Extra Income: ವೇತನದ ಜೊತೆಗೆ ತಿಂಗಳಿಗೆ 30 ಸಾವಿರ ಹೆಚ್ಚುವರಿ ಆದಾಯ ಗಳಿಸಬೇಕೆ? ಇಲ್ಲಿದೆ ಉಪಾಯ

Trading Tips: ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಸೆಕೆಂಡರಿ ಇನ್ಕಂ ಸೋರ್ಸ್ ಅನ್ನು ಹೊಂದಲು ಬಯಸುತ್ತಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವೂ ಕೂಡ ಹೆಚ್ಚುವರಿ ಆದಾಯವನ್ನು ಗಳಿಸಬಹುದು. ವೇತನದ ಹೊರತಾಗಿ ತಿಂಗಳಿಗೆ 30 ಸಾವಿರ ರೂ. ಹೆಚ್ಚುವರಿ ಆದಾಯ ಬೇಕಾದರೆ, ಈ ಅದ್ಭುತ ಪರಿಕಲ್ಪನೆಯನ್ನು ನೀವು ಅಳವಡಿಸಿಕೊಳ್ಳಬಹುದು.  

Written by - Nitin Tabib | Last Updated : Dec 11, 2022, 03:31 PM IST
  • ಇದೇ ವೇಳೆ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಮಾಡುವಾಗ,
  • ಹಣವನ್ನು ಹೂಡಿಕೆ ಮಾಡುವ ಷೇರುಗಳು ಮತ್ತು
  • ಹೂಡಿಕೆಯ ಮೊತ್ತದ ನಡುವೆ ಸಾಕಷ್ಟು ವ್ಯತ್ಯಾಸವಿದೆ.
Extra Income: ವೇತನದ ಜೊತೆಗೆ ತಿಂಗಳಿಗೆ 30 ಸಾವಿರ ಹೆಚ್ಚುವರಿ ಆದಾಯ ಗಳಿಸಬೇಕೆ? ಇಲ್ಲಿದೆ ಉಪಾಯ title=
Additional Income

Share Market: ಸಾಮಾನ್ಯವಾಗಿ ಹಣಗಳಿಕೆ ಮಾಡುವ ಉದ್ದೇಶದಿಂದ ಪ್ರತಿಯೊಬ್ಬರೂ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಾರೆ. ಷೇರುಪೇಟೆಯಲ್ಲಿ ಗಳಿಸುವ ಅವಕಾಶ ಯಾವ ಕ್ಷಣದಲ್ಲಾದರೂ ಬರಬಹುದು. ಆದರೂ ಕೂಡ, ಒಬ್ಬರು ಮಾರುಕಟ್ಟೆಯಲ್ಲಿ ಹಣವನ್ನು ಸಾಕಷ್ಟು ಎಚ್ಚರಿಕೆಯಿಂದ ಹೂಡಿಕೆ ಮಾಡಬೇಕು. ಏಕೆಂದರೆ ಇಲ್ಲಿ ಅಪಾಯವು ತುಂಬಾ ಅಧಿಕವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಕೂಡ ಷೇರು ಮಾರುಕಟ್ಟೆಯಿಂದ ಹಣವನ್ನು ಗಳಿಸಲು ಬಯಸುತ್ತಿದ್ದರೆ, ಒಂದು ವಿಧಾನದ ಅಡಿಯಲ್ಲಿ ನೀವು ಈ ಹೂಡಿಕೆಯನ್ನು ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ, ವೇತನದ ಹೊರತಾಗಿ ಹೆಚ್ಚುವರಿ ಆದಾಯವನ್ನು ಗಳಿಕೆ ಮಾಡಬೇಕಾದರೆ, ನೀವು ಷೇರು ಮಾರುಕಟ್ಟೆಯತ್ತ ಮುಖಮಾಡಬಹುದು. ಇದರ ಜೊತೆಗೆ, ಒಂದು ನಿಶ್ಚಿತ ಗುರಿಯನ್ನು ಸಾಧಿಸಲು ಹಣವನ್ನು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬಹುದು.

ಗಳಿಕೆಯ ವಿಧಾನ ಯಾವುದು
ಪ್ರತಿಯೊಬ್ಬರೂ ಹೆಚ್ಚುವರಿ ಆದಾಯವನ್ನು ಬಯಸುತ್ತಾರೆ ಮತ್ತು ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ರಿಟರ್ನ್ ರೂಪದಲ್ಲಿ ಆದಾಯವನ್ನು ಪಡೆಯಬಹುದು. ಇಂತಹ ಪರಿಸ್ಥಿತಿಯಲ್ಲಿ ವೇತನದ ಹೊರತಾಗಿ ಪ್ರತಿ ತಿಂಗಳು 30 ಸಾವಿರ ರೂಪಾಯಿ ಬೇಕಾದರೆ ಹೆಚ್ಚುವರಿ ಆದಾಯದ ರೂಪದಲ್ಲಿ ತಂತ್ರವನ್ನು ಅಳವಡಿಸಿಕೊಳ್ಳಬಹುದು. ಈ ತಂತ್ರವು ಷೇರು ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದೆ.

