ಸರ್ಕಾರಿ ನೌಕರರಿಗೆ ಹೊಸ ವರ್ಷದ ಉಡುಗೊರೆ ! ಜನವರಿಯಲ್ಲಿ 5% ಡಿಎ ಹೆಚ್ಚಳ !

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೊಸ ವರ್ಷದ ಉಡುಗೊರೆ ಕಾದಿದೆ ಎಂದು ಮೂಲಗಳು ತಿಳಿಸಿವೆ.  

Written by - Ranjitha R K | Last Updated : Nov 29, 2023, 08:59 AM IST
  • 7 ನೇ ವೇತನ ಆಯೋಗದ ಇತ್ತೀಚಿನ ಅಪ್ಡೇಟ್
  • ಇದನ್ನು ಎಐಸಿಪಿಐ ಸೂಚ್ಯಂಕದಿಂದ ಲೆಕ್ಕಹಾಕಲಾಗುತ್ತದೆ.
  • ವೆಚ್ಚದ ಬೆಲೆಗೆ ಅನುಗುಣವಾಗಿ ಶೇಕಡಾ 5 ರಷ್ಟು ಹೆಚ್ಚಳ ಸಾಧ್ಯತೆ
ಸರ್ಕಾರಿ ನೌಕರರಿಗೆ ಹೊಸ ವರ್ಷದ ಉಡುಗೊರೆ ! ಜನವರಿಯಲ್ಲಿ  5% ಡಿಎ ಹೆಚ್ಚಳ !   title=

7th Pay Commission : ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಒಳ್ಳೆಯ ಸುದ್ದಿ ಇದೆ. ಮುಂದಿನ ವರ್ಷ ಅವರ ವೇತನ ಮತ್ತು ಪಿಂಚಣಿಗಳಲ್ಲಿ ಅನೇಕ ದೊಡ್ಡ ಬದಲಾವಣೆಗಳನ್ನು ಕಾಣಬಹುದು. ಹೊಸ ವರ್ಷದಲ್ಲಿ ತುಟ್ಟಿಭತ್ಯೆ  ಪ್ರಮಾಣ ಮತ್ತೆ ಹೆಚ್ಚಾಗಲಿದೆ. 

ಎಐಸಿಪಿಐ ಸೂಚ್ಯಂಕದಿಂದ ಲೆಕ್ಕಹಾಕಲಾಗುತ್ತದೆ : 
ಮುಂಬರುವ ತಿಂಗಳು ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಸಿಗಲಿದೆ.  ಅಕ್ಟೋಬರ್ ನಲ್ಲಿ ತುಟ್ಟಿಭತ್ಯೆ ಹೆಚ್ಚಳವನ್ನು ಘೋಷಿಸಿದ ಸರ್ಕಾರ  ಜುಲೈನಿಂದ ಬಾಕಿ ಉಳಿದಿದ್ದ ಡಿಎ ಹಣವನ್ನೂ ನೌಕರರ ಖಾತೆಗೆ ವರ್ಗಾಯಿಸಿದೆ. ಇದೀಗ ಮುಂದಿನ ಹೆಚ್ಚಳದ ಬಗ್ಗೆ ಚರ್ಚೆ ನಡೆಯುತ್ತಿದೆ.ಮುಂದಿನ ತುಟ್ಟಿಭತ್ಯೆ ಹೆಚ್ಚಳ ಜನವರಿಯಲ್ಲಿ ಆಗಲಿದೆ. ಈ ಬಾರಿಯ ಹೆಚ್ಚಳ ಬಹಳ ವಿಶೇಷವಾಗಿರಲಿದೆ. ಯಾಕೆಂದರೆ ಈ ಬಾರಿಯ ತುಟ್ಟಿಭತ್ಯೆ ಹೆಚ್ಚಳದೊಂದಿಗೆ ಅನೇಕ ವಿಷಯಗಳು ಬದಲಾಗುತ್ತವೆ.  

ಇದನ್ನೂ ಓದಿ : ಎಫ್ಡಿ ಮೇಲೆ ಶೇ. 9 ರಷ್ಟು ಬಡ್ಡಿ ಬೇಕೆ? ಇಂದೇ ಈ ಬ್ಯಾಂಕ್ ಗಳಲ್ಲಿ ಹಣ ಹೂಡಿಕೆ ಮಾಡಿ!

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಹೊಸ ವರ್ಷದಲ್ಲಿ ಭರ್ಜರಿ ಗಿಫ್ಟ್ ಸಿಗಲಿದೆ ಎನ್ನುತ್ತಿವೆ ಮೂಲಗಳು. ಜುಲೈ 1, 2023 ರಿಂದ, ಉದ್ಯೋಗಿಗಳು 46 ಪ್ರತಿಶತ ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. ಜನವರಿ 2024 ರಲ್ಲಿ, ತುಟ್ಟಿಭತ್ಯೆಯಲ್ಲಿ ಮತ್ತೊಂದು ಬದಲಾವಣೆಯಾಗಲಿದೆ.  ಎಐಸಿಪಿಐ ಸೂಚ್ಯಂಕದ ಆಧಾರದ ಮೇಲೆ ಬೆಲೆಯನ್ನು ಲೆಕ್ಕಹಾಕಲಾಗುತ್ತದೆ. 

