ಬ್ಯಾಂಕ್‌ನಲ್ಲಿ ಅನಾವಶ್ಯಕವಾಗಿ ನಿಮ್ಮ ಸಮಯ ವ್ಯರ್ಥ ಮಾಡುತ್ತಿದ್ದಾರಾ? ಯೋಚಿಸಬೇಡಿ ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ

ಬಹಳಷ್ಟು ಸಂದರ್ಭಗಳಲ್ಲಿ ಬ್ಯಾಂಕ್‌ಗಳಲ್ಲಿ ಅನಾವಶ್ಯಕವಾಗಿ ಗ್ರಾಹಕರ ಸಮಯ ವ್ಯರ್ಥ ಮಾಡುವುದನ್ನು ಕಾಣಬಹುದು. ಕೆಲವೊಮ್ಮೆ ಗ್ರಾಹಕರ ಸಮಸ್ಯೆ ಏನೆಂದು ಸರಿಯಾಗಿ ಆಲಿಸದ ಬ್ಯಾಂಕ್ ಉದ್ಯೋಗಿಗಳ ಉಡಾಫೆ ವರ್ತನೆಯನ್ನೂ ನೋಡಿರಬಹುದು. ಇದು ನಿಮಗೂ ಸಂಭವಿಸಿದಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಅವರ ಬಗ್ಗೆ ದೂರು ನೀಡಿ... 

Written by - Yashaswini V | Last Updated : Oct 2, 2024, 08:10 AM IST
  • ಭಾರತೀಯ ರಿಸರ್ವ್ ಬ್ಯಾಂಕ್ (RBI) ಬ್ಯಾಂಕ್ ಗ್ರಾಹಕರಿಗೆ ಅನೇಕ ಹಕ್ಕುಗಳನ್ನು ನೀಡುತ್ತದೆ.
  • ಆರ್‌ಬಿ‌ಐ ಗ್ರಾಹಕರಿಗೆ ನೀಡುವ ಸೌಲಭ್ಯಗಳ ಬಗ್ಗೆ ತಿಳಿದಿರುವುದು ಮುಖ್ಯ.
  • ಆರ್‌ಬಿ‌ಐ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ಪಡೆಯಬಹುದು.
ಬ್ಯಾಂಕ್‌ನಲ್ಲಿ ಅನಾವಶ್ಯಕವಾಗಿ ನಿಮ್ಮ ಸಮಯ ವ್ಯರ್ಥ ಮಾಡುತ್ತಿದ್ದಾರಾ? ಯೋಚಿಸಬೇಡಿ ಈ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ  title=

Banking Problems: ಬ್ಯಾಂಕಿಂಗ್ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಪೂರ್ಣಗೊಳಿಸಲು ಬ್ಯಾಂಕ್‌ಗೆ ಹೋಗಿದ್ದು, ಅಲ್ಲಿರುವ ಬ್ಯಾಂಕ್ ಸಿಬ್ಬಂದಿ ನಿಮ್ಮ ಸಮಸ್ಯೆಯನ್ನು ಸರಿಯಾಗಿ ಆಲಿಸುತ್ತಿಲ್ಲವೇ? ಇಲ್ಲ, ಅನಗತ್ಯವಾಗಿ ನಿಮ್ಮ ಕೆಲಸವನ್ನು ತಡಮಾಡುತ್ತಿದ್ದಾರೆ, ನಿಮ್ಮ ಸಮಯ ವ್ಯರ್ಥ ಮಾಡುತ್ತಿದ್ದಾರೆ ಎಂದೆನಿಸುತ್ತಿದೆಯೇ? ಇಂಥ ವಿಷಯಗಳಲ್ಲಿ ಯೋಚಿಸಬೇಡಿ. ಆರ್‌ಬಿ‌ಐನ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಸುಲಭವಾಗಿ ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಹೇಗೆ ಅಂತೀರಾ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ... 

ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಆಗಮನದೊಂದಿಗೆ ಬ್ಯಾಂಕಿಂಗ್ ಸಂಬಂಧಿತ ಬಹಳಷ್ಟು ಕೆಲಸಗಳು ಆನ್ಲೈನ್ ನಲ್ಲಿಯೇ ಪೂರ್ಣಗೊಳ್ಳುತ್ತವೆ. ಆದರೆ, ಕೆಲವು ಕೆಲಸಗಳಿಗಾಗಿ ಕುದ್ದಾಗಿ ಬ್ಯಾಂಕ್‌ಗೆ ಹೋಗಬೇಕಾಗುತ್ತದೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಜನರು ಅಲ್ಲಿ ಇಲ್ಲಿ ಅಲೆದಾಡುವುದನ್ನು ಅಥವಾ ಬ್ಯಾಂಕ್‌ಗಳಲ್ಲಿ ತಮ್ಮ ಕೆಲಸಕ್ಕಾಗಿ ಕಾಯುವುದನ್ನು ಕಾಣಬಹುದು. ಕೆಲವೊಂದು ಬಾರಿ ಬ್ಯಾಂಕ್‌ನಲ್ಲಿರುವ ಉದ್ಯೋಗಿ ನಿಮ್ಮ ಕೆಲಸವನ್ನು ಮಾಡಲು ಹಿಂಜರಿಯುತ್ತಿದ್ದರೆ ಅಥವಾ ಅನಗತ್ಯವಾಗಿ ನಿಮ್ಮನ್ನು ಕಾಯುವಂತೆ ಮಾಡುತ್ತಿದ್ದರೆ ಈ ಬಗ್ಗೆ ನೀವು ದೂರು ನೀಡಬಹುದು.  

