EV New Feature: ಇಲೆಕ್ಟ್ರಿಕ್ ವಾಹನ ಸವಾರರಿಗೊಂದು ಸಂತಸದ ಸುದ್ದಿ, ವಾಹನಗಳಲ್ಲಿ ಬರಲಿದೆ ಈ ಹೊಸ ವ್ಯವಸ್ಥೆ
Electric Vehicle New Feature - ಮುಂಬರುವ ದಿನಗಳಲ್ಲಿ, ಎಲೆಕ್ಟ್ರಿಕ್ ವಾಹನಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಧ್ವನಿ ಎಚ್ಚರಿಕೆ ಕಡ್ಡಾಯವಾಗಿರಲಿದೆ (ಸುರಕ್ಷತೆಗಾಗಿ ಧ್ವನಿ ಎಚ್ಚರಿಕೆ) 20-30kmph ವೇಗದಲ್ಲಿನ ವಾಹನಗಳಲ್ಲಿ ಈ ವಿಶೇಷ ಧ್ವನಿ ಎಚ್ಚರಿಗೆ ವೈಶಿಷ್ಟ್ಯ ಕಡ್ಡಾಯವಾಗಿರಲಿದೆ.
Electric Vehicle Sound Alert Feature - ದೇಶ ಮತ್ತು ವಿದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಸಾಕಷ್ಟು ಹೆಚ್ಚಾಗುತ್ತಿದೆ. ಇದೇ ವೇಳೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಿಂದಾಗಿ ಹಲವು ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಬಯಸುತ್ತಿದ್ದಾರೆ. ಆದರೆ ನಿಮ್ಮ ಸುತ್ತಲೂ ಎಲೆಕ್ಟ್ರಿಕ್ ವಾಹನ ಹಾದುಹೋಗುವ ಶಬ್ದವನ್ನು ನೀವು ಎಂದಾದರೂ ಕೇಳಿದ್ದೀರಾ? ಇಲ್ಲ ಎಂದಾದರೆ ಈ ಸುದ್ದಿಯನ್ನೊಮ್ಮೆ ತಪ್ಪದೆ ಓದಿ. ವಾಸ್ತವದಲ್ಲಿ, ಎಲೆಕ್ಟ್ರಿಕ್ ವಾಹನಗಳು ಕಡಿಮೆ ವೇಗದಲ್ಲಿ ಚಲಿಸುವಾಗ, ಯಾವುದೇ ಶಬ್ದ ಮಾಡುವುದಿಲ. ಇದರಿಂದಾಗಿ ಅಪಘಾತಗಳ ಸಾಧ್ಯತೆ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ವಾಹನಗಳಲ್ಲಿ ಸುರಕ್ಷತೆಯ ವಿಷಯದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
ಮುಂಬರುವ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಧ್ವನಿ ಎಚ್ಚರಿಕೆ ಕಡ್ಡಾಯವಾಗಿರಲಿದೆ (ಸುರಕ್ಷತೆಗಾಗಿ ಧ್ವನಿ ಎಚ್ಚರಿಕೆ) 20-30kmph ವೇಗದಲ್ಲಿ ವಾಹನಗಳಲ್ಲಿ ಈ ವಿಶೇಷ ಧ್ವನಿ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ CMVR-TSC ಅಂತಿಮ ಕರಡು ಪ್ರತಿಯನ್ನು ಅನುಮೋದಿಸಿದೆ. ಈ ಇಲಾಖೆಯು ರಸ್ತೆ ಸಾರಿಗೆ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸಲಿದೆ. ಹೀಗಾಗಿ ಇನ್ಮುಂದೆ ವಾಹನ ತಯಾರಕರು ಎಲೆಕ್ಟ್ರಿಕ್ ವಾಹನಗಳಲ್ಲಿ ಸ್ಪೆಷಲ್ ಸೌಂಡ್ ಎಫೆಕ್ಟ್ ಹಾಕಲು ವ್ಯವಸ್ಥೆ ಮಾಡಬೇಕಾಗಲಿದೆ.
ಇದನ್ನೂ ಓದಿ-Vivo T1x SmartPhone: 12 ಸಾವಿರಕ್ಕಿಂತ ಕಡಿಮೆ ಬೆಲೆಯ ವಿವೋ ಸ್ಮಾರ್ಟ್‌ಫೋನ್ ಬಿಡುಗಡೆ
ಯಾವ ಯಾವ ಬದಲಾವಣೆಗಳನ್ನು ಮಾಡಲಾಗುತ್ತಿದೆ?
>> ವಾಹನ ಕಡಿಮೆ ವೇಗದಲ್ಲಿ ಓಡುವಾಗ ವಿಭಿನ್ನ ಧ್ವನಿ ಹೊಂದಿರಬೇಕು.
>> 20-30 ಕಿಮೀ ವೇಗದಲ್ಲಿ ಚಲಿಸುವ ವಾಹನಗಳಲ್ಲಿ ವಿಶೇಷ ಧ್ವನಿ ಅಗತ್ಯವಿರಲಿದೆ
>> ಧ್ವನಿಯು ಪಾದಚಾರಿಗಳನ್ನು ಎಚ್ಚರಿಸುವಂತಿರಬೇಕು
>> ಈ ಹೊಸ ಸೌಂಡ್ ವೈಶಿಷ್ಟ್ಯಗಳಿಂದ ಜನರು ಅಲರ್ಟ್ ಆಗಿರಲಿದ್ದಾರೆ
ಇದನ್ನೂ ಓದಿ-WhatsAppನಲ್ಲಿ ಈ ಮೆಸೇಜ್ ಬಂದಿದ್ದರೆ ಎಚ್ಚರ.! ಅಕೌಂಟ್ ನಲ್ಲಿದ್ದ ಹಣವೆಲ್ಲಾ ಮಾಯವಾಗುವುದು
ಅಪಘಾತ ಪ್ರಕರಣಗಳಲ್ಲಿ ಹೆಚ್ಚಳ
ವಿದ್ಯುತ್ ಚಾಲಿತ ವಾಹನಗಳು ನಿಧಾನ ವೇಗದಲ್ಲಿ ಚಲಿಸುವಾಗ, ಯಾವುದೇ ಧ್ವನಿ ಕೇಳುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಅಪಘಾತಗಳ ಪ್ರಕರಣಗಳು ಹೆಚ್ಚಾಗುತ್ತಿವೆ. ಅವುಗಳನ್ನು ನಿಯಂತ್ರಣಕ್ಕೆ ತರಲು, ಶೀಘ್ರದಲ್ಲೇ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಲ್ಲಿ ಧ್ವನಿ ವೈಶಿಷ್ಟ್ಯವನ್ನು ಸೇರಿಸಲಿವೆ. ಈ ವೈಶಿಷ್ಟ್ಯವನ್ನು ಸೇರಿಸಿದ ನಂತರ, ಸುತ್ತಲೂ ನಡೆದಾಡುವ ದಾರಿಹೋಕರಿಗೆ ಧ್ವನಿಯಿಂದ ಎಚ್ಚರಿಕೆ ಸಿಗಲಿದೆ. ಏಕೆಂದರೆ ಅತಿವೇಗದಲ್ಲಿ ಕಾರು, ಗಾಳಿ, ಟಯರ್‌ನಿಂದ ಹೊರಡುವ ಸದ್ದು ಇದಕ್ಕೆ ಸಾಕಾಗಲಿದೆ. ಇದರಿಂದ ವಾಹನ ಬರುತ್ತಿದೆ ಎಂದು ಜನರಿಗೆ ಮೊದಲೇ ಗೊತ್ತಾಗುತ್ತದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