ಶೇಕಡಾ 5 ದಷ್ಟು  ಹೆಚ್ಚಾಗಬಹುದು ಡಿಎ ? :  
ತುಟ್ಟಿಭತ್ಯೆ ಜನವರಿಯಲ್ಲಿ ಗರಿಷ್ಠ 5% ರಷ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ. AICPI ಸೂಚಕದಿಂದ ಪಡೆದ DA ಸ್ಕೋರ್ ಇದನ್ನು ಸೂಚಿಸುತ್ತದೆ. ಪ್ರಸ್ತುತ ದರದ ಪ್ರಕಾರ ಹೇಳುವುದಾದರೆ ಡಿಎ 51% ತಲುಪುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಸೂಚ್ಯಂಕದಲ್ಲಿನ ವಿವಿಧ ವಲಯಗಳಿಗೆ ಹಣದುಬ್ಬರ ದತ್ತಾಂಶವು ಉದ್ಯೋಗಿಗಳ ತುಟ್ಟಿಭತ್ಯೆಯನ್ನು ಎಷ್ಟು ಹೆಚ್ಚಿಸಬೇಕು ಎಂಬುದನ್ನು ತೋರಿಸುತ್ತದೆ.

ಸದ್ಯದ ಸ್ಥಿತಿ ಏನು? :
ಇದೀಗ ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್‌ನ AICPI ಸೂಚ್ಯಂಕ ಡೇಟಾವನ್ನು ಬಿಡುಗಡೆ ಮಾಡಲಾಗಿದೆ.  ಈ ಪ್ರಕಾರ ಪ್ರಸ್ತುತ ಇದು 48.54% ನಲ್ಲಿದೆ ಮತ್ತು ಸೂಚ್ಯಂಕವು 137.5 ಅಂಕಗಳಲ್ಲಿದೆ. ಅಕ್ಟೋಬರ್ ವೇಳೆಗೆ ಈ ಸಂಖ್ಯೆ 49% ಕ್ಕಿಂತ ಹೆಚ್ಚಿರುತ್ತದೆ. ನವೆಂಬರ್ ಮತ್ತು ಡಿಸೆಂಬರ್‌ನ ಅಂಕಿಅಂಶಗಳು ಇನ್ನೂ ಬರಬೇಕಿದೆ. ಡಿಸೆಂಬರ್ 2023 ರ AICPI ಸೂಚ್ಯಂಕ ಡೇಟಾವನ್ನು ಆಧರಿಸಿ ಭತ್ಯೆಯ ಒಟ್ಟು ಹೆಚ್ಚಳವನ್ನು ನಿರ್ಧರಿಸಲಾಗುತ್ತದೆ.
 
ಇದನ್ನೂ ಓದಿ : CIBIL ಸ್ಕೋರ್, ಆದಾಯ ಪುರಾವೆ ಇಲ್ಲದಿದ್ದರೂ ಸಿಗುತ್ತೆ ಸಾಲ!

7 ನೇ ವೇತನ ಆಯೋಗದ ಅಡಿಯಲ್ಲಿ , ಜುಲೈನಿಂದ ಡಿಸೆಂಬರ್ 2023 ರ AICPI ಸಂಖ್ಯೆಗಳ ಆಧಾರದ ಮೇಲೆ ಜನವರಿ 2023ರ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. AICBI ಅಂಕಿಅಂಶಗಳ ಪ್ರಕಾರ,  ತುಟ್ಟಿಭತ್ಯೆ ದರವು ಸುಮಾರು 48.50 ಪ್ರತಿಶತವನ್ನು ತಲುಪಿದೆ. ಇಲ್ಲಿಯವರೆಗೆ ಮೂರು ತಿಂಗಳ ಸಂಖ್ಯೆಗಳು ಬರುತ್ತಿವೆ. 2.5ರಷ್ಟು ಹೆಚ್ಚುವರಿ ಏರಿಕೆಯಾಗಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಆದರೆ ಸೂಚ್ಯಂಕದ ಲೆಕ್ಕಾಚಾರವು ಇವುಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಡಿಎ ಕ್ಯಾಲ್ಕುಲೇಟರ್  ಪ್ರಕಾರ ಈ ಬಾರಿ ತುಟ್ಟಿಭತ್ಯೆ 51 ಪ್ರತಿಶತವನ್ನು ತಲುಪುತ್ತದೆ. 

ಕೆಳಗಿನ ಕೋಷ್ಟಕವು (CPI(IW) BY2016=100 DA%) ಮಾಸಿಕ ಬೆಳವಣಿಗೆಯನ್ನು ತೋರಿಸುತ್ತದೆ: 

ಜನವರಿ 2023 132.8 43.09, 
ಫೆಬ್ರವರಿ 2023 132.7 43.80, 
ಮಾರ್ಚ್ 2023 133.3 44.47 ,
ಏಪ್ರಿಲ್ 2023  134.2, 45.07,
ಮೇ 2023 134.7 42.59, 
ಜೂನ್ 420.59 139.7 47 , 
ಆಗಸ್ಟ್ 2023 139.2 47.98,
ಸೆಪ್ಟೆಂಬರ್  2023 137.5 48.54, 
ಅಕ್ಟೋಬರ್ 2023 49.45  
ನವೆಂಬರ್ 2023 50.21  
ಡಿಸೆಂಬರ್ 2023 50.93 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News