Fitch Ratings: 2023-24 ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಮುನ್ಸೂಚನೆಯನ್ನು ಮತ್ತೊಮ್ಮೆ ಅಂದಾಜಿಸಿದ ಫೀಚ್
Fitch Ratings 2023-24: ಕಳೆದ ಆರ್ಥಿಕ ವರ್ಷ ಅಂದರೆ 2022-23ರಲ್ಲಿ ಭಾರತದ ಜಿಡಿಪಿ ಶೇ.7.2 ರಷ್ಟಿತ್ತು ಮತ್ತು ಅದು ವ್ಯಕ್ತವಾದ ಎಲ್ಲಾ ಅಂದಾಜಿಗಿಂತಲೂ ಕೂಡ ಉತ್ತಮವಾಗಿತ್ತು. ಈ ಅಂಕಿ-ಅಂಶಗಳ ಘೋಷಣೆಯ ಬಳಿಕ 2023-24ರಲ್ಲಿ ಭಾರತದ ಆರ್ಥಿಕತೆಯು ತ್ವರಿತ ಗತಿಯಲ್ಲಿ ಅಭಿವೃದ್ಧಿ ಹೊಂದುವ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗುತ್ತಿದೆ.
India's GDP Prediction By Fitch 2023: ಅಂತರಾಷ್ಟ್ರೀಯ ರೇಟಿಂಗ್ ಏಜೆನ್ಸಿ ಫಿಚ್ ರೇಟಿಂಗ್ಸ್ 2023-24 ರ ಆರ್ಥಿಕ ವರ್ಷಕ್ಕೆ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಹೆಚ್ಚಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 6.3 ರ ದರದಲ್ಲಿ ಬೆಳೆಯಲಿದೆ ಎಂದು ಫಿಚ್ ಹೇಳಿದೆ. ಈ ಹಿಂದೆ ಫಿಚ್ ಇದನ್ನೂ ಶೇ.6 ರಷ್ಟಿರಲಿದೆ ಎಂದು ಅಂದಾಜಿಸಿತ್ತು. ಭಾರತೀಯ ಆರ್ಥಿಕತೆಯ ಉತ್ತಮ ದೃಷ್ಟಿಕೋನ ಮತ್ತು ಮೊದಲ ತ್ರೈಮಾಸಿಕದಲ್ಲಿ ಉತ್ತಮ ಬೆಳವಣಿಗೆಯ ದರದ ಮುನ್ಸೂಚನೆಯಿಂದಾಗಿ, ಫಿಚ್ ತನ್ನ ರೇಟಿಂಗ್ ಮುನ್ಸೂಚನೆಯನ್ನು ಸುಧಾರಿಸಿದೆ.
31 ಮೇ 2023 ರಂದು ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಅಂಕಿಅಂಶಗಳ ಸಚಿವಾಲಯವು 2022-23 ರ ಆರ್ಥಿಕ ವರ್ಷದಲ್ಲಿ ಭಾರತದ GDP ಶೇಕಡಾ 7.2 ರಷ್ಟಿತ್ತು ಎಂದು ಹೇಳಿದೆ, ಇದು ನಿರೀಕ್ಷೆಗಿಂತ ಉತ್ತಮವಾಗಿದೆ ಎಂದು ಸಚಿವಾಲಯ ಹೇಳಿತ್ತು. ಈ ಅಂಕಿ ಅಂಶಗಳು ಪ್ರಕಟಗೊಂಡ ಬಳಿಕ, ಅರ್ಥಶಾಸ್ತ್ರಜ್ಞರಿಂದ ಹಿಡಿದು ಏಜೆನ್ಸಿಗಳವರೆಗೆ 2023-24ರಲ್ಲಿ ಭಾರತದ ಆರ್ಥಿಕತೆಯ ವೇಗದ ಬೆಳವಣಿಗೆಯನ್ನು ಅಂದಾಜಿಸುತ್ತಿದ್ದಾರೆ. ಈ ಹಿಂದೆ ಮಾರ್ಚ್ 2023 ರಲ್ಲಿ, ಪ್ರಸಕ್ತ ಹಣಕಾಸು ವರ್ಷದ ಬೆಳವಣಿಗೆಯ ತನ್ನ ಮುನ್ಸೂಚನೆಯನ್ನು ಫೀಚ್ ಶೇಕಡಾ 6.2 ರಿಂದ ಶೇಕಡಾ 6 ಕ್ಕೆ ಇಳಿಸಿತ್ತು. ಭಾರತೀಯ ಆರ್ಥಿಕತೆಯು ಅಧಿಕ ಹಣದುಬ್ಬರ, ಹೆಚ್ಚಿನ ಬಡ್ಡಿದರ ಮತ್ತು ಜಾಗತಿಕ ಬೇಡಿಕೆಯ ಕೊರತೆಯ ಭಾರವನ್ನು ಭರಿಸಬೇಕಾಗುತ್ತದೆ ಎಂದು ಫಿಚ್ ತನ್ನ ಮುನ್ಸೂಚನೆಯಲ್ಲಿ ಹೇಳಿತ್ತು.
