Free Food In Train: ದೇಶವಾಸಿಗಳ ಜೀವನಾಡಿಯಾಗಿರುವ ಭಾರತೀಯ ರೈಲ್ವೆಯಲ್ಲಿ ಪ್ರತಿನಿತ್ಯ ಕೋಟ್ಯಾಂತರ ಜನರು ಪ್ರಯಾಣಿಸುತ್ತಾರೆ. ರೈಲಿನಲ್ಲಿ ಪ್ರಯಾಣಿಕರಿಗಾಗಿ ಹಲವು ಸೌಕರ್ಯಗಳನ್ನು ನೀಡಲಾಗುತ್ತದೆ. ಇವುಗಳಲ್ಲಿ ಆಹಾರ ಸೌಲಭ್ಯವೂ ಒಂದು. ಆದರೆ ರೈಲಿನಲ್ಲಿ ಆಹಾರ ಪಡೆಯಲು ಹಣ ಪಾವತಿಸಬೇಕು. ಆದರೆ, ಈ ಒಂದು ಟ್ರೈನ್‍ನಲ್ಲಿ ಉಚಿತವಾಗಿ ಆಹಾರ ನೀಡಲಾಗುತ್ತದೆ. 


COMMERCIAL BREAK
SCROLL TO CONTINUE READING

ಈ ರೈಲಿನಲ್ಲಿ 29 ವರ್ಷಗಳಿಂದ ಸಿಗುತ್ತಿದೆ "ಫ್ರೀ ಫುಡ್": 
ಭಾರತೀಯ ರೈಲ್ವೇಯ ಒಂದು ವಿಶೇಷ ರೈಲಿನಲ್ಲಿ ಕಳೆದ 29 ವರ್ಷಗಳಿಂದ ಪ್ರಯಾಣಿಕರಿಗೆ 'ಉಚಿತ ಆಹಾರ' ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಈ ರೈಲನ್ನು "ಲಂಗರ್ ರೈಲು" ಎಂತಲೂ ಕರೆಯಲಾಗುತ್ತದೆ. 


ಇದನ್ನೂ ಓದಿ- UMANG ಆಪ್ ಬಳಸಿ ಪಿ‌ಎಫ್ ಹಣ ವಿತ್ ಡ್ರಾ ಮಾಡಲು ಸಿಂಪಲ್ ಹಂತ-ಹಂತದ ಪ್ರಕ್ರಿಯೆ


1995 ರಿಂದ ಆರಂಭವಾದ ಲಂಗರ್ ಸೇವೆ: 
ಭಾರತದ 39 ರೈಲ್ವೆ ನಿಲ್ದಾಣಗಳನ್ನು ಸಂಪರ್ಕಿಸುವ ಸಚ್‌ಖಂಡ್ ಎಕ್ಸ್‌ಪ್ರೆಸ್ (12715) ರೈಲಿನಲ್ಲಿ ಆರು ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಉಚಿತ ಆಹಾರವನ್ನು ನೀಡಲಾಗುತ್ತದೆ. ವಾಸ್ತವವಾಗಿ, ಈ ರೈಲು ದೇಶದ ಐದು ದೊಡ್ಡ ಸಿಖ್ ಗುರುದ್ವಾರಗಳಲ್ಲಿ ನಾಂದೇಡ್ (ಮಹಾರಾಷ್ಟ್ರ)ದ ಹಜೂರ್ ಸಾಹಿಬ್ ಮತ್ತು ಅಮೃತಸರ (ಪಂಜಾಬ್) ನಡುವೆ ಚಲಿಸುತ್ತದೆ. ಎರಡು ಗುರುದ್ವಾರಗಳನ್ನು ಸಂಪರ್ಕಿಸುವ ಈ ರೈಲಿನಲ್ಲಿ 1995 ರಿಂದ  ಸಿಖ್ ಸಮುದಾಯವು  ಲಂಗರ್ ಸೇವೆ ಅನ್ನು ಆರಂಭಿಸಿದೆ. 


ಈ ರೈಲಿಗಾಗಿ ಪಶ್ಚಿಮ ದೆಹಲಿಯ ತಿಲಕ್ ನಗರದ ವೀರ್ಜಿ ದಾ ಡೇರಾ ದಿಂದ ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಲಂಗರ್ ಆಹಾರವನ್ನು  ತಯಾರಿಸಲಾಗುತ್ತದೆ. 


ಇದನ್ನೂ ಓದಿ- ಬ್ಯಾಂಕ್‌ನಲ್ಲಿ ಅನಾವಶ್ಯಕವಾಗಿ ನಿಮ್ಮ ಸಮಯ ವ್ಯರ್ಥ ಮಾಡುತ್ತಿದ್ದಾರಾ? ಯೋಚಿಸಬೇಡಿ ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ


ತಮ್ಮದೇ ಪಾತ್ರೆಗಳನ್ನು ತರುವ ಪ್ರಯಾಣಿಕರು: 
ಸಚ್‌ಖಂಡ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಮನ್ಮಾಡ್, ನಾಂದೇಡ್, ಭೂಸಾವಲ್, ಭೋಪಾಲ್, ಗ್ವಾಲಿಯರ್ ಮತ್ತು ನವದೆಹಲಿ ಎಂಬ ಆರು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಲಂಗರ್ ಆಹಾರವನ್ನು ನೀಡಲಾಗುತ್ತದೆ. ಇನ್ನೂ ಈ ರೈಲಿನಲ್ಲಿ ಲಂಗರ್ ಸೇವೆ ಲಭ್ಯವಿರುವ ಬಗ್ಗೆ ಅರಿವಿರುವ ಪ್ರಯಾಣಿಕರು ಉಚಿತ ಆಹಾರವನ್ನು ಪಡೆಯಲು ತಮ್ಮದೇ ಆದ ಪಾತ್ರೆಗಳನ್ನು ತರುವುದು ವಿಶೇಷವಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.