ನವದೆಹಲಿ : ವೋಕ್ಸ್‌ವ್ಯಾಗನ್‌ ಗ್ರೂಪ್  (Volkswagen Group) ವಿಶ್ವಾದ್ಯಂತ ಮಾರಾಟವಾದ 1 ಲಕ್ಷಕ್ಕೂ ಹೆಚ್ಚು ಪ್ಲಗ್-ಇನ್ ಹೈಬ್ರಿಡ್ ಕಾರುಗಳನ್ನು ಹಿಂಪಡೆದಿದೆ.  ಬೆಂಕಿ ಹೊತ್ತಿಕೊಳ್ಳುವ ಅಪಾಯದ ಹಿನ್ನೆಲೆಯಲ್ಲಿ ಈ ಕಾರುಗಳನ್ನು ವಾಪಸ್ ಕರೆಸಿಕೊಳ್ಳಲಾಗಿದೆ.  ವೋಕ್ಸ್‌ವ್ಯಾಗನ್‌ ಪ್ಯಾಸ್ಸಾಟ್, ಗಾಲ್ಫ್, ಟಿಗುನ್ ಮತ್ತು ಆರ್ಟಿಯಾನ್‌ನ ಸುಮಾರು 42,300 ಗ್ರಾಹಕರನ್ನು ಸಂಪರ್ಕಿಸಲಾಗುತ್ತಿದೆ. ಜೊತೆಗೆ ವೋಕ್ಸ್‌ವ್ಯಾಗನ್‌ನ ಅಂಗಸಂಸ್ಥೆ ಬ್ರಾಂಡ್ ಆಡಿಯ ಸುಮಾರು 24,400 ಕಾರುಗಳನ್ನು ಹಿಂಪಡೆಯಲಾಗಿದೆ ಎಂದು ಕಂಪನಿ ತಿಳಿಸಿದೆ. ಸ್ಕೋಡಾ ಮತ್ತು Seat ವಾಹನಗಳು ಸಹ ಈ ಹಿಂಪಡೆಯುವಿಕೆಯ ವ್ಯಾಪ್ತಿಗೆ ಬಂದಿವೆ.


COMMERCIAL BREAK
SCROLL TO CONTINUE READING

ರಿಕಾಲ್ ಬಗ್ಗೆ ಏನೆನ್ನುತ್ತದೆ ವೋಕ್ಸ್‌ವ್ಯಾಗನ್‌ : 
ವೋಕ್ಸ್‌ವ್ಯಾಗನ್‌ ಪ್ರಕಾರ,  Internal Combustion Engine  ಅನ್ನು ವಿದ್ಯುತ್ ಡ್ರೈವ್‌ಗೆ ಸಂಪರ್ಕಿಸುವ ತಂತ್ರಜ್ಞಾನದಲ್ಲಿನ ದೋಷದಿಂದಾಗಿ  ಶಾರ್ಟ್ ಸರ್ಕ್ಯೂಟ್ (Short Circuit) ಸಂಭವಿಸಬಹುದು ಎನ್ನಲಾಗಿದೆ.  ಈ ಕಾರಣದಿಂದಾಗಿ,  ಸುಮಾರು 1 ಲಕ್ಷ ವಾಹನಗಳನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. “ಇಂಧನ ಚಾಲಿತ ಎಂಜಿನ್ ಮತ್ತು ಎಲೆಕ್ಟ್ರಿಕ್ ಡ್ರೈವ್ ಅನ್ನು ಸಂಪರ್ಕಿಸುವ ತಂತ್ರಜ್ಞಾನದಲ್ಲಿ ಕೆಲವು ಸಮಸ್ಯೆಗಳಿವೆ. ಈ ಕಾರಣದಿಂದಾಗಿ, ಇನ್ಸುಲೇಟೆಡ್ ಹೈ ವೋಲ್ಟೇಜ್ ಬ್ಯಾಟರಿ ಕಾರನ್ನು ಶಾರ್ಟ್ ಸರ್ಕ್ಯೂಟ್ ಗೆ ಈಡು ಮಾಡಬಹುದು.  ಇದು ಕಾರಿನಲ್ಲಿ ಬೆಂಕಿ (Car Fire) ಹೊತ್ತಿಕೊಳ್ಳುವ ಕಾಣಿಸಿಕೊಳ್ಳುವ ಅಪಾಯವನ್ನು ಸೃಷ್ಟಿಸುತ್ತದೆ ಎಂದು  ವೋಕ್ಸ್‌ವ್ಯಾಗನ್‌ ವಕ್ತಾರರು,  ತಿಳಿಸಿದ್ದಾರೆ. 


