EPFO Latest Update : ನೀವು ಈಗ ತಾನೇ ಕೆಲಸಕ್ಕೆ ಸೇರಿಕೊಂಡಿದ್ದರೆ ಅಥವಾ ಜೂನ್ 30 ರ ನಂತರ ಕೆಲಸಕ್ಕೆ ಸೇರಲಿದ್ದರೆ, ನಿಮ್ಮ ಕೈಗೆ ಹೆಚ್ಚಿನ ವೇತನ (Salary) ಸೇರಲಿದೆ. ಯಾಕೆಂದರೆ, ಇಪಿಎಫ್ ಸಬ್ಸಿಡಿ (EPF Subsidy) ಯೋಜನೆಯಡಿಯಲ್ಲಿ  ಹೊಸದಾಗಿ ಕೆಲಸಕ್ಕೆ ಸೇರಿದವರ ಇಪಿಎಫ್ ಕೊಡುಗೆಯನ್ನು  ಎರಡು ವರ್ಷಗಳವರೆಗೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.


COMMERCIAL BREAK
SCROLL TO CONTINUE READING

ಈ ಉದ್ಯೋಗಿಗಳಿಗೆ ಯೋಜನೆಯ ಲಾಭ  :
ಈ ಯೋಜನೆಯ ಪ್ರಕಾರ, ನಿಮ್ಮ ವೇತನದಿಂದ ಕಡಿತಗೊಳಿಸಬೇಕಾದ 12 ಪ್ರತಿಶತ ಪಿಎಫ್ (PF) ಅನ್ನು ಸರ್ಕಾರವೇ ನೀಡಲಿದೆ. ಹೊಸ ಉದ್ಯೋಗಿಗಳಿಗೆ ಮಾತ್ರವಲ್ಲದೆ, ಕರೋನಾ ವೈರಸ್ (Coronavirus) ಸಾಂಕ್ರಾಮಿಕ ರೋಗದಿಂದಾಗಿ 2020 ರ ಮಾರ್ಚ್ 1 ರ ನಂತರ ಉದ್ಯೋಗ ಕಳೆದುಕೊಂಡ ಉದ್ಯೋಗಿಗಳು ಮತ್ತೆ ಹೊಸ ಕೆಲಸಕ್ಕೆ ಸೇರಿಕೊಂಡಿದ್ದರೆ, ಅವರಿಗೂ  ಯೋಜನೆಯ ಲಾಭ ಸಿಗಲಿದೆ. 


ಇದನ್ನೂ ಓದಿ : Petrol Price Today 29 June 2021 : ಏರುತ್ತಲೇ ಇದೆ ಪೆಟ್ರೋಲ್ ಬೆಲೆ, 110 ರೂ ದಾಟಿದ ದರ


2 ವರ್ಷಗಳವರೆಗೆ ಸಿಗಲಿದೆ ಸಬ್ಸಿಡಿ : 
ಆತ್ಮ ನಿರ್ಭರ ಭಾರತ (Atma Nirbhar Bharath) ರೋಜ್ ಗಾರ್ ಯೋಜನೆಯಡಿ ಕಳೆದ ವರ್ಷ ಮೊದಲ ಬಾರಿಗೆ ಈ ಯೋಜನೆಯನ್ನು ಪ್ರಕಟಿಸಲಾಗಿತ್ತು. ಈ ಯೋಜನೆಯ ಲಾಭ ಕಂಪನಿಗಳಿಗೂ ಆಗಲಿದೆ. ಯಾಕೆಂದರೆ 2022 ಮಾರ್ಚ್ 31ರವರೆಗೆ ಸರ್ಕಾರ ಪಿಎಫ್ ಕೊಡುಗೆಯ ಕಂಪನಿಯ ಪಾಲನ್ನೂ ಕೂಡಾ ಭರಿಸಲಿದೆ. ಅಂದರೆ, ಒಟ್ಟು 24 ಪ್ರತಿಶತದಷ್ಟು ಕೊಡುಗೆಯನ್ನು ಎರಡು ವರ್ಷಗಳವರೆಗೆ ಸರ್ಕರವೇ ಭರಿಸಲಿದೆ. ಈ ಯೋಜನೆಯ ಅನ್ವಯ , 2020 ರ ಅಕ್ಟೋಬರ್ 1 ರ ನಂತರ ಮತ್ತು ಜೂನ್ 30 2021ರ ಒಳಗೆ ಕೆಲಸಕ್ಕೆ ಸೇರಿಕೊಂಡ, ಹೊಸ ಉದ್ಯೋಗಿಗಳು ಈ ಯೋಜನೆಯ ಲಾಭ ಪಡೆಯಲಿದ್ದಾರೆ. 


ಷರತ್ತುಗಳೇನು ? 
ಈ ಯೋಜನೆಯ ಪ್ರಯೋಜನವು ಹೊಸ ಉದ್ಯೋಗಿಗಳಿಗೆ ಮಾತ್ರ ಲಭ್ಯವಿರುತ್ತದೆ, ನಿನ್ನು ಯಾರ ವೇತನವು (Salary) ತಿಂಗಳಿಗೆ 15,000 ರೂ.ಗಳಾಗಿರುತ್ತದೆ ಅವರು ಈ ಯೋಜನೆಯ ಲಾಭ ಪಡೆಯಲು ಅರ್ಹರು.  ಅಲ್ಲದೆ, ಅಕ್ಟೋಬರ್ 1, 2020 ರ ನಂತರ ನೇಮಕಗೊಂಡ ಹೊಸ ಉದ್ಯೋಗಿಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ. ಇದಲ್ಲದೆ, 2020 ರ ಮಾರ್ಚ್ 1 ರ ನಂತರ ಉದ್ಯೋಗ ಕಳೆದುಕೊಂಡ ಮತ್ತು 2020 ರ ಅಕ್ಟೋಬರ್ 1 ರ ನಂತರ ಮರು ಉದ್ಯೋಗ ಪಡೆದ ನೌಕರರು ಕೂಡಾ ಈ ಯೋಜನೆಯ ಲಾಭವನ್ನು ಪಡೆಯಬಹುದು. ಇನ್ನು ಯಾವ ಕಂಪನಿಯಲ್ಲಿ, 1000 ಅಥವಾ ಅದಕ್ಕಿಂತ ಕಡಿಮೆ ಉದ್ಯೋಗಿಗಳಿರುತ್ತಾರೆ ಅಲ್ಲಿ ಮಾತ್ರ ಸರ್ಕಾರ ಉದ್ಯೋಗದಾತ ಮತ್ತು ಉದ್ಯೋಗಿಗಳೆರಡರ ಪಿಎಫ್ ಅನ್ನು ನೀಡುತ್ತದೆ.  ಯಾವ ಕಂಪನಿಯಲ್ಲಿ  ಸಿಬ್ಬಂದಿ 1000 ಕ್ಕಿಂತ ಹೆಚ್ಚಿರುತ್ತಾರೆಯೋ, ಅಲ್ಲಿ ನೌಕರರ ಕೊಡುಗೆಯನ್ನು ಮಾತ್ರ ಸರ್ಕಾರವು ಪಾವತಿಸುತ್ತದೆ.


ಇದನ್ನೂ ಓದಿ : Relief To Tax Payers: ತೆರಿಗೆ ಪಾವತಿದಾರರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ, Form-16 ಜಾರಿ ಸೇರಿದಂತೆ ಹಲವು ಯೋಜನೆಗಳ ಗಡುವು ವಿಸ್ತರಣೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.