Airbus ನೊಂದಿಗೆ ಅತಿ ದೊಡ್ಡ ಒಪ್ಪಂದಕ್ಕೆ ಸಹಿ ಹಾಕಿದ IndiGo, 500 ವಿಮಾನಗಳ ಖರೀದಿಗೆ ಆರ್ಡರ್ ನೀಡಿದೆ.
IndiGo Update: ಇಂಡಿಗೋ ವಿಮಾನಯಾನ ಸಂಸ್ಥೆಯು ಏಕಕಾಲದಲ್ಲಿ 500 ವಿಮಾನಗಳಿಗೆ ಖರೀದಿಗಾಗಿ ಏರ್‌ಬಸ್‌ಗೆ ಆರ್ಡರ್ ನೀಡಿದೆ. ಇದು ಏರ್ಬಸ್ ಗೆ ಏರ್‌ಲೈನ್ ನೀಡಿರುವ ಅತಿದೊಡ್ಡ ಆರ್ಡರ್ ಆಗಿದೆ.
ಇದನ್ನೂ ಓದಿ-Health Care Tips: ಶರೀರದಲ್ಲಿ ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ!
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
1. ಬಜೆಟ್ ಕ್ಯಾರಿಯರ್ ಇಂಡಿಗೋ ಸೋಮವಾರ ಏರ್‌ಬಸ್‌ನೊಂದಿಗೆ 500 ಕಿರಿದಾದ ದೇಹದ ವಿಮಾನಗಳಿಗೆ ದೊಡ್ಡ ಆರ್ಡರ್ ಅನ್ನು ಪ್ರಕಟಿಸಿದೆ. ಇದು ಏರ್‌ಬಸ್‌ನಲ್ಲಿ ಯಾವುದೇ ಏರ್‌ಲೈನ್‌ನಿಂದ ಮಾಡಿದ ಅತಿದೊಡ್ಡ ಆರ್ಡರ್ ಆಗಿದೆ. ಆದರೆ, ವಿಮಾನಗಳಿಗೆ ಸಂಬಂಧಿಸಿದಂತೆ ನೀಡಿರುವ ಈ ಆದೇಶದ ಹಣಕಾಸು ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ.
2. ಈ ವರ್ಷದ ಆರಂಭದಲ್ಲಿ, ಟಾಟಾ ಗ್ರೂಪ್ ಒಡೆತನದ ಏರ್‌ಲೈನ್ ಏರ್ ಇಂಡಿಯಾ ಏರ್‌ಬಸ್ ಹಾಗೂ ಬೋಯಿಂಗ್ ಕಂಪನಿಗಳಿಗೆ 470 ವಿಮಾನಗಳಿಗೆ ಆರ್ಡರ್ ಮಾಡಿತ್ತು.
3. ಪ್ರಸ್ತುತ ಇಂಡಿಗೋ ವಿಮಾನಯಾನ ಸಂಸ್ಥೆಯು 300ಕ್ಕೂ ಹೆಚ್ಚು ವಿಮಾನಗಳನ್ನು ಹೊಂದಿದೆ. ಇದೆ ವೇಳೆ ಇದಕ್ಕೂ ಮೊದಲು 480 ವಿಮಾನಗಳಿಗೆ ಆರ್ಡರ್ ಮಾಡಿದೆ, ಅದರ ವಿತರಣೆಯನ್ನು ಇನ್ನೂ ಬಾಕಿ ಇದೆ.
4. ಈ ಕುರಿತು ಹೇಳಿಕೆ ನೀಡಿರುವ ಇಂಡಿಗೊ, "2030-2035 ಕ್ಕೆ 500 ವಿಮಾನಗಳ ಈ ಹೆಚ್ಚುವರಿ ಆರ್ಡರ್ಗಳೊಂದಿಗೆ, ಇಂಡಿಗೋದ ಆರ್ಡರ್ ಗಳು ಪ್ರಸ್ತುತ ಸುಮಾರು 1,000 ವಿಮಾನಗಳದ್ದಾಗಿದೆ, ಮುಂದಿನ ದಶಕದಲ್ಲಿ ಅವುಗಳ ಡಿಲೆವರಿ ಬಾಕಿ ಇನ್ನೂ ಇದೆ" ಎಂದಿದೆ.
5. ಇಂಡಿಗೋ ಏರ್‌ಬಸ್‌ನೊಂದಿಗೆ ಇರಿಸಿರುವ ಆರ್ಡರ್ A320 NEO, A321 NEO ಮತ್ತು A321 XLR ವಿಮಾನಗಳ ಸಮ್ಮಿಶ್ರಣ ಹೊಂದಿದೆ.