Relief To Tax Payers: ತೆರಿಗೆ ಪಾವತಿದಾರರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ, Form-16 ಜಾರಿ ಸೇರಿದಂತೆ ಹಲವು ಯೋಜನೆಗಳ ಗಡುವು ವಿಸ್ತರಣೆ

Relief To Tax Payers: ಕರೋನಾ ಸಾಂಕ್ರಾಮಿಕದ ಎರಡನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರವು ಆದಾಯ ತೆರಿಗೆ (Income Tax) ವಿಭಾಗದಲ್ಲಿ ಶ್ರೀಸಾಮಾನ್ಯರಿಗೆ ಹಲವು ರಿಯಾಯಿತಿಗಳನ್ನು ನೀಡಿದೆ. ಇದರಲ್ಲಿ, 2020-21ರ ಮೌಲ್ಯಮಾಪನ ವರ್ಷಕ್ಕೆ (AY2021) ಟಿಡಿಎಸ್ ರಿಟರ್ನ್ (TDS Return) ಸಲ್ಲಿಸುವ ಗಡುವನ್ನು ವಿಸ್ತರಿಸುವುದರ ಜೊತೆಗೆ ಜೊತೆಗೆ ಹಲವು ಸೌಲಭ್ಯಗಳನ್ನು ನೀಡಿದೆ.

Written by - Nitin Tabib | Last Updated : Jun 28, 2021, 09:34 PM IST
  • ಕರೋನಾ 2ನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಶ್ರೀಸಾಮಾನ್ಯರಿಗೆ ಹಲವು ನೆಮ್ಮದಿಯ ಸುದ್ದಿಗಳನ್ನು ಪ್ರಕಟಿಸಿದೆ.
  • ಕೇಂದ್ರ ಸರ್ಕಾರವು ಆದಾಯ ತೆರಿಗೆ ವಿಭಾಗದಲ್ಲಿ ಜನರಿಗೆ ಅನೇಕ ರಿಯಾಯಿತಿಗಳನ್ನು ನೀಡಿದೆ.
  • ಶಾಶ್ವತ ಖಾತೆ ಸಂಖ್ಯೆ (PAN Number) ಅನ್ನು ಆಧಾರ್‌ನೊಂದಿಗೆ (Aadhaar Number) ಲಿಂಕ್ ಮಾಡುವ ಗಡುವು ವಿಸ್ತರಣೆ.
Relief To Tax Payers: ತೆರಿಗೆ ಪಾವತಿದಾರರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ಕೇಂದ್ರ ಸರ್ಕಾರ, Form-16 ಜಾರಿ  ಸೇರಿದಂತೆ ಹಲವು ಯೋಜನೆಗಳ ಗಡುವು ವಿಸ್ತರಣೆ  title=
Relief To Tax Payers (File Photo)

ನವದೆಹಲಿ: Relief To Tax Payers - ಕರೋನಾ ಸಾಂಕ್ರಾಮಿಕದ ಎರಡನೇ ಅಲೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರದಲ್ಲಿರುವ ನರೇಂದ್ರ ಮೋದಿ ಸರ್ಕಾರ (PM Modi Government) ಶ್ರೀಸಾಮಾನ್ಯರಿಗೆ ಹಲವು ನೆಮ್ಮದಿಯ ಸುದ್ದಿಗಳನ್ನು ಪ್ರಕಟಿಸಿದೆ. ಕೇಂದ್ರ ಸರ್ಕಾರವು ಆದಾಯ ತೆರಿಗೆ ವಿಭಾಗದಲ್ಲಿ ಜನರಿಗೆ ಅನೇಕ ರಿಯಾಯಿತಿಗಳನ್ನು ನೀಡಿದೆ. ಶಾಶ್ವತ ಖಾತೆ ಸಂಖ್ಯೆ (PAN Number) ಅನ್ನು ಆಧಾರ್‌ನೊಂದಿಗೆ (Aadhaar Number) ಲಿಂಕ್ ಮಾಡುವ ಗಡುವನ್ನು ಸರ್ಕಾರ ವಿಸ್ತರಿಸಿದೆ, ಜೊತೆಗೆ ಟಿಡಿಎಸ್ ರಿಟರ್ನ್‌ಗಳಿಗಾಗಿ (TDS Return) ಆದಾಯ ತೆರಿಗೆ ರಿಟರ್ನ್ಸ್ (ITR Filing) ಸಲ್ಲಿಸುವ ಅವಧಿಯನ್ನು ಸಹ ವಿಸ್ತರಿಸಲಾಗಿದೆ. ಇದರ ಜೊತೆಗೆ ಫಾರ್ಮ್ -16 (Form 16) ಜಾರಿ ಮಾಡುವ ಅವಧಿಯನ್ನು ಸಹ ವಿಸ್ತರಿಸಲಾಗಿದೆ (Last Dates Extended). 

