ನವದೆಹಲಿ: ಹಣ ಗಳಿಕೆಗೆ ಹಲವು ಮಾರ್ಗಗಳಿವೆ. ಜನರು ತಮ್ಮ ಗಳಿಕೆಯಿಂದ ಉಳಿದ ಮೊತ್ತವನ್ನು ಬೇರೆ ಬೇರೆ ಕಡೆ ಹೂಡಿಕೆ ಮಾಡುತ್ತಾರೆ. ಹೂಡಿಕೆ ಮಾಡಲು ಹಲವು ಮಾರ್ಗಗಳಿವೆ. ಎಫ್‌ಡಿ/ಆರ್‌ಡಿ, ಚಿನ್ನ, ಷೇರು ಮಾರುಕಟ್ಟೆ, ಮ್ಯೂಚುಯಲ್ ಫಂಡ್‌ಗಳು ಇತ್ಯಾದಿ. ಎಫ್‌ಡಿ / ಆರ್‌ಡಿ ಮತ್ತು ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಬಂಪರ್ ರಿಟರ್ನ್ಸ್ ಜೊತೆಗೆ ಅಪಾಯವೂ ಇದೆ.


COMMERCIAL BREAK
SCROLL TO CONTINUE READING

ಮ್ಯೂಚುವಲ್ ಫಂಡ್‌ಗಳಲ್ಲಿನ ಹೂಡಿಕೆ ಮತ್ತು ನೇರ ಷೇರು ಮಾರುಕಟ್ಟೆಯ ಹೂಡಿಕೆಯ ನಡುವೆ ದೊಡ್ಡ ವ್ಯತ್ಯಾಸವಿದೆ. ಮ್ಯೂಚುವಲ್ ಫಂಡ್ ಮತ್ತು ಈಕ್ವಿಟಿಗಳ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ ನೋಡಿ.  


ಪರೋಕ್ಷ ಹೂಡಿಕೆ ವಿಧಾನ


‘ಮ್ಯೂಚುವಲ್ ಫಂಡ್ ಅನೇಕ ಷೇರುಗಳನ್ನು ಒಳಗೊಂಡಿರುತ್ತದೆ. ಇವುಗಳಿಂದ ದೊಡ್ಡ ಮೊತ್ತದ ನಿಧಿಯನ್ನು ಸಿದ್ಧಪಡಿಸಲಾಗುತ್ತದೆ. ಇದರ ನಂತರ ನಿಧಿಯನ್ನು ಮ್ಯಾನೇಜರ್ ಮೂಲಕ ನಿರ್ವಹಿಸಲಾಗುತ್ತದೆ. ಆ ವ್ಯವಸ್ಥಾಪಕರ ನಂಬಿಕೆಯ ಮೇಲೆಯೇ ನಾವು ನಮ್ಮ ಹಣ ಹೂಡಿಕೆ ಮಾಡುತ್ತೇವೆ. ಸರಳವಾಗಿ ಹೇಳುವುದಾದರೆ ನಾವು ನಮ್ಮ ಹಣವನ್ನು ಬೇರೆಯವರಿಗೆ ಹೂಡಿಕೆ ಮಾಡಲು ನೀಡುತ್ತಿದ್ದೇವೆ ಎಂದರ್ಥ. ಇಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನು ಪರೋಕ್ಷವಾಗಿ ಮಾಡಲಾಗುತ್ತದೆ. ಅಂದರೆ ನಾವು SIP ಮೂಲಕ ಮಾಡುವ ಹೂಡಿಕೆ ಹಣವನ್ನು ಫಂಡ್ ಮ್ಯಾನೇಜರ್ ಒಬ್ಬರು ವಿವಿಧ ಷೇರುಗಳಲ್ಲಿ ಹೂಡಿಕೆ ಮಾಡಿ ಅದರಿಂದ ಬರುವ ಲಾಭವನ್ನು ನಮಗೆ ಹಂಚಿಕೆ ಮಾಡುತ್ತಾರೆ.  


ಇದನ್ನೂ ಓದಿ: 7th Pay Commission : ಕೇಂದ್ರ ನೌಕರರಿಗೆ ಸಿಹಿ ಸುದ್ದಿ : ನಿಮ್ಮ ಡಿಎ ಹೆಚ್ಚಳಕ್ಕೆ ಡೇಟ್ ಫಿಕ್ಸ್!


