ಈ ದಿನಾಂಕದಿಂದ ಆರಂಭವಾಗಲಿದೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ 2023- ಏನೆಲ್ಲಾ ಕೊಡುಗೆಗಳು ಲಭ್ಯ ಇಲ್ಲಿದೆ ಮಾಹಿತಿ

Flipkart Big Savings Days 2023: ಜನಪ್ರಿಯ ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್‌ಕಾರ್ಟ್  ಹೊಸ ವರ್ಷದಲ್ಲಿ ಮತ್ತೆ ಹೊಸ ಹೊಸ ಕೊಡುಗೆಗಳನ್ನು ಹೊತ್ತು ತರಲಿದೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ 2023ರಲ್ಲಿ ಲಭ್ಯವಿರುವ  ಟಾಪ್ ಡೀಲ್‌ಗಳು, ಬ್ಯಾಂಕ್ ಮತ್ತು ಇತರ ರಿಯಾಯಿತಿ ಕೊಡುಗೆಗಳ ಬಗ್ಗೆ ಇಲ್ಲಿದೆ ಫುಲ್ ಡೀಟೇಲ್ಸ್.

Written by - Yashaswini V | Last Updated : Jan 12, 2023, 07:19 AM IST
  • ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ನಲ್ಲಿ ಕೆಲವು ಆಯ್ದ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ.
  • ಲಭ್ಯವಿರುವ ಮಾಹಿತಿಯ ಪ್ರಕಾರ ಲ್ಯಾಪ್‌ಟಾಪ್‌ಗಳು 80% ವರೆಗೆ ರಿಯಾಯಿತಿಯಲ್ಲಿ ಲಭ್ಯವಾಗಲಿದೆ.
  • ಇದಲ್ಲದೆ ಸ್ಮಾರ್ಟ್ ಟಿವಿಗಳು, ಹೋಂ ಅಪ್ಲೈಯೆನ್ಸಸ್ ಮತ್ತಿತರ ವಸ್ತುಗಳ ಮೇಲೆ 75% ವರೆಗೆ ರಿಯಾಯಿತಿ ನೀಡಲಾಗುತ್ತಿದೆ.
ಈ ದಿನಾಂಕದಿಂದ ಆರಂಭವಾಗಲಿದೆ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ 2023- ಏನೆಲ್ಲಾ ಕೊಡುಗೆಗಳು ಲಭ್ಯ ಇಲ್ಲಿದೆ ಮಾಹಿತಿ  title=
Flipkart Big Saving Days

Flipkart Big Savings Days 2023: ವಾಲ್‌ಮಾರ್ಟ್ ಒಡೆತನದ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್ ಗಣರಾಜ್ಯೋತ್ಸವದ ಕೊಡುಗೆಗಳೊಂದಿಗೆ ಮತ್ತೆ ಹಲವು ಸೂಪರ್ ಡೂಪರ್ ಕೊಡುಗೆಗಳೊಂದಿಗೆ ಹಿಂದಿರುಗಿದೆ. ಫ್ಲಿಪ್‌ಕಾರ್ಟ್ ಟೈಲರ್‌ನ ಬಿಗ್ ಸೇವಿಂಗ್ಸ್ ಡೇಸ್ ಸೇಲ್ ಇನ್ನು ಮೂರು ದಿನಗಳಲ್ಲಿ ಅಂದರೆ ಜನವರಿ 15 ರಂದು ಪ್ರಾರಂಭವಾಗಲಿದೆ. ಈ ಮಾರಾಟವು ಜನವರಿ 20, 2023 ರಂದು ಕೊನೆಗೊಳ್ಳುತ್ತದೆ. ಗಮನಾರ್ಹವಾಗಿ, ಜನವರಿ 14, 2023 ರಿಂದ ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರು ಎಲ್ಲಾ ಕೊಡುಗೆಗಳು ಮತ್ತು ರಿಯಾಯಿತಿಗಳಿಗೆ ಮೊದಲ ಪ್ರವೇಶವನ್ನು ಪಡೆಯುತ್ತಾರೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ನಲ್ಲಿ ಏನೆಲ್ಲಾ ಆಫರ್‌ಗಳು ಲಭ್ಯವಾಗಲಿವೆ ತಿಳಿಯಿರಿ.