ಇದನ್ನೂ ಓದಿ- ಅಕ್ಟೋಬರ್ ಹೊಸ ನಿಯಮಗಳು: ಇಂದಿನಿಂದ ಬದಲಾಗಲಿದೆ ಈ ರೂಲ್ಸ್, ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ

ಯಾವ ಸಂದರ್ಭದಲ್ಲಿ ದೂರು ನೀಡಬಹುದು? 
ನೀವು ಯಾವುದಾದರೂ ಕೆಲಸಕ್ಕಾಗಿ ಬ್ಯಾಂಕ್‌ಗೆ ಹೋಗಿದ್ದಾಗ ಅಲ್ಲಿರುವ ಬ್ಯಾಂಕ್ ಸಿಬ್ಬಂದಿ ನಿಮ್ಮ ಕೆಲಸ ಮಾಡಲು ಹಿಂಜರಿಯುವುದು ಅಥವಾ ಅನಗತ್ಯವಾಗಿ ಕಾಯುವಂತೆ ಮಾಡುತ್ತಿದ್ದಾರೆ ಎಂದೆನಿಸುದ್ದರೆ... . ಉದಾಹರಣೆಗೆ, ಊಟದ ನಂತರ ಬರಲು ಹೇಳುವುದು ಅಥವಾ ನೀವು ಸಮಯಕ್ಕೆ ಸರಿಯಾಗಿ ಅಲ್ಲಿ ಹೋದರೂ ಸಿಬ್ಬಂದಿ ಆಸನದಲ್ಲಿ ಇಲ್ಲದಿರುವುದು, ಇಲ್ಲವೇ, ನಿಮ್ಮ ಸರತಿ ಸಾಲಿನಲ್ಲಿ ನೀವು ಸಿಬ್ಬಂದಿಯನ್ನು ಭೇಟಿಯಾದರೂ ಅವರು ನಿಮ್ಮ ಸಮಸ್ಯೆಯನ್ನು ಸರಿಯಾಗಿ ಕೇಳದೆ ಇದ್ದ ಸಂದರ್ಭದಲ್ಲಿ ಅಂತಹ ಬ್ಯಾಂಕ್ ಉದ್ಯೋಗಿಯ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಇದಕ್ಕಾಗಿ ಹೆಚ್ಚೆನು ಮಾಡುವ ಅಗತ್ಯವಿಲ್ಲ. ಆರ್‌ಬಿ‌ಐ ನೀಡಿರುವ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿದರೆ ಅಷ್ಟೇ ಸಾಕು. 

ಇದನ್ನೂ ಓದಿ- ದೀಪಾವಳಿ ಹಬ್ಬಕ್ಕೂ ಮೊದಲೇ ಜಾಕ್ ಪಾಟ್: ರಾಜ್ಯ ಸರ್ಕಾರ ನೀಡುತ್ತೇ 3 ಉಚಿತ ಸಿಲಿಂಡರ್

ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದಾಗಿ ಸಮಸ್ಯೆಗಳು ಎದುರಾಗಬಹುದು. ಆದರೂ, ಕೆಲವು ಬಾರಿ ಬ್ಯಾಂಕ್ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಗ್ರಾಹಕರ ಸಮಯ ವ್ಯರ್ಥವಾಗುತ್ತದೆ. ಪದೇ ಪದೇ ಬ್ಯಾಂಕ್‌ಗೆ ಅಡ್ಡಾಡಬೇಕಾಗುತ್ತದೆ. ಇಂತಹ ಸಮಸ್ಯೆಗಳು ಎದುರಾದಾಗ ಹೇಗಾದರೂ ನಮ್ಮ ಕೆಲಸ ಮುಗಿಸಿಕೊಳ್ಳಬೇಕು ಎಂಬ ಧೋರಣೆ ತೊರೆದು, ಯಾವುದೇ ಬ್ಯಾಂಕ್ ಉದ್ಯೋಗಿ ನಿಮ್ಮ ಕೆಲಸ ಮಾಡಲು ವಿಳಂಬ ಮಾಡಿದರೆ, ಮೊದಲು ಬ್ಯಾಂಕ್ ಮ್ಯಾನೇಜರ್ ಅಥವಾ ನೋಡಲ್ ಅಧಿಕಾರಿಯ ಬಳಿಗೆ ಹೋಗಿ ನಿಮ್ಮ ದೂರು ನೀಡಿ. ಅಲ್ಲಿಯೂ ನಿಮಗೆ ಪರಿಹಾರ ಸಿಗದಿದ್ದಾಗ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು. 

ಬ್ಯಾಂಕ್ ಗ್ರಾಹಕರ ದೂರುಗಳ ಪರಿಹಾರಕ್ಕಾಗಿ, ಆರ್‌ಬಿಐನ ಟೋಲ್ ಫ್ರೀ ಸಂಖ್ಯೆಯನ್ನು ಒದಗಿಸುತ್ತದೆ. ಗ್ರಾಹಂಕರು ಟ್ರೋಲ್ ಫ್ರೀ ಸಂಖ್ಯೆ 14448 ಗೆ ಕರೆ ಮಾಡುವ ಮೂಲಕ ಬ್ಯಾಂಕಿಂಗ್ ಕೆಲಸಕ್ಕೆ ಸಂಬಂಧಿಸಿದ ತಮ್ಮ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News