EPFO ಇ-ಪಾಸ್‌ಬುಕ್ ಸೇವೆ ಸ್ಥಗಿತ!
EPFO: ಇಪಿಎಫ್ಒ ಒದಗಿಸುವ ಪ್ರಮುಖ ಸೇವೆಗಳಲ್ಲಿ ಇ-ಪಾಸ್‌ಬುಕ್ ಸೌಲಭ್ಯವು ಬಹಳ ಜನಪ್ರಿಯವಾಗಿದೆ. ಆದರೆ, ಕಳೆದ ಕೆಲವು ದಿನಗಳಿಂದ ಈ ಸೇವೆ ಸರಿಯಾಗಿ ಲಭ್ಯವಾಗದ ಕಾರಣ ಇಪಿಎಫ್ಒ ಚಂದಾದಾರರು ಕಂಗಾಲಾಗಿದ್ದಾರೆ.
EPFO: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಉದ್ಯೋಗಿಗಳ ನಿವೃತ್ತಿ ಉಳಿತಾಯವನ್ನು ನಿರ್ವಹಿಸುವ ಸರ್ಕಾರಿ ಸಂಸ್ಥೆಯಾಗಿದೆ. ಇಪಿಎಫ್‌ಒ ಸದಸ್ಯರು ತಮ್ಮ ಭವಿಷ್ಯ ನಿಧಿ (ಪಿಎಫ್) ಬ್ಯಾಲೆನ್ಸ್ ಅನ್ನು ಇಪಿಎಫ್ಒ ವೆಬ್ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಸುಲಭವಾಗಿ ಪರಿಶೀಲಿಸಬಹುದಾಗಿದೆ.
ಇಪಿಎಫ್‌ಒ ಒದಗಿಸುವ ಇ-ಪಾಸ್‌ಬುಕ್ ಸೇವೆಯಲ್ಲಿ ಉದ್ಯೋಗಿಗಳು ತಮ್ಮ ಉಳಿತಾಯದ ಬಗ್ಗೆ ನಿಗಾ ಇಡಲು ಮತ್ತು ಕೊಡುಗೆಗಳನ್ನು ಸರಿಯಾಗಿ ಮಾಡಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಅನುಮತಿಸುತ್ತದೆ. ಆದರೆ, ಕಳೆದ ಕೆಲವು ದಿನಗಳಿಂದ ಈ ಸೇವೆ ಸರಿಯಾಗಿ ಲಭ್ಯವಾಗುತ್ತಿಲ್ಲ. ಇದಲ್ಲದೆ, UMANG ಮೊಬೈಲ್ ಅಪ್ಲಿಕೇಶನ್‌ನಲ್ಲಿಯೂ ಸಹ ಪಾಸ್‌ಬುಕ್ ಸೇವೆಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದರಿಂದ ಇಪಿಎಫ್‌ಒ ಚಂದಾದಾರರು ಕಂಗಾಲಾಗಿದ್ದಾರೆ.
ಇದನ್ನೂ ಓದಿ- ಈ ದಿನಾಂಕದಿಂದ ಆರಂಭವಾಗಲಿದೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ 2023- ಏನೆಲ್ಲಾ ಕೊಡುಗೆಗಳು ಲಭ್ಯ ಇಲ್ಲಿದೆ ಮಾಹಿತಿ
ಈ ಕುರಿತಂತೆ ದೂರಿರುವ ಚಂದಾದಾರರು ತಮ್ಮ ಪಾಸ್‌ಬುಕ್ ಅನ್ನು ಪ್ರವೇಶಿಸಲು ಪ್ರಯತ್ನಿಸಿದಾಗಲೆಲ್ಲಾ ದೋಷ ಸಂದೇಶವನ್ನು ಪಡೆಯುತ್ತಿರುವುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಇಂದು ಮುಂಜಾನೆಯಿಂದ ವೆಬ್‌ಸೈಟ್‌ನಲ್ಲಿ 'ತಾಂತ್ರಿಕ ನಿರ್ವಹಣೆ ಸಂಬಂಧಿತ ಸಮಸ್ಯೆಗಳ ಖಾತೆಯಲ್ಲಿ ಇಪಿಎಫ್‌ಒ ಸೇವೆಗಳು ಲಭ್ಯವಿಲ್ಲ. ಅನಾನುಕೂಲತೆಗಾಗಿ ವಿಷಾದಿಸಲಾಗಿದೆ. ಇ-ಪಾಸ್‌ಬುಕ್ ಸೌಲಭ್ಯ ಇಂದು ಸಂಜೆ 5 ರಿಂದ ಲಭ್ಯವಿರುತ್ತದೆ' ಎಂಬ ಸಂದೇಶ ಗೋಚರಿಸುತ್ತಿದೆ.
[[{"fid":"277433","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]
ಇದನ್ನೂ ಓದಿ- Auto Expo 2023: : ಟಾಟಾ ಮೋಟಾರ್ಸ್ ನಿಂದ ನವ ನವೀನ ಉತ್ಪನ್ನಗಳ ಅನಾವರಣ
ಪಿಎಫ್ ಬ್ಯಾಲೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು ಇಲ್ಲಿದೆ ಸುಲಭ ಮಾರ್ಗಗಳು:
* ಇಪಿಎಫ್‌ಒ ಸದಸ್ಯರು ಸದಸ್ಯರಿಗೆ ಇಪಿಎಫ್‌ಒ ವೆಬ್‌ಸೈಟ್ ಪಿಎಫ್ ಬ್ಯಾಲೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಲು ಸರಳ ಮಾರ್ಗವಾಗಿದೆ.
* ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ಇರುವ ಇನ್ನೊಂದು ವಿಧಾನವೆಂದರೆ ಇಪಿಎಫ್‌ಒ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸುವುದು. ಈ ಸೇವೆಯನ್ನು ಬಳಸಲು ಮೊದಲು ನೀವು ನಿಮ್ಮ UAN ಅನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಬೇಕಾಗುತ್ತದೆ.
* EPFO ಗೆ SMS ಕಳುಹಿಸುವ ಮೂಲಕವೂ ಇಪಿಎಫ್‌ಒ ಸದಸ್ಯರು ತಮ್ಮ ಪಿಎಫ್ ಖಾತೆಯ ಬ್ಯಾಲೆನ್ಸ್ ಅನ್ನು ಸುಲಭವಾಗಿ ಪರಿಶೀಲಿಸಬಹುದಾಗಿದೆ. ಇದಕ್ಕಾಗಿ 7738299899 ಗೆ ನಿಮ್ಮ UAN ಮತ್ತು ನಿಮ್ಮ ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ ನಾಲ್ಕು ಅಂಕಿಗಳನ್ನು ಸಂದೇಶದ ಮೂಲಕ ಕಳುಹಿಸಿ ನಿಮ್ಮ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.
* ಉಮಾಂಗ್ ಅಪ್ಲಿಕೇಶನ್ ಮೂಲಕವೂ ನೀವು ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ಸುಲಭವಾಗಿ ಪರಿಶೀಲಿಸಬಹುದಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.