Income Tax ಪಾವತಿದಾರರಿಗೊಂದು ಬಂಬಾಟ್ ಸುದ್ದಿ, ಶೀಘ್ರದಲ್ಲಿಯೇ ವಿತ್ತ ಸಚಿವರಿಂದ ಘೋಷಣೆ!
Income Tax Slab Change: ಮಧ್ಯಮವರ್ಗದಿಂದ ಹಿಡಿದು ಮೇಲ್ವರ್ಗದವರೆಗೆ ಆದಾಯ ತೆರಿಗೆ ಪಾವತಿ ಕಡ್ಡಾಯವಾಗಿದೆ. ಆದರೆ, ಈ ಬಾರಿ ಈ ಆದಾಯ ತೆರಿಗೆ ವಿಷಯದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಬದಲಾವಣೆ ಮಾಡುವ ನಿರೀಕ್ಷೆ ಇದೆ. ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಈ ಬಾರಿಯ ಸರ್ಕಾರದ ಧೋರಣೆ ಏನು ತಿಳಿದುಕೊಳ್ಳೋಣ ಬನ್ನಿ,
FM Nirmala Sitharaman: ಮಧ್ಯಮವರ್ಗದಿಂದ ಹಿಡಿದು ಮೇಲ್ವರ್ಗದವರೆಗೆ ಆದಾಯ ತೆರಿಗೆ ಪಾವತಿ ಕಡ್ಡಾಯವಾಗಿದೆ. ಆದರೆ, ಈ ಬಾರಿ ಈ ಆದಾಯ ತೆರಿಗೆ ವಿಷಯದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಬದಲಾವಣೆ ಮಾಡುವ ನಿರೀಕ್ಷೆ ಇದೆ. ನೀವೂ ಕೂಡ ತೆರಿಗೆ ಪಾವತಿದಾರರಾಗಿದ್ದರೆ ಅಥವಾ ತೆರಿಗೆ ಸ್ಲ್ಯಾಬ್‌ಗೆ ಬರುತ್ತಿದ್ದರೆ, ಕೇಂದ್ರ ಸರ್ಕಾರ ಈ ಬಾರಿ ತೆರಿಗೆ ಸ್ಲ್ಯಾಬ್‌ನಲ್ಲಿ ಯಾವ ರೀತಿಯ ಬದಲಾವಣೆಗಳನ್ನು ಮಾಡಲಿದೆ ಎಂಬುದನ್ನು ನೀವು ತಿಳಿದುಕೊಳ್ಳುವುದು ತುಂಬಾ ಮುಖ್ಯವಾದ ಸಂಗತಿಯಾಗಿದೆ. ಸರ್ಕಾರವು 2023 ರ ಫೆಬ್ರವರಿ 1 ರಂದು ಬಜೆಟ್ ಅನ್ನು ಮಂಡಿಸಲಿದೆ. ಈ ಬಾರಿ ತೆರಿಗೆಗೆ ಸಂಬಂಧಿಸಿದಂತೆ ಸರ್ಕಾರದ ಯೋಜನೆ ಏನೆಂದು ಎಂಬುದನ್ನು ನೋಡೋಣ ಬನ್ನಿ,
ತೆರಿಗೆ ಮಿತಿ ಹೆಚ್ಚಾಗಬಹುದು
ಪ್ರಸ್ತುತ, 2.50 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇಲ್ಲ, ಆದರೆ ಈ ಬಜೆಟ್‌ನಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಈ ಮಿತಿಯನ್ನು 5 ಲಕ್ಷಕ್ಕೆ ಹೆಚ್ಚಿಸಲು ಯೋಜಿಸಿದ್ದಾರೆ ಎನ್ನಲಾಗಿದೆ. ಅಂದರೆ, ಈ ಬದಲಾವಣೆಯ ನಂತರ, ನಿಮ್ಮ ಆದಾಯವು 5 ಲಕ್ಷ ರೂ ಆಗಿದ್ದರೆ, ನೀವು ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.
