊನಾ ಸಾಂಕ್ರಮಿಕದ ನಡುವೆ ಕೇಂದ್ರ ಕಾರ್ಮಿಕ ಸಚಿವಾಲಯ EPFO ಖಾತೆದಾರರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಹೌದು, ಸರ್ಕಾರ EPFO ಖಾತೆದಾರರಿಗೆ ನೀಡುತ್ತಿದ್ದ ಡೆತ್ ಇನ್ಸೂರೆನ್ಸ್ ಕ್ಲೇಮ್ ನಲ್ಲಿ ಏರಿಕೆ ಮಾಡಿದ್ದು, 50 ಮಿಲಿಯನ್ ಅಂದರೆ 5 ಕೋಟಿ ಚಂದಾದಾರರಿಗೆ ಇದರಿಂದ ನೇರ ಲಾಭವಾಗಲಿದೆ. ಸರ್ಕಾರದ ಈ ನಿರ್ಧಾರದಿಂದ ಯಾವುದೇ ಖಾತೆದಾರರ ಮರಣೋತ್ತರ ಮೊತ್ತ ಕನಿಷ್ಠ 2.5 ಲಕ್ಷ ರೂ.ಗಳಿಗೆ ಏರಿಕೆ ಮಾಡಲಾಗಿದೆ ಮತ್ತು ಗರಿಷ್ಟ ಮೊತ್ತವನ್ನು 7 ಲಕ್ಷದವರೆಗೆ ಹೆಚ್ಚಿಸಲಾಗಿದೆ. ಇದಕ್ಕೂ ಮೊದಲು ಇದು ಕ್ರಮೇಣ 2 ಲಕ್ಷ ರೂ. ಹಾಗೂ 6 ಲಕ್ಷ ರೂ.ಗಳವರೆಗೆ ಸಿಗುತ್ತಿತ್ತು.

ಕಾರ್ಮಿಕ ಸಚಿವಾಲಯ ನೀಡಿರುವ ಈ ಆದೇಶ ಎಂಪ್ಲಾಯ್ ಲಿಂಕ್ಡ್ ಇನ್ಸೂರೆನ್ಸ್ (EDLI)ಗೆ ಸಂಬಂಧಿಸಿದೆ. ಒಂದು ವೇಳೆ EPFO ಖಾತೆದಾರ ಮರಣಹೊಂದಿದರೆ, ಅವರ ಕುಟುಂಬ ಸದಸ್ಯರಿಗೆ ಈ ಲಾಭ ಸಿಗುತ್ತದೆ. ಹಾಗೆ ನೋಡಿದರೆ EDLI (Employees Deposit Linked Insurance Scheme) ಲಾಭಾರ್ಥಿಗಳ ಸಂಖ್ಯೆ EPFO ಒಟ್ಟು ಚಂದಾದಾರರಿಗಿಂತ ಕಮ್ಮಿಯಾಗಿದೆ. EDLI ಅಡಿ ಒಟ್ಟು 2 ಮಿಲಿಯನ್ ಅಂದರೆ 20 ಲಕ್ಷ ನೌಕರರು ಬರುತ್ತಾರೆ.

EDLI ಚಂದಾದಾರರು ಕೂಡ EPFO ಚಂದಾದಾರರಾಗಿರುತ್ತಾರೆ. ಆದರೆ ಪ್ರತಿ EPFO ಚಂದಾದಾರ EDLI ಚಂದಾದಾರ ಆಗಿರುವುದಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ- Provident Fund News: ನಿಮ್ಮಗೆ UAN ನಂಬರ್ ಗೊತ್ತಿಲ್ಲವೇ, ಅದನ್ನು ಜನರೇಟ್ ಮಾಡಬೇಕಾ? ಹೇಗೆ ಇಲ್ಲಿದೆ