ಇದನ್ನೂ ಓದಿ : PAN Card ಸಕ್ರಿಯವಾಗಿದೆಯೇ ಅಥವಾ ಇಲ್ಲವೇ ಎಂದು ತಿಳಿಯುವುದು ಹೇಗೆ


ಜರ್ಮನಿಯಲ್ಲಿ ವರದಿಯಾಗಿವೆ 16 ಪ್ರಕರಣಗಳು :
"ಎಂಜಿನ್ ವಿನ್ಯಾಸದ ಕವರ್ ಅನ್ನು ಸರಿಯಾಗಿ ಪ್ಯಾಕ್ ಮಾಡದಿರಬಹುದು. ಇದು ಬಿಸಿ ಗಾಳಿಗೆ ಒಡ್ಡಿಕೊಂಡಾಗ ಕಾರಿಗೆ ಬೆಂಕಿ ತಗುಲಬಹುದು ಎನ್ನಲಾಗಿದೆ. ಜರ್ಮನಿಯಲ್ಲಿ ಇಂತಹ 16 ಪ್ರಕರಣಗಳು ವರದಿಯಾಗಿವೆ ಎಂದು ಇಲ್ಲಿನ ಪತ್ರಿಕೆಯಲ್ಲಿ ತಿಳಿಸಲಾಗಿದೆ (Car Fire). ವೋಕ್ಸ್‌ವ್ಯಾಗನ್‌  ಗ್ರೂಪ್ ಕಾರುಗಳ ಹೊರತಾಗಿ ಆಡಿ, Seat ಮತ್ತು ಸ್ಕೋಡಾ ಕಾರುಗಳ ಮೇಲೆ ವಾಪಸ್ ಕರೆಸಿಕೊಳ್ಳುವ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ.


ವೋ​ಕ್ಸ್‌ವ್ಯಾಗನ್ ವರ್ಟಸ್ ಬುಕ್ಕಿಂಗ್‌ಗಳು ಪ್ರಾರಂಭ :
ಭಾರತೀಯ ಮಾರುಕಟ್ಟೆಯ ಬಗ್ಗೆ ಮಾತನಾಡುವುದಾದರೆ, ಕಂಪನಿಯು ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ತನ್ನ ಅನೇಕ ಹೊಸ ವಾಹನಗಳನ್ನು ನಿರಂತರವಾಗಿ ಬಿಡುಗಡೆ ಮಾಡಿದೆ. ಕಂಪನಿಯ ಮುಂಬರುವ ಕಾರು ವೋಕ್ಸ್‌ವ್ಯಾಗನ್ ವರ್ಟಸ್ ಆಗಿದ್ದು, ಇದರ ಪ್ರಿ -ಬುಕಿಂಗ್ (car Pre Booking) ಅನ್ನು ಭಾರತದಲ್ಲಿ ಪ್ರಾರಂಭಿಸಲಾಗಿದೆ. ಇದಕ್ಕಾಗಿ ಗ್ರಾಹಕರು 11,000  ರೂ. ಟೋಕನ್ ಮೊತ್ತ ಪಾವತಿಸಿ  ಬುಕ್ ಮಾಡಿಕೊಳ್ಳಬಹುದು. ಕಂಪನಿಯು ಈ ಕಾರಿನ ಉತ್ಪಾದನೆಯನ್ನು ಭಾರತದಲ್ಲಿಯೂ ಪ್ರಾರಂಭಿಸಿದೆ.


ಇದನ್ನೂ ಓದಿ : PAN-Aadhaar Link: ಪ್ಯಾನ್-ಆಧಾರ್ ಲಿಂಕ್ ಗಡುವು ವಿಸ್ತರಣೆ, ಆದರೆ ಫ್ರೀ ಅಲ್ಲ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.