Amazon Great Indian Festival: ಸ್ಮಾರ್ಟ್‌ಫೋನ್‌ ಮತ್ತು ಐಫೋನ್ ಮೇಲೆ ಭರ್ಜರಿ ರಿಯಾಯಿತಿ

ಅಮೆಜಾನ್ ಭಾರತದಲ್ಲಿ ಶೀಘ್ರವೇ ಹಬ್ಬದ ಮಾರಾಟ ಪ್ರಾರಂಭಿಸಲಿದೆ. ಇಲ್ಲಿ ನೀವು ಎಲ್ಲಾ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿ ಸಿಗಲಿದೆ. ಸ್ಮಾರ್ಟ್‍ಫೋನ್ ಮತ್ತು ಐಫೋನ್‍ಗಳ ಮೇಲೆ ದೊಡ್ಡ ಡಿಸ್ಕೌಂಟ್ ಸಿಗಲಿದೆ.   

Written by - Puttaraj K Alur | Last Updated : Sep 11, 2022, 10:41 AM IST
  • ಸೆಪ್ಟೆಂಬರ್ 23ರಿಂದ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಪ್ರಾರಂಭವಾಗಲಿದೆ
  • ಈ ಮಾರಾಟದಲ್ಲಿ ಎಲ್ಲಾ ಉತ್ಪನ್ನಗಳ ಮೇಲೆ ನಿಮಗೆ ಭರ್ಜರಿ ರಿಯಾಯಿತಿಗಳು ಸಿಗಲಿದೆ
  • ಸ್ಮಾರ್ಟ್‍ಫೋನ್ ಮತ್ತು ಐಫೋನ್‍ಗಳ ಮೇಲೆ ಗ್ರಾಹಕರಿಗೆ ದೊಡ್ಡ ಡಿಸ್ಕೌಂಟ್ ಸಿಗಲಿದೆ
Amazon Great Indian Festival: ಸ್ಮಾರ್ಟ್‌ಫೋನ್‌ ಮತ್ತು ಐಫೋನ್ ಮೇಲೆ ಭರ್ಜರಿ ರಿಯಾಯಿತಿ title=
ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್

ನವದೆಹಲಿ: ಶೀಘ್ರವೇ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಶುರುವಾಗಲಿದೆ. ಇದು ಹಬ್ಬದ ಋತುವಿನಲ್ಲಿ ಭಾರತೀಯರ ಖುಷಿಯನ್ನು ದುಪ್ಪಟ್ಟು ಮಾಡಲಿದೆ. ಈ ಮಾರಾಟದಲ್ಲಿ ಎಲ್ಲಾ ಉತ್ಪನ್ನಗಳ ಮೇಲೆ ಭರ್ಜರಿ ರಿಯಾಯಿತಿಗಳು ನಿಮಗೆ ಸಿಗಲಿದೆ. ನೀವು ಸಹ ರಿಯಾಯಿತಿಯ ಲಾಭ ಪಡೆಯಲು ಬಯಸಿದರೆ ಇದುವೇ ನಿಮಗೆ ಸುವರ್ಣಾವಕಾಶ.

ಈ ಸೆಲ್‌ನಲ್ಲಿ ಗೃಹೋಪಯೋಗಿ ಉಪಕರಣಗಳಿಂದ ಹಿಡಿದು ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ ನೀಡಲಾಗುತ್ತಿದೆ. ನೀವು ಊಹಿಸಲೂ ಸಾಧ್ಯವಿಲ್ಲದಷ್ಟು ಡಿಸ್ಕೌಂಟ್ ಇಲ್ಲಿ ದೊರೆಯಲಿದೆ. ಈ ಸೇಲ್‌ನಲ್ಲಿ ಶಾಪಿಂಗ್ ಮಾಡುವ ಮೂಲಕ ನೀವು ದೊಡ್ಡ ಉಳಿತಾಯ ಮಾಡಬಹುದು. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: Post Office ಈ ಯೋಜನೆಯಲ್ಲಿ 250 ಹೂಡಿಕೆ ಮಾಡಿ ಭರ್ಜರಿ ಲಾಭ ಪಡೆಯಿರಿ!

ಅಮೆಜಾನ್ ಸೇಲ್ ಈ ದಿನ ಆರಂಭವಾಗಲಿದೆ

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಇದೇ ಸೆಪ್ಟೆಂಬರ್ 23ರಿಂದ ಪ್ರಾರಂಭವಾಗಲಿದೆ. ಪ್ರತಿಯೊಂದು ಉತ್ಪನ್ನಗಳ ಮೇಲೆ ನಿಮಗೆ ರಿಯಾಯಿತಿ ದೊರೆಯಲಿದೆ. ಆಯ್ದ ಉತ್ಪನ್ನಗಳ ಮೇಲೆ ಮಾತ್ರ ರಿಯಾಯಿತಿ ಸಿಗುತ್ತದೆ ಅಂತಾ ಯೋಚಿಸಲೇಬೇಡಿ. ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಹೋಮ್ ಮತ್ತು ಕಿಚನ್ ಉಪಕರಣಗಳು, ಸ್ಮಾರ್ಟ್ ಟಿವಿಗಳಂತಹ ಉತ್ಪನ್ನಗಳ ಮೇಲೆ ದೊಡ್ಡ ರಿಯಾಯಿತಿ ನೀಡಲಾಗುತ್ತಿದೆ ಮತ್ತು ಗ್ರಾಹಕರು ತಮ್ಮ ಖರೀದಿಯಲ್ಲಿ ಬಹಳಷ್ಟು ಉಳಿಸಬಹುದು.

ಈ ಗ್ರಾಹಕರಿಗೆ ಹೆಚ್ಚಿನ ಕೊಡುಗೆ 

ಅಮೆಜಾನ್‌ನ ಮುಂಬರುವ ಮಾರಾಟದಲ್ಲಿ SBI ಕಾರ್ಡ್‌ಗಳು ಮತ್ತು EMI ವಹಿವಾಟುಗಳ ಮೇಲೆ ಶೇ.10ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಗ್ರಾಹಕರು ಉತ್ಪನ್ನಗಳನ್ನು ಖರೀದಿಸಿದರೆ ಹೆಚ್ಚಿನ ಉಳಿತಾಯ ಮಾಡಬಹುದು.

ಇದನ್ನೂ ಓದಿ: UPI payments : UPI ಹಣ ಪಾವತಿ ಮಾಡುವ ಮುನ್ನ ನೆನಪಿರಲಿ 5 ವಿಷಯಗಳು!

ಐಫೋನ್-ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ 

ಈ ಸೆಲ್‌ನಲ್ಲಿ iPhone 13 ಸೇರಿದಂತೆ iQOO 9Tನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇತರ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಹೇಳುವುದಾದರೆ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ. ಮಾರಾಟದಲ್ಲಿ ಪ್ರತಿ ಬಜೆಟ್ ಶ್ರೇಣಿಯ ಗ್ರಾಹಕರನ್ನು ಮೆಚ್ಚಿಸಲು ಅಮೆಜಾನ್ ಕಂಪನಿಯು ಮನಸ್ಸು ಮಾಡಿದೆ. ಹೀಗಾಗಿ ನಿಮಗೆ ದೊಡ್ಡ ದೊಡ್ಡ ರಿಯಾಯತಿಗಳು ದೊರೆಯಲಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News