ನೇರ ಹೂಡಿಕೆ ವಿಧಾನ


ಮ್ಯೂಚುವಲ್ ಫಂಡ್ ಆಯ್ತು ಇದೀಗ ನಾವು ಈಕ್ವಿಟಿ ಬಗ್ಗೆ ತಿಳಿದುಕೊಳ್ಳೋಣ. ಷೇರು ಮಾರುಕಟ್ಟೆಯ ಬಗ್ಗೆ ಸ್ವಲ್ಪ ಜ್ಞಾನ ಗಳಿಸಿದರೆ, ನೇರ ಈಕ್ವಿಟಿಯಲ್ಲಿ ಹೂಡಿಕೆ ಮಾಡುವ ಮೂಲಕ ನಾವು ಬಂಪರ್ ಲಾಭ ಗಳಿಸಬಹುದು. ಇಲ್ಲಿ ನಿಮಗೆ ಬೇರೊಬ್ಬರ ಸಹಾಯದ ಅಗತ್ಯವಿಲ್ಲ. ನೀವೇ ನಿಮ್ಮ ಸ್ವಂತ ಜ್ಞಾನದ ಮೂಲಕ ಷೇರುಗಳನ್ನು ನಿರ್ವಹಿಸಬಹುದು. ಮ್ಯೂಚುವಲ್ ಫಂಡ್‌ಗಳಂತೆ ಇಲ್ಲಿ ನಿಮಗೆ ಮಧ್ಯವರ್ತಿಗಳ ಅಗತ್ಯ ಬೀಳುವುದಿಲ್ಲ. ನೇರವಾಗಿ ಹೂಡಿಕೆ ಮಾಡಿದರೆ ನಿಮಗೆ ಲಾಭ ಜಾಸ್ತಿ.   


ಯಾವುದು ಬೆಸ್ಟ್..?


ಮ್ಯೂಚುವಲ್ ಫಂಡ್‌ಗಳು ಮತ್ತು ಈಕ್ವಿಟಿಗಳ ಆದಾಯದಲ್ಲೂ ವ್ಯತ್ಯಾಸವಿದೆ. ಮ್ಯೂಚುವಲ್ ಫಂಡ್‌ಗಳು ವರ್ಷಕ್ಕೆ 10-15% ಆದಾಯ ನೀಡುತ್ತವೆ. ಆದರೆ ಅದೇ ಹಣವನ್ನು ನೀವು ನೇರ ಇಕ್ವಿಟಿಯಲ್ಲಿ ದೀರ್ಘಾವಧಿಯವರೆಗೆ ಹೂಡಿಕೆ ಮಾಡಿದರೆ ಬಂಪರ್ ಲಾಭ ಸಿಗುತ್ತದೆ. ಕೆಲವು ಮ್ಯೂಚುವಲ್ ಫಂಡ್‍ಗಳು ನಿಮಗೆ ನೀವು ನಿರೀಕ್ಷಿಸಿದಕ್ಕಿಂತಲೂ ಹೆಚ್ಚಿನ ಲಾಭ ತಂದುಕೊಡುತ್ತವೆ. ಇದು ಮಾರುಕಟ್ಟೆಯ ಫಲಿತಾಂಶವನ್ನು ಅವಲಂಬಿಸಿರುತ್ತದೆ. ಆದರೆ ನೀವು ಸ್ವಲ್ಪ ಷೇರು ಮಾರುಕಟ್ಟೆಯ ಬಗ್ಗೆ ತಿಳಿದುಕೊಂಡು ನೇರವಾಗಿ ಷೇರುಗಳಲ್ಲಿ ಹೂಡಿಕೆ ಮಾಡಿದರೆ ಮ್ಯೂಚುವಲ್ ಫಂಡ್‍ಗಳಿಗಿಂತಲೂ ಹೆಚ್ಚಿನ ಲಾಭ ಸಿಗುತ್ತದೆ.


ಇದನ್ನೂ ಓದಿ: EPFO Update: ಬಿಗ್ ಅಪ್ಡೇಟ್- ಇನ್ಮುಂದೆ ಈ ಜನರಿಗೂ ಕೂಡ ಸಿಗಲಿದೆ ಪೆನ್ಷನ್ ಲಾಭ!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.