ಡಿ. ಒಂದರಿಂದ ಬದಲಾಗುವುದು ಎಲ್ ಪಿಜಿ ದರ ! ಈ ಬಾರಿ ಎಷ್ಟಾಗುವುದು ಗ್ಯಾಸ್ ಬೆಲೆ ?
1 December Rule Changes: SIM ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು, ಗ್ಯಾಸ್ ಸಿಲಿಂಡರ್‌ಗಳಿಗೆ ಸಂಬಂಧಿಸಿದ ಹಲವು ಹೊಸ ನಿಯಮಗಳು ಡಿಸೆಂಬರ್ 1, 2023 ರಿಂದ ಜಾರಿಗೆ ಬರಲು ಸಿದ್ಧವಾಗಿವೆ.
1 December Rule Changes : ಪ್ರತಿ ತಿಂಗಳು ದೇಶದಲ್ಲಿ ಕೆಲವು ನಿಯಮಗಳಲ್ಲಿ ಬದಲಾವಣೆಗಳು ಕಂಡುಬರುತ್ತವೆ. ಈ ವರ್ಷ ಅಂದರೆ 2023 ಕೂಡಾ ಸಾಕಷ್ಟು ಬದಲಾವಣೆಗಳನ್ನು ಕಂಡಿದೆ. ಈಗ 2023 ರ ಕೊನೆಯ ತಿಂಗಳು, ಡಿಸೆಂಬರ್, ಪ್ರಾರಂಭವಾಗಲಿದೆ. ವರ್ಷಾಂತ್ಯದ ಮೊದಲು, ಬ್ಯಾಂಕಿಂಗ್, ಟೆಲಿಕಾಂ, ತಂತ್ರಜ್ಞಾನ ಮತ್ತು ಇತರ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ಕಾಣಬಹುದು. SIM ಕಾರ್ಡ್‌ಗಳು, ಕ್ರೆಡಿಟ್ ಕಾರ್ಡ್‌ಗಳು, ಗ್ಯಾಸ್ ಸಿಲಿಂಡರ್‌ಗಳಿಗೆ ಸಂಬಂಧಿಸಿದ ಹಲವು ಹೊಸ ನಿಯಮಗಳು ಡಿಸೆಂಬರ್ 1, 2023 ರಿಂದ ಜಾರಿಗೆ ಬರಲು ಸಿದ್ಧವಾಗಿವೆ. ಡಿಸೆಂಬರ್‌ನಿಂದ ಜಾರಿಗೆ ಬರಲಿರುವ ಹೊಸ ನಿಯಮಗಳು ಯಾವುವು ಎನ್ನುವ ಮಾಹಿತಿ ಇಲ್ಲಿದೆ.
ಸಿಮ್ ಕಾರ್ಡ್ ಹೊಸ ನಿಯಮಗಳು :
ಡಿಸೆಂಬರ್ 1, 2023 ರಿಂದ ಸಿಮ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಕೇಂದ್ರ ಸರ್ಕಾರವು ಜಾರಿಗೆ ತರಲಿದೆ. ಈ ಹೊಸ ನಿಯಮವು ಸಿಮ್ ಕಾರ್ಡ್‌ಗಳ ಖರೀದಿ ಮತ್ತು ಮಾರಾಟಕ್ಕೆ ಸಂಬಂಧಿಸಿದೆ. ದೂರಸಂಪರ್ಕ ಇಲಾಖೆಯ ಪ್ರಕಾರ, ಈಗ KYC ಪ್ರಕ್ರಿಯೆ ಇಲ್ಲದೆ ಸಿಮ್ ಕಾರ್ಡ್‌ಗಳನ್ನು ಖರೀದಿಸುವುದು ಸಾಧ್ಯವಾಗುವುದಿಲ್ಲ. ಇದಲ್ಲದೇ ಒಂದು ಐಡಿಯಲ್ಲಿ ಸೀಮಿತ ಸಿಮ್ ಕಾರ್ಡ್ ಗಳನ್ನು ಮಾತ್ರ ಮಾರಾಟ ಮಾಡುವ ನಿಯಮವೂ ಜಾರಿಯಾಗಲಿದೆ. ಇದನ್ನು ಉಲ್ಲಂಘಿಸುವ ಅಪರಾಧಿಗೆ 10 ಲಕ್ಷ ರೂ.ವರೆಗೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಈ ಹೊಸ ನಿಯಮಗಳ ಅಡಿಯಲ್ಲಿ, ಸಿಮ್ ಕಾರ್ಡ್ ಮಾರಾಟಗಾರರು ನೋಂದಾಯಿಸಿಕೊಳ್ಳಬೇಕು ಮತ್ತು ಸಿಸ್ಟಮ್ ಅಡಿಯಲ್ಲಿ KYC ಪ್ರಕ್ರಿಯೆಯ ಮೂಲಕವೇ ಹೋಗಬೇಕಾಗುತ್ತದೆ.
ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಹೊಸ ವರ್ಷದ ಉಡುಗೊರೆ ! ಜನವರಿಯಲ್ಲಿ 5% ಡಿಎ ಹೆಚ್ಚಳ !
