Aadhaar Correction : ಆಧಾರ್ ಕಾರ್ಡ್ ಪ್ರತಿಯೊಬ್ಬ ಭಾರತೀಯನ ವಿಶಿಷ್ಟ ಗುರುತಾಗಿದೆ. ಆಧಾರ್ ಕಾರ್ಡ್ ಇಲ್ಲ ಎಂದಾದರೆ ಅದೆಷ್ಟೋ ಕೆಲಸಗಳು ನಡೆಯುವುದೇ ಇಲ್ಲ. ಬ್ಯಾಂಕ್ ಖಾತೆ ತೆರೆಯುವುದು, ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುವುದು, ಕಾಲೇಜಿನಲ್ಲಿ ಪ್ರವೇಶ ಪಡೆಯುವುದು, ಸಾಲಕ್ಕೆ ಅರ್ಜಿ ಸಲ್ಲಿಸುವುದು ಅಥವಾ ಮನೆ ಖರೀದಿಸುವುದು ಈ ಎಲ್ಲಾ ಕೆಲಸಗಳು ಆಧಾರ್ ಕಾರ್ಡ್ ಇಲ್ಲದೆ ಸಾಧ್ಯವಾಗುವುದೇ ಇಲ್ಲ. ಆಧಾರ್ ಕಾರ್ಡ್ನಲ್ಲಿ ನಿಮಗೆ ಸಂಬಂಧಿಸಿದ ಮಾಹಿತಿಯನ್ನು ತಪ್ಪಾಗಿ ನಮೂದಿಸಿದ್ದರೆ, ಕೂಡಾ ಕೆಲಸಗಳಲ್ಲಿ ಅಡೆತಡೆಗಳು ಎದುರಾಗಬಹುದು. ಹುಟ್ಟಿದ ದಿನಾಂಕದಲ್ಲಿ ಬದಲಾವಣೆ, ಹೆಸರಿನಲ್ಲಿ ಬದಲಾವಣೆ ಇದ್ದರೆ ಸರ್ಕಾರಿ ಕೆಲಸಗಳಲ್ಲಿ ಸಮಸ್ಯೆ ಉಂಟಾಗಬಹುದು. ಆಧಾರ್ ಕಾರ್ಡ್ ನಲ್ಲಿ ಇರುವ ತಪ್ಪನ್ನು ಸರಿಪಡಿಸಲು ಕೂಡಾ ನಿಯಮಗಳಿವೆ. ಈ ತಪ್ಪುಗಳನ್ನು ಎಷ್ಟು ಬಾರಿ ಸರಿಪಡಿಸಬಹುದು ಎನ್ನುವುದಕ್ಕೆ ನಿಯಮವಿದೆ. ನಿಮ್ಮ ಆಧಾರ್ನಲ್ಲಿ ಜನ್ಮ ದಿನಾಂಕ ಅಥವಾ ನಿಮ್ಮ ಹೆಸರನ್ನು ಅಪ್ಡೇಟ್ ಮಾಡಬೇಕಾದರೆ ನಿಯಮ ಏನು ಹೇಳುತ್ತದೆ ನೋಡೋಣ.
ಜನ್ಮ ದಿನಾಂಕ ಮತ್ತು ಹೆಸರನ್ನು ಎಷ್ಟು ಬಾರಿ ಬದಲಾಯಿಸಬಹುದು ? :
ಯಾವುದೇ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಜೀವನದಲ್ಲಿ ಎರಡು ಬಾರಿ ಮಾತ್ರ ತಮ್ಮ ಹೆಸರನ್ನು ಬದಲಾಯಿಸಬಹುದು. ಇದಲ್ಲದೆ, ಆಧಾರ್ ಕಾರ್ಡ್ನಲ್ಲಿ ಜನ್ಮ ದಿನಾಂಕದ ಮಾಹಿತಿಯನ್ನು ಕೂಡಾ ನೀಡಲಾಗಿದೆ. ಜನ್ಮ ದಿನಾಂಕವನ್ನು ಕೂಡಾ ಎರಡು ಬಾರಿ ಮಾತ್ರ ಬದಲಾಯಿಸಬಹುದು. ಆಧಾರ್ ಕಾರ್ಡ್ನಲ್ಲಿ ಲಿಂಗವನ್ನು ಅಪ್ಡೇಟ್ ಮಾಡುವ ಸೌಲಭ್ಯವನ್ನು ಒಮ್ಮೆ ಮಾತ್ರ ನೀಡಲಾಗುತ್ತದೆ. ಈ ಎಲ್ಲಾ ಮಾಹಿತಿಯನ್ನು ಅಪ್ಡೇಟ್ ಮಾಡುವ ಮಿತಿಯನ್ನು UIDAI ನಿರ್ಧರಿಸುತ್ತದೆ.
