Petrol Price Today 29 June 2021 : ಏರುತ್ತಲೇ ಇದೆ ಪೆಟ್ರೋಲ್ ಬೆಲೆ, 110 ರೂ ದಾಟಿದ ದರ

Petrol Price Today 29 June 2021 :ಪೆಟ್ರೋಲ್ ಬೆಲೆ ಇಂದು 35 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 28 ಪೈಸೆ ಹೆಚ್ಚಾಗಿದೆ. ಪೆಟ್ರೋಲ್ ಡೀಸೆಲ್ ಬೆಲೆ ಮೇ 4 ರ ನಂತರವೇ ಹೆಚ್ಚಾಗತೊಡಗಿತ್ತು. ಅಲ್ಲಿಂದ ಲ್ಲಿವರೆಗೆ 32 ಬಾರಿ ದರ ಏರಿಕೆಯಾಗಿದೆ.   

Written by - Ranjitha R K | Last Updated : Jun 29, 2021, 08:41 AM IST
  • ಏರುಗತಿಯಲ್ಲೇ ಇದೆ ಪೆಟ್ರೋಲ್ ಡೀಸೆಲ್ ಬೆಲೆ
  • 332 ಜಿಲ್ಲೆಗಳಲ್ಲಿ 100 ರ ಗಡಿದಾಟಿದೆ ಪೆಟ್ರೋಲ್ ಬೆಲೆ
  • ರಾಜಸ್ಥಾನದ ಶ್ರೀ ಗಂಗನಗರದಲ್ಲಿ ಪೆಟ್ರೋಲ್ ದರ 110 ತಲುಪಿದೆ
Petrol Price Today 29 June 2021 : ಏರುತ್ತಲೇ ಇದೆ ಪೆಟ್ರೋಲ್ ಬೆಲೆ, 110 ರೂ ದಾಟಿದ ದರ   title=
ಏರುಗತಿಯಲ್ಲೇ ಇದೆ ಪೆಟ್ರೋಲ್ ಡೀಸೆಲ್ ಬೆಲೆ (file photo)

ನವದೆಹಲಿ : Petrol Price Today 29 June 2021 : ಪೆಟ್ರೋಲ್ ಡೀಸೆಲ್ ಬೆಲೆ ಕಡಿಮೆಯಾಗುವ ಯಾವ ಲಕ್ಷಣಗಳು ಸದ್ಯಕ್ಕೆ ಗೋಚರಿಸುತ್ತಿಲ್ಲ. ಮುಂಬೈ ನಂತರ, ಈಗ ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 100 ರೂ ಆಗಿದೆ. ಇನ್ನು  ರಾಜಸ್ಥಾನದ ಶ್ರೀ ಗಂಗನಗರದಲ್ಲಿ ಪೆಟ್ರೋಲ್ ದರ 110 ರೂಗಳನ್ನು ದಾಟಿದ್ದರೆ, ಡೀಸೆಲ್ ಲೀಟರ್‌ಗೆ 102 ರೂ.ಗಿಂತ ಅಧಿಕವಾಗಿದೆ. ದೇಶದ 332 ಜಿಲ್ಲೆಗಳಲ್ಲಿ ಪೆಟ್ರೋಲ್ 100 ರೂ.ಗೆ ಮಾರಾಟವಾಗುತ್ತಿದೆ. 

ಪೆಟ್ರೋಲ್ ಬೆಲೆ (Petrol price) ಇಂದು 35 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಪ್ರತಿ ಲೀಟರ್‌ಗೆ 28 ಪೈಸೆ ಹೆಚ್ಚಾಗಿದೆ. ಪೆಟ್ರೋಲ್ ಡೀಸೆಲ್ (Diesel) ಬೆಲೆ ಮೇ 4 ರ ನಂತರವೇ ಹೆಚ್ಚಾಗತೊಡಗಿತ್ತು. ಅಲ್ಲಿಂದ ಲ್ಲಿವರೆಗೆ 32 ಬಾರಿ ದರ ಏರಿಕೆಯಾಗಿದೆ. 

ಇದನ್ನೂ ಓದಿ : Relief To Tax Payers: ತೆರಿಗೆ ಪಾವತಿದಾರರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ, Form-16 ಜಾರಿ ಸೇರಿದಂತೆ ಹಲವು ಯೋಜನೆಗಳ ಗಡುವು ವಿಸ್ತರಣೆ

ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆ ಎಷ್ಟಿದೆ ? 
ನಗರ ನಾಳೆಯ ದರ ಇಂದಿನ ದರ
ದೆಹಲಿ  - 98.81
ಮುಂಬೈ - 104.90
ಕೋಲ್ಕತಾ - 98.64
ಚೆನ್ನೈ  - 99.80
ಬೆಂಗಳೂರು (Bengaluru) – 101.75 

ಪೆಟ್ರೋಲ್ ನಂತರ, ಈಗ ಡೀಸೆಲ್ ಬೆಲೆಗಳನ್ನು ನೋಡೋಣ
ದೆಹಲಿ - 89.18
ಮುಂಬೈ - 96.72
ಕೋಲ್ಕತಾ - 92.03
ಚೆನ್ನೈ - 93.72
ಬೆಂಗಳೂರು – 94.25

ಇದನ್ನೂ ಓದಿ : Provident Fund: PFಗೆ ಸಂಬಂಧಿಸಿದಂತೆ Modi ಸರ್ಕಾರದ ಮಹತ್ವದ ಘೋಷಣೆ, ನೌಕರಿ ಕಳೆದುಕೊಂಡವರಿಗೆ ಸಿಗಲಿದೆ ಈ ನೆಮ್ಮದಿ

ನಿಮ್ಮ ನಗರದಲ್ಲಿ ಎಷ್ಟಿದೆ  ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನೀವೇ ನೋಡಿ :
ಎಸ್‌ಎಂಎಸ್ (SMS) ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನೂ ನೀವು ತಿಳಿದುಕೊಳ್ಳಬಹುದು. RSP ಎಂದು ಬರೆದು ನಿಮ್ಮ ನಗರದ ಕೋಡ್ ಹಾಕಿ ಅದನ್ನು 9224992249 ಸಂಖ್ಯೆಗೆ ಕಳುಹಿಸಿದರೆ ನಿಮ್ಮ ನಗರದ ಪೆಟ್ರೊಲ್, ಡೀಸೆಲ್  ರೇಟ್ ಎಷ್ಟು ಎನ್ನುವುದು ತಿಳಿಯುತ್ತದೆ. ಪ್ರತಿ ನಗರದ ಕೋಡ್ ಬೇರೆ ಬೇರೆಯಾಗಿದ್ದು, ಇದರ ಮಾಹಿತಿ ಕೂಡಾ ಐಒಸಿ (IOC)  ವೆಬ್‌ಸೈಟ್‌ನಲ್ಲಿ ಸಿಗಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News