Indian Railways: ಕೋಟ್ಯಾಂತರ ರೈಲು ಯಾತ್ರಿಗಳಿಗೊಂದು ಭಾರಿ ಸಂತಸದ ಸುದ್ದಿ

Indian Railways Free Meal Policy: ಹಲವು ಬಾರಿ ರೈಲಿನಲ್ಲಿ ಯಾತ್ರಿಗಳಿಗೆ ಉಚಿತ ಊಟ ಸಿಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ಅದಕ್ಕಾಗಿ ಯಾವುದೇ ರೀತಿಯ ಹಣ ಖರ್ಚು ಮಾಡಬೇಕಾಗಿಲ್ಲ. ಹಾಗಾದರೆ ಬನ್ನಿ ಭಾರತೀಯ ರೇಲ್ವೆ ಒದಗಿಸುವ ಈ ಸೇವೆಯ ಕುರಿತು ತಿಳಿದುಕೊಳ್ಳೋಣ,  

Written by - Nitin Tabib | Last Updated : Sep 11, 2022, 12:18 PM IST
  • ನೀವು ರೈಲಿನಲ್ಲಿ ಪ್ರಯಾಣಿಸಲು ಹೊರಟಿದ್ದರೆ,
  • IRCTC ಕಡೆಯಿಂದ ನೀವು ಉಚಿತ ಆಹಾರ, ತಂಪು ಪಾನೀಯಗಳು ಮತ್ತು ನೀರನ್ನು ಪಡೆದುಕೊಳ್ಳಬಹುದು.
  • ಅದಕ್ಕಾಗಿ ನೀವು ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ,
Indian Railways: ಕೋಟ್ಯಾಂತರ ರೈಲು ಯಾತ್ರಿಗಳಿಗೊಂದು ಭಾರಿ ಸಂತಸದ ಸುದ್ದಿ title=
IRCTC Free Food Facility

Indian Railways News: ರೈಲಿನಲ್ಲಿ ಪ್ರಯಾಣಿಸುವ ಕೋಟ್ಯಂತರ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದು ಪ್ರಕಟವಾಗಿದೆ. ನೀವೂ ಈಗ ರೈಲಿನಲ್ಲಿ ಪ್ರಯಾಣಿಸಿದರೆ, ನೀವು ಉಚಿತ ಆಹಾರವನ್ನು ಪಡೆಯಬಹುದು. ಹೌದು... ಇನ್ನು ಮುಂದೆ ನೀವು ರೈಲಿನಲ್ಲಿ ಪ್ರಯಾಣಿಸಿದರೆ ಆಹಾರಕ್ಕಾಗಿ ಹಣ ನೀಡಬೇಕಾಗಿಲ್ಲ. ರೈಲ್ವೇಯಿಂದ ಪ್ರಯಾಣಿಕರಿಗೆ ಹಲವು ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ, ಆದರೆ, ಕೆಲವೊಮ್ಮೆ ನಮಗೆ ಆ  ಸೌಲಭ್ಯಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ, ಹೀಗಾಗಿ, ನಾವು ಅದರ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ .

ಯಾವ ಸಂದರ್ಭದಲ್ಲಿ ನೀವು ಉಚಿತ ಆಹಾರವನ್ನು ಪಡೆಯಬಹುದು?
ಉಚಿತ ಆಹಾರ, ನೀರು ಮತ್ತು ತಂಪು ಪಾನೀಯಗಳು ಸೌಲಭ್ಯ

ನೀವು ರೈಲಿನಲ್ಲಿ ಪ್ರಯಾಣಿಸಲು ಹೊರಟಿದ್ದರೆ, IRCTC ಕಡೆಯಿಂದ ನೀವು ಉಚಿತ ಆಹಾರ, ತಂಪು ಪಾನೀಯಗಳು ಮತ್ತು ನೀರನ್ನು ಪಡೆದುಕೊಳ್ಳಬಹುದು. ಅದಕ್ಕಾಗಿ ನೀವು ಯಾವುದೇ ರೀತಿಯ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಿಲ್ಲ, ಆದರೆ, ನಿಮ್ಮ ರೈಲು ನಿಗದಿತ ಅವಧಿಯಲ್ಲಿ ನಿಲ್ದಾಣ ತಲುಪದೇ ಹೋದಲ್ಲಿ ಅಥವಾ ತಡವಾಗಿ ಸಂಚರಿಸುತ್ತದೆ ಎಂದರೆ IRCTC ವತಿಯಿಂದ ನಿಮಗೆ ಈ ಆಹಾರವನ್ನು ನಿಮಗೆ ಸಂಪೂರ್ಣವಾಗಿ ಉಚಿತವಾಗಿ ನೀಡಲಾಗುತ್ತದೆ.

