ನವದೆಹಲಿ : ಸೋಶಿಯಲ್ ಮೀಡಿಯಾ ದೈತ್ಯ ಫೇಸ್ ಬುಕ್ (Facebook) ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ನೀವು ಸಣ್ಣ ಉದ್ಯಮಿಯಾಗಿದ್ದರೆ ಮತ್ತು ನಿಮ್ಮ ವ್ಯಾಪಾರವನ್ನು ಅಭಿವೃದ್ದಿಪಡಿಸಲು ಸಾಲಕ್ಕಾಗಿ ಪರದಾಡುತ್ತಿದ್ದರೆ, ನೀವು ಫೇಸ್‌ಬುಕ್‌ನಿಂದ 50 ಲಕ್ಷದವರೆಗೆ ಸಾಲವನ್ನು (Facebook Loan)ಪಡೆಯಬಹುದು. ಕೇವಲ  5 ದಿನಗಳಲ್ಲಿ ಯಾವುದನ್ನೂ ಗಿರವಿ ಇಡದೆ ನೀವು ಈ ಸಾಲ ಪಡೆಯಬಹುದು. 


COMMERCIAL BREAK
SCROLL TO CONTINUE READING

ಈ ಸಾಲ ಪಡೆಯುವುದು ಹೇಗೆ..?
ಫೇಸ್ ಬುಕ್  (Facebook) ವಿಶ್ವದಲ್ಲಿಯೇ ಮೊದಲ ಸಲ ಭಾರತದಲ್ಲಿ 'ಸ್ಮಾಲ್ ಬ್ಯುಸಿನೆಸ್ ಲೋನ್ ಇನಿಶಿಯೇಟಿವ್' ಯೋಜನೆಯನ್ನು ಘೋಷಿಸಿದೆ. ಈ ಯೋಜನೆಗಾಗಿ ಫೇಸ್‌ಬುಕ್, ಹಣಕಾಸು ಕಂಪನಿ ಇಂಡಿಫೈ  (Indifi) ಜೊತೆ ಪಾಲುದಾರಿಕೆ ಮಾಡಿಕೊಂಡಿದೆ.  ಅಂದರೆ, ಯೋಜನೆಗೆ ಸಾಲವನ್ನು ಇಂಡಿಫೈ  ಕಂಪನಿಯು ನೀಡುತ್ತದೆ.


ಇದನ್ನೂ ಓದಿ : Good News:ತನ್ನ ಗ್ರಾಹಕರಿಗೆ ಸಂತಸದ ಸುದ್ದಿ ಪ್ರಕಟಿಸಿದ SBI, ಕೂಡಲೇ ಈ ಎರಡು ನಂಬರ್ ಮೊಬೈಲ್ ನಲ್ಲಿ ಸೇವ್ ಮಾಡಿ


ಐದೇ ದಿನಗಳಲ್ಲಿ 50 ಲಕ್ಷ ರೂಪಾಯಿ ಸಾಲ :
ಫೇಸ್ಬುಕ್ ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಅಜಿತ್ ಮೋಹನ್ ಪ್ರಕಾರ ಸಣ್ಣ ಉದ್ಯಮಿಗಳ (MSMEs) ಬಂಡವಾಳದ ಅವಶ್ಯಕತೆಗಳನ್ನು  ಈ ಯೋಜನೆ ಪೂರೈಸುತ್ತದೆ. ಇದಕ್ಕೆ ಯಾವುದೇ ಆಸ್ತಿಯನ್ನು ಗಿರವಿ ಇಡುವ ಅಗತ್ಯವೂ ಇರುವುದಿಲ್ಲ.  ಈ ಯೋಜನೆಯನ್ವಯ ಫೇಸ್‌ಬುಕ್‌ನ ವೇದಿಕೆಯಲ್ಲಿ ಜಾಹೀರಾತು ನೀಡುವ ಸಣ್ಣ ಉದ್ಯಮಿಗಳು ಐದು ಲಕ್ಷದಿಂದ 50 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯಲು ಸಾಧ್ಯವಾಗುತ್ತದೆ. ಈ ಸಾಲಕ್ಕೆ 17 ರಿಂದ 20 ಪ್ರತಿಶತ ದರದಲ್ಲಿ ಬಡ್ಡಿ (interest) ಪಾವತಿಸಬೇಕಾಗುತ್ತದೆ. ಇಂಡಿಫೈ ಅರ್ಜಿದಾರರಿಂದ ಸಾಲದ ಅರ್ಜಿಯ ಮೇಲೆ ಯಾವುದೇ ಪ್ರೊಸೆಸಿಂಗ್  ಶುಲ್ಕವನ್ನು (Processing Charge) ವಿಧಿಸುವುದಿಲ್ಲ.


5 ದಿನಗಳಲ್ಲಿ ಸಾಲ ಲಭ್ಯವಾಗುತ್ತದೆ :
ಎಲ್ಲಾ ಅಗತ್ಯ ದಾಖಲೆಗಳನ್ನು ಪಡೆದ 5 ದಿನಗಳಲ್ಲಿ, Indfi ಕಂಪನಿಯು ಅರ್ಜಿದಾರರ ಸಾಲದ ಮೊತ್ತವನ್ನು ಬಿಡುಗಡೆ ಮಾಡುತ್ತದೆ ಎಂದು ಅಜಿತ್ ಮೋಹನ್ ತಿಳಿಸಿದ್ದಾರೆ. ಈ ಸಾಲಕ್ಕಾಗಿ (Facebook Loan), ಉದ್ಯಮಿಗಳು ಯಾವುದೇ ಮೇಲಾಧಾರ ಅಂದರೆ ಆಸ್ತಿ ಗಿರವಿ ಇಡಬೇಕಾದ ಅಗತ್ಯವಿಲ್ಲ. ಮಹಿಳಾ ಉದ್ಯಮಿಗಳಿಗೆ ಬಡ್ಡಿಯಲ್ಲಿ ಶೇ. 0.2 ರಷ್ಟು ರಿಯಾಯಿತಿ ಇದೆ.  ಈ ಕಾರ್ಯಕ್ರಮದಲ್ಲಿ ಫೇಸ್‌ಬುಕ್‌ಗೆ ಯಾವುದೇ ಆದಾಯದ ಪಾಲು ಇಲ್ಲ. ಈ ಯೋಜನೆಯನ್ನು ಇಂಡಿಫೈ ಮೂಲಕ ನಡೆಸಲಾಗುತ್ತದೆ. ಈ ಯೋಜನೆಯನ್ನು ದೇಶದ 200 ನಗರಗಳಿಗೆ ಆರಂಭಿಸಲಾಗಿದೆ.


ಇದನ್ನೂ ಓದಿ : New Pension System : ಈ ಯೋಜನೆಯಲ್ಲಿ ಹೂಡಿಕೆ ಮಾಡಿ ನಿವೃತ್ತಿ ಮೊದಲು ಮಿಲಿಯನೇರ್ ಆಗಿ ನಂತರ ಪ್ರತಿ ತಿಂಗಳು ₹50,000 ಪಿಂಚಣಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