ಇದನ್ನೂ ಓದಿ : ದೇಶದ ಸಾರ್ವಜನಿಕ ವಲಯದ ಈ ಬ್ಯಾಂಕ್ ಜೊತೆ ಕೈಜೋಡಿಸಿ ಕೈತುಂಬಾ ಸಂಪಾದನೆ ಮಾಡಿ!
ಹೆಸರು ಬದಲಾವಣೆಗೆ ಅರ್ಜಿ ಸಲ್ಲಿಸುವುದು ಹೇಗೆ ? :
-ನೀವು ಆಧಾರ್ ಕಾರ್ಡ್ನಲ್ಲಿ ನಿಮ್ಮ ಹೆಸರನ್ನು ಬದಲಾಯಿಸಲು ಬಯಸಿದರೆ, ಮೊದಲು UIDAI ನ ಅಧಿಕೃತ ವೆಬ್ಸೈಟ್ https://myaadhaar.uidai.gov.in/ ಗೆ ಹೋಗಿ ಮತ್ತು ಲಾಗಿನ್ ಮಾಡಿ.
-ಇದರ ನಂತರ ನೀವು ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಬೇಕಾಗುತ್ತದೆ.
-ನಂತರ ಆಧಾರ್ ಕಾರ್ಡ್ನಲ್ಲಿ ನೋಂದಾಯಿಸಲಾದ ಮೊಬೈಲ್ ನಂಬರ್ ಗೆ OTP ಬರುತ್ತದೆ.
-Proceed to Update Aadhaar ಮೇಲೆ ಕ್ಲಿಕ್ ಮಾಡಿ.
-ಹೊಸ ಪುಟವನ್ನು ತೆರೆದ ನಂತರ, ಹೆಸರು ಬದಲಾವಣೆ ಆಯ್ಕೆಯನ್ನು ಆರಿಸಿ -ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮತ್ತು ಅಟ್ಯಾಚ್ ಮಾಡಿ.
-ನಂತರ ಸಬ್ಮಿಟ್ ಮಾಡಿ ಸೆಂಡ್ OTP ಆಯ್ಕೆಯನ್ನು ಆಯ್ಕೆಮಾಡಿ.
-ಈಗ ನಿಮ್ಮ ಮೊಬೈಲ್ ಸಂಖ್ಯೆಗೆ OTP ಬರುತ್ತದೆ.
-OTP ನಮೂದಿಸಿದ ನಂತರ ಅಪ್ಲಿಕೇಶನ್ ಪ್ರಕ್ರಿಯೆಯು ಪೂರ್ಣಗೊಳ್ಳುತ್ತದೆ.
ನೋಂದಾಯಿತ ಮೊಬೈಲ್ ಸಂಖ್ಯೆ ಇಲ್ಲದೆ ಯಾವುದೇ ಬದಲಾವಣೆ ಆಗುವುದಿಲ್ಲ :
ಆಧಾರ್ ಕಾರ್ಡ್ನಲ್ಲಿ ಯಾವುದೇ ಮಾಹಿತಿಯನ್ನು ನವೀಕರಿಸಲು, ಆಧಾರ್ ಕಾರ್ಡ್ನಲ್ಲಿ ಸರಿಯಾದ ಮೊಬೈಲ್ ಸಂಖ್ಯೆಯನ್ನು ಹೊಂದಿರುವುದು ಅವಶ್ಯಕ. ಆಧಾರ್ ಕಾರ್ಡ್ನಲ್ಲಿ ಬದಲಾವಣೆಗಳನ್ನು ಮಾಡುವಾಗ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ OTP ಬರುತ್ತದೆ. ಈ OTP ಅನ್ನು ನಮೂದಿಸದೆ, ಹೆಸರು, ವಿಳಾಸ ಮುಂತಾದ ಯಾವುದೇ ಮಾಹಿತಿಯನ್ನು ನವೀಕರಿಸಲು ಸಾಧ್ಯವಿಲ್ಲ.
ಇದನ್ನೂ ಓದಿ : Biggest debtors in india: ಅತಿ ಹೆಚ್ಚು ಸಾಲ ಹೊಂದಿರುವ ಟಾಪ್ 5 ಸಂಸ್ಥೆಗಳು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.