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ನಲ್ಲಿ ಲ್ಯಾಪ್‌ಟಾಪ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಭರ್ಜರಿ ಕೊಡುಗೆ:
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ನಲ್ಲಿ ಕೆಲವು ಆಯ್ದ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ  ಲ್ಯಾಪ್‌ಟಾಪ್‌ಗಳು 80% ವರೆಗೆ ರಿಯಾಯಿತಿಯಲ್ಲಿ ಲಭ್ಯವಾಗಲಿದೆ. ಇದಲ್ಲದೆ  ಸ್ಮಾರ್ಟ್ ಟಿವಿಗಳು, ಹೋಂ ಅಪ್ಲೈಯೆನ್ಸಸ್ ಮತ್ತಿತರ ವಸ್ತುಗಳ ಮೇಲೆ 75% ವರೆಗೆ ರಿಯಾಯಿತಿ ನೀಡಲಾಗುತ್ತಿದೆ. 

ಇದನ್ನೂ ಓದಿ- SBI-PNB-BoB ಸೇರಿದಂತೆ ಈ ಬ್ಯಾಂಕ್‌ಗಳಲ್ಲಿ ಖಾತೆ ಇದ್ದರೆ 6 ತಿಂಗಳಲ್ಲಿ ಸಿಗುತ್ತೆ ಇಷ್ಟು ಹಣ

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಡೀಲ್‌ಗಳ ಸಮಯ:
ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ಸ್ ಡೇಸ್ ಈವೆಂಟ್‌ನಲ್ಲಿ  12AM, 8AM ಮತ್ತು 4PM ಕ್ಕೆ ಹೊಸ ಕೊಡುಗೆಗಳನ್ನು ನೀಡಲಾಗುವುದು ಎಂದು ಫ್ಲಿಪ್‌ಕಾರ್ಟ್ ಹೇಳಿಕೊಂಡಿದೆ. ಇ-ಟೈಲರ್ ಪ್ರಕಾರ, ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಡೀಲ್‌ಗಳ ಸಮಯದಲ್ಲಿ ಬಳಕೆದಾರರಿಗೆ ಮಧ್ಯಾಹ್ನ 12  ಗಂಟೆಯಿಂದ ಮತ್ತು ರಾತ್ರಿ 10 ಗಂಟೆಯೊಳಗೆ ಉತ್ಪನ್ನಗಳ ಮೇಲೆ ಕಡಿಮೆ ಬೆಲೆಗಳನ್ನು ನೀಡುತ್ತದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ- Bank Rules: ಹೊಸ ವರ್ಷದಲ್ಲಿ ಗ್ರಾಹಕರಿಗೆ ಶಾಕ್ ನೀಡಿದ ಸರ್ಕಾರಿ ಬ್ಯಾಂಕ್

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ಸ್ ಡೇಸ್ ಬ್ಯಾಂಕ್ ಆಫರ್ಸ್:
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ಸ್ ಡೇಸ್ ಸೇಲ್ ಸಮಯದಲ್ಲಿ ಗ್ರಾಹಕರಿಗೆ ಬ್ಯಾಂಕ್ ಕೊಡುಗೆಗಳನ್ನು ಕೂಡ ಪರಿಚಯಿಸಲಾಗಿದೆ.
* ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವ ಬಳಕೆದಾರರು ಖರೀದಿಯ ಮೇಲೆ 5 ಪ್ರತಿಶತ ಕ್ಯಾಶ್‌ಬ್ಯಾಕ್‌ಗೆ ಅರ್ಹರಾಗಿರುತ್ತಾರೆ. 
* ಸಿಟಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವ ಬಳಕೆದಾರರಿಗೆ 10% ತ್ವರಿತ ಡಿಸ್ಕೌಂಟ್ ಲಭ್ಯವಿದೆ.
* ಇದಲ್ಲದೆ ಈ ಮಾರಾಟದ ಮಾರಾಟದ ಸಮಯದಲ್ಲಿ, ಕಂಪನಿಯ ಪೇ ಲೇಟರ್ ಆಯ್ಕೆಯು ಸಹ ಲಭ್ಯವಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News