ಜುಲೈ 31, 2021ರವರೆಗೆ Form-16 ಜಾರಿ ಮಾಡಬಹುದು
2020-21ರ (AY2021) ಮೌಲ್ಯಮಾಪನ ವರ್ಷಕ್ಕೆ ಟಿಡಿಎಸ್ ರಿಟರ್ನ್ ಫೈಲಿಂಗ್  (TDS Return ಫೈಲಿಂಗ್)ಅವಧಿಯನ್ನು 20 ಜುಲೈ 2021 ರವರೆಗೆ ಕೇಂದ್ರ ಸರ್ಕಾರ  ವಿಸ್ತರಿಸಿದೆ. ಟಿಡಿಎಸ್ ರಿಟರ್ನ್ಗಾಗಿ ಇನ್ನೂ ಐಟಿಆರ್ ಸಲ್ಲಿಸದ ತೆರಿಗೆದಾರರಿಗೆ ಇದು ಪ್ರಯೋಜನ ನೀಡಲಿದೆ. ಇದೇ ವೇಳೆ ಆದಾಯ ತೆರಿಗೆ ಇಲಾಖೆ (Income Tax Department) ಫಾರ್ಮ್ -16 ನೀಡುವ ಅವಧಿಯನ್ನು 2021 ಜುಲೈ 31 ಕ್ಕೆ ವಿಸ್ತರಿಸಿದೆ. ಈ ಮೊದಲು, ಫಾರ್ಮ್ -16 ಜಾರಿ ಮಾಡುವ ಕೊನೆಯ ದಿನಾಂಕವನ್ನು 15 ಜುಲೈ 2021 ಎಂದು ನಿಗದಿಪಡಿಸಲಾಗಿತ್ತು. ಇದಲ್ಲದೆ, ತೆರಿಗೆ ಸಂಬಂಧಿತ ವಿವಾದಗಳನ್ನು ಬಗೆ ಹರಿಸಲು ಪ್ರಾರಂಭಿಸಲಾಗಿರುವ Vivad Se Vishwas (ವಿವಾದದಿಂದ ವಿಶ್ವಾಸ ಯೋಜನೆ) ಯೋಜನೆಯಡಿ ಬಡ್ಡಿ ಇಲ್ಲದೆ ಮರುಪಾವತಿ ಮಾಡುವ ಅವಧಿಯನ್ನು ಇದೀಗ 2021 ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ. ಈ ಯೋಜನೆಯನ್ನು 2020 ರ ಅಕ್ಟೋಬರ್‌ನಲ್ಲಿ ಆರಂಭಿಸಲಾಗಿತ್ತು ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ- 2DG Commercial Launch: Dr.Reddy's Lab ವತಿಯಿಂದ 2-DG ಕೊರೊನಾ ಔಷಧಿಯ ಕಮರ್ಷಿಯಲ್ ಲಾಂಚ್

