WhatsAppನಲ್ಲಿ ಈ ಮೆಸೇಜ್ ಬಂದಿದ್ದರೆ ಎಚ್ಚರ.! ಅಕೌಂಟ್ ನಲ್ಲಿದ್ದ ಹಣವೆಲ್ಲಾ ಮಾಯವಾಗುವುದು

MTNL ವಾಟ್ಸಾಪ್‌ನಲ್ಲಿ KYC ಪರಿಶೀಲನೆಯನ್ನು ಮಾಡುವುದಿಲ್ಲ ಎಂದು ಪೊಲೀಸರು ಟ್ವಿಟರ್‌ ಮೂಲಕ ಸ್ಪಷ್ಟಪಡಿಸಿದ್ದಾರೆ. ಇಂತಹ ಮೋಸದ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಜನರಿಗೆ ಸಲಹೆ ನೀಡಿದ್ದಾರೆ. 

Written by - Ranjitha R K | Last Updated : Jul 20, 2022, 01:23 PM IST
  • ವಾಟ್ಸ್ ಆಪ್ ನಲ್ಲಿ ಬರುವ ಮೆಸೇಜ್ ಕ್ಲಿಕ್ ಮಾಡಬಾರದು
  • ಈ ಬಗ್ಗೆ ಪೊಲೀಸರು ನೀಡಿದ್ದಾರೆ ಮಾಹಿತಿ
  • ಅಕೌಂಟ್ ಖಾಲಿಯಾಗುವುದು ಎಚ್ಚರ
WhatsAppನಲ್ಲಿ ಈ ಮೆಸೇಜ್ ಬಂದಿದ್ದರೆ ಎಚ್ಚರ.! ಅಕೌಂಟ್ ನಲ್ಲಿದ್ದ ಹಣವೆಲ್ಲಾ ಮಾಯವಾಗುವುದು  title=
online fraud (file photo)

ಬೆಂಗಳೂರು : ಆನ್‌ಲೈನ್ ವಂಚನೆ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಕೆವೈಸಿ ಅಪ್‌ಡೇಟ್ ಮಾಡುವ ಹೆಸರಿನಲ್ಲಿ ಆಗುತ್ತಿರುವ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. MTNL ಹೆಸರು ಮತ್ತು ಲೋಗೋವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಗ್ರಾಹಕರಿಗೆ ವಂಚಿಸಲಾಗುತ್ತಿದೆ.  WhatsAppನಲ್ಲಿ KYC ಅಪ್ಡೇಟ್ ಗಳನ್ನು  ಕೇಳುವ ಸಂದೇಶಗಳಿಗೆ ಬಲಿಯಾಗದಂತೆ ಮೊಬೈಲ್ ಗ್ರಾಹಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ.  

ಪೊಲೀಸರು ನೀಡಿದ ಮಾಹಿತಿ ಏನು ? 
MTNL ವಾಟ್ಸಾಪ್‌ನಲ್ಲಿ KYC ಪರಿಶೀಲನೆಯನ್ನು ಮಾಡುವುದಿಲ್ಲ ಎಂದು ಪೊಲೀಸರು ಟ್ವಿಟರ್‌ ಮೂಲಕ ಸ್ಪಷ್ಟಪಡಿಸಿದ್ದಾರೆ. ಇಂತಹ ಮೋಸದ ಸಂದೇಶಗಳಿಗೆ ಪ್ರತಿಕ್ರಿಯಿಸದಂತೆ ಜನರಿಗೆ ಸಲಹೆ ನೀಡಿದ್ದಾರೆ. ಪ್ರಿಯ ಗ್ರಾಹಕರೇ, ನಿಮ್ಮ MTNL ಸಿಮ್ ಕಾರ್ಡ್, ಆಧಾರ್, ಇ-ಕೆವೈಸಿಯನ್ನು ಅಮಾನತುಗೊಳಿಸಲಾಗಿದೆ. 24 ಗಂಟೆಯೊಳಗೆ ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಆಗುತ್ತದೆ. ಎಂಬ ಮೆಸೇಜ್ ಬಂದರೆ  ಎಚ್ಚರ ವಹಿಸಬೇಕಾಗಿ ತಿಳಿಸಿದ್ದಾರೆ. 

ಇದನ್ನೂ ಓದಿ : 32 ಇಂಚಿನ ಸ್ಮಾರ್ಟ್ ಟಿವಿಯನ್ನು 15,000ಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ

ಯಾವುದೇ ಕಾರಣಕ್ಕೂ ಲಿಂಕ್ ಕ್ಲಿಕ್ ಮಾಡಬಾರದು : 
ಎಂಟಿಎನ್‌ಎಲ್‌ನ ಹೆಸರು ಮತ್ತು ಲೋಗೋ ಬಳಸಿ ಸೈಬರ್ ವಂಚನೆ ಮಾಡಲಾಗುತ್ತಿದೆ. ಈ ಮೂಲಕ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ವಂಚಕರು ಮೊಬೈಲ್ ಗ್ರಾಹಕರಿಗೆ WhatsAppನಲ್ಲಿ KYC ಅನ್ನು ನವೀಕರಿಸಲು ಸಂದೇಶಗಳನ್ನು ಕಳುಹಿಸುತ್ತಿದ್ದು, ಇದೇ ನೆಪದಲ್ಲಿ ರಹಸ್ಯ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ. ಈ ಕಾರಣದಿಂದಾಗಿ ಈ ಸಂದೇಶಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದಂತೆ ಎಚ್ಚರಿಕೆ ನೀಡಲಾಗಿದೆ.  ಅಲ್ಲದೆ ಮೆಸೇಜ್ ಮೂಲಕ ಕಳುಹಿಸಲಾಗುವ ಲಿಂಕ್ ಅನ್ನು ಕ್ಲಿಕ್ ಮಾಡದಂತೆ ಮನವಿ ಮಾಡಲಾಗಿದೆ. 

ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ :
ಅನುಮಾನಾಸ್ಪದ ಆ್ಯಪ್ ಗಳನ್ನು ಡೌನ್‌ಲೋಡ್ ಮಾಡದಂತೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಂತಹ ಯಾವುದೇ ಸೈಬರ್ ಅಪರಾಧ ನಡೆದರೆ ಕೂಡಲೇ ಹತ್ತಿರದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ. 

ಇದನ್ನೂ ಓದಿ : ಅಗ್ಗದ ಬೆಲೆಯಲ್ಲಿ ಬೊಂಬಾಟ್ ಯೋಜನೆ ಪರಿಚಯಿಸಿದ ಜಿಯೋ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News