ಇದನ್ನೂ ಓದಿ-Air India Deal: ಇಂಡಿಗೊ ಬಳಿಕ 470 ವಿಮಾನಗಳ ಖರೀದಿಗಾಗಿ ಬೋಯಿಂಗ್-ಏರ್ ಬಸ್ ಜೊತೆಗೆ ಒಪ್ಪಂದ ಮಾಡಿಕೊಂಡ ಏರ್ ಇಂಡಿಯಾ
ಆದರೆ ಮಾರ್ಚ್‌ನಿಂದ ಪರಿಸ್ಥಿತಿ ಬದಲಾಗುತ್ತಿದೆ. ಕಳೆದ ಎರಡು ಹಣಕಾಸು ನೀತಿ ಸಭೆಗಳಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ನೀತಿ ದರಗಳಲ್ಲಿ ಅಂದರೆ ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ, ಏಪ್ರಿಲ್ ಮತ್ತು ಮೇನಲ್ಲಿ ಚಿಲ್ಲರೆ ಹಣದುಬ್ಬರ ದರದಲ್ಲಿ ಇಳಿಕೆ ಕಂಡುಬಂದಿದೆ ಮತ್ತು ಮೇ ತಿಂಗಳಲ್ಲಿ ಅದು 4.25 ಕ್ಕೆ ಇಳಿದಿದೆ. ಇಂತಹ ಪರಿಸ್ಥಿತಿಯಲ್ಲಿ, ಅಗ್ಗದ ಸಾಲಗಳ ನಿರೀಕ್ಷೆಯು ಹೆಚ್ಚಾಗಲಾರಂಭಿಸಿದೆ, ಇದು ಭಾರತೀಯ ಆರ್ಥಿಕತೆಗೆ ಪ್ರಯೋಜನವನ್ನು ನೀಡುತ್ತದೆ.
ಇದನ್ನೂ ಓದಿ-July 1 ರಿಂದ ಚಪ್ಪಲ್-ಸ್ಯಾಂಡಲ್ ಗಳಿಗೆ ಈ ನಿಯಮಗಳು ಅನ್ವಯಿಸಲಿವೆ ಎಚ್ಚರ!
ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಅತ್ಯುತ್ತಮವಾಗಿದೆ ಎಂದು ಫಿಚ್ ಹೇಳಿದೆ. ಎರಡು ತ್ರೈಮಾಸಿಕಗಳ ನಿರಂತರ ಕುಸಿತವನ್ನು ಎದುರಿಸಿದ ನಂತರ, ಉತ್ಪಾದನಾ ವಲಯದಲ್ಲಿ ಚೇತರಿಕೆ ಕಂಡುಬಂದಿದೆ, ನಿರ್ಮಾಣ ವಲಯದಲ್ಲಿ ಸುಧಾರಣೆ ಕಂಡುಬಂದಿದೆ, ಜೊತೆಗೆ ಕೃಷಿ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ, ಇದರಿಂದಾಗಿ ದೇಶೀಯ ಆರ್ಥಿಕತೆಯು ಉತ್ಕರ್ಷಕ್ಕೆ ಸಾಕ್ಷಿಯಾಗಿದೆ. ಈ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ರೇಟಿಂಗ್ ಏಜೆನ್ಸಿಯು ಬೆಳವಣಿಗೆ ದರದ ಅಂದಾಜನ್ನು ಹೆಚ್ಚಿಸಿದೆ. ಫಿಚ್ ತನ್ನ ಅಂದಾಜಿನಲ್ಲಿ ಭಾರತದ ಜಿಡಿಪಿ 2024-25 ಮತ್ತು 2025-26ರಲ್ಲಿ ಶೇಕಡಾ 6.5 ರಷ್ಟು ಇರಲಿದೆ ಎಂದು ಅಂದಾಜಿಸಿದೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