2014 ರಲ್ಲಿ ಕೊನೆಯ ಬಾರಿಗೆ ಬದಲಾವಣೆ ಮಾಡಲಾಗಿತ್ತು
ಇದಕ್ಕೂ ಮುನ್ನ 2014ರಲ್ಲಿ ಆದಾಯ ತೆರಿಗೆ ಮಿತಿಯಲ್ಲಿ ಬದಲಾವಣೆ ಮಾಡಲಾಗಿತ್ತು. ಆಗ ಈ ಮಿತಿ 2 ಲಕ್ಷ ಇದ್ದು, ಅದನ್ನು 2.5 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಈ ಬಾರಿಯೂ ಲೋಕಸಭೆ ಚುನಾವಣೆಗೂ ಮುನ್ನ ಸರ್ಕಾರ ಭರ್ಜರಿ ಸುದ್ದಿ ನೀಡಬಹುದು ಎಂಬ ನಿರೀಕ್ಷೆ ಇದೆ. ವೈಯಕ್ತಿಕ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಲು ಸರ್ಕಾರವು ಪರಿಗಣಿಸುತ್ತಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ-LIC ಈ ಯೋಜನೆಯಲ್ಲಿ ನಿತ್ಯ ಕೇವಲ ರೂ.110 ಹೂಡಿಕೆ ಮಾಡಿ, ಮೂರು ಪಟ್ಟು ರಿಟರ್ನ್ ಪಡೆಯಿರಿ
13 ತಿಂಗಳ ನಂತರ ಚುನಾವಣೆ ನಡೆಯಲಿದೆ
ಮೋದಿ ಸರ್ಕಾರವು 2023 ರಲ್ಲಿ ತನ್ನ ಎರಡನೇ ಅವಧಿಯ ಪೂರ್ಣ ಬಜೆಟ್ ಅನ್ನು ಮಂಡಿಸಲಿದೆ. ಮುಂದಿನ ವರ್ಷ ಬಜೆಟ್ ಮಂಡನೆಯಾಗಿ ಸುಮಾರು 13 ತಿಂಗಳ ನಂತರ ಸಾರ್ವತ್ರಿಕ ಚುನಾವಣೆ ನಡೆಯಲಿರುವುದರಿಂದ ಈ ಬಾರಿ ಜನ ಸಾಮಾನ್ಯರಿಗೆ ದೊಡ್ಡ ರಿಲೀಫ್ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ವರದಿ ಮಾಡಿವೆ.
ಇದನ್ನೂ ಓದಿ-Investment Tips: ಈ ಸೂಪರ್ ಹಿಟ್ ಯೊಜನೆಯಲ್ಲಿ ನಿತ್ಯ ಕೇವಲ 200 ಹೂಡಿಕೆ ಮಾಡಿ ಬಂಬಾಟ್ ಲಾಭ ಸಿಗುತ್ತೆ
ಸಲಹೆಗಳನ್ನು ಕೋರಿದ ಹಣಕಾಸು ಸಚಿವ ಸೀತಾರಾಮನ್
ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತೆರಿಗೆಗೆ ಸಂಬಂಧಿಸಿದಂತೆ ಸಲಹೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ, ಹೊಸ ತೆರಿಗೆ ಪದ್ಧತಿಯಲ್ಲಿ ಸುಧಾರಣೆಗೆ ಎಷ್ಟು ಅವಕಾಶವಿದೆ. ಈ ಬಗ್ಗೆ ಚರ್ಚೆಯೂ ನಡೆಸಲಾಗುತ್ತಿದ್ದು, ಹೊಸ ಮತ್ತು ಹಳೆ ತೆರಿಗೆ ವ್ಯವಸ್ಥೆಯಲ್ಲಿ ಸರ್ಕಾರ ಬದಲಾವಣೆ ತರಬಹುದು ಎಂಬ ನಿರೀಕ್ಷೆಯನ್ನು ಹೊಂದಲಾಗಿದೆ. ಪ್ರಸ್ತುತ ಹೊಸ ತೆರಿಗೆ ಪದ್ಧತಿಯಲ್ಲಿ ಯಾವುದೇ ರೀತಿಯ ವಿಶೇಷ ಪ್ರಯೋಜನ ನೀಡಲಾಗಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.