Income Tax Slab: ಆದಾಯ ತೆರಿಗೆ ಪಾವತಿಸುವವರ ಪಾಲಿಗೆ ಭರ್ಜರಿ ಸುದ್ದಿಯೊಂದು ಪ್ರಕಟವಾಗಿದೆ. ನೀವು ಸಹ ತೆರಿಗೆ ಪಾವತಿದಾರರಾಗಿದ್ದರೆ, ಇದೀಗ ನೀವು ಭಾರಿ ಲಾಭವನ್ನು ಪಡೆಯಲಿರುವಿರಿ. ನಿಮ್ಮ ಸಂಬಳ ರೂ 10.5 ಲಕ್ಷವಾಗಿದ್ದರೂ ಕೂಡ ಈ ಸಂಬಳದ ಮೇಲೆ ನೀವು ಶೇ.100 ರಷ್ಟು ತೆರಿಗೆ ಉಳಿತಾಯವನ್ನು ಮಾಡಬಹುದು. ಹೌದು... ಇಷ್ಟು ಆದಾಯವಿದ್ದರೂ ಕೂಡ ನೀವು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ನೀವು ತೆರಿಗೆಯನ್ನು ಹೇಗೆ ಉಳಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ-
2.5 ಲಕ್ಷದವರೆಗಿನ ಆದಾಯ ತೆರಿಗೆ ಮುಕ್ತವಾಗಿದೆ
ಪ್ರಸ್ತುತ ನಿಮ್ಮ 2.5 ಲಕ್ಷದವರೆಗಿನ ಆದಾಯವು ತೆರಿಗೆ ಮುಕ್ತವಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ, ಆದರೂ ಕೂಡ ನೀವು 10.5 ಲಕ್ಷದವರೆಗಿನ ಸಂಬಳಕ್ಕೆ ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.
50,000 ಸ್ಟ್ಯಾಂಡರ್ಡ್ ಡಿಡಕ್ಷನ್ ಲಭ್ಯವಿದೆ
ಯಾವುದೇ ವ್ಯಕ್ತಿಯ ವಾರ್ಷಿಕ ಆದಾಯವು ರೂ 10 ಲಕ್ಷ 50,000 ಆಗಿದ್ದರೆ, ನೀವು ರೂ 50,000 ನ ನೇರ ಪ್ರಮಾಣಿತ ಕಡಿತವನ್ನು ಪಡೆಯುತ್ತೀರಿ. ಈ ಪರಿಸ್ಥಿತಿಯಲ್ಲಿ, ನಿಮ್ಮ ತೆರಿಗೆಯ ಆದಾಯವು 10 ಲಕ್ಷ ರೂ.ಆಗಿರಲಿದೆ. ಮಾಧ್ಯಮ ವರದಿಗಳ ಪ್ರಕಾರ, ಈ ಬಜೆಟ್‌ನಲ್ಲಿ ಸರ್ಕಾರವು ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು 50,000 ರೂ.ನಿಂದ 70,000 ರೂ.ಗೆ ಹೆಚ್ಚಿಸಬಹುದು.
80ಸಿ ಅಡಿಯಲ್ಲಿ 1.5 ಲಕ್ಷ ವಿನಾಯಿತಿ ಪಡೆಯಬಹುದು
ಇವೆಲ್ಲವುಗಳ ಹೊರತಾಗಿ, ನೀವು ಆದಾಯ ತೆರಿಗೆ ಕಾಯಿದೆ, 1961 ರ ಸೆಕ್ಷನ್ 80C ಅಡಿಯಲ್ಲಿ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದು. ಇದು ಎಲ್ಐಸಿ, ಪಿಪಿಎಫ್ ಸೇರಿದಂತೆ ಹಲವು ಹೂಡಿಕೆಗಳನ್ನು ಒಳಗೊಂಡಿದೆ. ಅದರಂತೆ, ನಿಮ್ಮ ತೆರಿಗೆಯ ಆದಾಯವು ರೂ.8,50,000 ಮಾತ್ರ ಉಳಿಯಲಿದೆ.
50,000 ರಿಯಾಯಿತಿ ಇಲ್ಲಿ ಲಭ್ಯವಿರುತ್ತದೆ
ಇದಲ್ಲದೆ, ನೀವು ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 80CCD ಅಡಿಯಲ್ಲಿ NPS ಮೂಲಕ ತೆರಿಗೆಯನ್ನು ಉಳಿಸಬಹುದು. ಇದರಲ್ಲಿ, ನೀವು 50,000 ರೂ.ವರೆಗೆ ರಿಯಾಯಿತಿಯನ್ನು ಪಡೆಯುವಿರಿ, ಅಂದರೆ ನಿಮ್ಮ ತೆರಿಗೆಯ ಆದಾಯವು ಈಗ ಕೇವಲ 8 ಲಕ್ಷ ರೂ. ಗೆ ಇಳಿಯಲಿದೆ.
