ನವದೆಹಲಿ : UAN ಇದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ನೀಡಿರುವ ಒಂದು ವಿಶಿಷ್ಟ ಗುರುತಿನ ಸಂಖ್ಯೆ.  ಇದು 12 ಅಂಕೆಗಳನ್ನು ಹೊಂದಿದೆ. UAN ಮೂಲಕ EPFO ​​ಚಂದಾದಾರರು ತಮ್ಮ ಭವಿಷ್ಯ ನಿಧಿ ಬ್ಯಾಲೆನ್ಸ್ ಮತ್ತು ಇತರ EPF ವಿವರಗಳನ್ನು ಪರಿಶೀಲಿಸಲು ಬಳಸಬಹುದು. ಇಪಿಎಫ್ ಹಿಂಪಡೆಯಲು,  ಉದ್ಯೋಗದಾತರನ್ನು ಅವಲಂಬಿಸದೆ ಒಂದು ಉದ್ಯೋಗದಾತರಿಂದ ಇನ್ನೊಬ್ಬರಿಗೆ ಪಿಎಫ್ ಖಾತೆಯನ್ನು ವರ್ಗಾಯಿಸಲು ಈ ಸಂಖ್ಯೆಯು ಬಹಳ ಮುಖ್ಯವಾಗಿದೆ. ಬ್ಯಾಲೆನ್ಸ್‌ಗಳನ್ನು ವರ್ಗಾಯಿಸಲು ಮತ್ತು ಹಳೆಯ ಖಾತೆಗಳನ್ನು ರದ್ದುಗೊಳಿಸಲು ಸಹ ಇದನ್ನು ಬಳಸಲಾಗುತ್ತದೆ. EPFO ನ ಆನ್‌ಲೈನ್ ಸೇವೆಗಳನ್ನು ಪಡೆಯಲು, UAN ಅನ್ನು ನೌಕರನ KYC ವಿವರಗಳೊಂದಿಗೆ ಲಿಂಕ್ ಮಾಡಬೇಕು. 


COMMERCIAL BREAK
SCROLL TO CONTINUE READING

ಹಳೆಯ ಖಾತೆಗಳನ್ನು ಮುಚ್ಚಲು ಮತ್ತು ಬಾಕಿ ಮೊತ್ತವನ್ನು ವಿಡ್ರಾ ಮಾಡಲು UAN ಅಗತ್ಯವಿದೆ. ಇಪಿಎಫ್‌ಒ ಆನ್‌ಲೈನ್ ಸೇವೆಗಳನ್ನು ಪಡೆಯಲು, ಉದ್ಯೋಗಿಗಳ ಕೆವೈಸಿ ವಿವರಗಳನ್ನು ಯುಎಎನ್‌ನೊಂದಿಗೆ ಲಿಂಕ್ ಮಾಡಬೇಕು. ಒಂದು ವೇಳೆ, ಯುಎಎನ್ ಅನ್ನು ನೀವು ಮರೆತಿದ್ದರೆ, ಅದನ್ನು ಪಡೆಯಲು ಈ ಕೆಳಗಿನ ಹಂತಗಳನ್ನು ಅನುಸರಿಸಿ..


ಇದನ್ನೂ ಓದಿ  : Good News:Diwali Bonus ಜೊತೆಗೆ ಸಿಗಲಿದೆ 18 ತಿಂಗಳ DA Arrears! ಶೀಘ್ರದಲ್ಲಿಯೇ ಮೋದಿ ಸರ್ಕಾರದ ಘೋಷಣೆ ಸಾಧ್ಯತೆ


-EPFO ಪೋರ್ಟಲ್‌ಗೆ ಹೋಗಿ ಮತ್ತು UAN ಕ್ಲಿಕ್ ಮಾಡಿ
-ಇಪಿಎಫ್ ಖಾತೆಗೆ ಸಂಬಂಧಿಸಿದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ನಂತರ ನೀಡಿರುವ ಕ್ಯಾಪ್ಚಾ ಕೋಡ್ ಅನ್ನು ಹಾಕಿ 
-ಈಗ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ OTPಯನ್ನು ಹಾಕಿ. 
- ಹೆಸರು, ಹುಟ್ಟಿದ ದಿನಾಂಕ ಇತ್ಯಾದಿ ವೈಯಕ್ತಿಕ ವಿವರಗಳನ್ನು ಹಾಕಿ .
- ಕೊನೆಯ ಹಂತದ ಪರಿಶೀಲನೆಗಾಗಿ ಆಧಾರ್ ಸಂಖ್ಯೆ(Aadhaar), ಪ್ಯಾನ್ ಸಂಖ್ಯೆ ಮತ್ತು ಸದಸ್ಯರ ಐಡಿಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ.
-ಶೋ ಮೈ ಯುಎಎನ್ ಕ್ಲಿಕ್ ಮಾಡಿ.
-ನಿಮ್ಮ UAN ಸ್ಕ್ರೀನ್ ಮೇಲೆ ಕಾಣುತ್ತದೆ. 


ನಿಮ್ಮ ಯುಎಎನ್ ನಿಷ್ಕ್ರಿಯವಾಗಿದ್ದರೆ ಅದನ್ನು ಆಕ್ಟಿವ್ ಮಾಡಲು ಈ ನಿಯಮಗಳನ್ನು ಅನುಸರಿಸಿ..
-ಅಧಿಕೃತ EPFO ​​ಸದಸ್ಯ ಪೋರ್ಟಲ್‌ಗೆ ಲಾಗ್ ಇನ್ ಮಾಡಿ
-ಯುಎಎನ್, ಸದಸ್ಯ ಐಡಿ, ಆಧಾರ್ ಅಥವಾ ಪ್ಯಾನ್ ಕಾರ್ಡ್(PAN card) ನಡುವೆ ಆಯ್ಕೆ ಮಾಡಬೇಕು
-ಹೆಸರು, ಜನ್ಮ ದಿನಾಂಕ ಇತ್ಯಾದಿಗಳ ಮೂಲಕ ವೈಯಕ್ತಿಕ ವಿವರಗಳನ್ನು ಸೇರಿಸಲು ಕೇಳಲಾಗುತ್ತದೆ.
-ಕ್ಯಾಪ್ಚಾ ಕೋಡ್ ಹಾಕಿ 
-ಪರಿಶೀಲನೆಗಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ OTP ಯನ್ನು ನಮೂದಿಸಿ.
-OTP ಮೇಲೆ ಕ್ಲಿಕ್ ಮಾಡಿ ಮತ್ತು UAN ಅನ್ನುಆಕ್ಟಿವ್ ಮಾಡಿ 
- ಇಷ್ಟಾದರೆ UAN ಅನ್ನು ಆಕ್ಟಿವ್ ಮಾಡಲಾಗುತ್ತದೆ. ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಗೆ ಪಾಸ್‌ವರ್ಡ್ ಕಳುಹಿಸಲಾಗುತ್ತದೆ.


ಇದನ್ನೂ ಓದಿ  : PM Jan Dhan Yojana: ಕೇವಲ ಒಂದು ಮಿಸ್ಡ್ ಕಾಲ್ ನೀಡಿ ನಿಮ್ಮ ಜನ್ ಧನ್ ಖಾತೆ ಬ್ಯಾಲೆನ್ಸ್ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.