ವ್ಯಾಪಾರ ದಿನ
ವಾಸ್ತವವಾಗಿ, ತಿಂಗಳ 30 ದಿನಗಳಲ್ಲಿ, ಶನಿವಾರ ಮತ್ತು ಭಾನುವಾರದಂದು ಷೇರು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ಇರುವುದಿಲ್ಲ. ಈ ದಿನಗಳಲ್ಲಿ ಷೇರು ಮಾರುಕಟ್ಟೆಗೆ ರಜೆ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಕೇವಲ 22 ದಿನಗಳು ಮಾತ್ರ ಲಭ್ಯವಿರುತ್ತವೆ. ಇನ್ನೊಂದೆಡೆ, ಕೆಲವು ರಜಾದಿನಗಳು ಎರಡು ದಿನಗಳವರೆಗೆ ಬರಬಹುದು, ಆಗಲೂ ಕೂಡ ಷೇರು ಮಾರುಕಟ್ಟೆ ಮುಚ್ಚಿರುತ್ತದೆ. ಹೀಗಿರುವಾಗ ಷೇರು ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಕನಿಷ್ಠ 20 ದಿನಗಳನ್ನು ಪರಿಗಣಿಸಬಹುದು.

ಹೆಚ್ಚುವರಿ ಆದಾಯ ಈ ರೀತಿ ಬರಲಿದೆ
ಈಗ ಷೇರು ಮಾರುಕಟ್ಟೆಯಲ್ಲಿ 20 ದಿನಗಳ ವಹಿವಾಟು ನಡೆಯುತ್ತಿದ್ದರೆ ಮತ್ತು ನಾವು ಒಂದು ತಿಂಗಳಲ್ಲಿ 30,000 ರೂ ಗಳಿಸಲು ಬಯಸಿದರೆ, ನಾವು ಈ ಹಣವನ್ನು 20 ದಿನಗಳಲ್ಲಿ ಭಾಗಿಸಬೇಕು. ಇದರರ್ಥ ಪ್ರತಿಯೊಂದು ವ್ಯವಹಾರ ದಿನಕ್ಕೆ ನೀವು 1500 ರೂ. ಗಳಿಕೆ ಮಾಡಬಹುದು. ಅಂದರೆ ಶೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುವಾಗ ದಿನಕ್ಕೆ ಸರಾಸರಿ 1500 ರೂ. ಗಳಿಕೆ ಮಾಡಬಹುದು. ನೀವು ವಹಿವಾಟಿನಿಂದ ಸರಾಸರಿ 1500 ರೂ ಗಳಿಸಿದರೆ, ತಿಂಗಳ ಕೊನೆಯಲ್ಲಿ ನೀವು ಹೆಚ್ಚುವರಿ 30,000 ರೂ ಗಳಿಸಬಹುದು.

ಇದನ್ನೂ ಓದಿ-Big Update: ರೈಲು ಪ್ರಯಾಣಿರಿಗೊಂದು ಭಾರಿ ಸಂತಸದ ಸುದ್ದಿ ಪ್ರಕಟಿಸಿದ ರೇಲ್ವೆ ಸಚಿವರು

ಈ ಸಂಗತಿಗಳನ್ನು ನೆನಪಿನಲ್ಲಿಡಿ
ಇದೇ ವೇಳೆ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಮಾಡುವಾಗ, ಹಣವನ್ನು ಹೂಡಿಕೆ ಮಾಡುವ ಷೇರುಗಳು ಮತ್ತು ಹೂಡಿಕೆಯ ಮೊತ್ತದ ನಡುವೆ ಸಾಕಷ್ಟು ವ್ಯತ್ಯಾಸವಿದೆ. ಇನ್ನೊಂದೆಡೆ, ವ್ಯಾಪಾರ ಮಾಡುವಾಗ, ಮಾರುಕಟ್ಟೆಯು ಯಾವ ದಿಕ್ಕಿನಲ್ಲಿ ಸಾಗುತ್ತಿದೆ, ಅದನ್ನು ಸಹ ನೋಡಿಕೊಳ್ಳಬೇಕು. ಇದರ ಜೊತೆಗೆ, ವ್ಯಾಪಾರದಲ್ಲಿ ಅತಿಯಾದ ದುರಾಶೆಯು ಅನೇಕ ಬಾರಿ ಹಾನಿಯನ್ನು ತರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಸರಾಸರಿ ದೈನಂದಿನ ಗಳಿಕೆಯ ಮೇಲೆ ಕಣ್ಣಿಡಿ ಇದರಿಂದ ತಿಂಗಳ ಗುರಿಯನ್ನು ನೀವು ಸುಲಭವಾಗಿ ತಲುಪಬಹುದು.

ಇದನ್ನೂ ಓದಿ-Saving Account Interest: ಈ ಬ್ಯಾಂಕ್ ಗಳು ಉಳಿತಾಯ ಖಾತೆಯ ಮೇಲೆ ಗ್ರಾಹಕರಿಗೆ ಶೇ.7.5 ರಷ್ಟು ಬಡ್ಡಿ ಪಾವತಿಸುತ್ತಿವೆ

(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಯಾವುದೇ ರೀತಿಯ ಬಂಡವಾಳ ಹೂಡಿಕೆಗೆ ಸಲಹೆ ನೀಡುವುದಿಲ್ಲ. ಅನುಸರಿಸುವ ಮುನ್ನ ವಿಷಯ ಸಲಹೆ ಪಡೆದುಕೊಳ್ಳಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News