Investment Tips: ಈ ಸೂಪರ್ ಹಿಟ್ ಯೊಜನೆಯಲ್ಲಿ ನಿತ್ಯ ಕೇವಲ 200 ಹೂಡಿಕೆ ಮಾಡಿ ಬಂಬಾಟ್ ಲಾಭ ಸಿಗುತ್ತೆ

Investment Idea: ನೀವೂ ಕೂಡ ನಿಮ್ಮ ಹಣವನ್ನು ಸುರಕ್ಷಿತವಾಗಿರುವ ಜಾಗದಲ್ಲಿ ಹಾಗೂ ಲಾಭದಾಯಕವಾಗಿರುವಂತಹ ಸ್ಥಳದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಇಂದು ನಾವು ನಿಮಗೆ ಭಾರತೀಯ ಜೀವ ವಿಮಾ ನಿಗಮದ ಅಂತಹ ಒಂದು ಯೋಜನೆಯ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಅದರಲ್ಲಿ ನೀವು ಬಂಪರ್ ಲಾಭವನ್ನು ಪಡೆಯಬಹುದು.  

Written by - Nitin Tabib | Last Updated : Dec 11, 2022, 10:06 PM IST
  • ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಜೀವನ್ ಪ್ರಗತಿ ಯೋಜನೆಯಲ್ಲಿ ನೀವು ನಿಯಮಿತ ಪ್ರೀಮಿಯಂ ಪಾವತಿಸಬೇಕಾಗುತ್ತದೆ.
  • ಈ ಪಾಲಿಸಿಯಲ್ಲಿ ನೀವು ಲೈಫ್ ಕವರ್ (ಮರಣ ಪ್ರಯೋಜನ) ಸಹ ಪಡೆಯುತ್ತೀರಿ ಇದು ಪ್ರತಿ 5 ವರ್ಷಗಳಿಗೊಮ್ಮೆ ಹೆಚ್ಚಾಗುತ್ತದೆ.
Investment Tips: ಈ ಸೂಪರ್ ಹಿಟ್ ಯೊಜನೆಯಲ್ಲಿ ನಿತ್ಯ ಕೇವಲ 200 ಹೂಡಿಕೆ ಮಾಡಿ ಬಂಬಾಟ್ ಲಾಭ ಸಿಗುತ್ತೆ title=
Investment Tips

Superhit Investment Plan: ನೀವೂ ಕೂಡ ನಿಮ್ಮ ಹಣವನ್ನು ಸುರಕ್ಷಿತವಾಗಿರಿಸುವ ಜಾಗದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಸಾಮಾನ್ಯವಾಗಿ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಗಳು ಹೆಚ್ಚಿನ ಲಾಭವನ್ನು ನೀಡುತ್ತವೆ. ಆದರೆ ಅವುಗಳಲ್ಲಿ ಸಾಕಷ್ಟು ಅಪಾಯದ ಅಂಶವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಅಪಾಯವಿಲ್ಲದೆ ಲಾಭವನ್ನು ಬಯಸುತ್ತಿದ್ದರೆ, LIC ಯ ಒಂದು ಸೂಪರ್ ಹಿಟ್ ಯೋಜನೆಯು ನಿಮಗೆ ಉತ್ತಮ ಸಾಬೀತಾಗಬಹುದು. ಇಂದು ನಾವು ನಿಮಗೆ ಬಂಪರ್ ಲಾಭವನ್ನು ಹೊಂದಿರುವ LIC ಯ ಆ ಯೋಜನೆಯ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ.

ಎಲ್ಐಸಿ ಸೂಪರ್ಹಿಟ್ ಯೋಜನೆ
ಭಾರತೀಯ ಜೀವ ವಿಮಾ ನಿಗಮವು ನಿಮಗೆ ಉಳಿತಾಯ ಮತ್ತು ಭದ್ರತೆಯನ್ನು ಖಾತರಿಪಡಿಸುತ್ತದೆ ಎಂಬುದು ಗಮನಿಸಬೇಕಾದ ಅಂಶ. LIC ಜೀವನ್ ಪ್ರಗತಿ ಯೋಜನೆಯು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಂದರೆ IRDA ಯ ನಿಯಮಗಳನ್ನು ಅನುಸರಿಸುವ ವಿಶೇಷ ಪಾಲಸಿಯಾಗಿದೆ. ಇದರಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಮಿಲಿಯನೇರ್ ಆಗಬಹುದು. ಈ ಪಾಲಸಿ ಅಪಾಯದ ರಕ್ಷಣೆಯೊಂದಿಗೆ ಬರುತ್ತದೆ. ಈ ಯೋಜನೆಯನ್ನು 3 ಫೆಬ್ರವರಿ 2016 ರಂದು ಪ್ರಾರಂಭಿಸಲಾಗಿದೆ.