ಇದರಲ್ಲಿ ಮತ್ತೆ ನಿಮಗೆ 2 ಲಕ್ಷ ರೂ. ರಿಯಾಯಿತಿ ದೊರೆಯಲಿದೆ
ನೀವು ಯಾವುದೇ ಮನೆಯನ್ನು ಖರೀದಿಸಿದ್ದರೆ ಅಥವಾ ನಿಮ್ಮ ಹೆಸರಿನಲ್ಲಿ ಯಾವುದೇ ಗೃಹ ಸಾಲವನ್ನು ಹೊಂದಿದ್ದರೆ, ನೀವು ಆದಾಯ ತೆರಿಗೆ ವಿನಾಯಿತಿಯ ಪ್ರಯೋಜನವನ್ನು ಸಹ ಪಡೆಯುವಿರಿ. ಆದಾಯ ತೆರಿಗೆ ಕಾಯಿದೆ 24B ಅಡಿಯಲ್ಲಿ, ನೀವು 2 ಲಕ್ಷದವರೆಗೆ ಸಂಪೂರ್ಣ ವಿನಾಯಿತಿಯನ್ನು ಪಡೆಯುವಿರಿ. ಆದ್ದರಿಂದ ಇದರ ಪ್ರಕಾರ ನಿಮ್ಮ ತೆರಿಗೆಯ ಆದಾಯ ಕೇವಲ ರೂ.6 ಲಕ್ಷ ರೂ. ಮಾತ್ರ ಉಳಿಯಲಿದೆ.
ಇದನ್ನೂ ಓದಿ-BHIM UPI ಹಾಗೂ Rupay Card ಬಳಕೆದಾರರಿಗೆ ಭಾರಿ ಉಡುಗೊರೆ ನೀಡಿದ ಕೇಂದ್ರ ಸರ್ಕಾರ
ವಿಮೆ ಮಾಡಿಸುವ ಮೂಲಕ ನೀವು 75,000 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು
ಇದಲ್ಲದೇ, ಆದಾಯ ತೆರಿಗೆಯ ಸೆಕ್ಷನ್ 80ಡಿ ಅಡಿಯಲ್ಲಿ ನೀವು 75,000 ರೂ. ನಿಮ್ಮ ಕುಟುಂಬಕ್ಕೆ ನೀವು ವಿಮೆಯನ್ನು ಸಹ ತೆಗೆದುಕೊಳ್ಳಬಹುದು. ಹೀಗೆ ಮಾಡುವುದರಿಂದ ನಿಮ್ಮ ತೆರಿಗೆಯ ಆದಾಯವು ಕೇವಲ 5 ಲಕ್ಷ 25 ಸಾವಿರ ರೂ. ಗಳಷ್ಟಾಗಲಿದೆ.
ಇದನ್ನೂ ಓದಿ-Income Tax: ಈ ಜನರು ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ, ಬಜೆಟ್ ಗೂ ಮುನ್ನವೇ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ
ಇಲ್ಲಿ ರೂ.25,000 ರಿಯಾಯಿತಿ ಸಿಗಲಿದೆ
ವೆಲ್ಲವುಗಳ ಹೊರತಾಗಿ, ನೀವು ಯಾವುದೇ ಸಂಸ್ಥೆಯೊಂದಿಗೆ ಸಂಬಂಧ ಹೊಂದಿದ್ದರೆ, ನೀವು ದೇಣಿಗೆ ಮೂಲಕ 25,000 ರೂ.ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು. ಇದರಲ್ಲಿ ನೀವು ತೆರಿಗೆಯ ಸೆಕ್ಷನ್ 80G ಅಡಿಯಲ್ಲಿ ಕ್ಲೈಮ್ ಮಾಡಬಹುದು. ಈ ವಿನಾಯಿತಿಯ ಲಾಭವನ್ನು ಪಡೆದ ನಂತರ, ನಿಮ್ಮ ತೆರಿಗೆಯ ಆದಾಯವು ಕೇವಲ 5 ಲಕ್ಷ ರೂಪಾಯಿಗಳಾಗಿ ಉಳಿಯಲಿದೆ, ಅದರ ಮೇಲೆ ನೀವು ಯಾವುದೇ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.