HDFC ಬ್ಯಾಂಕ್ ರೆಗಾಲಿಯಾ ಕ್ರೆಡಿಟ್ ಕಾರ್ಡ್ :
ಹೊಸ ನಿಯಮಗಳ ಅಡಿಯಲ್ಲಿ, HDFC ಬ್ಯಾಂಕ್ ತನ್ನ ರೆಗಾಲಿಯಾ ಕ್ರೆಡಿಟ್ ಕಾರ್ಡ್‌ನ ನಿಯಮಗಳನ್ನು ಬದಲಾಯಿಸುತ್ತದೆ. ಡಿಸೆಂಬರ್ 1 ರಿಂದ ಲಾಂಜ್ ಅಕ್ಸೆಸ್ ಗಾಗಿ ಬಳಕೆದಾರರಿಗೆ ನಿಯಮಗಳನ್ನು ಬದಲಾಯಿಸಲಾಗುತ್ತಿದೆ. ಲಾಂಜ್ ಅಕ್ಸೆಸ್ ಗಾಗಿ ಬಳಕೆದಾರರು ತ್ರೈಮಾಸಿಕಕ್ಕೆ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ. ಜನವರಿಯಿಂದ ಮಾರ್ಚ್, ಏಪ್ರಿಲ್‌ನಿಂದ ಜೂನ್, ಜುಲೈನಿಂದ ಸೆಪ್ಟೆಂಬರ್, ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗಿನ ತ್ರೈಮಾಸಿಕಗಳಲ್ಲಿ ಬಳಕೆದಾರರು 1 ಲಕ್ಷದವರೆಗೆ ಖರ್ಚು ಮಾಡಬೇಕಾಗುತ್ತದೆ. ಈ ಹಣವನ್ನು ಪಾವತಿಸಿದರೆ ಮಾತ್ರ ಲಾಂಜ್ ಅಕ್ಸೆಸ್ ಸಿಗುತ್ತದೆ. ಬಳಕೆದಾರರು ಒಂದು ತ್ರೈಮಾಸಿಕದಲ್ಲಿ ಎರಡು ಬಾರಿ ಮಾತ್ರ ಲಾಂಜ್ ಅಕ್ಸೆಸ್ ಪಡೆಯಲು ಸಾಧ್ಯವಾಗುತ್ತದೆ. ಇದಕ್ಕೆ 2 ರೂಪಾಯಿ ಟ್ರಾನ್ಸ್ಯಾಕ್ಶನ್ ಶುಲ್ಕವನ್ನು ಕೂಡಾ ನೀಡಬೇಕಾಗುತ್ತದೆ. ಆದರೆ, ಮಾಸ್ಟರ್‌ಕಾರ್ಡ್ ಬಳಕೆದಾರರಿಂದ 25 ರೂ ಶುಲ್ಕವನ್ನ ವಸೂಲಿ ಮಾಡಲಾಗುತ್ತದೆ. ಇದನ್ನು ನಂತರ ಹಿಂದಿರುಗಿಸಲಾಗುತ್ತದೆ.
LPG ಸಿಲಿಂಡರ್ ಬೆಲೆ :
ಡಿಸೆಂಬರ್ 1, 2023 ರಿಂದ LPG ಸಿಲಿಂಡರ್‌ಗಳ ಬೆಲೆಗಳಲ್ಲಿ ಬದಲಾವಣೆಗಳಾಗಲಿದೆ. ನವೆಂಬರ್‌ನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 100 ರೂ. ಹೆಚ್ಚಿಸಲಾಗಿತ್ತು. ಮದುವೆ ಸೀಸನ್ ಆಗಿರುವುದರಿಂದ ಈ ಬಾರಿಯೂ ಇದರ ಬೆಲೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಗೃಹಬಳಕೆಯ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇಲ್ಲ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ : ಎಫ್ಡಿ ಮೇಲೆ ಶೇ. 9 ರಷ್ಟು ಬಡ್ಡಿ ಬೇಕೆ? ಇಂದೇ ಈ ಬ್ಯಾಂಕ್ ಗಳಲ್ಲಿ ಹಣ ಹೂಡಿಕೆ ಮಾಡಿ!
ಸಾಲಕ್ಕೆ ಹೊಸ ನಿಯಮಗಳು :
ಸಾಲ ಸಂಬಂಧಿತ ನಿಯಮಗಳನ್ನು RBI ಡಿಸೆಂಬರ್ 1, 2023 ರಿಂದ ಜಾರಿಗೊಳಿಸುತ್ತದೆ. ಇದರ ಅಡಿಯಲ್ಲಿ, ಸಾಲವನ್ನು ಮರುಪಾವತಿ ಮಾಡಿದ 1 ತಿಂಗಳೊಳಗೆ ಸಾಲಕ್ಕಾಗಿ ಬ್ಯಾಂಕ್ ಗೆ ಸಲ್ಲಿಸಿದ ಆಸ್ತಿ ದಾಖಲೆಗಳನ್ನು ಹಿಂದಿರುಗಿಸುವುದು ಅವಶ್ಯಕ. ಒಂದು ವೇಳೆ ಬ್ಯಾಂಕ್ ದಾಖಲೆಗಳನ್ನು ಹಿಂದಿರುಗಿಸದಿದ್ದಲ್ಲಿ 5,000 ರೂ.ವರೆಗೆ ದಂಡವನ್ನು ಪಾವತಿಸಬೇಕಾಗಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