ನೀವು ಉಚಿತ ಸೌಲಭ್ಯವನ್ನು ಆನಂದಿಸಬಹುದು
ಈ ಸಂದರ್ಭದಲ್ಲಿ, ನೀವು ಯಾವುದೇ ರೀತಿಯ ಯೋಚನೆ ಮಾಡುವ ಅವಶ್ಯಕತೆ ಇಲ್ಲ. ರೈಲ್ವೆಯ ಇಂತಹ ಸೌಲಭ್ಯಗಳನ್ನು ನೀವು ಸುಲಭವಾಗಿ ಪಡೆದುಕೊಳ್ಳಬಹುದು ಮತ್ತು ಅದು ನಿಮ್ಮ ಹಕ್ಕಾಗಿದೆ. ಭಾರತೀಯ ರೈಲ್ವೇಯ ನಿಯಮಗಳ ಪ್ರಕಾರ, ರೈಲು ತಡವಾಗಿ ಬಂದಾಗ ಪ್ರಯಾಣಿಕರಿಗೆ IRCTC ಯ ಅಡುಗೆ ನೀತಿಯ ಅಡಿಯಲ್ಲಿ ಉಪಹಾರ ಮತ್ತು ಲಘು ಊಟವನ್ನು ನೀಡಲಾಗುತ್ತದೆ.

ಇದನ್ನೂ ಓದಿ-Amazon Great Indian Festival: ಸ್ಮಾರ್ಟ್‌ಫೋನ್‌ ಮತ್ತು ಐಫೋನ್ ಮೇಲೆ ಭರ್ಜರಿ ರಿಯಾಯಿತಿ

ಈ ಸೌಲಭ್ಯ ಯಾವಾಗ ದೊರೆಯುತ್ತದೆ?
IRCTC ನಿಯಮಗಳ ಪ್ರಕಾರ, ಪ್ರಯಾಣಿಕರಿಗೆ ಉಚಿತ ಊಟದ ಸೌಲಭ್ಯವನ್ನು ನೀಡಲಾಗುತ್ತದೆ. ಈಗ ಈ ಸೌಲಭ್ಯ ನಿಮಗೆ ಯಾವಾಗ ಸಿಗುತ್ತದೆ ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ. ನಿಮ್ಮ ರೈಲು 2 ಗಂಟೆ ಅಥವಾ ಅದಕ್ಕಿಂತ ಹೆಚ್ಚು ತಡವಾದಾಗ. ಎಕ್ಸ್‌ಪ್ರೆಸ್ ರೈಲಿನ ಪ್ರಯಾಣಿಕರಿಗೆ ಈ ಸೌಲಭ್ಯವನ್ನು ನೀಡಲಾಗುತ್ತದೆ. ಅಂದರೆ, ಶತಾಬ್ದಿ, ರಾಜಧಾನಿ ಮತ್ತು ದುರಾಂತೋ ಮುಂತಾದ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಈ ಸುದ್ದಿ ತುಂಬಾ ಉಪಯುಕ್ತ ಸಾಬೀತಾಗಲಿದೆ.

ಇದನ್ನೂ ಓದಿ-Vegetable Price: ಮತ್ತೆ ಏರಿಕೆಯಾಯ್ತೇ ತರಕಾರಿ ಬೆಲೆ? ಹೀಗಿದೆ ನೋಡಿ ಇಂದಿನ ದರ ವಿವರ

ಬೆಳಗಿನ ಉಪಾಹಾರಕ್ಕಾಗಿ ರೈಲಿನಲ್ಲಿ ಏನು ಲಭ್ಯವಿದೆ?
ಇದರೊಂದಿಗೆ ರೈಲಿನಲ್ಲಿ ತಿಂಡಿಗೆ ಚಹಾ-ಕಾಫಿ ಮತ್ತು ಬಿಸ್ಕತ್ತು ಕೂಡ ಸಿಗುತ್ತದೆ. ಸಂಜೆಯ ತಿಂಡಿ ಕುರಿತು ಹೇಳುವುದಾದರೆ, ಚಹಾ ಅಥವಾ ಕಾಫಿ ಮತ್ತು ನಾಲ್ಕು ಬ್ರೆಡ್ ಸ್ಲೈಸ್‌ಗಳ ಬಗ್ಗೆ (ಕಂದು/ಬಿಳಿ), ಬೆಣ್ಣೆ ಚಿಪಾಟ್ಲ್ ನೀಡಲಾಗುತ್ತದೆ. ಇದಲ್ಲದೇ ಮಧ್ಯಾಹ್ನದ ವೇಳೆ ಪ್ರಯಾಣಿಕರಿಗೆ ರೊಟ್ಟಿ, ಬೇಳೆಕಾಳು, ತರಕಾರಿ ಇತ್ಯಾದಿ ಉಚಿತವಾಗಿ ದೊರೆಯುತ್ತದೆ. ಕೆಲವೊಮ್ಮೆ ಇದರಲ್ಲಿ ಪೂರಿ ಕೂಡ ನೀಡಲಾಗುತ್ತದೆ. ನಿಮ್ಮ ರೈಲು 2 ಗಂಟೆ ತಡವಾಗಿ ಓಡುತ್ತಿದ್ದರೆ, 2 ಗಂಟೆಗಳಿಗಿಂತ ಹೆಚ್ಚು ತಡವಾದರೆ ನಿಯಮಗಳ ಪ್ರಕಾರ ನೀವು ಈ ಆಹಾರವನ್ನು ಉಚಿತವಾಗಿ ಆರ್ಡರ್ ಮಾಡಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News