ನವದೆಹಲಿ: ನೀವೂ ಕೂಡ ಆರೋಗ್ಯ ವಿಮೆ ಪಾಲಶಿಯನ್ನು ಹೊಂದಿದ್ದರೆ, ವಿಮಾ ಕಂಪನಿಗಳು ಈಗಾಗಲೇ ಅನೇಕ ಆಸ್ಪತ್ರೆಗಳೊಂದಿಗೆ ಟೈ-ಅಪ್‌ಗಳನ್ನು ಹೊಂದಿರುತ್ತವೆ ಎಂಬ ಸಂಗತಿ ನಿಮಗೂ ತಿಳಿದಿರುತ್ತದೆ.  ಅಲ್ಲಿ ನೀವು ನಗದು ರಹಿತ ಚಿಕಿತ್ಸೆಯ ಪ್ರಯೋಜನವನ್ನು ಪಡೆಯಬಹುದು. ಆದರೆ ನಿಮ್ಮ ವಿಮಾ ಕಂಪನಿಗಳ ನೆಟ್‌ವರ್ಕ್‌ನಲ್ಲಿಲ್ಲದ ಆಸ್ಪತ್ರೆಯಿಂದ ನಿಮ್ಮ ಚಿಕಿತ್ಸೆಯನ್ನು ಮಾಡಬೇಕಾದರೆ, ನಿಮ್ಮ ಸ್ವಂತ ಜೇಬಿನಿಂದ ಈ ಬಿಲ್ ಅನ್ನು ನೀವು ಮೊದಲು ಪಾವತಿಸಬೇಕಾಗುತ್ತದೆ. ಬಳಿಕ, ಹಣ ಪಾವತಿ ನಂತರ ಇತ್ಯರ್ಥಪಡಿಸಲಾಗುತ್ತದೆ.  ಆದರೆ ಇನ್ಮುಂದೆ ಪ್ರತಿ ಆಸ್ಪತ್ರೆಯಲ್ಲೂ ನಗದು ರಹಿತ ಚಿಕಿತ್ಸೆ ದೊರೆಯಲಿದೆ. ಇದಕ್ಕಾಗಿ ಜಿಐಸಿ ಹೊಸ ಅಭಿಯಾನ ಆರಂಭಿಸಿದೆ.(Business News In Kannada)


COMMERCIAL BREAK
SCROLL TO CONTINUE READING

ಜನರಲ್ ಇನ್ಶೂರೆನ್ಸ್ ಕೌನ್ಸಿಲ್ (ಜಿಐಸಿ) ಆರೋಗ್ಯ ವಿಮಾ ಪಾಲಿಸಿದಾರರಿಗಾಗಿ ಎಲ್ಲೆಡೆ ನಗದುರಹಿತ ಎಂಬ ಹೊಸ ಉಪಕ್ರಮವನ್ನು ಆರಂಭಿಸಿದೆ. ಈ ಅಭಿಯಾನದ ಅಡಿಯಲ್ಲಿ, ಇದೀಗ ಪಾಲಿಸಿದಾರರು ಪ್ರತಿ ಆಸ್ಪತ್ರೆಯಲ್ಲಿ ನಗದು ರಹಿತ ಚಿಕಿತ್ಸೆಯ ಸೌಲಭ್ಯವನ್ನು ಪಡೆಯಲಿದ್ದಾರೆ.


ಇದನ್ನೂ ಓದಿ-7th Pay Commission Update: ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಶೇ.4 ರಷ್ಟು ಹೆಚ್ಚಳ ಬಹುತೇಕ ಪಕ್ಕಾ! ಹೊಸ ಅಪ್ಡೇಟ್ ಇಲ್ಲಿದೆ


ಪ್ರಸ್ತುತ ಇರುವ ವ್ಯವಸ್ಥೆ ಏನು?
ಆರೋಗ್ಯ ವಿಮಾ ಕಂಪನಿಯು ಈಗಾಗಲೇ ಆಸ್ಪತ್ರೆಯೊಂದಿಗೆ ಟೈ-ಅಪ್ ಹೊಂದಿದ್ದರೆ ಮಾತ್ರ ಹಿಂದಿನ ಆರೋಗ್ಯ ವಿಮಾ ಪಾಲಿಸಿದಾರರು ಈ ಸೌಲಭ್ಯವನ್ನು ಪಡೆಯುತ್ತಿದ್ದರು ಎಂಬುದು ಪ್ರಸ್ತುತ ಇರುವ ವ್ಯವಸ್ಥೆಯಾಗಿದೆ. ವಿಮಾ ಕಂಪನಿಯು ಈಗಾಗಲೇ ಆಸ್ಪತ್ರೆಯೊಂದಿಗೆ ಟೈ-ಅಪ್ ಹೊಂದಿಲ್ಲದಿದ್ದರೆ, ಆಸ್ಪತ್ರೆಯ ಬಿಲ್ ಅನ್ನು ಜೇಬಿನಿಂದ ಪಾವತಿಸಬೇಕಾಗಿತ್ತು. ಈ ಬಿಲ್ ಅನ್ನು ನಂತರ ಕ್ಲೈಮ್ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕಾಗುತ್ತಿತ್ತು.


ಇದನ್ನೂ ಓದಿ-Ram Mandir: ಅಂಬಾನಿಯಿಂದ ಹಿಡಿದು ಅಡಾಣಿವರೆಗೆ ರಾಮ ಮಂದಿರಕ್ಕೆ ಯಾರು ಎಷ್ಟು ದೇಣಿಗೆ ನೀಡಿದ್ದಾರೆ?


48 ಗಂಟೆಗಳ ಮುಂಚಿತವಾಗಿ ಮಾಹಿತಿ ನೀಡಬೇಕು
ಜನರಲ್ ಇನ್ಶೂರೆನ್ಸ್ ಕೌನ್ಸಿಲ್ (ಜಿಐಸಿ) ನ ಈ ಹೊಸ ಉಪಕ್ರಮದ ಪ್ರಕಾರ, ಯಾವುದೇ ಆಸ್ಪತ್ರೆಯಲ್ಲಿ ನಗದು ರಹಿತ ಸೌಲಭ್ಯವನ್ನು ಪಡೆಯಲು, ಪಾಲಿಸಿದಾರನು ತನ್ನ ವಿಮಾ ಕಂಪನಿಗೆ ಕನಿಷ್ಠ 48 ಗಂಟೆಗಳ ಮುಂಚಿತವಾಗಿ ತಿಳಿಸಬೇಕಾಗುತ್ತದೆ. ಎಲ್ಲಾ ಸಾಮಾನ್ಯ ಮತ್ತು ಆರೋಗ್ಯ ವಿಮಾ ಕಂಪನಿಗಳು ಜಂಟಿಯಾಗಿ ಎಲ್ಲೆಡೆ ನಗದು ರಹಿತ ಸೌಲಭ್ಯವನ್ನು ಪ್ರಾರಂಭಿಸುತ್ತಿವೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