ಮರಣ ಲಾಭವನ್ನು ಪಡೆಯಬಹುದು
ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಜೀವನ್ ಪ್ರಗತಿ ಯೋಜನೆಯಲ್ಲಿ ನೀವು ನಿಯಮಿತ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಈ ಪಾಲಿಸಿಯಲ್ಲಿ ನೀವು ಲೈಫ್ ಕವರ್ (ಮರಣ ಪ್ರಯೋಜನ) ಸಹ ಪಡೆಯುತ್ತೀರಿ ಇದು ಪ್ರತಿ 5 ವರ್ಷಗಳಿಗೊಮ್ಮೆ ಹೆಚ್ಚಾಗುತ್ತದೆ. ಮೊತ್ತವು ನಿಮ್ಮ ಪಾಲಿಸಿ ಎಷ್ಟು ಸಮಯದವರೆಗೆ ಸಕ್ರೀಯ ಇರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. 

ಪಾಲಸಿಯ ವೈಶಿಷ್ಟ್ಯಗಳೇನು?
>> ಇದರಲ್ಲಿ 100% ಮೂಲ ವಿಮಾ ಮೊತ್ತವನ್ನು ಪಾಲಿಸಿದಾರನ ಮರಣದ ಮೇಲೆ ಪಾಲಿಸಿಯನ್ನು ತೆಗೆದುಕೊಂಡ ದಿನಾಂಕದಿಂದ 5 ವರ್ಷಗಳವರೆಗೆ ಸಮ್ ಅಸ್ಯೋರ್ಡ್ ಅನ್ನು ಪಾವತಿಸಲಾಗುತ್ತದೆ.
>> ಇದಲ್ಲದೆ, ಪಾಲಿಸಿಯನ್ನು ತೆಗೆದುಕೊಂಡು 6 ರಿಂದ 10 ವರ್ಷಗಳ ನಡುವಿನ ಪಾಲಿಸಿದಾರರ ಮರಣದ ಮೇಲೆ 125%, 11 ರಿಂದ 15 ವರ್ಷಗಳ ನಡುವೆ 150% ಮತ್ತು 16 ಮತ್ತು 20 ವರ್ಷಗಳ ನಡುವೆ 200% ಪಾವತಿಸಲಾಗುತ್ತದೆ.
>> ಈ ಯೋಜನೆಯಲ್ಲಿ ಅಪಘಾತ ಪ್ರಯೋಜನ ಮತ್ತು ಅಂಗವೈಕಲ್ಯ ರೈಡರ್ ನ ಲಾಭವನ್ನು ಸಹ ಪಡೆಯಬಹುದು. ಇದಕ್ಕಾಗಿ ನೀವು ಸ್ವಲ್ಪ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ.
>> ಜೀವನ್ ಪ್ರಗತಿ ಯೋಜನೆಯ ಸಂಪೂರ್ಣ ಮೆಚ್ಯೂರಿಟಿ ನಂತರ, ನೀವು ರೂ 28 ಲಕ್ಷ ಮೊತ್ತವನ್ನು ಲಾಭದ ರೂಪದಲ್ಲಿ ಪಡೆದುಕೊಳ್ಳಬಹುದು.

ಇದನ್ನೂ ಓದಿ-Extra Income: ವೇತನದ ಜೊತೆಗೆ ತಿಂಗಳಿಗೆ 30 ಸಾವಿರ ಹೆಚ್ಚುವರಿ ಆದಾಯ ಗಳಿಸಬೇಕೆ? ಇಲ್ಲಿದೆ ಉಪಾಯ

ಎಷ್ಟು ಮತ್ತು ಹೇಗೆ ಈ ಮೊತ್ತವನ್ನು ಪಡೆಯಬಹುದು?
ಇದರಲ್ಲಿ ನೀವು 20 ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಹೂಡಿಕೆದಾರರು ಇದರಲ್ಲಿ ದಿನಕ್ಕೆ 200 ರಂತೆ ಪ್ರತಿ ತಿಂಗಳು 6 ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಈ ಪಾಲಿಸಿಯನ್ನು 12 ವರ್ಷ ವಯಸ್ಸಿನಿಂದಲೇ ಪ್ರಾರಂಭಿಸಬಹುದು. ಇದರಲ್ಲಿ ಗರಿಷ್ಠ ಹೂಡಿಕೆ ವಯಸ್ಸು 45 ವರ್ಷಗಳು.

ಇದನ್ನೂ ಓದಿ-Big Update: ರೈಲು ಪ್ರಯಾಣಿರಿಗೊಂದು ಭಾರಿ ಸಂತಸದ ಸುದ್ದಿ ಪ್ರಕಟಿಸಿದ ರೇಲ್ವೆ ಸಚಿವರು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ. ಹೂಡಿಕೆಗೂ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ)

ಇದನ್ನೂ  ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News