UAN ಸಂಖ್ಯೆ ಇಲ್ಲದೆ ನಿಮ್ಮ PF ಖಾತೆಯ ಬ್ಯಾಲೆನ್ಸ್ ಅನ್ನು ಹೀಗೆ ಪರಿಶೀಲಿಸಿ
1] EPFO ಮುಖಪುಟಕ್ಕೆ ಲಾಗ್ ಇನ್ ಮಾಡಿ -  epfindia.gov.in.
2] 'ನಿಮ್ಮ ಪಿಎಫ್ ಬ್ಯಾಲೆನ್ಸ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ' ಬಟನ್ ಕ್ಲಿಕ್ ಮಾಡಿ
3] ನಿಮ್ಮನ್ನು ಹೊಸ ಪುಟಕ್ಕೆ ಮರುನಿರ್ದೇಶಿಸಲಾಗುತ್ತದೆ - epfoservices.in.epfo;
4] ನಿಮ್ಮ ರಾಜ್ಯ, ಇಪಿಎಫ್ ಕಚೇರಿ, ಸ್ಥಾಪನೆ ಕೋಡ್, ಪಿಎಫ್ ಖಾತೆ ಸಂಖ್ಯೆ ಮತ್ತು ಇತರ ವಿವರಗಳನ್ನು ನಮೂದಿಸಿ;
5] ಸ್ವೀಕೃತಿ ಬಟನ್ ಮತ್ತು 'ನಾನು ಒಪ್ಪುತ್ತೇನೆ' ಆಯ್ಕೆಯನ್ನು ಕ್ಲಿಕ್ ಮಾಡಿ; 
6] ನಿಮ್ಮ ಪಿಎಫ್ ಅಥವಾ ಇಪಿಎಫ್ ಬ್ಯಾಲೆನ್ಸ್ ಅನ್ನು ನಿಮ್ಮ ಕಂಪ್ಯೂಟರ್ ಮಾನಿಟರ್ ಅಥವಾ ಸಿಎಲ್ ಫೋನ್ ಮಾನಿಟರ್‌ನಲ್ಲಿ ಪ್ರಕಟಗೊಳ್ಳಲಿದೆ.

ಇದನ್ನೂ ಓದಿ- EPFO UAN:ನೀವು ಒಂದಕ್ಕಿಂತ ಹೆಚ್ಚು UAN ಹೊಂದಿದ್ದರೆ, ತಪ್ಪದೇ ಇದನ್ನು ಓದಿ

UAN ಬಳಸಿ ಬ್ಯಾಲೆನ್ಸ್ ಹೇಗೆ ಪರಿಶೀಲಿಸಬೇಕು?
ಆದರೆ, ಒಂದು ವೇಳೆ EPFO ಗ್ರಾಹಕರ ಬಳಿ UAN ನಂಬರ್ ಇದ್ದರೆ, ಗ್ರಾಹಕರು SMS ಮೂಲಕ ಅಥವಾ ಮಿಸ್ಡ್ ಕಾಲ್ ಸೇವೆಯ ಮೂಲಕ ತಮ್ಮ ಖಾತೆಯ ಬ್ಯಾಲೆನ್ಸ್ (PF BALANCE) ಅನ್ನು ಪರಿಶೀಲಿಸಬಹುದು. SMS ಮೂಲಕ ನಿಮ್ಮ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಯಿಂದ 7738299899ಮೊಬೈಲ್ ಸಂಖ್ಯೆಗೆ  SMS ಕಳುಹಿಸಬೇಕು. SMS ಸ್ವರೂಪ F EPFOHO UAN ಆಗಿದೆ. EPFO ಕಚೇರಿ PF ಬ್ಯಾಲೆನ್ಸ್ ಕುರಿತು SMS ಮೂಲಕ ಮಾಹಿತಿ ನೀಡಲಿದೆ. ಮಿಸ್ಡ್ ಕಾಲ್ ಮೂಲಕ PF ಬ್ಯಾಲೆನ್ಸ್ ಅರಿತುಕೊಳ್ಳಲು ಗ್ರಾಹಕರು ತಮ್ಮ ರಜಿಸ್ಟರ್ಡ ಮೊಬೈಲ್ ಮೂಲಕ 011-22901406 ಸಂಖೆಯೇ ಮಿಸ್ಸಡ್ ಕಾಲ್ ಕೊಡಬೇಕು.

ಇದನ್ನೂ ಓದಿ- Small Savings Schemes: ಸಣ್ಣ ಉಳಿತಾಯ ಯೋಜನೆಗಳು ಜೀವನ ನಡೆಸಲು ಎಷ್ಟು ಮುಖ್ಯ ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News