PAN-AADHAAR ಜೋಡಣೆಯ ಅವಧಿ 3 ತಿಂಗಳಿಗೆ ವಿಸ್ತರಣೆ
ಪ್ಯಾನ್ ಕಾರ್ಡ್ (PAN Card) ಅನ್ನು ಆಧಾರ್ ಕಾರ್ಡ್‌ನೊಂದಿಗೆ (Aadhaar Card) ಜೊತೆಗೆ ಲಿಂಕ್ ಮಾಡುವ ಗಡುವನ್ನು ಸರ್ಕಾರ 30 ಸೆಪ್ಟೆಂಬರ್ 2021 ಕ್ಕೆ ವಿಸ್ತರಿಸಿದೆ. ಇದಕ್ಕೂ ಮೊದಲು, ಪ್ಯಾನ್ ಅನ್ನು ಆಧಾರ್‌ನೊಂದಿಗೆ ಜೋಡಿಸುವ ಅವಧಿಯನ್ನು 30 ಜೂನ್ 2021 ಎಂದು ನಿಗದಿಪಡಿಸಲಾಗಿತ್ತು. ಸೆಪ್ಟೆಂಬರ್ 30 ರೊಳಗೆ ನೀವು ಪ್ಯಾನ್ ಮತ್ತು ಆಧಾರ್ ಅನ್ನು ಲಿಂಕ್ ಮಾಡದಿದ್ದರೆ, ನಿಮ್ಮ ಶಾಶ್ವತ ಖಾತೆ ಸಂಖ್ಯೆ (PAN Number) ನಿಷ್ಕ್ರಿಯಗೊಳ್ಳಲಿದೆ. ನಂತರ ನಿಮಗೆ ಯಾವುದೇ ದೊಡ್ಡ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ. ಇದಲ್ಲದೆ ಕೋವಿಡ್ -19 ಚಿಕಿತ್ಸೆಗಾಗಿ ತಮ್ಮ ಉದ್ಯೋಗದಾತರು, ಸ್ನೇಹಿತರು ಮತ್ತು ಸಂಬಂಧಿಕರಿಂದ ಸಾಲ ಪಡೆದವರು ಆ ಮೊತ್ತಕ್ಕೆ ಯಾವುದೇ ರೀತಿಯ ತೆರಿಗೆ ಪಾವತಿಸಬೇಕಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

ಇದನ್ನೂ ಓದಿ-Agni Prime ಕ್ಷಿಪಣಿಯ ಯಶಸ್ವಿ ಪರೀಕ್ಷೆ, ಮಾರಕ ಕ್ಷಮತೆ 1500KMS

>> ಕೋವಿಡ್‌ನಿಂದಾಗಿ ಕುಟುಂಬದ ಸದಸ್ಯರ ಮರಣದ ನಂತರ ಉದ್ಯೋಗದಾತ ಕಂಪನಿಯಿಂದ ಪಡೆದ ಪರಿಹಾರವು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರಲಿದ್ದು, ಇದಕ್ಕೆ ಯಾವುದೇ ಮಿತಿ ಇರುವುದಿಲ್ಲ.
>> ಸಂಬಂಧಿಕರಿಂದ 10 ಲಕ್ಷ ರೂ.ವರೆಗೆ  ಸಹಾಯವಾಗಿ ಪಡೆದ ಮೊತ್ತಕ್ಕೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.
>> ಮೊದಲ ಬಾರಿಗೆ ಮನೆ ಖರೀದಿಸುವವರಿಗೆ ಹೂಡಿಕೆಯ ಮೇಲೆ ನೀಡಲಾಗುವ ಸ್ಪೆಷಲ್ ಟ್ಯಾಕ್ಸ್ ರಿಲೀಫ್ ದಿನಾಂಕವನ್ನು ವಿಸ್ತರಿಸಲಾಗುವುದು.
>> ವಸತಿ ನಿವಾಸಗಳಿಗೆ ಹೆಚ್ಚುವರಿ 3 ತಿಂಗಳ ತೆರಿಗೆ ವಿನಾಯಿತಿ ಸಿಗಲಿದೆ.

ಇದನ್ನೂ ಓದಿ-ಕೊರೋನಾದಿಂದ ಕುಂಠಿತಗೊಂಡ ವಲಯಗಳಿಗೆ ಕೇಂದ್ರದಿಂದ 1.1 ಲಕ್ಷ ಸಾಲದ ನೆರವು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News